ನವಲಗುಂದ: ‘ಕಳಸಾ-ಬಂಡೂರಿ (ಮಹಾದಾಯಿ) ಯೋಜನೆಯ ಚಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಕೇಂದ್ರ ಪರಿಸರ ಇಲಾಖೆಯ ಇವತ್ತು ಅನುಮತಿ ನೀಡಿದರೆ ನಾಳೆಯೇ ಕೆಲಸ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ನವಲಗುಂದದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಗ್ಯಾರಂಟಿ ಕಾರ್ಯಕ್ರಮಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಕಳಸಾ- ಬಂಡೂರಿ ಯೋಜನಗೆ ಟೆಂಡರ್ ಆಹ್ವಾನಿಸಲಾಗಿದೆ. ಆದರೆ, ಯೋಜನೆಗೆ ಪರಿಸರ ಇಲಾಖೆ ಅನುಮೋದನೆ ನೀಡಬೇಕಿದೆ, ಆ …
Read More »Yearly Archives: 2024
ಸಂಕೇಶ್ವರ-ಮೈಸೂರು ಬಸ್ ಆರಂಭ
ಸಂಕೇಶ್ವರ: ವಾಯವ್ಯ ಸಾರಿಗೆ ಸಂಸ್ಥೆಯ ಸಂಕೇಶ್ವರ ಘಟಕದಿಂದ ಮೈಸೂರಿಗೆ ಹೊಸ ಬಸ್ ಸಂಚಾರವನ್ನು ಗುರುವಾರ ಆರಂಭಿಸಲಾಗಿದೆ. ಈ ಬಸ್ ಮಧ್ಯಾಹ್ನ 12.30ಕ್ಕೆ ಕೊಲ್ಹಾಪುರದಿಂದ ಹೊರಟು, ಮಧ್ಯಾಹ್ನ 2 ಗಂಟೆಗೆ ಸಂಕೇಶ್ವರ ಬಸ್ ನಿಲ್ದಾಣಕ್ಕೆ ಬರಲಿದೆ. ಸಂಕೇಶ್ವರದಿಂದ 2.10ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5 ಗಂಟೆಗೆ ಮೈಸೂರು ತಲುಪಲಿದೆ. ರಾತ್ರಿ 8 ಗಂಟೆಗೆ ಮೈಸೂರಿನಿಂದ ಹೊರಡುವ ಬಸ್, ಮಧ್ಯಾಹ್ನ 12.30ಕ್ಕೆ ಕೊಲ್ಹಾಪುರ ತಲುಪಲಿದೆ.730 ಕಿ.ಮೀ. ದೂರದ ಪ್ರಯಾಣಕ್ಕೆ ₹700 ದರ ನಿಗದಿಪಡಿಸಲಾಗಿದೆ.
Read More »ಸತ್ಯ ಪ್ರತಿಪಾದಕ ಸ್ವಾಮೀಜಿಗೆ ಈಗ 60ರ ಸಂಭ್ರಮ.
ಚನ್ನಮ್ಮನ ಕಿತ್ತೂರು: ‘ನಿಷ್ಟುರವಾಗಿ ಸತ್ಯ ಹೇಳುವುದು ಮತ್ತು ಸತ್ಯವನ್ನು ನಿಷ್ಟುರವಾಗಿ ಹೇಳುವುದು’ ಇದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವ್ಯಕ್ತಿತ್ವ. ಸತ್ಯ ಪ್ರತಿಪಾದಕ ಸ್ವಾಮೀಜಿಗೆ ಈಗ 60ರ ಸಂಭ್ರಮ. ಹೆಸರಿಗೆ ತಕ್ಕಂತೆಯೇ ಅವರದು ‘ನಿಜ-ಗುಣ’. ಮೂರು ದಶಕದ ಹಿಂದೆ ಚನ್ನಮ್ಮನ ಕಿತ್ತೂರು ನಾಡಿಗೆ ಬಂದ ನಂತರ ಅವರು ಸಾಮಾಜಿಕ ಪರಿವರ್ತನೆಗೆ ಹೆಜ್ಜೆ ಇಟ್ಟರು. ಸಾಂಪ್ರದಾಯಿಕ, ಮೌಢ್ಯ ಆಚರಣೆಗಳಿಂದ ಸಮಾಜವನ್ನು ಹೊರತರಲು ಮುಂದಾದರು. ‘ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ’ …
Read More »ಬೆಳಗಾವಿ: ಖ್ಯಾತ ವೈದ್ಯ ಡಾ.ಕೊಡಕಣಿ ನಿಧನ
