ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್‌ನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದು, “ಆನ್ಸರ್ ಮಾಡಿ ಮೋದಿ’ (ಉತ್ತರ ಹೇಳಿ ಮೋದಿ) ಎಂದು ಆಗ್ರಹಿಸಿದ್ದಾರೆ. ಉತ್ತರ ಹೇಳಿ ಮೋದಿ ಎಂಬ ಹ್ಯಾಶ್‌ಟ್ಯಾಗ್ ಮೂಲಕ ಸರಣಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕಿರುವ ಸಿದ್ದರಾಮಯ್ಯ, ಕೇಂದ್ರದ ಆಯೋಗಗಳು ನಡೆಸುವ ಪ್ರವೇಶ ಪರೀಕ್ಷೆಯಿಂದ ಕನ್ನಡವನ್ನು ಕಿಕ್ ಔಟ್ ಮಾಡಿ ಕನ್ನಡಿಗರ ಪಾಲಿನ ಉದ್ಯೋಗ ಕಿತ್ತುಕೊಳ್ಳಲಾಗಿದೆ. ಕನ್ನಡಿಗರನ್ನು ಕಂಡರೆ …
Read More »Yearly Archives: 2022
ತಿರುಪತಿ ದೇವಸ್ಥಾನ: ಲಡ್ಡು ಪ್ರಸಾದದ ತೂಕದಲ್ಲಿ ಯಾವುದೇ ಅನುಮಾನ ಬೇಡ : ಟಿಟಿಡಿ ಸ್ಪಷ್ಟನೆ
ಹೈದರಾಬಾದ್:ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದ ಗಾತ್ರ ಮತ್ತು ತೂಕದಲ್ಲಿ ಬದಲಾವಣೆಯಾಗಿದೆ ಎಂಬ ಆರೋಪವನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಮ್ಸ್) ತಳ್ಳಿಹಾಕಿದೆ. ಅಲ್ಲದೇ, ಸುಳ್ಳು ಸುದ್ದಿಯನ್ನು ಯಾವುದೇ ಕಾರಣಕ್ಕೂ ನಂಬದಿರಿ ಎಂದು ಭಕ್ತಾದಿಗಳಿಗೆ ಮನವಿ ಮಾಡಿದೆ. ದೇಗುಲದ ಅಡುಗೆ ಮನೆ “ಪೋಟು’ವಿನಲ್ಲಿ ಪ್ರತಿದಿನ ತಯಾರಾಗುವ ಲಡ್ಡುಗಳನ್ನು ಪ್ರತ್ಯೇಕ ಟ್ರೇಯಲ್ಲಿ ಇಟ್ಟು, ಅದರ ತೂಕವನ್ನು ಅಳೆಯಲಾಗುತ್ತದೆ. ಇಲ್ಲಿನ ಎಲ್ಲ ಪ್ರಕ್ರಿಯೆಯೂ ಪಾರದರ್ಶಕವಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು …
Read More »ಗೋಕಾಕ ಶಿಂಗಳಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಶವ ಪತ್ತೆ,
ಗೋಕಾಕ ಶಿಂಗಳಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಶವ ಪತ್ತೆ, ನದಿಯಲ್ಲಿ ತೇಲಿ ಬಂದಿರುವ ಪುರುಷನ ಶವ, ಗೋಕಾಕ ತಾಲೂಕಿನ ಶಿಂಗಳಾಪುರ ಬ್ರಿಡ್ಜ್, ಘಟಪ್ರಭಾ ನದಿಯಲ್ಲಿ ತೇಲಿ ಬಂದಿರುವ ಪುರುಷನ ಶವ, ಸ್ಥಳಕ್ಕೆ ಗೋಕಾಕ ನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ, ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲು,
Read More »ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ: ಡಿಸೆಂಬರ್‌ವರೆಗೆ ಗಡುವು ನೀಡಿದ ರಾಜ್ಯ ಸರ್ಕಾರ
ದಾವಣಗೆರೆ: ನೌಕರರು ಡಿಸೆಂಬರ್ ಅಂತ್ಯದೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ರಾಜ್ಯ ಸರ್ಕಾರ ಗಡುವು ನೀಡಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಸೇವಾ ಬಡ್ತಿ, ವೇತನ ಬಡ್ತಿಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 50 ವರ್ಷ ದಾಟಿದ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ‘ಇತ್ತೀಚೆಗೆ ನೌಕರಿಗೆ ಸೇರಿದವರು ಕಂಪ್ಯೂಟರ್ ಜ್ಞಾನ ಹೊಂದಿದ್ದಾರೆ. ಆದರೆ, 20-25 ವರ್ಷಗಳ ಸೇವಾವಧಿ ಪೂರೈಸಿರುವ ಅನೇಕರು ಮೂರ್ನಾಲ್ಕು ಬಾರಿ ಪರೀಕ್ಷೆ …
Read More »ತಿಂಗಳಾಂತ್ಯಕ್ಕೆ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ: ರಾಜೀವ್
ಕಲಬುರಗಿ: ‘ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಫಲಾನುಭವಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಬೃಹತ್ ಸಮಾವೇಶ ನವೆಂಬರ್ ಅಂತ್ಯದಲ್ಲಿ ಯಾದಗಿರಿಯಲ್ಲಿ ನಡೆಯಲಿದೆ’ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಹೇಳಿದರು. ‘ಸಮಾವೇಶದಲ್ಲಿ ಕಲಬುರಗಿಯ 216 ಮತ್ತು ಯಾದಗಿರಿಯ 140 ತಾಂಡಾಗಳ ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಕ್ಕುಪತ್ರ ವಿತರಿಸುವರು. ಹಂತಹಂತವಾಗಿ ವಿವಿಧೆಡೆ ಸಮಾವೇಶಗಳ ಮೂಲಕ ರಾಜ್ಯದ 3,300 ಪೈಕಿ 1,700 ತಾಂಡಾಗಳ ನಿವಾಸಿಗಳಿಗೆ ಹಕ್ಕುಪತ್ರ ತಲುಪಿಸಲಾಗುವುದು’ ಎಂದು ಅವರು …
