ಹುಬ್ಬಳ್ಳಿ : ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವರು, ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜೋಶಿ …
Read More »Daily Archives: ಜುಲೈ 4, 2023
ಅಂಬೇಡ್ಕರ್ ಸಂವಿಧಾನ ನೀಡದಿದ್ದರೆ, ನಾನು ಸಿಎಂ ಅಲ್ಲ ಕುರಿ, ಎಮ್ಮೆ ಕಾಯುತ್ತಾ ಇರಬೇಕಿತ್ತು: ಸಿದ್ದರಾಮಯ್ಯ
ಬೆಂಗಳೂರು: ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಕುರಿ, ಎಮ್ಮೆ ಕಾಯುತ್ತಾ ಇರಬೇಕಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿ, ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಚಲನೆ ಇಲ್ಲದೇ ಹಿಂದುಳಿದ ಶೋಷಿತ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ ಚಲನೆ ಸಿಗುವುದಿಲ್ಲ. ಹೀಗಾಗಿ ಬುದ್ದ, ಬಸವಾದಿ ಶರಣರು, …
Read More »ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಒಬ್ಬ ಅಜಿತ್ ಪವಾರ್ ಹುಟ್ಟಿಕೊಳ್ಳಬಹುದು : ಕುಮಾರಸ್ವಾಮಿ ಭವಿಷ್ಯ
ಬೆಂಗಳೂರು: ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಂತಹ ವ್ಯವಸ್ಥೆ ಹುಟ್ಟುಹಾಕುವ ಸಾಮರ್ಥ್ಯ ಇರುವಾಗ, ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಒಬ್ಬ ಅಜಿತ್ ಪವಾರ್ ಹುಟ್ಟಿಕೊಳ್ಳಲೂಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ಡಿಕೆ, ಮಹಾರಾಷ್ಟ್ರ ರಾಜಕಾರಣದ ಬಗ್ಗೆ ನಾವು ಯಾರೂ ಕೂಡ ಊಹೆಯೂ ಮಾಡಿರಲಿಲ್ಲ. ಅಜಿತ್ ಪವಾರ್ …
Read More »ಕಲಬುರಗಿಯ ಮೂವರು ಬಾಲಕರಿಗೆ ‘ಗಾಂಧಾರಿ ವಿದ್ಯೆ’ ಕರಗತ!
ಕಲಬುರಗಿ: ಪ್ರಸಿದ್ಧ ಮಹಾಕಾವ್ಯಮಹಾಭಾರತದ ಧೃತರಾಷ್ಟ್ರ- ಗಾಂಧಾರಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?. ತನ್ನ ಗಂಡನಿಗಿಲ್ಲದ ದೃಷ್ಟಿ ನನಗೇಕೆ? ಎಂದು ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿ ಗಂಡನ ಜೊತೆಗಿದ್ದು ಸೇವೆ ಮಾಡುತ್ತಿದ್ದರು. ಇದು ಮುಂದೆ ಗಾಂಧಾರಿ ವಿದ್ಯೆಯಾಗಿ ಲೋಕ ಪ್ರಸಿದ್ಧಿ ಪಡೆಯಿತು. ಏನಿದು ಗಾಂಧಾರಿ ವಿದ್ಯೆ?: ಎರಡೂ ಕಣ್ಣುಗಳ ದೃಷ್ಟಿ ಸರಿಯಿದ್ದರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಲ್ಲವನ್ನೂ ನೋಡುವ, ತಿಳಿಯುವ, ಪಟಪಟನೆ ಓದುವ ವಿದ್ಯೆಯನ್ನು ಗಾಂಧಾರಿ ವಿದ್ಯೆ ಎಂದು ಕರೆಯುತ್ತಾರೆ. ಬಿಸಿಲೂರೆಂದು …
Read More »ಬೆಳಗಾವಿ: ಜಮೀನು ವಿವಾದ ಹಿನ್ನೆಲೆ ಗೂಂಡಾಗಳಿಂದ ಹಲ್ಲೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಧರಣಿ
ಬೆಳಗಾವಿ: ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ರೈತರು ಮತ್ತು ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಧರಣಿ ನಡೆಸಿದರು. ಗೂಂಡಾಗಳಿಂದ ತಮ್ಮ ತಲೆ, ಭುಜ, ಬೆನ್ನು ಮತ್ತು ಹೊಟ್ಟೆ ಮೇಲೆ ಆಗಿರುವ ಗಾಯಗಳನ್ನು ತೋರಿಸಿ, ಕಣ್ಣೀರು ಸುರಿಸಿದರು. ತಮ್ಮ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ನಮಗಾದ ಅನ್ಯಾಯಕ್ಕೆ …
Read More »ಉರಗ ಪ್ರೇಮಿಯೊಬ್ಬರು ಹಾವಿನ ಮೊಟ್ಟಗೆ ಕೃತಕ ಕಾವು ಕೊಟ್ಟು 12 ಮರಿ ಹಾವುಗಳ ಸುರಕ್ಷಿತ ಜನನ ಮಾಡಿಸಿದ್ದಾರೆ.
