Breaking News

Monthly Archives: ಆಗಷ್ಟ್ 2023

ಯಾರೂ ಪಕ್ಷ ಬಿಟ್ಟು ಹೋಗಲ್ಲ, ಮೈತ್ರಿ ಉಳಿಸಿಕೊಳ್ಳುವಲ್ಲಿ‌ ಕಾಂಗ್ರೆಸ್ ವಿಫಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ದೂರು ಕೊಟ್ಟ ಗುತ್ತಿಗೆದಾರರನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದ್ರೆ, ಗುತ್ತಿಗೆದಾರರನ್ನು ಹೆದರಿಸಿ, ಬೆದರಿಸಿ ಕೇಸ್​ ಉಲ್ಟಾ ಹೊಡೆಯುವ ಹಾಗೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, “ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ರಾಮಲಿಂಗಾರೆಡ್ಡಿಗೆ ಹೇಗೆ ಗೊತ್ತು?. ಅವರೇನು ಬಿಜೆಪಿ ಪಕ್ಷದಲ್ಲಿದ್ದಾರಾ?, ಸದ್ಯದಲ್ಲೇ ಪ್ರತಿಪಕ್ಷ ನಾಯಕನ ನೇಮಕವಾಗುತ್ತದೆ. ಚಲುವರಾಯಸ್ವಾಮಿ ಸೇರಿದಂತೆ …

Read More »

1,500 ಎಳನೀರು ಕಳ್ಳತನ! UPI ಪಾವತಿಯಲ್ಲಿ ಸಿಕ್ಕಿಬಿದ್ದ ‘ಎಳನೀರು ಕಳ್ಳರು’!

ಬೆಂಗಳೂರು : ರಸ್ತೆಬದಿಯಲ್ಲಿ ಮಾರಾಟಕ್ಕಿಡುತ್ತಿದ್ದ ಎಳನೀರನ್ನು ಕದ್ದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಟಾಟಾ ಏಸ್ ವಾಹನದಲ್ಲಿ ಬಂದು 1,500 ಎಳನೀರು ಕದ್ದು ತಲೆಮರೆಸಿಕೊಂಡಿದ್ದ ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು. ಪ್ರಕರಣದ ಸಂಪೂರ್ಣ ವಿವರ: ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೊ ನಿಲ್ದಾಣದ ಸಮೀಪ ರಾತ್ರೋರಾತ್ರಿ ಟಾಟಾ ಏಸ್ ವಾಹನದ ನಂಬರ್ ಪ್ಲೇಟಿಗೆ ಮಸಿ ಬಳಿದು ಬರುತ್ತಿದ್ದ ಆರೋಪಿಗಳು ಎಳನೀರು ಅಂಗಡಿಗಳಲ್ಲಿ ನಿರಂತರವಾಗಿ ಕಳ್ಳತನ ಮಾಡುತ್ತಿದ್ದರು. ಆಗಸ್ಟ್ …

Read More »

ಸದ್ಯಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ- ಸಚಿವ ಕೆ.ಹೆಚ್.ಮುನಿಯಪ್ಪ

ಬೆಂಗಳೂರು : ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆಗೆ ನಾವು ಅವಕಾಶ ಕೊಟ್ಟಿಲ್ಲ. ಕಾರಣವೇನು ಅಂತ ಸದ್ಯದಲ್ಲೇ ಹೇಳುತ್ತೇವೆ. ಇನ್ನೂ ಒಂದಿಷ್ಟು ದಿನ ಎಪಿಎಲ್, ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು. ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ತಿಂಗಳು ಪಡಿತರದಲ್ಲಿ ಅನ್ನಭಾಗ್ಯದಡಿ 5 ಕೆಜಿ ಅಕ್ಕಿ ಸಿಗುತ್ತೆ ಅಂತ ಡೆಡ್‌ಲೈನ್ ಕೊಡುವುದಕ್ಕೆ ಆಗಲ್ಲ. ಅಧಿಕಾರಿಗಳ ಜತೆ …

Read More »

ಆರ್​ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅಪರಾಧಿ; ಸುಪ್ರೀಂ ಕೋರ್ಟ್​ ತೀರ್ಪು

ನವದೆಹಲಿ : 1995 ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖಂಡ ಮತ್ತು ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ತೀರ್ಪು ನೀಡಿದೆ. ಸಿಂಗ್ ಅವರನ್ನು ಖುಲಾಸೆಗೊಳಿಸಿದ ಪಾಟ್ನಾ ಹೈಕೋರ್ಟ್ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿತು. ಜೋಡಿ ಕೊಲೆ ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್ ದೋಷಿ ಎಂದು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ ಮತ್ತು ವಿಕ್ರಮ್ …

Read More »

ಯಾವ ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಬಗ್ಗೆ ನಿಖರವಾಗಿ ಹೇಳಿಲ್ಲ.