Read More »ಮಹದಾಯಿ ಯೋಜನೆಗೆ ಅನುಮೋದನೆ: ಕೇಂದ್ರ ಜಲಶಕ್ತಿ ಸಚಿವ ಶೇಖಾವತ್‌ಗೆ ಮನವಿ
ನವದೆಹಲಿ: ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಕರ್ನಾಟಕದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗುರುವಾರ ಮನವಿ ಸಲ್ಲಿಸಿದರು. ಇಲ್ಲಿನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನಿವಾಸದಲ್ಲಿ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮಹದಾಯಿ ಯೋಜನೆಯ ಜಾರಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಒಂದು …
Read More »ಶ್ರೀಗಳ ಹೆಗಲ ಮೇಲೆ ಕೈ ಹಾಕಿದ ಅಶೋಕ, ಫೋಟೊಗಾಗಿ ಸಿಎಂ ಪರದಾಟ: ಕಾಂಗ್ರೆಸ್ ಟೀಕೆ
ಬೆಂಗಳೂರು : ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದರು. ಆ ಬಳಿಕ, ಪ್ರಧಾನಿ ಜೊತೆ ನಿಂತಿದ್ದ ಆದಿಚುಂಚನಗಿರಿ ಶ್ರೀಗಳ ಹೆಗಲ ಮೇಲೆ ಸಚಿವ ಆರ್. ಅಶೋಕ ಕೈಹಾಕಿರುವುದು ಮತ್ತು ಪ್ರಧಾನಿ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಒದ್ದಾಡುತ್ತಿರುವ ಚಿತ್ರಗಳನ್ನು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ …
Read More »ಸಾಯಲು, ಶೂಟ್ ಮಾಡಲು ಸಿದ್ಧ: ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ ವಾಗ್ದಾಳಿ
ಕಲಬುರಗಿ: ‘ಚಿತ್ತಾಪುರ ಕ್ಷೇತ್ರದ ನಾನು ಬಡವರ ಪರ ಕೆಲಸ ಮಾಡುತ್ತಿದ್ದೇನೆ. ‘ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್‌ನವರು ಮನಸ್ಸು ಮಾಡಿದರೇ ಬಿಜೆಪಿಯವರು ಜಿಲ್ಲೆಯಲ್ಲಿ ಓಡಾಡದಂತೆ ಮಾಡುವುದಾಗಿ ಹೇಳಿದ್ದಾರೆ. ಚಿತ್ತಾಪುರದಲ್ಲಿ ಬಹಿರಂಗವಾಗಿ ಓಡಾಡುತ್ತಿರುವ ನಾನು ಶಾಸಕರ ಎಲ್ಲಾ ಸವಾಲುಗಳನ್ನು ಒಪ್ಪಿ ಮುಖಾಮುಖಿ ಚರ್ಚೆಗೆ ಸಿದ್ಧ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಪ್ರಿಯಾಂಕ್ ಖರ್ಗೆ ಅವರು ಆನೆ ಬಲ ಬಂದಂತೆ ಆಡುತ್ತಿದ್ದಾರೆ. 2023ರ ವಿಧಾನಸಭಾ …
Read More »ಜಿ.ಪಂ., ತಾ.ಪಂ ಚುನಾವಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಕರ್ನಾಟಕ ಚುನಾವಣಾ ಆಯೋಗ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಅರ್ಜಿದಾರರು ಅಗತ್ಯವಿದ್ದರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು’ ಎಂದು ಸೂಚಿಸಿತು. ಕಳೆದ ವರ್ಷ ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಅವಧಿ ಪೂರ್ಣಗೊಂಡ ಕರ್ನಾಟಕದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಈ ಸಂಬಂಧ ಕ್ಷೇತ್ರ ಪುನರ್‌ವಿಂಗಡಣೆ …
Read More »ಗಾಂಜಾ ಪ್ರಕರಣದಲ್ಲಿ ವಿಚಾರಣೆಗೆ ಪೊಲೀಸರು ಕರೆ ತಂದಿದ್ದ ಆರೋಪಿ ಠಾಣೆಯಲ್ಲಿಯೇ ಸಾವು
ಗಾಂಜಾ ಪ್ರಕರಣದಲ್ಲಿ ವಿಚಾರಣೆಗೆ ಪೊಲೀಸರು ಕರೆ ತಂದಿದ್ದ ಆರೋಪಿ ಠಾಣೆಯಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿಯ ನಗರದಲ್ಲಿ ನಡೆದಿದೆ. ಹೌದು ಗಾಂಜಾ ಆರೋಪದಡಿಯಲ್ಲಿ ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಸಗೌಡ ಈರಗೌಡ ಪಾಟೀಲ್ ಸಾವನ್ನಪ್ಪಿರುವ ಆರೋಪಿ. ಹಿಂಡಲಗಾ ಜೈಲಿನಿಂದ ವಿಚಾರಣೆ ಬಂದ ವ್ಯಕ್ತಿಯೊಬ್ಬನಿಗೆ ಈತ ಗಾಂಜಾ ನೀಡಿದ ಪ್ರಕರಣದಲ್ಲಿ ಠಾಣೆಗೆ ತಂದು ವಿಚಾರಣೆ ಮಾಡಲಾಗುತಿತ್ತು. …
Read More »