Breaking News

Monthly Archives: ಜುಲೈ 2023

ಹಾವೇರಿ: ಶಿಲ್ಪಕಲೆಗಳಿಂದ ಕಂಗೊಳಿಸುತ್ತಿರುವ ಪುರಸಿದ್ದೇಶ್ವರ ದೇವಸ್ಥಾನಕ್ಕೆ ಹಸಿರಿನ ಮೆರುಗು

ಹಾವೇರಿ: ಏಲಕ್ಕಿನಗರಿ ಹಾವೇರಿಗೆ ಕಳಸಪ್ರಾಯವಾಗಿರುವದು ಪುರಸಿದ್ದೇಶ್ವರ ದೇವಸ್ಥಾನ. ಈ ದೇವಸ್ಥಾನ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದ ಮೇಲೆ ದೇವಸ್ಥಾನದ ಚಿತ್ರಣವೇ ಬದಲಾಗಿದೆ. 25 ವರ್ಷದ ಹಿಂದೆ ಜೀರ್ಣೋದ್ದಾರಗೊಂಡ ದೇವಸ್ಥಾನದ ಆವರಣದಲ್ಲಿ ಇದೀಗ ಹಸಿರು ಕಂಗೊಳಿಸುತ್ತಿದೆ. ಬಣ್ಣ ಬಣ್ಣದ ಪುಷ್ಪಗಳು ಉದ್ಯಾನದ ಸೌಂದರ್ಯವನ್ನ ಇಮ್ಮಡಿಗೊಳಿಸಿವೆ. ರಾಜ್ಯದ ವಿವಿಧ ರಾಜಮನೆತನಗಳ ಆಡಳಿತ ಕಂಡ ಪ್ರಾಂತ್ಯ ಹಾವೇರಿ. ರಾಜ್ಯದ ಪ್ರಥಮ ರಾಜಮನೆತನ ಕದಂಬರಿಂದ ಹಿಡಿದು ಇತ್ತೀಚಿನ ಮೈಸೂರು ಒಡೆಯರ ಕಾಲದವರೆಗೆ ವಿವಿಧ ರಾಜಮನೆತನಗಳು ಇಲ್ಲಿ ಆಳ್ವಿಕೆ …

Read More »

ಬೆಳಗಾವಿಯಲ್ಲಿ ಶತಕ ಬಾರಿಸಿದ ಟೊಮೆಟೋ, ಮೆಣಸಿನಕಾಯಿ ದರ

ಬೆಳಗಾವಿ: ರಾಜ್ಯದೆಲ್ಲೆಡೆ ಟೊಮೆಟೊ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಬೆಳಗಾವಿ ಜಿಲ್ಲೆಯಲ್ಲೂ ಟೊಮೆಟೊ ಮತ್ತು ಮೆಣಸಿನಕಾಯಿ ಬೆಲೆ ನೂರರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ. ಒಂದೆಡೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಮಳೆರಾಯನ ಆಗಮನಕ್ಕಾಗಿ ರೈತರು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ‌. ಮತ್ತೊಂದೆಡೆ ಟೊಮೆಟೋ, ಮೆಣಸಿನಕಾಯಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಜುಲೈ ತಿಂಗಳ ಮೊದಲ ವಾರ ಮುಗಿಯುತ್ತ ಬಂದರೂ ಜಿಲ್ಲೆಯಲ್ಲಿ …

Read More »

ಗೋಹತ್ಯೆ, ಮತಾಂತರ ಕಾಯ್ದೆ ರದ್ದು ಮಾಡದಂತೆಮಠಾಧೀಶರ ಆಗ್ರಹ

ಕಲಬುರಗಿ : ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ಆಡಳಿತದ ಸರ್ಕಾರ ಆ ಕಾನೂನು ತೆಗೆದುಹಾಕುತ್ತಿದೆ. ಹೀಗಾಗಿ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಡಗಂಚಿಯ ಶಾಂತಲಿಂಗೇಶ್ವರ ಸಂಸ್ಥಾನ ಮಠದ ವೀರಭದ್ರ ಶಿವಾಚಾರ್ಯರು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಮಾತೆ ದೇವರು. ದೇವರ ಹತ್ಯೆ ಮಾಡಿದವರು ಏನು ಆಗುತ್ತಾರೆ ಎಂದು …

Read More »

