Breaking News

Daily Archives: ಆಗಷ್ಟ್ 21, 2023

ವಂಟಮುರಿ ಕಾಲೋನಿಯಲ್ಲಿ ಆಶ್ರಯ ಯೋಜನೆ ಕಾಲೋನಿ ನಿವಾಸಿಗಳ ಸಂಘದ ವತಿಯಿಂದ ವಿಭಿನ್ನ ರೀತಿಯಲ್ಲಿ ಬಸವ ಪಂಚಮಿ ಆಚರಿಸಲಾಯಿತು

ಬೆಳಗಾವಿಯ ವಂಟಮುರಿ ಕಾಲೋನಿಯಲ್ಲಿ ಆಶ್ರಯ ಯೋಜನೆ ಕಾಲೋನಿ ನಿವಾಸಿಗಳ ಸಂಘದ ವತಿಯಿಂದ ಇಂದು ಬಸವ ಪಂಚಮಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗಿತ್ತು. ಈ ಬಾರಿಯ ಬಸವ ಪಂಚಮಿಯನ್ನು ನಾಗದೇವತೆಗೆ ಹಾಲಿನ ಅಭಿಷೇಕದ ಬದಲು ಮಕ್ಕಳಿಗೆ ಹಾಲು, ಸಿಹಿತಿಂಡಿ ನೀಡಿ ಆಚರಿಸಲಾಯಿತು. ಸಮಾಜದಲ್ಲಿ ದೇವರ ಹೆಸರಿನಲ್ಲಿ ಮೂಢನಂಬಿಕೆ ಹೋಗಲಾಡಿಸಲು, ಆಹಾರ ಪೋಲು ಮಾಡುವದನ್ನು ನಿಲ್ಲಿಸಲು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಸಾಮಾಜಿಕ …

Read More »

ಶಾಹಪೂರ ನಗರದ ನಿವಾಸಿಯಾಗಿದ್ದ ಗೋಪಾಲ ರೋಹಿದಾಸ ಹೊನಗೆಕರ ಹೃದಯಘಾತದಿಂದ ಇಂದು ನಿಧನ

ಶಾಹಪೂರ ನಗರದ ನಿವಾಸಿಯಾಗಿದ್ದ ಗೋಪಾಲ ರೋಹಿದಾಸ ಹೊನಗೆಕರ ಹೃದಯಘಾತದಿಂದ ಇಂದು ನಿಧನರಾದರು. ಇಂದು ಹೃದಯಘಾತದಿಂದ ಶಾಹಪೂರ ನಗರದ ನಿವಾಸಿ ಗೋಪಾಲ ರೋಹಿದಾಸ ಹೊನಗೆಕರ ಯವರು ನಿಧನರಾಗಿದ್ದಾರೆ ,ಮೃತರು ಹೆಂಡತಿ ,ಇಬ್ಬರು ಮಕ್ಕಳು, ತಂದೆ ತಾಯಿಗಳು ಸಹೋದರ ಸಹೋದರಿಯನ್ನು ಅಗಲಿದ್ದಾರೆ ಮೃತರನ್ನ ಆತ್ಮಕ್ಕೆ ಶಾಂತಿ ಸಿಗಲೇಂದು ಹೊನಗೆಕರ ಕುಟುಂಬಸ್ಥರು ಪ್ರಾರ್ಥಿಸಿದ್ದಾರೆ , ಇನ್ನೂ ಮೃತನ ಪುಣ್ಯತಿಥಿ ಕಾರ್ಯಕ್ರವನ್ನು ಆ.23 ರಂದು ನೇರವೇರಿಸುವುದಾಗಿ ಗುರು ಹಿರಿಯರು ತಿಳಿಸಿದ್ದಾರೆ

Read More »

