ಹಾವೇರಿ : ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮತ್ತು ಹಾವೇರಿ ಜಿಲ್ಲೆಯ ರೈತರ ನಡುವಿನ ಜಟಾಪಟಿಗೆ ತೆರೆಬಿದ್ದಿದೆ. ಸೋಮವಾರ ನಡೆದ ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ನಾನು ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಆರಂಭಿಸಿದ ನಂತರ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಈ ರೀತಿ ಹೇಳಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಜೊತೆಗೆ ಯಾರದಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು. ಈ …
Read More »Daily Archives: ಸೆಪ್ಟೆಂಬರ್ 25, 2023
ಜನತಾ ದರ್ಶನಕ್ಕೆ ಉತ್ತಮ ಸ್ಪಂದನೆ: ಒಟ್ಟು 6,684 ಅಹವಾಲು, ಮನವಿ ಸ್ವೀಕಾರ.. 6,663 ಅರ್ಜಿ ವಿಲೇವಾರಿ ಬಾಕಿ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಜನತಾ ದರ್ಶನಕ್ಕೆ ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ಜನತಾ ದರ್ಶನ ನಡೆದಿದೆ. ಸಂಜೆ 6:30 ರ ವೇಳೆಗೆ ಲಭ್ಯವಿದ್ದ ಅಂಕಿ ಅಂಶಗಳ ಪ್ರಕಾರ ರಾಜ್ಯಾದ್ಯಂತ 6684 ಅಹವಾಲು ಮತ್ತು ಮನವಿಗಳು ಸ್ವೀಕೃತಗೊಂಡು 21ಕ್ಕೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಉಳಿದಂತೆ 6663 ಅರ್ಜಿ, …
Read More »ಕಾವೇರಿ ಕಿಚ್ಚು: ರೈತರ ಹೋರಾಟಕ್ಕೆ ಹಿರಿಯ ನಟಿ ಲೀಲಾವತಿ ಸಾಥ್
ಮಂಡ್ಯ: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶದ ಬೆನ್ನಲ್ಲೇ ಸಕ್ಕರೆ ನಗರಿ ಮಂಡ್ಯದಲ್ಲಿ ಅನ್ನದಾತರನ್ನ ಕೆರಳುವಂತೆ ಮಾಡಿದೆ. ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ಸೋಮವಾರ ರೈತರ ಹೋರಾಟಕ್ಕೆ ಕಮಲಪಡೆ ಹಾಗೂ ಚಿತ್ರನಟರು ಸಾಥ್ ನೀಡಿದ್ರು. ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ಸೋಮವಾರ ರೈತರ ಹೋರಾಟಕ್ಕೆ ಕಮಲಪಡೆ ಹಾಗೂ ಚಿತ್ರನಟರು ಸಾಥ್ ನೀಡಿದ್ರು. ಹೋರಾಟದ ಕಾವು ಉಗ್ರ ಸ್ವರೂಪ ಪಡೆದಿತ್ತು. ಶಾಸಕ ಬಿ …
Read More »ಶಿವಮೊಗ್ಗದಲ್ಲಿ ನಡೆದ ಜನತಾ ದರ್ಶನ
ಶಿವಮೊಗ್ಗ: ಜನತಾ ದರ್ಶನವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಿದಂತೆ, ತಾಲೂಕು ಮಟ್ಟದಲ್ಲೂ ನಡೆಸುವ ಉದ್ದೇಶವಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರಥಮ ಜನತಾ ದರ್ಶನದಲ್ಲಿ ಭಾಗಿಯಾಗಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಅರ್ಜಿ ಪಡೆಯುವುದಲ್ಲ. ಅರ್ಜಿ ಪಡೆದ ಮೇಲೆ ಅದನ್ನು ವಿಲೇವಾರಿ ಮಾಡಿ ಕೆಲಸ ಆಗಬೇಕು. ಸಾಮಾನ್ಯ ಜನರು ಸಹ ಟೋಕನ್ ಪಡೆದು ಆಯಾ ಇಲಾಖೆಗೆ ಹೋಗಿ ಫಾಲೋಅಪ್ ಮಾಡಬೇಕು. ಅವರಿಗೆ ಗೂತ್ತಾಗದೆ ಹೋದರೆ, ನಮ್ಮ …
Read More »ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬೆಂಗಳೂರು ಬಂದ್
ನಾಳೆ ನಡೆಯುವ ಬೆಂಗಳೂರು ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಮಂಗಳವಾರದ ಬೆಂಗಳೂರು ಬಂದ್‌ಗೆ ರಾಜ್ಯ ರಾಜಧಾನಿ ಬಹುತೇಕ ಸ್ತಬ್ಧವಾಗಲಿದೆ. ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬೆಂಗಳೂರು ಬಂದ್ ಆಗಲಿದೆ. ಶಾಲಾ ಕಾಲೇಜುಗಳಿಗೂ ರಜೆ ಇರಲಿದೆ. ಸಿನಿಮಾ, ಟ್ಯಾಕ್ಸಿ, ಐಟಿ-ಬಿಟಿ, ಹೋಟೆಲ್ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಬೇಕೆಂದು ಸಂಘಟನೆಗಳು ಕೋರಿವೆ. …
Read More »ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಉರುಳುವ ಹಂತದಲ್ಲಿರುವ ಬೃಹತ್ ಮರಗಳು : ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ
ಬೆಳಗಾವಿ : ನಗರ ವ್ಯಾಪ್ತಿಯಲ್ಲಿ ಹಲವು ಬೃಹತ್ ಮರಗಳು ಉರುಳುವ ಹಂತ ತಲುಪಿದ್ದು, ಈ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಹಿಂದೆ ಬಿರುಗಾಳಿ ಸಹಿತ ಭಾರಿ ಮಳೆಗೆ ನಗರ ವ್ಯಾಪ್ತಿಯಲ್ಲಿ ಹಲವು ಕಡೆ ಮರಗಳು ಉರುಳಿ ಜೀವಹಾನಿ ಸಂಭವಿಸಿತ್ತು. ಆದರೂ ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ 2022ರ ಸೆಪ್ಟೆಂಬರ್ನಲ್ಲಿ ಬೆಳಗಾವಿ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿತ್ತು. ಸೆಪ್ಟೆಂಬರ್ 13ರಂದು …
Read More »ಹೆಚ್ ಡಿ ಕುಮಾರಣ್ಣ ಅವರು ಬಿಸಿಲು ಬಂದಾಗ ಛತ್ರಿ ಹಿಡಿಯುತ್ತಾರೆ ಎಂದು ಶಾಸಕ ಲಕ್ಷ್ಮಣ್ ಸವದಿ
ಬೆಳಗಾವಿ : ಹೆಚ್ ಡಿ ಕುಮಾರಣ್ಣ ಅವರು ಬಿಸಿಲು ಬಂದಾಗ ಛತ್ರಿ ಹಿಡಿಯುತ್ತಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ಅವರು ಮಾಜಿ ಸಿಎಂ ಕುಮಾರಸ್ವಾಮಿ ಕುರಿತು ವ್ಯಂಗ್ಯವಾಡಿದರು. ಐಎನ್ಡಿಐಎ ಒಕ್ಕೂಟದ ಓಲೈಕೆಗೆ ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಸವದಿ ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಕುಮಾರಣ್ಣ ಬಿಸಿಲು ಬಂದಾಗ ಛತ್ರಿ ಹಿಡಿಯುತ್ತಾರೆ. “ಹೆಂಗೆಂಗ್ ಬಿಸಿಲು ಬರ್ತದೆ, ಹಂಗಂಗ್ ಕೊಡೆ …
Read More »ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯಲ್ಲಿ ಜನತಾ ದರ್ಶನ… :ಸತೀಶ್ ಜಾರಕಿಹೊಳಿ
ಮಂಗಳವಾರ ಬೆಳಗಾವಿಯಲ್ಲಿ ಜನತಾ ದರ್ಶನ…ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳೀಯವಾಗಿ ಪರಿಹರಿಸಲು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿಅವರು ಮಂಗಳವಾರ(ಸೆ.26) ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ನೆಹರೂ ನಗರದಲ್ಲಿರುವ ಕೆಪಿಟಿಸಿಎಲ್ ಭವನದಲ್ಲಿ “ಜನತಾ ದರ್ಶನ” ನಡೆಸಲಿದ್ದಾರೆ.
Read More »ಬೆಳಗಾವಿ ಮತ್ತು ಖಾನಾಪುರವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ ಅನ್ನದಾತರ ಪ್ರತಿಭಟನೆ
ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಮಳೆ ಅಭಾವದಿಂದ ಸಾಲ ಸೂಲ ಮಾಡಿ ಬೆಳೆ ಬಿತ್ತಿದ್ದ ರೈತರು ಕಂಗಾಲಾಗಿದ್ದಾರೆ. ಇನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವ ಬೆಳಗಾವಿ ಮತ್ತು ಖಾನಾಪುರವನ್ನು ಪಟ್ಟಿಗೆ ಸೇರಿಸಿ, ಬೆಳೆ ಹಾನಿಗೆ ಸೂಕ್ತ ಪರಿಹಾರ ಘೋಷಿಸುವಂತೆ ಆಗ್ರಹಿಸಿ ನೇಗಿಲಯೋಗಿ ರೈತ ಸೇವಾ ಸಂಘದಿಂದ ಪ್ರತಿಭಟನೆ ನಡೆಯಿತು. ಹಾಳಾದ ಭತ್ತ, ಆಲೂಗಡ್ಡೆ, ಗೆಣಸು ಸೇರಿ ಇನ್ನಿತರ ಬೆಳೆಗಳನ್ನು ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆ ಮೂಲಕ …
Read More »ಹೆಚ್ ಡಿ ಕುಮಾರಸ್ವಾಮಿ ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ತೆರಳಿ ಕಾಲಿಗೆ ಬಿದ್ದು ಬಂದಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಮಾಜಿ ಮುಖ್ಯಮಂತ್ರಿಹೆಚ್ ಡಿಕುಮಾರಸ್ವಾಮಿ ಅವರು ಅಸ್ತಿತ್ವ ಉಳಿಸಿಕೊಳ್ಳಲು ದೆಹಲಿಗೆ ಹೋಗಿ ಬಿಜೆಪಿಯ ಎಲ್ಲಾ ಮುಖಂಡರಿಗೆ ಕಾಲಿಗೆ ಬಿದ್ದು ಬಂದಿದ್ದಾರೆ ಎಂದು ಚಿಂಚೋಳಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದ್ದಾರೆ. ರಾಜ್ಯದ ಹಿತದೃಷ್ಠಿಯಿಂದಲ್ಲ, ಪ್ರಧಾನಿ ಬಳಿ ಅವರ ಅಸ್ತಿತ್ವ ಉಳಿಸಿಕೊಳ್ಳಲು ಹೋಗಿದ್ದಾರಾ? ಅಥವಾ ಅವರು ಕಾವೇರಿ ವಿಚಾರ ಚರ್ಚೆ ಮಾಡಿದ್ರಾ? ಎಂದು ಪ್ರಶ್ನಿಸಿದರು. ಹೋಮ್ ಮಿನಿಸ್ಟರ್ ಹತ್ತಿರ ಹೋದ್ರು. ಜೆ ಪಿ ನಡ್ಡಾ ಅವರ ಹತ್ತಿರ ಹೋದ್ರು. …
Read More »