Breaking News

Daily Archives: ಜೂನ್ 2, 2023

ಬದುಕು ಕೊಟ್ಟ ಕಾಲೇಜಿಗೆ ಬಂದು ಕಸ ಗುಡಿಸಿ, ಬೆಲ್​ ಬಾರಿಸಿದ ಶಾಸಕ ದೇವೇಂದ್ರಪ್ಪ- ವಿಡಿಯೋ

ದಾವಣಗೆರೆ: ಜಗಳೂರು ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ಜವಾನ ವೃತ್ತಿಯಿಂದ ಜೀವನ ಆರಂಭಿಸಿದವರು. ಇದೀಗ ಶಾಸಕ ವೃತ್ತಿ ಅಲಂಕರಿಸದ ಬಳಿಕ ತಾವು ಕೆಲಸ ಮಾಡ್ತಿದ್ದ ಕಾಲೇಜಿಗೆ ಆಗಮಿಸಿ, ಕೆಲಕಾಲ ಜವಾನ ವೃತ್ತಿಯನ್ನೇ ನಿಭಾಯಿಸಿ ಖುಷಿ ಪಟ್ಟರು. ಇಲ್ಲಿಯ ಅಮರ ಭಾರತಿ ವಿದ್ಯಾಕೇಂದ್ರದಲ್ಲಿ ದೇವೇಂದ್ರಪ್ಪ ಬದುಕು ಕಟ್ಟಿಕೊಂಡವರು. 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡಿರುವ ಇವರು ಇಡೀ ಜಗಳೂರು ತಾಲೂಕಿಗೆ ಚಿರಪರಿಚಿತರು. ಜವಾನ ಕೆಲಸದಿಂದ …

Read More »

ಪಕ್ಷದ್ರೋಹ ಮಾಡಿದವರನ್ನು ಕ್ಷಮಿಸುವುದಿಲ್ಲ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ನಲ್ಲಿದ್ದು ಪಕ್ಷದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ತಾಲೂಕು ಕಚೇರಿಯಲ್ಲಿ ನೂತನ ಶಾಸಕರ ಕಚೇರಿ ಪೂಜೆ ಹಮ್ಮಿಕೊಂಡಿದ್ದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಇದ್ದುಕೊಂಡು ಪಕ್ಷದ್ರೋಹ ಮಾಡಿದವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದರು. ಈ ಹಿಂದೆ ಇದ್ದ ಶಾಸಕರು ಯಾವುದೇ ಫೈಲ್​ ಬಂದ್ರೂ ಸಹ ಜಿಲ್ಲಾಧಿಕಾರಿಗಳ ಬಳಿ ತಡೆ ಹಿಡಿಯುತ್ತಿದ್ದರು. ಆದರೆ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು …

Read More »

ಕಟೀಲ್​ಗೂ ಫ್ರೀ, ಬೊಮ್ಮಾಯಿಗೂ ಫ್ರೀ, ಶೋಭಾ ಕರಂದ್ಲಾಜೆಗೂ ಫ್ರೀ: ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್

ಬೆಂಗಳೂರು: ಪಂಚ ಗ್ಯಾರಂಟಿಗಳು ಜಾರಿ ಗೊಳಿಸಿರುವ ಹಿನ್ನೆಲೆ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ. ಟ್ವೀಟ್ ಮೂಲಕ ನಳಿನ್ ಕುಮಾರ್ ಕಟೀಲ್​ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ. ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ, ಶೋಭಾ ಕರಂದ್ಲಾಜೆ ಅವರೇ ನಿಮಗೂ ಪ್ರಯಾಣ ಫ್ರೀ ಎಂದು ವ್ಯಂಗ್ಯವಾಡಿದೆ. ಸಿ.ಟಿ.ರವಿ ಅವರೇ, ನಿಮ್ಮ ಮನೆಯವರಿಗೂ 2000 ಫ್ರೀ. ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ). ಇದು …

Read More »

ಟೈಗರ್​ 3 ಶೂಟಿಂಗ್​: ಭರ್ಜರಿ ಆಯಕ್ಷನ್​ ಸೀನ್​ ಪೂರ್ಣ, ಸಲ್ಲು – ಶಾರುಖ್​​ ವಿಡಿಯೋ ಲೀಕ್​!