ಶಾಂತಾಯಿ ವೃದ್ಧಾಶ್ರಮದ 25ನೇ ವಾರ್ಷಿಕೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ಶಾಂತಾಯಿ ವೃದ್ಧಾಶ್ರಮದ 25ನೇ ವಾರ್ಷಿಕೋತ್ಸವವನ್ನು ಬೆಳಗಾವಿಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ (ಭಿಕ್ಷುಕರ ಪುನರ್ವಸತಿ ಕೇಂದ್ರ) ಆಚರಿಸಲಾಯಿತು. ಶಾಂತಾಯಿ ವೃದ್ಧಾಶ್ರಮ ಈ ವರ್ಷ ಡಿಸೆಂಬರ್‌ನಲ್ಲಿ 25ನೇ ವರ್ಷವನ್ನು ಪೂರೈಸುತ್ತಿದ್ದು, ಪ್ರತಿ ತಿಂಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಿರ್ಗತಿಕ ಪುನರ್ವಸತಿ ಕೇಂದ್ರವು 150 ಜನರ ಆರೈಕೆ ಮಾಡುತ್ತಿದ್ದು, ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಸಿಬ್ಬಂದಿ ಮತ್ತು ಅಧೀಕ್ಷಕ ಮಲ್ಲೇಶಪ್ಪ ಮೇಘದಿ ಅವರನ್ನು ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, …

Read More »

ಕ್ಷತ್ರಿಯ ಮರಾಠಾ ಸಮಾಜದ ಸರ್ವಾಂಗೀಣ ಅಭಿವೃದ್ದಿಯ ಕುರಿತು ಬೆಂಗಳೂರಿನಲ್ಲಿ ಮಾಜಿ ಶಾಸಕ ಅನಿಲ್ ಬೆನೆಕೆ ನೇತೃತ್ವದಲ್ಲಿ ಸಭೆ

ಕ್ಷತ್ರಿಯ ಮರಾಠಾ ಸಮಾಜದ ಸರ್ವಾಂಗೀಣ ಅಭಿವೃದ್ದಿಯ ಕುರಿತು ಬೆಂಗಳೂರಿನಲ್ಲಿ ಮಾಜಿ ಶಾಸಕ ಅನಿಲ್ ಬೆನೆಕೆ ನೇತೃತ್ವದಲ್ಲಿ ಸಭೆ ನಡೆಯಿತು , ಬೆಳಗಾವಿಯ ಸದಾಶಿವ ನಗದರಲ್ಲಿನ ಆಸ್ತಿಯ ೨೦ ವರ್ಷಗಳ ಸಂಪೂರ್ಣ ಆರ್ಥಿಕ ನಿರ್ವಹಣಾ ಹಣವನ್ನು ನನ್ನ ಸ್ವಂತ ಖರ್ಚಿನಲ್ಲಿ ತುಂಬುವುದಾಗಿ ರಾಜ್ಯ ಅಧ್ಯಕ್ಷರಾದ ಶ್ರೀ ಸುರೇಶರಾವ ಸಾಠೆ ಹಾಗೂ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ತೀರ್ಮಾನಿಸಿದ್ದರು, ಮುಂದಿನ ದಿನಗಳಲ್ಲಿ ಭವ್ಯ ಹಾಸ್ಟೆಲ್ ನಿರ್ಮಾಣ ಗೊಳಿಸಿ ಕರ್ನಾಟಕ, ಮಹಾರಾಷ್ಟ, ಗೋವಾ ರಾಜ್ಯಗಳ ಗಡಿ …

Read More »

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಜನರ ಹಿತ ಕಾಯಲಿ,: ಬೊಮ್ಮಾಯಿ

ಬೆಂಗಳೂರು: “ಕಾವೇರಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊಸ ಪೀಠ ರಚನೆ ಮಾಡಿದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದರು. “ಈಗಾಗಲೇ ಟ್ರಿಬ್ಯುನಲ್ …

Read More »

ಕೃಷಿ ಸಚಿವರ ವಿರುದ್ದ ರಾಜ್ಯಪಾಲರಿಗೆ ‘ಲಂಚ ಪತ್ರ’: ಇಬ್ಬರು ಕೃಷಿ ಅಧಿಕಾರಿಗಳು 3 ದಿನ ಪೊಲೀಸ್ ಕಸ್ಟಡಿಗೆ

ಮಂಡ್ಯ : ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಇಬ್ಬರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಿಐಡಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದರು. ಇದೀಗ ಕೋರ್ಟ್ ಇಬ್ಬರು ಅಧಿಕಾರಿಗಳನ್ನು​ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಕೃಷಿ ಸಚಿವರ ವಿರುದ್ಧ ನಕಲಿ ಪತ್ರ ಸೃಷ್ಟಿಸಿದ ಆರೋಪದ ಮೇರೆಗೆ ಕೆ.ಆರ್.ನಗರ ತಾಲೂಕಿನ …

