ವಿಜಯಪುರ: ಜಿಲ್ಲೆಯ ಐತಿಹಾಸಿಕ ನಗರಿ ತಾಳಿಕೋಟೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಖಾಸ್ಗತೇಶ್ವರ ಅಜ್ಜನ ಜಾತ್ರೆ ವಿಜೃಂಭಣೆಯಿಂದ ಜರುಗಿತು. ರಾಜ್ಯ, ಹೊರರಾಜ್ಯ ಸೇರಿದಂತೆ ಲಕ್ಷಾಂತರ ಭಕ್ತರನ್ನ ಹೊಂದಿರುವ ಈ ಖಾಸ್ಗತೇಶ್ವರ ಮಠದ ಜಾತ್ರೆ ಇಲ್ಲಿನ ವಿರಕ್ತ ಮಹಾಸ್ವಾಮಿಗಳ ಆಶೀರ್ವಾದದಿಂದ ಶ್ರೀ ಸಿದ್ದಲಿಂಗ ದೇವರು ಇವರ ಅಧ್ಯಕ್ಷತೆಯಲ್ಲಿ ಜಾತ್ರೆಯನ್ನ ಮಠದ ಭಕ್ತರು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಜಾತ್ರೆಯ ಅಂಗವಾಗಿ ಕಳೆದೊಂದು ವಾರದಿಂದ ಮಠದ ಅಂಗಳದಲ್ಲಿ ಮತ್ತು ತಾಳಿಕೋಟೆಯಲ್ಲಿ ವಿವಿಧ ಧಾರ್ಮಿಕ ಹಾಗೂ …
Read More »Monthly Archives: ಜುಲೈ 2023
ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ, 30 ಮಂದಿ ಅಂದರ್
ಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬೋಗಾದಿ, ಬಸವೇಶ್ವರ ನಗರದ ಆಶ್ರಯ ಮನೆಯ ಮೇಲೆ ದಾಳಿ ಮಾಡಿದ ವೇಳೆ ಸಿಸಿಬಿ ಪೊಲೀಸರು ಬಂಧಿತರಿಂದ ನಾಲ್ಕು ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. ಇವರು ವೇಶ್ಯಾವಾಟಿಕೆ ನಡೆಸುವುದಲ್ಲದೇ, ಗಿರಾಕಿ ಮತ್ತು ಹುಡುಗಿಯರ ಫೋನ್ ಸಂಪರ್ಕವಿಟ್ಟುಕೊಂಡು, ಅವರುಗಳಿಗೆ ಬೇಕಾದ ಸ್ಥಳಗಳಿಗೆ ಹುಡುಗಿಯರನ್ನು ಫೋನ್ ಸಂಪರ್ಕಿಸುವ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ವಿಚಾರಣೆ …
Read More »ದಿವಂಗತ ನಟ ಪುನೀತ್ ರಾಜ್ಕುಮಾರ್ಗೆ ‘ಕಿಚ್ಚ 46’ ಟೀಸರ್ನಲ್ಲಿ ಗೌರವ ಸಲ್ಲಿಸದೇ ಇರುವುದು ನಿರ್ದೇಶಕ ದುನಿಯಾ ಸೂರಿ ಬೇಸರಕ್ಕೆ ಕಾರಣ
ದಿವಂಗತ ನಟ ಪುನೀತ್ ರಾಜ್ಕುಮಾರ್ಗೆ ‘ಕಿಚ್ಚ 46’ ಟೀಸರ್ನಲ್ಲಿ ಗೌರವ ಸಲ್ಲಿಸದೇ ಇರುವುದು ನಿರ್ದೇಶಕ ದುನಿಯಾ ಸೂರಿ ಬೇಸರಕ್ಕೆ ಕಾರಣವಾಗಿದೆ. ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಇಂದಿನವರೆಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ‘ಕಿಚ್ಚ 46’ ಅನ್ನೋದು ಸೋಷಿಯಲ್ ಮೀಡಿಯಾದಲ್ಲಿ ಕೆಲ ದಿನಗಳಿಂದ ಟ್ರೆಂಡಿಂಗ್ನಲ್ಲಿತ್ತು. ಸುದೀಪ್ ಮುಂದಿನ ಸಿನಿಮಾದ ಲುಕ್ ಹೇಗಿರಬಹುದು? ಅನ್ನೋ ಕ್ಯೂರಿಯಾಸಿಟಿ ಕನ್ನಡಿಗರಲ್ಲಿತ್ತು. ಇಂದು ನಟನ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಿಚ್ಚನ …
Read More »ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಸಂಚಲನ
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಸಂಚಲನ ಉಂಟಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಹಾಗೂ ಇತರ ಒಂಬತ್ತು ಎನ್ಸಿಪಿ ನಾಯಕರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಸಿಗದಿರುವುದಕ್ಕೆ ಅಜಿತ್ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ. ಅಜಿತ್ ಪವಾರ್ ರಾಜ್ಯಪಾಲರನ್ನು ಭೇಟಿಯಾಗಿ ಡಿಸಿಎಂ ಆಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ …
Read More »ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಸಬೇಕೇ?: ಬಿಜೆಪಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಒಂದೂವರೆ ತಿಂಗಳು ಕಳೆದಿದ್ದರೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡದ ಬಿಜೆಪಿ ಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರವಾಗಿ ಟೀಕಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರದ ಪ್ರಥಮ ಬಜೆಟ್ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ. ಅಧಿವೇಶನ ಶುರುವಾಗುತ್ತಿದ್ದರೂ ರಾಜ್ಯದ ಅಧಿಕೃತ ಪ್ರತಿ ಪಕ್ಷವಾದ ಬಿಜೆಪಿ ಪ್ರತಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಒಂದು ಸೋಲು ಪ್ರತಿಪಕ್ಷ ನಾಯಕನನ್ನೂ ಆಯ್ಕೆ ಮಾಡದಷ್ಟು ಬಿಜೆಪಿ ನಾಯಕರಿಗೆ ರೇಜಿಗೆ …