ಶೂಟಿಂಗ್​ ಸೆಟ್​ ಒಂದರಿಂದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವಿಡಿಯೋ ಲೀಕ್ ಆಗಿದ್ದು, ‘ಟೈಗರ್ 3’ ಸಿನಿಮಾದ್ದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಬಾಲಿವುಡ್ ಸೂಪರ್‌ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ‘ಪಠಾಣ್‌’ ಚಿತ್ರದಲ್ಲಿ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು. ವಿವಾದಗಳ ನಡುವೆಯೇ ತೆರೆಕಂಡ ಈ ಚಿತ್ರ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡಿದವು. ಅವರು ಮತ್ತೆ ಒಟ್ಟಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಟೈಗರ್ 3’. ಈ …

Read More »

ಗ್ಯಾರಂಟಿಯಲ್ಲಿ ದೋಖಾ; ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ : ಮಾಜಿ ಸಿಎಂ ಬೊಮ್ಮಾಯಿ‌

ಬೆಂಗಳೂರು : ಐದು ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಕೊಟ್ಟ ಮಾತನ್ನು ಸಂಪೂರ್ಣವಾಗಿ ನಡೆಸಿಲ್ಲ. ಹೇಳುವುದೊಂದು, ಮಾಡುವುದೊಂದು ಮಾಡಿದ್ದಾರೆ. ಹಾಗಾಗಿ ನಾಳೆ ಗ್ಯಾರಂಟಿಗಳ ಜಾರಿ ಬಗ್ಗೆ ಸರ್ಕಾರದ ಆದೇಶ ಬರುತ್ತದೆ. ಆ ಆದೇಶವನ್ನು ಸ್ಟಡಿ ಮಾಡಿ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುವ ಮೂಲಕ ಜನರ ಬಳಿ ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ …

Read More »

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಮೇಯರ್ ಉಪಮೇಯರ್ ಭೇಟಿ

ತಾಲೂಕಿನ ತುರಮುರಿಯಲ್ಲಿರುವ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಮೇಯರ್ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ರೇಷ್ಮಾ ಪ್ರವೀಣ ಪಾಟೀಲ ಕಾರ್ಪೋರೇಟರ್ ಗಳು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.. ಮೇಯರ್ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ರೇಷ್ಮಾ ಪ್ರವೀಣ ಪಾಟೀಲ ಭೇಟಿ ನೀಡಿ, ಯೋಜನೆಯ ಕಾಮಗಾರಿ ಕುರಿತು ತಾಂತ್ರಿಕ ಮಾಹಿತಿ ಪಡೆದರು. . ಈ ಸಂದರ್ಭದಲ್ಲಿ ಮಹಾಪೌರ ಹಾಗೂ ಉಪ ಮೇಯರ್ ಹಾಗೂ ಆರೋಗ್ಯ ಇಲಾಖೆ …

Read More »

ರಕ್ತದಾನ ಶಿಬಿರದಲ್ಲಿ ತಾವೇ ರಕ್ತದಾನ ಮಾಡಿದ ಸ್ವಾಮೀಜಿ

ಬೆಳಗಾವಿ‌ ಜಿಲ್ಲೆಯ ‌ಬೈಲಹೊಂಗಲ ತಾಲೂಕಿನ ನಯಾನಗರದ ಸುಖದೇವಾನಂದ ಆಶ್ರಮದಲ್ಲಿ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಅವರ‌ 39 ನೇ ವರ್ಷದ ಜನ್ಮದಿನಾಚರಣೆ ಆಚರಿಸಲಾಯಿತು. ಜನ್ಮದಿನದ ಪ್ರಯುಕ್ತ ಬೆಳವಡಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ‌ ಶಿಬಿರ ಏರ್ಪಡಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಶ್ರೀಗಳು ಖುದ್ದು ತಾವೂ ಸಹ ರಕ್ತದಾನ ಮಾಡಿದರು. ಜೊತೆಗೆ ಮಠಕ್ಕೆ ಆಗಮಿಸಿದ ನೂರಾರು ಭಕ್ತರು ‌ಪಾಲ್ಗೊಂಡು, ರಕ್ತದಾನ ಮಾಡಿದರು.ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ …

