Breaking News

Yearly Archives: 2022

ಕೊಪ್ಪಳ: ಅಪಾಯಕಾರಿ ಹಾದಿಯಲ್ಲಿ ಬೆಟ್ಟ ಏರುವ ಭಕ್ತರು

ಕೊಪ್ಪಳ: ಹನುಮಮಾಲೆ ಮೂಲಕ ನಾಡಿನಾದ್ಯಂತ ಜನಪ್ರಿಯಗೊಂಡಿರುವ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತದ ಅಂಜನೇಯ ದರ್ಶನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ಸುರಕ್ಷತೆಯ ಸಮಸ್ಯೆ ಎದುರಾಗಿದೆ. ಅಂಜನಾದ್ರಿ ಏರಲು 524 ಮೆಟ್ಟಿಲುಗಳು ಇದ್ದು, ಹೋಗಿ, ಬರಲು ಒಂದೇ ಮಾರ್ಗ ಇರುವುದರಿಂದ ಅಪಾಯ ಸಂಭವಿಸುವ, ಕಾಲ್ತುಳಿತ ಉಂಟಾಗುವ ಭಯವಿದೆ. ಪ್ರತಿ ಶನಿವಾರ ಹನುಮಪ್ಪ ವಾರವಾಗಿರುವುದರಿಂದ 10 ಸಾವಿರಕ್ಕೂ ಅಧಿಕ ಭಕ್ತರು ದರ್ಶನಕ್ಕೆ ಬರುತ್ತಾರೆ. ಅಲ್ಲದೆ ಹುಣ್ಣಿಮೆ, ಅಮವಾಸ್ಯೆಯಂದು ಈ …

Read More »

ಚೀಟಿ‌ ಹೆಸರಿನಲ್ಲಿ ಲಕ್ಷಾಂತರ ರೂ. ಮೋಸ ಮಾಡಿರುವ ಘಟನೆ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಾಗಿದೆ.

ಶಿವಮೊಗ್ಗ: ಚೀಟಿ‌ ಹೆಸರಿನಲ್ಲಿ ಬಿಸಿ ಊಟ ತಯಾರಕರಿಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಸಾಗರ ತಾಲೂಕಿನ ಜೋಗದಲ್ಲಿ ನಡೆದಿದೆ.‌ ಸಾಗರ ತಾಲೂಕಿನ ಜೋಗದ ಶಾಲೆಯಲ್ಲಿ ಬಿಸಿ ಊಟ ತಯಾರು ಮಾಡುವ ಶಿವಮ್ಮ ಹಾಗೂ ಶೋಭಾ ಮೋಸ ಹೋದವರು. ಜೋಗದ ದೇವಿಕಾ ಹಾಗೂ ಅವರ ಮಗ ಚಂದನ್ ಚೀಟಿ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ಜೋಗದ ಟಿ.ಎಂ.ಶೆಡ್ ನಲ್ಲಿ ವಾಸವಾಗಿರುವ ದೇವಿಕಾ ಹಾಗೂ ಅವರ ಮಗ ಚಂದನ್, …

Read More »

ಗುಜರಾತ್‌ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಬಾಯಲ್ಲಿ ಕನ್ನಡ- ಕಕ್ಷಿದಾರ ಕಕ್ಕಾಬಿಕ್ಕಿ

ಅಹಮದಾಬಾದ್: ಹೈಕೋರ್ಟ್‌ ಸೇರಿದಂತೆ ಎಲ್ಲಾ ನ್ಯಾಯಾಲಯಗಳಲ್ಲಿಯೂ ಆಯಾ ರಾಜ್ಯಗಳ ಭಾಷೆಗಳನ್ನೇ ಕಡ್ಡಾಯ ಮಾಡಬೇಕು ಎಂದು ಕೆಲ ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಅಧೀನ ಕೋರ್ಟ್‌ಗಳಲ್ಲಿ ಈ ನಿಯಮ ಪಾಲನೆ ಮಾಡುತ್ತಿದ್ದಾರೆಯಾದರೂ ಹೈಕೋರ್ಟ್‌ಗಳಲ್ಲಿ ಇದು ಕಷ್ಟ. ಇದಕ್ಕೆ ಕಾರಣ, ಬೇರೆ ಬೇರೆ ರಾಜ್ಯಗಳಿಂದ ಸ್ಥಳೀಯ ನ್ಯಾಯಮೂರ್ತಿಗಳು ನೇಮಕಗೊಳ್ಳುವ ಕಾರಣದಿಂದಾಗಿ ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಇಂಗ್ಲಿಷ್‌ ಬಳಕೆ ಮಾಡಲಾಗುತ್ತಿದೆ. ಅಪರೂಪ ಪ್ರಕರಣಗಳಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು ಅದೇ ರಾಜ್ಯದವರಾಗಿದ್ದು, ಅಲ್ಲಿಯ ಭಾಷೆ ಬರುತ್ತಿದ್ದರೆ ಸ್ಥಳೀಯ …

Read More »

ಭಾರತದಲ್ಲಿ ಮತ್ತೆ ಕೊರೊನಾ ಸ್ಪೋಟ : ಒಂದೇ ದಿನ 1,79,723 ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ (Corona Virus) ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,79,723 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1,79,723 ಕೊರೊನಾ ಕೇಸ್ ಪತ್ತೆಯಾಗಿದ್ದು, 146 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 483,936 ಏರಿಕೆಯಾಗಿದೆ.

