Breaking News

Yearly Archives: 2022

ರಾಜ್​ ಶೆಟ್ಟಿಗೆ ಶಿವಣ್ಣ ಸರ್ಪ್ರೈಸ್ ಫೋನ್ ಕಾಲ್; ಶಿವ- ಶಿವ ಮಾತುಕತೆಯಲ್ಲಿ ಹೊರಬಿತ್ತು ಸಂತಸದ ವಿಚಾರ!

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಕರೆ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಸಂತಸದ ವಿಚಾರವೊಂದು ಹೊರಬಿದ್ದಿದೆ.Garuda Gamana Vrishabha Vahana: ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಸರ್ಪ್ರೈಸ್ ಕರೆ ಮಾಡಿದ್ದಾರೆ. ತಮ್ಮ ಗುರುತನ್ನು ಹೇಳಿಕೊಳ್ಳದ ಶಿವಣ್ಣ, ಮಾಸ್ ಸ್ಟೈಲ್​ನಲ್ಲೇ ರಾಜ್ ಶೆಟ್ಟಿ ಕಾಲೆಳೆದಿದ್ದಾರೆ. ಮಂಗಳಾದೇವಿ ಗುಂಗಲ್ಲಿರುವ ರಾಜ್ ಕೂಡ ತಮ್ಮನ್ನು ಬಿಟ್ಟುಕೊಡದೇ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಇಷ್ಟಕ್ಕೂ ಈ …

Read More »

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ಕೊರೊನಾ ಸೋಂಕು

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ (Delhi Chief Minister Arvind Kejriwal) ಕೊರೊನಾ ಸೋಂಕು (Corona infection) ದೃಢಪಟ್ಟಿದೆ.   ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಸಿಎಂ ಅರವಿಂದ ಕೇಜ್ರಿವಾಲ್, ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೌಮ್ಯ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಜೊತೆ …

Read More »

ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ; ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ…? ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಕಲ್ಲು ಬಂಡೆಗಳನ್ನು ನುಗ್ಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ಡಿಸೈನ್ ವೀರರಿಗೆ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಅಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ ಅಲ್ಲವೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಡಿ.ಕೆ.ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.   ಕನಕಪುರ, ರಾಮನಗರ ಯಾರೊಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ …

Read More »

ಇಂದು ಸಂಜೆ Lockdown ಭವಿಷ್ಯ ನಿರ್ಧಾರ ಆಗುತ್ತಾ? ಕೋವಿಡ್ ನಿಯಂತ್ರಣಕ್ಕೆ ತಜ್ಞರ ಸಲಹೆಗಳೇನು?

ರಾಜ್ಯದಲ್ಲಿ ಕೊವೀಡ್-19 (COVID 19), ಓಮೈಕಾನ್ (Omicron Variant) ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 6:30 ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯಲಿದೆ. ರಾಜ್ಯದಲ್ಲಿ ಕೊವೀಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ಶಿಫಾರಸು ‌ಕೇಳಿದ್ದಾರೆ. ತಜ್ಞರ ಸಮಿತಿ ಪರಿಸ್ಥಿತಿ, ‌ಜಾರಿಗೆ ತರಬೇಕಿರುವ ನಿಯಮಗಳ ಬಗ್ಗೆ ಸಿಎಂ ವರದಿ ಈಗಾಗಲೇ ಒಪ್ಪಿಸಲಾಗಿದೆ. ಸಭೆಯಲ್ಲಿ ಲಾಕ್ ಡೌನ್ (Lockdown) ಭವಿಷ್ಯ ನಿರ್ಧಾರವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಂದು …

Read More »

ಬೆಳಗಾವಿಯಲ್ಲಿ ಮತಾಂತರ ಶಂಕೆ: ಪ್ರಾರ್ಥನೆ ವೇಳೆ ಮನೆಗೆ ನುಗ್ಗಿ ಹಲ್ಲೆ ಆರೋಪ

ಬೆಳಗಾವಿ: ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್‌ 29 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಸಿ ಸಾಂಬಾರು ಎಸೆಯಲು ಯತ್ನ ಆರೋಪ ಪ್ರಾರ್ಥನೆ ಮಾಡುತ್ತಿದ್ದ ವೇಳೆ 7 ಮಂದಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದು, ಘಟಪ್ರಭ ಪೊಲೀಸ್ ಠಾಣೆಗೆ ಕವಿತಾ ಕರಗಣವಿ ಎಂಬವರು ದೂರು ನೀಡಿದ್ದಾರೆ. ಜನರನ್ನು …

Read More »

ಕೋವಿಡ್ ಟೆಸ್ಟ್ ಅನ್ನೋದು ಒಂದು ಹಗರಣ, ಇದರಿಂದ ನಾನು ಅಂತ್ಯಕ್ರಿಯೆಗೆ ಹೋಗೋದು ತಪ್ಪಿದೆ’

