Breaking News

Monthly Archives: ಜೂನ್ 2023

ಮೀಸಲಾತಿಯ ಕೊಡುಗೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ: ಚೇತನ್​ ಅಹಿಂಸಾ

ಕಲಬುರಗಿ: ಧಾರ್ಮಿಕ ಗಲಭೆಗೆ ಕಾರಣವಾಗುತ್ತಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಒಳ್ಳೆಯದು. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದು ಒಬ್ಬರ ಆಹಾರ ಸಂಸ್ಕೃತಿಯನ್ನು ರಕ್ಷಿಸಿದಂತೆ ಆಗಲಿದೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್​ ಅಹಿಂಸಾ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಪರಿಚ್ಛೇದ 25ರ ಅಡಿ ಮತಾಂತರಗೊಳ್ಳುವುದು ಕಾನೂನು ಬದ್ಧವಾಗಿದೆ. ಅದು ಧಾರ್ಮಿಕ ಹಕ್ಕೂ ಆಗಿದೆ. ಆದಾಗ್ಯೂ, ಬಲವಂತದಿಂದ ಮತಾಂತರ ಮಾಡುವುದು ತಪ್ಪು. ತಮಗಿಷ್ಟ ಬಂದಂತಹ ಧರ್ಮವನ್ನು …

Read More »

B.J.P. 40ರಷ್ಟು ಕಮಿಷನ್ ತಿನ್ನುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ.: M.B. ಪಾಟೀಲ

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು ಕೊನೆಯ ಅಂಶವನ್ನು ಎಣಿಸುತ್ತಿದೆ ಎಂದು ಟೀಕೆ ಮಾಡುತ್ತಲೇ, ಪಕ್ಷ ಶಕ್ತಿಯನ್ನು ಕಳೆದುಕೊಡಿದೆ ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದರು ಮಾಧ್ಯಮಗಳೊಂದಿಗೆ ಮಾತನಾಡಿದ ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದರು. ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನು ನಿರ್ಮಿಸಿಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ …

Read More »

ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸೇರಿದ ಅಥಣಿಯ 2 ವರ್ಷದ ಪುಟಾಣಿಯ ವಿಶೇಷ ಜ್ಞಾಪಕಶಕ್ತಿ!

ಚಿಕ್ಕೋಡಿ : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿದೆ. ಅದರಂತೆ ಇಲ್ಲೊಬ್ಬ ಬಾಲಕನ ಜ್ಞಾಪಕಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಿಂದ ಪ್ರಶಸ್ತಿ ದೊರೆತಿದೆ. ಅಂದಹಾಗೆ ಇದು ಅಥಣಿಯ ಪುಟಾಣಿಯ ಸಾಧನೆ. 2 ವರ್ಷ 9 ತಿಂಗಳಿನ ಸ್ಕಂದ ಗುರುರಾಜ ಮಳಸಿದ್ದನವರ ಎಂಬ ಬಾಲಕ ವಾಹನ, ಬಣ್ಣ, ಸಂಕೇತಗಳನ್ನು ಗುರುತಿಸುವುದು, ರೈಮ್ಸ್, ಶ್ಲೋಕ ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಮಾಡಿ ಚಿಕ್ಕ ವಯಸ್ಸಿನಲ್ಲೇ ಪ್ರತಿಷ್ಟಿತ ಪ್ರಶಸ್ತಿ …

Read More »

ಪಂಢರಪುರ್ ವಿಠ್ಠಲನ ದರ್ಶನ ಪಡೆದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಕುಟುಂಬ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಪತ್ನಿಸಮೇತ ಪಂಢರಪುರ್ ವಿಠ್ಠಲನ ದರ್ಶನ ಪಡೆದು ಪೂಜೆ ನೆರವೇರಿಸಿದರು ಆಷಾಢಿ ಏಕಾದಶಿಯಂದು ಪಂಢರಪುರದಲ್ಲಿ ವೈಷ್ಣವ ಜಾತ್ರೆ ನಡೆಯುತ್ತದೆ. ಈ ಆಷಾಢಿ ವಾರದ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಪತ್ನಿ ಲತಾ ಶಿಂಧೆ ಅವರು ಶ್ರೀ ವಿಠ್ಠಲ-ರುಕ್ಮಿಣಿಯವರ ಅಧಿಕೃತ ಮಹಾಪೂಜೆಯನ್ನು ನೆರವೇರಿಸಿದರು ಈ ವರ್ಷ ಅಹಮದ್ನಗರ ಜಿಲ್ಲೆಯ ನೆವಾಸಾ ತಾಲೂಕಿನ ವಕ್ಡಿ ಗ್ರಾಮದ ರೈತ ದಂಪತಿಗಳಾದ ಬಾವುಸಾಹೇಬ್ ಮೋಹಿನಿರಾಜ್ ಕಾಳೆ ಮತ್ತು …