ಬೆಳಗಾವಿ: ಕಂದಾನಗರಿಯ ಉರಗಪ್ರೇಮಿಯೊಬ್ಬರು ಹಾವಿನ ಮೊಟ್ಟೆಗೆ ಕೃತಕವಾಗಿ ಕಾವು ಕೊಟ್ಟು ಸುರಕ್ಷಿತ ಜನನ ಮಾಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಬೆಳಗಾವಿ ತಾಲೂಕಿನ ಹಲಗಾ ಬಸ್ತವಾಡ ಗ್ರಾಮದ ರಾಮಾ ಪಾಟೀಲ್ ಎಂಬ ಉರಗ ಪ್ರೇಮಿ ಹಾವಿನ ಮರಿಗಳ ಸುರಕ್ಷಿತ ಜನನಕ್ಕೆ ಕಾರಣರಾಗಿದ್ದಾರೆ. ಹಾವು ಕಂಡ ತಕ್ಷಣ ಭಯದಿಂದ ಮಾರುದ್ದ ಓಡುವ ಜನರ ಮಧ್ಯೆ ಅವುಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಕಾಪಾಡುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ಬಗ್ಗೆಜೊತೆಗೆ ಮಾತನಾಡಿದ ರಾಮಾ ಪಾಟೀಲ, …
Read More »ಸ್ಕೂಟರ್ಗೆ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಸಾವು,
ಸ್ಕೂಟರ್ಗೆ ಬಸ್ ಡಿಕ್ಕಿ; ವಿದ್ಯಾರ್ಥಿನಿ ಸಾವು: ಸ್ಕೂಟರ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಪೀಣ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ 18 ವರ್ಷದ ದಿಶಾ ಸಾವನ್ನಪ್ಪಿದರೆ, ತಂದೆ ಸುರೇಶ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಿಸಿಎಂ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ …
Read More »ದುಷ್ಕರ್ಮಿಗಳ ಹಲ್ಲೆಯಿಂದ ವಿದ್ಯಾರ್ಥಿ ಸಾವು
ಬೆಂಗಳೂರು: ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಪ್ರಕರಣ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಸೋಮವಾರ ನಡೆದಿದೆ. ಸೊಹೇಲ್ (17) ಮೃತಪಟ್ಟ ವಿದ್ಯಾರ್ಥಿ. ಮಂಜುನಾಥ ನಗರದ ಗೌತಮ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಸೋಮವಾರ ಮಧ್ಯಾಹ್ನ 2.30ರ ಸಮಯಲ್ಲಿ ಕಾಲೇಜು ಸಮೀಪ ವಿದ್ಯಾರ್ಥಿ ನಿಂತಾಗ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಸೊಹೇಲ್ ಎಡಗೈ ಮತ್ತು ತೊಡೆಗೆ ಗಂಭೀರವಾದ …
Read More »