ಚಿಕ್ಕೋಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ನೀಡುವ ಪ್ರಮಾಣದಲ್ಲಿ ಕಡಿತ ಮಾಡಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಐದು ಕೆಜಿ ಅಕ್ಕಿ ಬದಲು ನಾಲ್ಕೂವರೆ ಕೆಜಿ ಅಕ್ಕಿ ವಿತರಣೆ ಮಾಡಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡಿತರ ಚೀಟಿದಾರರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ, ಇಲ್ಲಿ ಪ್ರತಿ ಒಂದು ಕಾರ್ಡಿಗೆ ಅರ್ಧ ಕೆಜಿ …
Read More »Daily Archives: ನವೆಂಬರ್ 19, 2023
ಅಥಣಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಯುರ್ವೇದ ಕಾಲೇಜು ಸ್ಥಾಪನೆ ಮಾಡಲಾಗಿದೆ ಎಂದು ಡಾ ನಂದೀಶ ತೇರದಾಳ ಆರೋಪಿಸಿದ್ದಾರೆ.
ಚಿಕ್ಕೋಡಿ (ಬೆಳಗಾವಿ) : ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಆನಂದ ಕಿರಶ್ಯಾಳ ಅವರು ಅಥಣಿಯಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪಟ್ಟಣದಲ್ಲಿ ಆಯುರ್ವೇದ ಕಾಲೇಜು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಹಲವು ಅಧಿಕಾರಿಗಳು ಶಾಮಿಲಾಗಿದ್ದಾರೆ. ಕೆಲವು ಹಿರಿಯ ಅಧಿಕಾರಿಗಳೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ತೇರದಾಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ನಂದೀಶ ತೇರದಾಳ, ನಕಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ …
Read More »ತವರಿನಲ್ಲಿ ವಿಶ್ವಕಪ್ ಕೈಚೆಲ್ಲಿದ ಭಾರತ: 6ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸೀಸ್
ಅಹಮದಾಬಾದ್ (ಗುಜರಾತ್): ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಭಾರತ ನೀಡಿದ್ದ 241 ರನ್ಗಳ ಸಾಧಾರಣ ಗುರಿಯನ್ನು ಆಸೀಸ್ 7 ಓವರ್ ಉಳಿಸಿಕೊಂಡು 6 ವಿಕೆಟ್ನಿಂದ ಗೆದ್ದಿದೆ. 2003ರಲ್ಲಿ ಕಾಂಗರೂ ಪಡೆ ವಿರುದ್ಧ ಸೋಲು ಕಂಡಿದ್ದ ಭಾರತ, ಇದೀಗ 20 ವರ್ಷದ ನಂತರವೂ ವಿಶ್ವಕಪ್ ಫೈನಲ್ನಲ್ಲಿ ಸೋಲು ಕಂಡಿದೆ. 2003ರ ವಿಶ್ವಕಪ್ನಲ್ಲಿ ರಿಕಿ ಪಾಂಟಿಂಗ್ 140 ರನ್ ಗಳಿಸಿ …
Read More »