Breaking News

Monthly Archives: ಜುಲೈ 2023

ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕೃತ ಪ್ರತಿಪಕ್ಷದ ನಾಯಕನ ಆಯ್ಕೆಯಾಗದೇ ಅಧಿವೇಶನ

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಾಳೆಗೆ ಮುಂದೂಡಿಕೆಯಾಗಿದೆ. ಹೈಕಮಾಂಡ್ ವೀಕ್ಷಕರು ಇನ್ನು ಆಗಮಿಸದೇ ಇರುವ ಕಾರಣದಿಂದಾಗಿ ನಾಳೆಗೆ ಶಾಸಕಾಂಗ ಸಭೆ ಮುಂದೂಡಿಕೆಯಾಗಿದ್ದು, ನಾಳೆಯ ಕಲಾಪ ಅಧಿಕೃತ ಪ್ರತಿಪಕ್ಷದ ನಾಯಕನಿಲ್ಲದೇ ನಡೆಯಲಿದೆ. ಆದರೆ ಗ್ಯಾರಂಟಿ ವಿಚಾರದಲ್ಲಿನ ಬಿಜೆಪಿ ಹೋರಾಟ ಮಾತ್ರ ಮುಂದುವರೆಯಲಿದೆ. ಉಭಯ ಸದನದಲ್ಲಿ ಬಿಜೆಪಿ ಸದಸ್ಯರು ಹೋರಾಟ ನಡೆಸಿದರೆ ಫ್ರೀಡಂ ಪಾರ್ಕ್ ನಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಇಂದು ಸಂಜೆ 6 ಗಂಟೆಗೆ …

Read More »

ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ ಪರಾರಿ

ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ ಪರಾರಿಯಾದ ಘಟನೆ ನಗರದ ನೇಕಾರನಗರದ ಬಸವೇಶ್ವರ ಸರ್ಕಲ್ ಬಳಿ‌ ಇಂದು‌ ಮುಂಜಾನೆ ನಡೆದಿದೆ‌. ಕೊಲೆಯಾದ ಮಹಿಳೆ ಸುಧಾ (೨೪) ಎಂದು ತಿಳಿದು ಬಂದಿದ್ದು, ಪತಿ ಶಿವಯ್ಯಾ ಹಿರೇಮಠ (೨೮) ಎಂಬಾತನೇ ಕುಡಿದ ಮತ್ತಿನಲ್ಲಿಯೇ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬೆಳಗಿನ ಜಾವ ೧೨.೩೦ ರಿಂದ ಬೆಳಿಗ್ಗೆ ೯.೩೦ ರ ಮಧ್ಯದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಪತಿ ಶಿವಯ್ಯಾ …

Read More »

ಗಜಪತಿ ಗ್ರಾಮದಲ್ಲಿ ಬೆಳಗ್ಗೆ ಬಸ್ ನಿಲ್ಲಿಸದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು

ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದಲ್ಲಿ ಬೆಳಗ್ಗೆ ಬಸ್ ನಿಲ್ಲಿಸದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಹಾಗೂ ಗಜಪತಿ ಗ್ರಾಮಕ್ಕೆ ಪ್ರತ್ಯೇಕ ಬಸ್ ಬಿಡುವಂತೆ ಒತ್ತಾಯಿಸಿದರು. ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದಲ್ಲಿ ಬೆಳಗ್ಗೆ ಬಸ್ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮುಂಜಾನೆಯೇ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ ನಿಲ್ಲುತ್ತಾರೆ. ಆದರೆ ಹಿಂದಿನ ಗ್ರಾಮದಿಂದ ಮುಗುಳಿಗಲ್ ,ಬಿಡಿ ಗ್ರಾಮದಿಂದ ಬೆಳಗಾವಿಗೆ ಹೋಗುವ …

Read More »

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಆದೇಶ ಪ್ರತಿ ನೀಡದ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಳ ಕಾವು