ಶೂಟಿಂಗ್​ ವೇಳೆ ಗಾಯಗೊಂಡ ಶಾರುಖ್​ ಖಾನ್​

ನಟ ಶಾರುಖ್​ ಖಾನ್​ ಅಮೆರಿಕದಲ್ಲಿ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಬಹಿರಂಗಪಡಿಸದ ಪ್ರಾಜೆಕ್ಟ್‌ನ ಚಿತ್ರೀಕರಣದಲ್ಲಿದ್ದಾಗ ಘಟನೆ ಸಂಭವಿಸಿದೆ. ಬಾಲಿವುಡ್​ ನಟ​ ಶಾರುಖ್​ ಖಾನ್ ಅಮೆರಿಕದಲ್ಲಿ​ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಲಾಸ್​ ಏಂಜಲೀಸ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಲಾಸ್​ ಏಂಜಲೀಸ್​​ನಲ್ಲಿ ನಡೆದ ಸಣ್ಣ ಅವಘಡದಲ್ಲಿ ಶಾರುಖ್​ ಮೂಗಿಗೆ ಗಾಯವಾಗಿದೆ. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಎಸ್​​ಆರ್​ಕೆ …

Read More »

ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ ರಾಮೋಜಿ ಫಿಲ್ಮ್ ಸಿಟಿಗೆ ಎಫ್​ಟಿಸಿಸಿಐ ಪ್ರಶಸ್ತಿ ಗರಿ

ಹೈದರಾಬಾದ್: ತೆಲಂಗಾಣದ ಅಪೆಕ್ಸ್ ಟ್ರೇಡ್ ಮತ್ತು ಇಂಡಸ್ಟ್ರಿ ಮಂಡಳಿ, ತೆಲಂಗಾಣ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಶನ್ (ಎಫ್‌ಟಿಸಿಸಿಐ) ವತಿಯಿಂದ ನೀಡಲಾಗುವ ಎಕ್ಸಲೆನ್ಸ್ ಪ್ರಶಸ್ತಿ ಗರಿ ರಾಮೋಜಿ ಫಿಲ್ಮ್ ಸಿಟಿಗೆ ದೊರೆತಿದೆ.   ರಾಮೋಜಿ ಫಿಲ್ಮ್ ಸಿಟಿಗೆ ತೆಲಂಗಾಣ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಶನ್​ನಿಂದ (ಎಫ್​ಟಿಸಿಸಿಐ) ಪ್ರಶಸ್ತಿ ಗರಿ ಲಭಿಸಿದೆಹೈದರಾಬಾದ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಕೈಗಾರಿಕೆಗಳು ಮತ್ತು ಐಟಿ ಸಚಿವರಾದ ಶ್ರೀ ಕೆ.ಟಿ. ರಾಮರಾವ್ …

Read More »

ಜುಲೈ 7ರವರೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ; ದ.ಕ ಜಿಲ್ಲೆಯ 5 ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಜುಲೈ 7ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಶುಕ್ರವಾರದವರೆಗೆ ಸಾಧಾರಣ ಮಳೆ ಬೀಳಲಿದೆ ಎಂದು ತಿಳಿಸಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಬಾಗಲಕೋಟೆ, ಯಾದಗಿರಿ, ಹಾವೇರಿ, ರಾಯಚೂರು ಸೇರಿದಂತೆ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಸಾಧಾರಣ ಮಳೆಯಾಗುವ …

Read More »

ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ನೂತನ ಕಸದ ವಾಹನಕ್ಕೆ ಚಾಲನೆ

ಬೆಳಗಾವಿಯ ವಾರ್ಡ್ ನಂ.29ರಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ನೂತನ ಕಸದ ವಾಹನಕ್ಕೆ ಚಾಲನೆ ನೀಡಲಾಯಿತು.   ವಾರ್ಡ್ ನಂ.29ರಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಕಸದ ಗಾಡಿಗಳು ಕಡಿಮೆ ಇದ್ದವು. ಮನೆಯ ತ್ಯಾಜ್ಯವನ್ನು ವಾರಕ್ಕೆ 3 ಬಾರಿ ಮಾತ್ರ ಸಂಗ್ರಹಿಸಲಾಗುತ್ತದೆ. ಇದನ್ನು ಗಮನಿಸಿದ ಕಾರ್ಪೊರೇಟರ್ ನಿತಿನ್ ಜಾಧವ್ ಅವರು ಅಭಯ ಪಾಟೀಲ ಅವರೊಂದಿಗೆ ಚರ್ಚಿಸಿ ನೂತನ ಕಸದ ವಾಹನಕ್ಕೆ ಅನುಮೋದನೆ ಪಡೆದು. ಸೋಮವಾರ ಕಸದ ವಾಹನ …