ಬೆಳಗಾವಿ: ಇಲ್ಲಿನ ಖ್ಯಾತ ಪ್ರಸ್ತೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾಗಿದ್ದ ಡಾ.ಬಿ.ಎಸ್. ಕೊಡಕಣಿ (89) ಅವರು ಗುರುವಾರ ನಿಧನರಾದರು. 1959ರಲ್ಲಿ ಬರೋಡಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಅವರು 1962ರಲ್ಲಿ ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಡಿ. ಪದವೀಧರರಾಗಿ, ಮುಂಬೈ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳ ರಿಜಿಸ್ಟ್ರಾರ್ ಆಗಿ ಸೇವೆಸಲ್ಲಿಸಿದ್ದರು. 1966ರಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಇಂಗ್ಲೆಂಡ್, ಯೂರೋಪ, ಕೆನಡಾ, ಅಮೆರಿಕಾಗಳಲ್ಲಿ ಉಪನ್ಯಾಸಕರಾಗಿ, …
Read More »ಯಲ್ಲಮ್ಮನಗುಡ್ಡ: ಭಾರತ ಹುಣ್ಣಿಮೆ ಜಾತ್ರೆಗೆ ಜನಸಾಗರ
ಯಲ್ಲಮ್ಮನಗುಡ್ಡ (ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನ ಸನ್ನಿಧಾನದಲ್ಲಿ ಶನಿವಾರ ಅಪಾರ ಸಂಖ್ಯೆ ಭಕ್ತಾದಿಗಳ ಸಮ್ಮುಖದಲ್ಲಿ ಭಾರತ ಹುಣ್ಣಿಮೆ ಜಾತ್ರೆ ಸಡಗರದಿಂದ ನೆರವೇರಿತು. ಕೋವಿಡ್ ಮತ್ತು ಬರಸ್ಥಿತಿಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಜಾತ್ರೆ ಸಂಭ್ರಮ ಕಳೆಗುಂದಿತ್ತು. ಈಗ ಮತ್ತೆ ವೈಭವ ಮರುಕಳಿಸಿದೆ. ಕೆಲವರು ಚಕ್ಕಡಿಗಳಲ್ಲಿ, ಇನ್ನೂ ಕೆಲವರು ಕಾಲ್ನಡಿಗೆಯಲ್ಲಿ ಗುಡ್ಡಕ್ಕೆ ಬಂದರು. ಯಲ್ಲಮ್ಮ ದೇವಸ್ಥಾನ, ಸುತ್ತಲಿನ ದೇಗುಲಗಳಲ್ಲಿ ಕಾರ್ಯಕ್ರಮ ನಡೆದವು. ಕರ್ನಾಟಕದ ಜಿಲ್ಲೆಗಳಲ್ಲದೇ, ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಬಂದಿದ್ದ …
Read More »ಚನ್ನವೀರಯ್ಯ, ಶಿವಾಜಿಗೆ ಪ್ರಶಸ್ತಿ
ಮುಗಳಖೋಡ: ಬೆಳಗಾವಿ ಸಪ್ತಸ್ವರ ಸಂಗೀತ ಕಲಾ ಬಳಗದ ವತಿಯಿಂದ ನೀಡಲಾಗುವ ‘ಗಡಿನಾಡು ಪತ್ರಿಕಾ ಮಾಧ್ಯಮ ರತ್ನ’ ರಾಜ್ಯಮಟ್ಟದ ಪ್ರಶಸ್ತಿಗೆ ಸಮೀಪದ ಹಂದಿಗುಂದದ ಚನ್ನವೀರಯ್ಯ ಹಿರೇಮಠ ಮತ್ತು ‘ಕರ್ನಾಟಕ ಪತ್ರಿಕಾ ಮಾಧ್ಯಮ ರತ್ನ’ ಪ್ರಶಸ್ತಿಗೆ ಪಾಲಭಾವಿಯ ಶಿವಾಜಿ ಮೇತ್ರಿ ಆಯ್ಕೆಯಾಗಿದ್ದಾರೆ. ಫೆ.26ರಂದು ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಶಿವಾಜಿ
Read More »ಉಧೋ ಉಧೋ ಯಲ್ಲಮ್ಮಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ಜಾತ್ರೆಯಲ್ಲಿ ಯಲ್ಲಮ್ಮ ದೇವಸ್ಥಾನದಿಂದ ಪಶ್ಚಿಮ ದಿಕ್ಕಿಗೆ ಕಣ್ಣು ಹಾಯಿಸಿದರೆ ವೈವಿಧ್ಯಮಯ ಬಣ್ಣ ಬಣ್ಣದ ಬಳೆಗಳ ಮಾರಾಟ ಕಂಡುಬರುತ್ತದೆ. ಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ. ನೂರಾರು ಕುಟುಂಬಗಳು ದಶಕಗಳಿಂದ ಬಳೆ ಮಾರಾಟ ಮಾಡುತ್ತ ಬಂದಿವೆ. ಈಗೀಗ ಮಾರುಕಟ್ಟೆಯಲ್ಲಿ ಜಾಗ ಸಾಲದ್ದಕ್ಕೆ ಗುಡ್ಡದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಳೆಗಳ ಮಾರಾಟ ನಡೆಯುತ್ತದೆ. ಹುಣ್ಣಿಮೆ ಸಮೀಪಿಸುತ್ತಲೇ ಎಲ್ಲ ಅಂಗಡಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ. ಬಳೆಗಳನ್ನು ಒಪ್ಪ-ಓರಣವಾಗಿ …