ಬೆಂಗಳೂರು: ಹೊಸ ಸರ್ಕಾರದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ, ಮತ್ತೊಂದೆಡೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಳ ಕಾವು ಜೋರಾಗಿದೆ‌. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಆದೇಶ ಪ್ರತಿ ನೀಡದ ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಮಳೆಯ ಅಭಾವವಾಗಿರುವುದರಿಂದ ರಾಜ್ಯದಲ್ಲಿ ಬರಗಾಲ ಎಂದು ಘೋಷಿಸುವ ಮೂಲಕ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ …

Read More »

ಸರ್ಕಾರ ಬದಲಾದರೂ ಬದಲಾಗದ ಹೆಚ್​ ವಿಶ್ವನಾಥ ಸ್ಥಾನ

ಬೆಂಗಳೂರು: ಸರ್ಕಾರ ಬದಲಾಗಿ ಮೊದಲ ಅಧಿವೇಶನ ಆರಂಭಗೊಂಡಿದ್ದು, ಆಡಳಿತ ಪಕ್ಷ ಪ್ರತಿಪಕ್ಷದ ಸಾಲಿನಲ್ಲಿ ಪ್ರತಿಪಕ್ಷ ಆಡಳಿತ ಪಕ್ಷದ ಸಾಲಿಗೆ ಬಂದರೆ ಹಿರಿಯ ಸದಸ್ಯ ಹೆಚ್ ವಿಶ್ವನಾಥ್ ಸ್ಥಾನ ಮಾತ್ರ ಬದಲಾಗಿಲ್ಲ. ಬಿಜೆಪಿ ಸರ್ಕಾರ ಇದ್ದಾಗಲೂ ಆಡಳಿತ ಪಕ್ಷದ ಸಾಲಿನಲ್ಲಿ ಇದ್ದ ಅವರು ಇದೀಗ ಕಾಂಗ್ರೆಸ್ ಸರ್ಕಾರ ಬಂದಿದ್ದರೂ ಆಡಳಿತ ಪಕ್ಷದ ಸಾಲಿನಲ್ಲೇ ಆಸೀನರಾಗಿದ್ದಾರೆ. ಬಿಜೆಪಿ ಸರ್ಕಾರದ ವೇಳೆ ನಾಮ ನಿರ್ದೇಶನಗೊಂಡಿದ್ದ ಹೆಚ್ ವಿಶ್ವನಾಥ್ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪಕ್ಷದ ಜೊತೆ …

Read More »

ವಿಧಾನಪರಿಷತ್​ಗೆ ನೂತನವಾಗಿ ಆಯ್ಕೆಯಾದ ಎಮ್​ಎಲ್​ಸಿಗಳ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಜಗದೀಶ್ ಶೆಟ್ಟರ್, ಎನ್.ಎಸ್. ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜಗದೀಶ್​ ಶೆಟ್ಟರ್ ಮತ್ತು ಎನ್.ಎಸ್. ಭೋಸರಾಜು ಅವರು ಭಗವಂತನ ಹೆಸರಿನ ಮೇಲೆ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ನೂತನ ಸದಸ್ಯರುಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು …

Read More »

ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರನ ಆತ್ಮಹತ್ಯೆ

ಹಾವೇರಿ: ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಸ್ ಡಿಪೋದಲ್ಲಿ ನಡೆದಿದೆ. ರಾಣೆಬೆನ್ನೂರು ನಗರದ ಹೊರ ವಲಯದ ಮಾಗಡಿ ರಸ್ತೆಯಲ್ಲಿರುವ NWKRTC ಬಸ್ ಡಿಪೋದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ನೌಕರನನ್ನು ಡ್ರೈವರ್​ ಕಂ ಕಂಡಕ್ಟರ್​ 48 ವರ್ಷದ ಮಲ್ಲನಗೌಡ ಬಡಿಗೇರ ಎಂದು ಗುರುತಿಸಲಾಗಿದೆ. ಹಲಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲ್ಲನಗೌಡ ಒಂದು ವಾರದಿಂದ ರಜೆಯಲ್ಲಿದ್ದು, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ …

Read More »

1000 ಎಕರೆ ಜಮೀನಿನ ಮೇಲ್ವಿಚಾರಣೆಗೆ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಗೆ ಮುಂದಾದ ರೈತ