Read More »

ವಡಗಾಂವ ಆನಂದನಗರ, ಎರಡನೇ ಕ್ರಾಸ್, ನಲ್ಲಿಗಳಲ್ಲಿ ಚರಂಡಿ ಮಿಶ್ರಿತ ನೀರು

ಬೆಳಗಾವಿ ವಡಗಾಂವ ಆನಂದನಗರ, ಎರಡನೇ ಕ್ರಾಸ್, ನಲ್ಲಿಗಳಲ್ಲಿ ಚರಂಡಿ ಮಿಶ್ರಿತ ನೀರು ಬರುತ್ತಿದ್ದು, ನಾಗರಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ತೀಳಿಸಿದರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೌದು, ಕಳೆದ ಎಂಟು ದಿನಗಳಿಂದ ಆನಂದನಗರ 2ನೇ ಕ್ರಾಸ್ನಲ್ಲಿ ಅಪಾರ ಪ್ರಮಾಣದ ಚರಂಡಿ ನೀರು ಹರಿಯುತ್ತಿದೆ. ಈ ನೀರು ಸುತ್ತಮುತ್ತಲಿನ ಮನೆಗಳ ಬಾವಿಗಳಿಗೆ ನುಗ್ಗುತ್ತಿದ್ದು, ಬಾವಿಗಳ ನೀರು ಕೂಡ ಕಲುಷಿತಗೊಂಡಿದೆ. ಹೀಗಾಗಿ ಬಳಕೆಗೆ ಬೇಕಾದ ನೀರನ್ನು …

Read More »

ಎಂಇಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಭಾಗಿ

ಬೆಳಗಾವಿ: ತಾಲೂಕಿನ ಹಿಂಡಲಗಾ ಗ್ರಾಮದ ಹುತಾತ್ಮ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಾಡದ್ರೋಹಿ ಎಂಬ ಘೋಷಣೆ ಕೂಗುವ ಮೂಲಕ ಮತ್ತೆ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. 1986ರಲ್ಲಿ ಗಡಿ ಗಲಾಟೆಯಲ್ಲಿ ಮೃತಪಟ್ಟ ಮರಾಠಿ ಭಾಷಿಕರಿಗೆ ಎಂಇಎಸ್ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಕೂಡ ಭಾಗಿಯಾಗುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಕಾರಣರಾಗಿದ್ದಾರೆ. ಈ ವೇಳೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, …

Read More »

ಕೆಎಸ್​ಆರ್​ಟಿಸಿ, ಬೈಕ್ ನಡುವೆ ಮುಖಾಮುಖಿ‌ ಡಿಕ್ಕಿ: ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ

  ಬೆಳಗಾವಿ: ಬೈಕ್ ಹಾಗೂ ಕೆಎಸ್‌ಆರ್​​ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್​​ ಸವಾರ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ‌ ಗ್ರಾಮದ ಬಳಿ ನಡೆದಿದೆ. ಯಲ್ಲಪ್ಪ ವಣ್ಣೂರ್ (25)​ ಅಪಘಾತದಲ್ಲಿ ಮೃತ ಪಟ್ಟವರು. ಒಂದೇ ಬೈಕ್​ನಲ್ಲಿ ಚಲಿಸುತ್ತಿದ್ದ ಪಲ್ಲವಿ ವಣ್ಣೂರ್​ (16), ಐಶ್ವರ್ಯಾ ವಣ್ಣೂರ್ (16)​, ಭೀಮಪ್ಪ ವಣ್ಣೂರ್ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಸಿಯಿಂದ ಬೆಳಗಾವಿ ಕಡೆಗೆ …

Read More »