Read More »ಜುಲೈ 14ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಶುರು: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಜುಲೈ 14ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಶುರು ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೇವೆ. ಜು.3 ಅಥವಾ 4ನೇ ತಾರೀಖು ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವೈಎಸ್‌ಟಿ ಸಂಗ್ರಹ ಎಂಬ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿ, ಕುಮಾರಸ್ವಾಮಿ ಅವರು ಕೂಡ ಸರ್ಕಾರ ನಡೆಸಿದಂತ …
Read More »ಅಕ್ರಮವಾಗಿ ರಾತ್ರೋರಾತ್ರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಳ ಮೇಲೆ ಅಥಣಿ ಪೊಲೀಸರ ದಾಳಿ
ಚಿಕ್ಕೋಡಿ (ಬೆಳಗಾವಿ): ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಳ ಮೇಲೆ ಅಥಣಿ ಪೊಲೀಸರು ದಾಳಿ ನಡೆಸಿ 30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಳೆಯಿಲ್ಲದೇ ಬತ್ತಿ ಹೋಗಿರುವ ನದಿಯೊಡಲಿನ ಅಲ್ಲಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರ ಇದಕ್ಕಾಗಿ ನಿಯಮಗಳನ್ನು ಮಾಡಿದ್ದರೂ ಗುತ್ತಿಗೆ ಪಡೆಯದೇ ಅಧಿಕಾರಿಗಳಿಗೆ ತಿಳಿಯದಂತೆ ದಂದೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಸಮೀಪದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ರಾತ್ರಿ ಅಕ್ರಮವಾಗಿ ಮರಳು …
Read More »ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹರಿಯುವ ದೂಧಗಂಗಾ ನದಿಯ ಪಕ್ಕದಲ್ಲಿ ನಾಲ್ಕು ಮಾನವ ತಲೆಬುರುಡೆಗಳು ದೊರೆತಿವೆ.
ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹರಿಯುವ ದೂಧಗಂಗಾ ನದಿಯ ಪಕ್ಕದಲ್ಲಿ ನಾಲ್ಕು ಮಾನವ ತಲೆಬುರುಡೆಗಳು ದೊರೆತಿವೆ. ಜಾನುವಾರುಗಳ ಮೈ ತೊಳೆಯಲು ಹೋದಾಗ ರೈತರ ಕಣ್ಣಿಗೆ ಈ ತಲೆ ಬುರುಡೆಗಳು ಕಾಣಿಸಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನಲ್ಲಿರುವ ಹಾಗೂ ಗಡಿ ಜಿಲ್ಲೆ ಬೆಳಗಾವಿಗೆ ಹೊಂದಿಕೊಂಡಿರುವ ಶಿದ್ನಳ್ಳಿ ಗ್ರಾಮದಲ್ಲಿ ತಲೆಬುರುಡೆಗಳು ಸಿಕ್ಕಿದ್ದು, ಕೂಡಲೇ ಸ್ಥಳೀಯರು ಕಾಗಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು …
Read More »ಕಳ್ಳತನ,ಕಳ್ಳತನ,ಕಳ್ಳತನ ಘಟಪ್ರಭಾದಲ್ಲಿ ಮತ್ತೆ ಕಳ್ಳರ ಕೈಚಳಕ..!
ಘಟಪ್ರಭಾ : ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬಂಗಾರದ ಆಭರಣ ಸೇರಿದಂತೆ ನಗದು ಕಳ್ಳತನ ಮಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ಕಳ್ಳತನಗಳು ಕೆಲವು ತಿಂಗಳ ಹಿಂದೆ ಸಾಕಷ್ಟು ಕಳ್ಳತನ ಪ್ರಕರಣಗಳು ಕೇಳಿಬರುತ್ತಿದ್ದವು, ಈಗ ಮತ್ತೆ ಖದೀಮರು ತಮ್ಮ ಕೈಚಳಕ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ಘಟಪ್ರಭಾ ಸೇರಿದಂತೆ ಶಿಂಧಿಕುರಭೇಟ, ಅರಭಾವಿ, ಸಂಗನಕೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಕಳ್ಳತನವಾಗಿವೆ. ಘಟಪ್ರಭಾ ಪಟ್ಟಣದ ಮಲ್ಲಿಕಾರ್ಜುನ ನಗರದ ಬಾರಾ ಕೂಟ್ …
Read More »ಏಕದಿನ ವಿಶ್ವಕಪ್‌ನಿಂದ ಹೊರ ಬಿದ್ದ ವೆಸ್ಟ್ ಇಂಡೀಸ್
ಜಿಂಬಾಬ್ವೆ: ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಈ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಸುತ್ತಿನ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಡ್ ಏಳು ವಿಕೆಟ್ ಗಳಿಂದ ಸೋಲಿಸಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸ್ಕಾಟ್‌ಲೆಂಡ್‌ಗೆ ನೀಡಿದ್ದ 182 ರನ್‌ಗಳ ಗುರಿಯನ್ನು ಇನ್ನೂ 39 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು. ವಿಶ್ವಕಪ್‌ಗೆ ಅರ್ಹತೆ ಪಡೆಯಲು …
Read More »