ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸೌರ ಯೋಜನೆ ಆದಿತ್ಯ-L1 ಅನ್ನು ನಿನ್ನೆ (ಶನಿವಾರ) ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದಕ್ಕೂ ಮೊದಲು ಆಗಸ್ಟ್ 23ರಂದು ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಬಾಹ್ಯಾಕಾಶ ಪ್ರಪಂಚದಲ್ಲಿ ಇತಿಹಾಸ ಸೃಷ್ಟಿಸಿತ್ತು. ಚಂದ್ರ ಮತ್ತು ಸೂರ್ಯನ ನಂತರ ಇಸ್ರೋ ಹೊಸ ಮಿಷನ್ ಸಿದ್ಧಪಡಿಸಿದೆ. ಈ ಮಿಷನ್ ಏನು? ಉದ್ದೇಶವೇನು? ನೋಡೋಣ. ಇಸ್ರೋ ಸಂಸ್ಥೆಯು …
Read More »Daily Archives: ಸೆಪ್ಟೆಂಬರ್ 3, 2023
ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ‘ಓದುವ ಬೆಳಕು’ ಅಭಿಯಾನ: ಸರ್ಕಾರದ ಉದ್ದೇಶವೇನು? ಹೇಗಿರಲಿದೆ?
ಬೆಂಗಳೂರು : ಮಕ್ಕಳು ನಿರಂತರವಾಗಿ ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಾದ್ಯಂತ ‘ಓದುವ ಬೆಳಕು’ ಎಂಬ ವಿನೂತನ ಕಾರ್ಯಕ್ರಮವನ್ನು ಶುರು ಮಾಡಿದೆ. ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿ ಇದೆ ಎಂದು ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಹೇಳಿದ್ದಾರೆ. ಗ್ರಂಥಾಲಯಗಳನ್ನು …
Read More »ಚಂದ್ರಯಾನ-3: ಕೆಲಸ ಮುಗಿಸಿ ‘ಸ್ಲೀಪ್ ಮೋಡ್’ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ
ನವದೆಹಲಿ: ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಮೊದಲು ಸ್ಪರ್ಶಿಸಿದ ಸ್ಥಳವಾದ ‘ಶಿವಶಕ್ತಿ ಪಾಯಿಂಟ್’ನಿಂದ ಸುಮಾರು 100 ಮೀಟರ್ ಚಲಿಸಿದ ಬಳಿಕ ಪ್ರಗ್ಯಾನ್ ರೋವರ್ ಅನ್ನು ಸುರಕ್ಷಿತವಾಗಿ ಸ್ಲೀಪ್ ಮೋಡ್ನಲ್ಲಿ ಇರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿನ್ನೆ (ಶನಿವಾರ) ತಿಳಿಸಿದೆ. ಈ ಕುರಿತು ‘ಎಕ್ಸ್’ ಆಯಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ಇದೀಗ ಸುರಕ್ಷಿತವಾಗಿ ಅದನ್ನು ನಿಲುಗಡೆ ಮಾಡಲಾಗಿದ್ದು, ಸ್ಲೀಪ್ ಮೋಡ್‌ಗೆ ಹೊಂದಿಸಲಾಗಿದೆ. …
Read More »ಏಕಕಾಲಕ್ಕೆ ಚುನಾವಣೆ ನಡೆದರೆ ಇವಿಎಂ-ವಿವಿಪ್ಯಾಟ್ ಖರೀದಿಗೆ ₹9,300 ಕೋಟಿ ವೆಚ್ಚ: ಚುನಾವಣಾ ಆಯೋಗ
ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಹೆಚ್ಚುವರಿ ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ) ಮತ್ತು ಪೇಪರ್-ಟ್ರಯಲ್ ಯಂತ್ರಗಳನ್ನು ಖರೀದಿಸಲು ಸುಮಾರು 9,300 ಕೋಟಿ ವೆಚ್ಚವಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಒಂದೇ ಸಮಯಕ್ಕೆ ಚುನಾವಣೆಗಳನ್ನು ನಡೆಸಲು ಅಗತ್ಯ ಕಾರ್ಯಸೂಚಿಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ‘ಒಂದು ರಾಷ್ಟ್ರ ಒಂದು ಚುನಾವಣೆ’ಯಡಿ ಏಕಕಾಲಕ್ಕೆ ಚುನಾವಣೆ ನಡೆಸುವಾಗ …
Read More »