ಬೆಳಗಾವಿ: ಯಾವ ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಬಗ್ಗೆ ನಿಖರವಾಗಿ ಹೇಳಿಲ್ಲ. ಕೇವಲ ಮಾಧ್ಯಮಗಳಲ್ಲಿ ಊಹಾಪೋಹಗಳು ಸೃಷ್ಟಿ ಆಗುತ್ತಿವೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ‌. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ನನ್ನ ಮಾಹಿತಿ ಪ್ರಕಾರ ಯಾರು ಪಕ್ಷ ಬಿಟ್ಟು ಹೋಗುವವರಿಲ್ಲ. ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಹಾಗಾಗಿ ಬಿಜೆಪಿ ಬಿಟ್ಟು ಯಾಕೆ ಹೋಗುತ್ತಾರೆ ಎಂದು …

Read More »

ಮುತ್ತಯ್ಯ ಮುರಳೀಧರನ್‌ ಧಾರವಾಡದಲ್ಲಿ ತಂಪು ಪಾನೀಯ ಮತ್ತು ಕ್ಯಾನ್ ತಯಾರಿಸುವ ಕಂಪನಿ ಸ್ಥಾಪಿಸಲು ಯೋಜಿಸಿದ್ದು, ಇದೀಗ ಇಲ್ಲಿನ ಪರಿಸರವಾದಿಗಳು ಉದ್ಯಮಕ್ಕೆ ವಿರೋಧ

ಧಾರವಾಡ: ಶ್ರೀಲಂಕಾದ ಮಾಜಿ ಸ್ಪಿನ್‌ ಬೌಲರ್ ಮುತ್ತಯ್ಯ ಮುರಳೀಧರನ್‌ ಅವರು ಧಾರವಾಡದಲ್ಲಿ ಸ್ಥಾಪನೆ ಮಾಡಲು ಮುಂದಾಗಿರುವ ತಂಪು ಪಾನೀಯ ಉದ್ಯಮಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದೆ. ಪರಿಸರವಾದಿ ಸುರೇಶ್ ಹೆಬ್ಳೀಕರ್ ನೇತೃತ್ವದಲ್ಲಿ ವಿರೋಧ ವ್ಯಕ್ಯವಾಗಿದ್ದು, ತಂಪು ಪಾನೀಯ, ಎನರ್ಜಿ ಡ್ರಿಂಕ್ ಹಾಗೂ ಅವುಗಳ ಕ್ಯಾನ್ ತಯಾರಿಸುವ ಕಂಪನಿ ಸ್ಥಾಪಿಸಲು ಮೆ.ಸಿಲೋನ್ ಬಿವರೇಜ್ ಕ್ಯಾನ್ ಪ್ರೆವೈಟ್ ಲಿಮಿಟೆಡ್ ಕಂಪನಿ ಸ್ಥಾಪನೆಗೆ ಮುತ್ತಯ್ಯ ಮುರಳಿಧರನ್‌ ಮುಂದಾಗಿದ್ದರು. ಕಂಪನಿ ಅಡಿ 900 ಕೋಟಿ ಹೂಡಿಕೆಗೆ ಧಾರವಾಡ ತಾಲೂಕಿನ …

Read More »