Read More »

ಮಧುಮೇಹದ ಕಾರಣ ನೀಡಿ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್

ಬೆಂಗಳೂರು: ಮಧುಮೇಹದಂತಹ ಕಾಯಿಲೆಯನ್ನು ಪ್ರಪಂಚದ ಹಲವಾರು ಮಂದಿ ಎದುರಿಸುತ್ತಿದ್ದಾರೆ. ಇದೊಂದು ನಿರ್ವಹಣೆ ಮಾಡುವಂತಹ ಕಾಯಿಲೆಯಾಗಿದ್ದು, ಇದೇ ಕಾರಣ ನೀಡಿ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡುವುದನ್ನು ನಿರಾಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತ್ನಿ ಮತ್ತು ಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳ ಜೀವನಾಂಶ ನೀಡುವಂತೆ ಸೂಚನೆ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ಕೆ.ಜಿ. ಅನಂತಕುಮಾರ್​ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ …

Read More »

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗದು ಎಂದು ಹೈಕೋರ್ಟ್

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಇಂದು ತಿಳಿಸಿದೆ. ಇದರಿಂದ ಬಂಡೀಪುರದ ಬಳಿಯ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ಬೃಹತ್ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಚಿತ್ರನಟ ಗಣೇಶ್ ಕಿಶನ್ ಅಲಿಯಾಸ್ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹಿನ್ನಡೆಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರಣ್ಯ ಇಲಾಖೆ …

Read More »

ಕೋಲಾರದಲ್ಲಿ ಮಾರ್ಗದರ್ಶಿ ಚಿಟ್ಸ್​​​ನ 109ನೇ ಶಾಖೆ ಉದ್ಘಾಟನೆ

ಕೋಲಾರ: ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್​​​​​ನ 22ನೇ ಶಾಖೆ ಉದ್ಘಾಟನೆಗೊಂಡಿದೆ. ಸಂಸ್ಥೆಯ ಒಟ್ಟಾರೆ 109 ನೇ ಶಾಖೆ ಇದಾಗಿದೆ. ಕಂಪನಿ ಎಂಡಿ ಶೈಲಜಾ ಕಿರಣ್ ಅವರು ಈ ಶಾಖೆಯನ್ನು ವರ್ಚುಯಲ್​ ಆಗಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು. ನೂತನ ಶಾಖೆ ಉದ್ಘಾಟನೆ ಬಳಿಕ ಮಾತನಾಡಿದ ಮಾರ್ಗದರ್ಶಿ ಚಿಟ್ಸ್​ ನಿರ್ದೇಶಕರಾದ ಪಿ ಲಕ್ಷ್ಮಣ್​ರಾವ್​, ಕೋಲಾರ ಜನತೆಯ ಸಹಕಾರ ಅಮೂಲ್ಯವಾದದ್ದು ಎಂದು ಹೇಳಿದರು. ಜನತೆ ಮಾರ್ಗದರ್ಶಿ ಚಿಟ್ಸ್​ ಕಂಪನಿಯಿಂದ ಸೌಲಭ್ಯಗಳನ್ನು …

Read More »

ಕೌಜಲಗಿ ಜಿಪಂ ವ್ಯಾಪ್ತಿಯ ನೂತನ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸತ್ಕಾರ ಸ್ವೀಕರಿಸಿದ ಬಾಲಚಂದ್ರ ಜಾರಕಿಹೊಳಿ

ಕೌಜಲಗಿ ಜಿಪಂ ವ್ಯಾಪ್ತಿಯ ನೂತನ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸತ್ಕಾರ ಸ್ವೀಕರಿಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಕೌಜಲಗಿಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಲಾಗುವುದು. ಈ ಮೂಲಕ ಕೌಜಲಗಿ ಗ್ರಾಮಸ್ಥರ ಅಹವಾಲುಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ರವಿವಾರದಂದು ಕೌಜಲಗಿಯ ವಿಠ್ಠಲ-ಬೀರದೇವರ ದೇವಸ್ಥಾನದ ಆವರಣದಲ್ಲಿ ಕೌಜಲಗಿ ಜಿಲ್ಲಾ ಪಂಚಾಯತ ಕ್ಷೇತ್ರದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, …

Read More »