Read More »

ವಂದೇ ಭಾರತ್ ರೈಲಿನ ಸಮಯಕ್ಕೆ ತಕ್ಕಂತೆ ಹುಬ್ಬಳ್ಳಿ – ಬೆಳಗಾವಿ ನಡುವೆ ವೋಲ್ವೊ ಬಸ್ ಸೌಲಭ್ಯ

ಹುಬ್ಬಳ್ಳಿ: ಬೆಂಗಳೂರು – ಧಾರವಾಡ ನಡುವೆ ಹೊಸದಾಗಿ ಆರಂಭವಾಗಿರುವ “ವಂದೇ ಭಾರತ್” ರೈಲಿನ ಸಮಯಕ್ಕೆ ಹೊಂದಾಣಿಕೆ ಆಗುವಂತೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ವೋಲ್ವೊ ಬಸ್ ಹಾಗೂ ಧಾರವಾಡ ರೈಲು ನಿಲ್ದಾಣ – ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.   ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಗೆ ಬೆಂಗಳೂರು ಧಾರವಾಡ ನಡುವೆ ಆರಂಭಿಸಲಾಗಿರುವ “ವಂದೇ ಭಾರತ್” …

Read More »

ವಿರೋಧ ಪಕ್ಷದ ನಾಯಕನ ಆಯ್ಕೆಯಾದ ಮೇಲೆ ಬಿಜೆಪಿ ಎರಡು ಪಾರ್ಟಿ ಆಗುತ್ತೆ: ಕಿಮ್ಮನೆ ರತ್ನಾಕರ್

ಶಿವಮೊಗ್ಗ: ”ವಿರೋಧ ಪಕ್ಷದ ನಾಯಕ ಹಾಗೂ ರಾಜಾಧ್ಯಕ್ಷರ ಆಯ್ಕೆಯಾದ ಬಳಿಕ ಬಿಜೆಪಿಯಲ್ಲಿ ಎರಡು ಪಾರ್ಟಿ ಆಗುತ್ತದೆ” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ದೇಶದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದೆ ಪಕ್ಷ ಎನ್ನುವ ಬಿಜೆಪಿ ಪಕ್ಷದ ಕಥೆ ಹೀಗಾಗಿದೆ. ಕರ್ನಾಟಕದಲ್ಲಿ ಎಷ್ಟು ಜಿಲ್ಲೆಯಿದೆ ಅಂತ ಗೊತ್ತಿರದವರನ್ನು ರಾಜ್ಯಾಧ್ಯಕ್ಷನಾಗಿ ಮಾಡಿದ್ದಾರೆ. ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಕೊಡಲ್ಲ ಎನ್ನುತ್ತಿದ್ದಾರೆ. …

Read More »

ನನ್ನದು ಆಡಿಯೋಗಳು ಮಾತ್ರ, ಆದ್ರೆ ಅವರ ವಿಡಿಯೋಗಳಿವೆ, ರಿಲೀಸ್ ಮಾಡಿದ್ರೆ ನೇಣು ಹಾಕಿಕೊಳ್ತಾರೆ: ವೀರಣ್ಣ ಚರಂತಿಮಠ

ಬಾಗಲಕೋಟೆ: ನನ್ನ ಆಡಿಯೋ ಬಂದಿವೆಯೇ ಹೊರತು ವಿಡಿಯೋ ಏನ್ ಬಂದಿಲ್ಲ ಅಲ್ವಾ?. ಆದ್ರೆ ನನ್ನ ಹತ್ತಿರ ಅವರ ವಿಡಿಯೋಗಳಿವೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೊಸ ಬಾಂಬ್ ಹಾಕಿದ್ದಾರೆ. ಇಲ್ಲಿನ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬಳಿ ಇರುವ ವಿಡಿಯೋ ರಿಲೀಸ್ ಮಾಡಿದ್ರೆ, ಅವರು ನೇಣು ಹಾಕಿಕೊಳ್ಳಬೇಕಾಗುತ್ತದೆ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು. ತಮ್ಮ ಆಡಿಯೋ ಸಂಭಾಷಣೆ ವೈರಲ್ ಬಗ್ಗೆ …

Read More »