(ಛತ್ತೀಸ್​ಗಢ): ಇತ್ತೀಚೆಗೆ ಹೊಲಗಳಿಗೆ ಕ್ರಿಮಿನಾಶಕ ಸಿಂಪಡಿಸಲು ಡ್ರೋನ್​ಗಳನ್ನು ಬಳಸುವುದು ಹೆಚ್ಚಿದೆ. ಅಲ್ಲದೇ ಇದರ ಉಪಯೋಗವನ್ನು ಮನಗಂಡಿರುವ ಕೆಲವು ರೈತರು ಇವುಗಳನ್ನು ಸ್ವಂತಕ್ಕೆ ಖರೀದಿಸುತ್ತಿದ್ದಾರೆ. ಆದರೆ ಛತ್ತೀಸ್‌ಗಢದ ರೈತರೊಬ್ಬರು ತಮ್ಮ ಜಮೀನಿನ ಮೇಲ್ವಿಚಾರಣೆಗೆ ಹೆಲಿಕಾಪ್ಟರ್ ಖರೀದಿಸಲು ಮುಂದಾಗಿದ್ದಾರೆ. ತೆಲಂಗಾಣದಿಂದ ಸುಮಾರು 300 ಕಿ. ಮೀ ದೂರದಲ್ಲಿರುವ ಕೊಂಡಗಾಂವ್ ಜಿಲ್ಲೆಯ ರಾಜಾರಾಂ ತ್ರಿಪಾಠಿ ತಮ್ಮ 1000 ಎಕರೆ ಜಮೀನಿನ ಮೇಲ್ವಿಚಾರಣೆಗಾಗಿ 7 ಕೋಟಿ ರೂ. ಮೌಲ್ಯದ ಹೆಲಿಕಾಪ್ಟರ್ ಖರೀದಿಸಲು ಹೊರಟಿದ್ದಾರೆ. ಈಗಾಗಲೇ ಹಾಲೆಂಡ್ ನ …

Read More »

 ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ 30 ಲಕ್ಷ ರೂ., ದೊಡ್ಡ ಹುದ್ದೆಗೆ ಕೋಟಿ ಕೋಟಿ ಹಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ 30 ಲಕ್ಷ ರೂ., ದೊಡ್ಡ ಹುದ್ದೆಗೆ ಕೋಟಿ ಕೋಟಿ ಹಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು. ಬೆಂಗಳೂರು: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ 30 ಲಕ್ಷ ರೂ., ದೊಡ್ಡ ಹುದ್ದೆಗೆ ಕೋಟಿ ಕೋಟಿ ಹಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು. ಭ್ರಷ್ಟಾಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ಅವರ …

Read More »

ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆದರೆ ಸಾಲದು ನಮ್ಮ ಕೃಷಿ ಮಾರಾಟ ವ್ಯವಸ್ಥೆ ಸದೃಢಗೊಳಿಸಿ ರೈತ ಸ್ನೇಹಿ ಮಾಡುವಂತೆ ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ ಒತ್ತಾಯಿ

ಬೆಳಗಾವಿ : ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆದರೆ ಸಾಲದು ನಮ್ಮ ಕೃಷಿ ಮಾರಾಟ ವ್ಯವಸ್ಥೆ ಸದೃಢಗೊಳಿಸಿ ರೈತ ಸ್ನೇಹಿ ಮಾಡುವಂತೆ ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ ಒತ್ತಾಯಿಸಿದ್ದಾರೆ. ಬೆಳಗಾವಿಯ ಎಪಿಎಂಸಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ‌ ಹಿಂದಿನ ಕೊರೊನಾ ವೇಳೆ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇರಲಿಲ್ಲ. ಎಪಿಎಂಸಿ ಕಾಯ್ದೆ ವ್ಯಾಪ್ತಿಗೆ ಬರುವ ಉತ್ಪನ್ನಗಳ ಮಾರಾಟ ಈ ಪ್ರಾಂಗಣದಲ್ಲಿ ನಡೆಯಬೇಕು. …

Read More »