ಲಂಡನ್‌ನಿಂದ ಮಾವನ ಅಂತ್ಯಕ್ರಿಯೆಗಾಗಿ ಭಾರತಕ್ಕೆ ಬಂದ ವ್ಯಕ್ತಿ ಮತ್ತು ಆತನ ಪತ್ನಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಪಾಸಿಟಿವ್ ರಿಸಲ್ಟ್ ಬಂದಿದ್ದು, ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹಾಗಾಗಿ ಈ ಜೋಡಿ ಅಂತ್ಯಕ್ರಿಯೆಗೆ ಹೋಗುವುದು ತಪ್ಪಿದೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ವ್ಯಕ್ತಿ, ಕೋವಿಡ್ ಟೆಸ್ಟ್ ಅನ್ನೋದು ಹಗರಣವಾಗಿ ಬಿಟ್ಟಿದೆ ಎಂದು ಆರೋಪಿಸಿದ್ದಾರೆ. ಮನೋಜ್ ಲಾಡ್ವಾ ಎಂಬವರ ಪತ್ನಿಯ ತಂದೆಯ ಅಂತ್ಯಕ್ರಿಯೆಯ ಸಲುವಾಗಿ ಲಂಡನ್‌ನಿಂದ ಮುಂಬೈಗೆ ಬಂದಿದ್ದರು. …

Read More »

ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ

ಮುಂಬೈ: ದೇಶಾದ್ಯಂತ ಕರೊನಾ ಭೀತಿ ಅತಿಯಾಗಿದ್ದು, ಸದ್ಯದಲ್ಲೇ ದಿನಕ್ಕೆ ಸುಮಾರು 60 ಸಾವಿರ ಮಂದಿ ಸೋಂಕಿತರಾಗಿ ಆಸ್ಪತ್ರೆಗೆ ಸೇರಲಿದ್ದಾರೆ ಎಂಬ ಅಧ್ಯಯನವೊಂದರ ಅಂಶ ಮತ್ತಷ್ಟು ಆತಂಕವನ್ನು ಮೂಡಿಸಿದೆ. ದೇಶದಲ್ಲಿ ಒಮಿಕ್ರಾನ್ ಅಲೆ ಗರಿಷ್ಠ ಮಟ್ಟ ತಲುಪುವ ವೇಳೆ ದೈನಿಕ ಸುಮಾರು 60,000 ಜನರು ಆಸ್ಪತ್ರೆಗಳಿಗೆ ದಾಖಲಾಗಬಹುದು. ಸದ್ಯ ದೇಶದಲ್ಲಿ ಒಮಿಕ್ರಾನ್ ಪ್ರಭೇದವೇ ಪ್ರಮುಖ ತಳಿಯಾಗಿದ್ದು ಶೀಘ್ರವೇ ಆರೋಗ್ಯ ಬಿಕ್ಕಟ್ಟು ಅಪ್ಪಳಿಸಬಹುದು ಎಂದು ಖಾಸಗಿ ಅಧ್ಯಯನವೊಂದು ಹೇಳಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ಈಗಾಗಲೇ …

Read More »

ಉತ್ತರ ಪ್ರದೇಶ ಚುನಾವಣೆ: ಮತ್ತೆ ಅಧಿಕಾರಕ್ಕೆ ಆಡಳಿತಾರೂಢ ಬಿಜೆಪಿ

ಲಕ್ನೋ, ಜನವರಿ 03: ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ. ಟೈಮ್ಸ್‌ ನೌ ನವಭಾರತ್ ನಡೆಸಿದ VETO ಸಮೀಕ್ಷೆಯಲ್ಲಿ ಒಟ್ಟು 403 ಸೀಟುಗಳ ಪೈಕಿ 230-249 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.   2017 ಹಾಗೂ 2022ರ ಚುನಾವಣೆಯನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಪಕ್ಷ 2017 2022 ನಿರೀಕ್ಷೆ ಬಿಜೆಪಿ 325 230-249 ಎಸ್‌ಪಿ …

Read More »

ಬೆಂಗಳೂರು-ಧಾರವಾಡ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ ಸಂಚಾರ ರದ್ದು

ಬೆಂಗಳೂರು, ಜ.3: ಕೆಎಸ್‍ಆರ್ ಬೆಂಗಳೂರು-ಧಾರವಾಡ ಸೂಪರ್‍ಫಾಸ್ಟ್ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲಿನ ಸಂಚಾರವನ್ನು ಬೆಂಗಳೂರಿನಿಂದ ಜನವರಿ 8, 11, 17 ಮತ್ತು 22ರಂದು ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದೇ ರೈಲನ್ನು ಧಾರವಾಡದಿಂದ ಜನವರಿ 4, 9, 12, 18 ಮತ್ತು 23ರಂದು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಕಚೇರಿಯ ಪ್ರಕಟಣೆ ಹೊರಡಿಸಿದೆ.   ಹೊಸಪೇಟೆ ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್ ವಿಶೇಷ ಎಕ್ಸ್‍ಪ್ರೆಸ್ ರೈಲಿನ ಸಂಚಾರವನ್ನು ಜನವರಿ 11ರಂದು, …

Read More »

ಮಹಿಳೆಯರಿಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಲು ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ದೊಡ್ಡದು: ಶಾಸಕ‌ ಅನಿಲ ಬೆನಕೆ

ಬೆಳಗಾವಿ: ಇಂದು ಮಹಿಳೆಗೆ ಪುರುಷ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರೆ ಅದಕ್ಕೆ ಕಾರಣ ಅಂದು ಸಮಾನತೆಯ ಹಕ್ಕಿಗೆ ಕಾರಣವಾಗಿ ಕ್ರಾಂತಿಕಾರಿ ಮಹಿಳೆಯಾಗಿ ಹೊರಹೊಮ್ಮಿದ್ದ ಸಾವಿತ್ರಿಬಾಯಿ ಪುಲೆ ಅವರಂಥ ಶ್ರಮವೇ ಕಾರಣ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ‌ ಬೆನಕೆ ಹೇಳಿದರು. ನಗರದ ಸದಾಶಿವ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 191 ನೇ ಜಯಂತಿ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ …

Read More »