Read More »

ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ‌

ಶಿವಮೊಗ್ಗ: ತಡರಾತ್ರಿ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ‌ ನಡೆಸಿರುವ ಘಟನೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಬ್ಯಾಕೋಡು ಸಮೀಪದ ಎಸ್.ಎಸ್.ಬೋಗ್ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮರಾಠಿ ಗ್ರಾಮದ ಗಣೇಶ್ (47) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಸುಮಾರು 3 ಗಂಟೆಗೆ ಘಟನೆ ನಡೆದಿದೆ. ಗಣೇಶ್ ತಮ್ಮ ಗುಡಿಸಲಿನಲ್ಲಿ ಮಲಗಿದ್ದರು. ಈ ವೇಳೆ ನುಗ್ಗಿದ ಹುಲಿ ದಾಳಿ ನಡೆಸಿದೆ. ಇದರಿಂದಾಗಿ ಗಣೇಶ್ ಅವರ ಬಲಗೈಗೆ ಗಂಭೀರ ಸ್ವರೂಪದ …

Read More »

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ’: ಬೆಳಗಾವಿ ಉತ್ತರ ವಲಯ ನೂತನ ಐಜಿಪಿ ವಿಕಾಸ್‌ ಕುಮಾರ್ ಅಧಿಕಾರ ಸ್ವೀಕಾರ

ಬೆಳಗಾವಿ: ಮರಳು ಮಾಫಿಯಾ ಸೇರಿದಂತೆ ‌ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣಕ್ಕೆ ಕ್ರಮ ವಹಿಸುವುದು ಸೇರಿದಂತೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಆದ್ಯತೆ ‌ನೀಡಲಾಗುವುದು ಎಂದು ಉತ್ತರ ವಲಯ ನೂತನ ಐಜಿಪಿ ವಿಕಾಶಕುಮಾರ್​ ವಿಕಾಸ್‌ ಹೇಳಿದರು. ಬೆಳಗಾವಿಯ ಐಜಿಪಿ ಕಚೇರಿಯಲ್ಲಿ ಇಂದು ಉತ್ತರ ವಲಯ ನೂತನ ಐಜಿಪಿ ಆಗಿ ಅವರು ಅಧಿಕಾರ ಸ್ವೀಕರಿಸಿದರು. ನೂತನ ಐಜಿಪಿಯನ್ನು ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಆತ್ಮೀಯವಾಗಿ ಬರಮಾಡಿಕೊಂಡರು. ಇದಕ್ಕೂ ಮೊದಲು ಜಿಲ್ಲಾ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. …

Read More »

17 ವರ್ಷಗಳ ನಂತರ ನಡೆದಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಸಕಲರಿಗೂ ದೇವಿ ಒಳ್ಳೆದನ್ನು ಮಾಡಲಿ:. ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : 17 ವರ್ಷಗಳ ನಂತರ ಸಡಗರ ಸಂಭ್ರಮದಿಂದ ನಡೆದಿರುವ ಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ಗ್ರಾಮದ ಮುಖಂಡರು ಮತ್ತು ಜಾತ್ರಾ ಕಮೀಟಿ ಪದಾಧಿಕಾರಿಗಳನ್ನು ಅಭಿನಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸಕಲರಿಗೂ ದೇವಿಯು ಒಳ್ಳೆಯದನ್ನು ಮಾಡಲಿ. ನಾಡು ಸಂಪದ್ಭರಿತವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು.   ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, …

Read More »

ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ; ಹೆಂಡತಿ ಮಗನ ಕೊಂದು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಕಾರವಾರ (ಉತ್ತರ ಕನ್ನಡ) : ಒಂದೇ ಕುಟುಂಬದ ಮೂವರ ಮೃತದೇಹ ಕಾರವಾರ ಹಾಗೂ ಗೋವಾ ಬಳಿ ಪತ್ತೆಯಾಗಿದ್ದು, ಹೆಂಡತಿ ಮಗನ‌ನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋವಾ ಮೂಲದ ಶ್ಯಾಮ್​ ಪಾಟೀಲ್ (45), ಜ್ಯೋತಿ (38) ಇವರ 12 ವರ್ಷದ ಮಗ ಮೃತಪಟ್ಟವರಾಗಿದ್ದಾರೆ. ಜ್ಯೋತಿ ಹಾಗೂ ಅವರ ಮಗನ ಮೃತದೇಹ ಕಾರವಾರದ ದೇವಭಾಗ ಬೀಚ್ ಬಳಿ ಪತ್ತೆಯಾಗಿವೆ. ಇನ್ನು ಶ್ಯಾಮ್​ ಪಾಟೀಲ್ ಅವರ ಮೃತದೇಹ ಗೋವಾದ ಕುಕ್ಕಳ್ಳಿ ಪಾಡಿಯಲ್ಲಿ …

Read More »

ಗೃಹಜ್ಯೋತಿ, ಗೃಹಲಕ್ಷ್ಮಿ ಹೆಸರಲ್ಲಿ ಜನರಿಗೆ ಮೋಸದ ಆರೋಪ.. ಬಳ್ಳಾರಿಯಲ್ಲಿ ಓರ್ವ ವಶಕ್ಕೆ

ಬಳ್ಳಾರಿ: ರಾಜ್ಯ ಸರ್ಕಾರವು ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಈ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆ ನೆಪ ಮಾಡಿಕೊಂಡು ಅಪ್ಲಿಕೇಶನ್​ ಭರ್ತಿ ಮಾಡುವ ಹೆಸರಿನಲ್ಲಿ ನೂರಾರು ಜನರಿಂದ ಹಣ ಪಡೆದಿದ್ದಾನೆ ಎಂದು ಆರೋಪಿಸಿ, ವ್ಯಕ್ತಿಯೊಬ್ಬನನ್ನು ಜನರೇ ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ದಿಶಾ ಒನ್​ ಎಂಬ ಖಾಸಗಿ ಏಜೆನ್ಸಿ ಹೆಸರಿನಲ್ಲಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೇರಿದಂತೆ ಇತರ ಗ್ಯಾರಂಟಿ ಯೋಜನೆಗಳ ಫಾರ್ಮ್​ ಭರ್ತಿ …

Read More »

ತಹಶೀಲ್ದಾರ್ ಅಶೋಕ್​ ಮಣ್ಣಿಕೇರಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎನ್ನಲಾದ ಪ್ರಕರಣ ಮಗ್ಗಲು ಬದಲಿಸಿದೆ.

ಬೆಳಗಾವಿ: ಬೆಳಗಾವಿಯ ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಅಶೋಕ್​ ಮಣ್ಣಿಕೇರಿ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎನ್ನಲಾದ ಪ್ರಕರಣ ಮಗ್ಗಲು ಬದಲಿಸಿದೆ. ಇದು ಸಹಜ ಸಾವಲ್ಲ ಎಂದು ಅಶೋಕ್ ಅವರ ಸಹೋದರಿಯರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಅಶೋಕ್ ಮಣ್ಣಿಕೇರಿ ಪತ್ನಿ ಭೂಮಿ, ಸಹೋದರ ಸ್ಯಾಮ್ಯುಯೆಲ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ. ಬೆಳಗಾವಿಯ ಕಾಳಿ ಅಂಬ್ರಾಯದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಅಶೋಕ್ ಮಣ್ಣಿಕೇರಿ ಕುಟುಂಬ ವಾಸವಿತ್ತು. ತಡರಾತ್ರಿ ಹೃದಯಾಘಾತವಾಗಿದೆ ಎಂದು ಖಾಸಗಿ ಆಸ್ಪತ್ರೆಗೆ ಅಶೋಕ್​ …

Read More »