Read More »ಮೂಡಲಗಿ: ಮಲ್ಲಿಕಾರ್ಜುನ ದೇವಾಲಯ ಉದ್ಘಾಟನೆ
ಮೂಡಲಗಿ: ನೂರಾರು ವರ್ಷಗಳ ಪೂರ್ವ ಇತಿಹಾಸ ಹೊಂದಿರುವ ತಾಲ್ಲೂಕಿನ ಅವರಾದಿ ಗ್ರಾಮದ ಮಲ್ಲಿಕಾರ್ಜುನ ದೇವರು ಈ ಭಾಗದ ಆರಾಧ್ಯ ದೈವ. ಶತಮಾನಗಳಿಂದಲೂ ಚಿಕ್ಕ ದೇವಾಲಯದಲ್ಲಿಯೇ ಮಲ್ಲಿಕಾರ್ಜುನನ ಪೂಜೆ ಮಾಡಿಕೊಂಡು ಬಂದಿದ್ದ ಭಕ್ತರು ಈದೀಗ ದೇವಾಲಯವನ್ನು ನಿರ್ಮಿಸಿದ್ದಾರೆ. ಗ್ರಾಮದ ಭಕ್ತರೆಲ್ಲ ಸೇರಿ ₹48 ಲಕ್ಷ ವೆಚ್ಚದಲ್ಲಿ ಹೊಸ ದೇವಸ್ಥಾನ ನಿರ್ಮಿಸಿದ್ದು, ಫೆ.25ರಿಂದ 29ರವರೆಗೆ ದೇವಸ್ಥಾನದ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ. ದೇವಾಲಯದಲ್ಲಿ ದೊಡ್ಡಬಳ್ಳಾಪುರ ಶಿಲೆಯಲ್ಲಿ ಲಿಂಗ ಮತ್ತು …
Read More »ಲೋಕಸಭೆ ಚುನಾವಣೆ: ಪರಿಶಿಷ್ಟರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ
ರಾಮದುರ್ಗ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಈ ಬಾರಿ ಎಸ್‍ಸಿ/ಎಸ್‍ಟಿ ಸಮುದಾಯದ ಅನಂತಕುಮಾರ ಬ್ಯಾಕೋಡ ಅವರಿಗೆ ನೀಡಬೇಕು ಎಂದು ಪಕ್ಷದ ಎಸ್‍ಸಿ/ಎಸ್‍ಟಿ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ನಾಗಣ್ಣವರ ವರಿಷ್ಠರನ್ನು ಒತ್ತಾಯಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಯವರಿಗೆ 50 ವರ್ಷಗಳಿಂದಲೂ ಟಿಕೆಟ್ ನೀಡಿಲ್ಲ. ಸುಮಾರು 6 ಲಕ್ಷ ಮತಗಳಿದ್ದರೂ ಈ ಜನಾಂಗಕ್ಕೆ ವಿಧಾನ ಪರಿಷತ್, ವಿಧಾನಸಭೆ ಮತ್ತು ನಿಗಮ ಮಂಡಳಿಗೂ ಪರಿಗಣಿಸಿಲ್ಲ’ ಎಂದು ಆಕ್ರೋಶ …
Read More »ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಮೂಲ ಕಾರಣ: ಇಕ್ಬಾಲ್ ಅನ್ಸಾರಿ
ಕೊಪ್ಪಳ : ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಮೂಲ ಕಾರಣ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ, ನಾನು ಮುಸ್ಲಿಂ ಅನ್ನೋ ಕಾರಣಕ್ಕೆ, ಮುಸ್ಲಿಂ ನಾಯಕ ಬೆಳೆಯಬಾರದು ಎಂದು ನನ್ನ ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಸೋಲಿಗೆ ಕಾಂಗ್ರೆಸ್ ಹಲವು ನಾಯಕರು ಕಾರಣ, ಮನೆ ಮನೆಗೆ ಹೋಗಿ ಮೋಸದ ಬಗ್ಗೆ …
Read More »