ಬಂಡೀಪುರದಲ್ಲಿ ನಟ ಗಣೇಶ್ ಕಾಂಪೌಂಡ್ ಕಾಮಗಾರಿಗೆ ಆಕ್ಷೇಪ; ನೊಟೀಸ್ ಜಾರಿ

ಚಾಮರಾಜನಗರ : ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡಕ್ಕೆ ಅಡಿಪಾಯ ಹಾಕಿದ್ದಾರೆ ಎಂಬ ಪರಿಸರವಾದಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ನಟ ಗಣೇಶ್​ ಅವರಿಗೆ ಬಂಡೀಪುರ ಸೂಕ್ಷ್ಮ ವಲಯ ಪರಿಸರ ಸಮಿತಿ ಸದಸ್ಯ ಕಾರ್ಯದರ್ಶಿ ನೊಟೀಸ್​ ನೀಡಿದ್ದಾರೆ. ಮುಂದಿನ 7 ದಿನಗಳೊಳಗೆ ಸೂಕ್ತ ದಾಖಲಾತಿ ಒದಗಿಸಬೇಕು. ಅಲ್ಲಿಯವರೆಗೂ ಕಾಮಗಾರಿ ನಿಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ. ಪರಿಸರವಾದಿಗಳ ಆಕ್ಷೇಪ: ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಜಕ್ಕಳ್ಳಿ ಗ್ರಾಮದ ಸರ್ವೇ ನಂ. 105ರಲ್ಲಿ 1.24 ಎಕರೆ ಜಮೀನು ಖರೀದಿಸಿರುವ …

Read More »

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಖಂಡಿಸಿ ರೈತರ ಪ್ರತಿಭಟನೆ; ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾಥ್‌

ಮಂಡ್ಯ : ತಮಿಳುನಾಡಿಗೆ ಕಾವೇರಿಯಿಂದ ಹೆಚ್ಚುವರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಇಂದು ಜಿಲ್ಲೆಯಲ್ಲಿ ರೈತರು ಪ್ರತಿಭಟಿಸಿದ್ದಾರೆ. ಕಾವೇರಿಯಿಂದ ತಮ್ಮ ಪಾಲಿಗೆ ಬರಬೇಕಾದ ನೀರಿಗಾಗಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಕಳೆದ ಹಲವು ದಿನಗಳಿಂದ ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಗೆ 5 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಮಧ್ಯೆ ತಮಿಳುನಾಡು ಸರ್ಕಾರ ತಗಾದೆ ತೆಗೆದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಜಲಾಶಯದಿಂದ ಕಾವೇರಿಯ …

Read More »

ಲಿಂಗಾಯತಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೇವೆ. :ಬಸವ ಜಯಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ : ಲಿಂಗಾಯತಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೇವೆ. ಇದೇ ತಿಂಗಳಿನಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ‌ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮುದಾಯದಲ್ಲಿ ನಿರಾಸೆ ಮೂಡಿದೆ. ಕೂಡಲೇ ತಜ್ಞರ ಸಭೆ ಕರೆದು ಈ ವಿಚಾರವನ್ನು ಇತ್ಯರ್ಥ ಮಾಡಬೇಕು. 2ಎ ಮೀಸಲಾತಿ ಹೈಕೋರ್ಟ್‌ನಲ್ಲಿದೆ, 2ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬಜೆಟ್ ಅಧಿವೇಶನದ ನಂತರ ಸಭೆ ಕರೆದು …

Read More »

ಮೂಲಸೌಕರ್ಯದ ಕೊರತೆಯಿಂದಾಗಿ 13 ಸರ್ಕಾರಿ ಶಾಲೆಗಳಿಗೆ ಬೀಗ

ಚಾಮರಾಜನಗರ: ಮೂಲಸೌಕರ್ಯದ ಕೊರತೆಯಿಂದಾಗಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಲವು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಮೂಲಸೌಕರ್ಯ ಕೊರತೆ, ಶಿಕ್ಷಕರ ಕೊರತೆ, ಶಿಥಿಲ ಶಾಲಾ ಕಟ್ಟಡಗಳಿಂದ ಆತಂಕಗೊಂಡು ಮಕ್ಕಳ ಶೂನ್ಯ ದಾಖಲಾತಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 13 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗಿದೆ. ಈ ಪೈಕಿ ಒಂದು ಉರ್ದು ಮಾಧ್ಯಮದ ಶಾಲೆಯೂ ಸೇರಿದೆ. ಕೋವಿಡ್ ವೇಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ದಿಢೀರ್ ಏರಿಕೆ ಆಗಿತ್ತು. ಆದರೆ …

Read More »