Read More »

ರಸ್ತೆ ಬಂದ್‌ ಮಾಡಿ ಮಹಾರಾಷ್ಟ್ರ ಸಂಪರ್ಕ ಕಡಿತ; ಕರ್ಫ್ಯೂ ಯಶಸ್ವಿ

ಚಿಕ್ಕೋಡಿ: ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ನೆರೆಯ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಗಡಿ ಭಾಗದ ಕಾರದಗಾ-ರೇಂದಾಳ ರಸ್ತೆಯನ್ನು ತಾಲೂಕು ಆಡಳಿತ ಬಂದ್‌ ಮಾಡಿದೆ. ಮಹಾರಾಷ್ಟ್ರ ಗಡಿ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ನಿಪ್ಪಾಣಿ ತಾಲೂಕಿನ ಗಡಿ ಭಾಗದಲ್ಲಿ ಮಹಾರಾಷ್ಟ್ರ ಜನ ಬರದಂತೆ ರಸ್ತೆ ಮೇಲೆ ಮಣ್ಣಿನ ಒಡ್ಡು ಹಾಕಿ ಬಂದ್‌ ಮಾಡಿದ್ದಾರೆ.   ಕಾರದಗಾ ಸಾರ್ವಜನಿಕರು ಮತ್ತು ಪೊಲೀಸರ ಸಹಕಾರದಿಂದ ರಸ್ತೆ ಬಂದ್‌ ಮಾಡಿರುವುದಾಗಿ ಕಾರದಗಾ ಗ್ರಾಮದ …

Read More »

ನ್ನ ಮಗಳು ವಿದೇಶದಲ್ಲಿ ಓದ್ತಾ ಇದ್ದಾಳೆ, ಮಿನಿಸ್ಟರ್ ಮಗನ ಬ್ಲಾಕ್ ಮೇಲ್ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ – ಇಂಡಿ ಶಾಸಕ

ವಿಜಯಪುರ: ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಗೆ ಬ್ಲ್ಯಾಕ್ ಮೇಲ್ ಸಂಬಂಧ ಶಾಸಕರ ಪುತ್ರಿಯ ಪಾತ್ರವಿದೆ ಎನ್ನಲಾಗುತ್ತಿತ್ತು. ಆದ್ರೇ.. ನನ್ನ ಮಗಳ ಯಾವುದೇ ಪಾತ್ರವಿಲ್ಲ. ಆಕೆ ವಿದೇಶದಲ್ಲಿ ಓದುತ್ತಾ ಇದ್ದಾಳೆ. ಸಿಸಿಬಿಗೆ ಎಲ್ಲಾ ಮಾಹಿತಿ ತಿಳಿಸಿರೋದಾಗಿ ಇಂಡಿ ಶಾಸಕರ ಯಶವಂತರಾಯಗೌಡ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.   ಈ ಬಗ್ಗೆ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಅವರು, ನನ್ನ ಮಗಳು ವಿದೇಶದಲ್ಲಿ ಓದುತ್ತಿದ್ದಾಳೆ. ಆಕೆ ಬಳಸುತ್ತಿದ್ದಂತ ಸಿಮ್ ಅನ್ನು ಅವಳ ಸ್ನೇಹಿತನ …

Read More »

ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಪತಿ

ಸಿರಿಗೆರೆ: ಸಮೀಪದ ಕೋಣನೂರು ಗ್ರಾಮದಲ್ಲಿ ಡಿ.25ರಂದು ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಪ್ರಕರಣ ಸಂಬಂಧ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೊಣನೂರು ಗ್ರಾಮದ ಆರ್. ನಾರಪ್ಪ (40) ಬಂಧಿತ. ಈತ ತನ್ನ ಪತ್ನಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ (26) ಅವರನ್ನು ಕೊಲೆ ಮಾಡಿದ್ದ.   ಶವ ಪತ್ತೆಯಾದ 24 ಗಂಟೆಯೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋ‍‍ಪಿಯನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಡಿವೈಎಸ್ಪಿ ತಂಡ …

Read More »

ಬೆಳಗಾವಿ: ನಿರ್ಜನ ಪ್ರದೇಶದ ಪಾಳುಮನೆಯೊಂದರಲ್ಲಿ ತಲೆ ಛಿದ್ರಗೊಂಡಿದ್ದ ಶವ ಪತ್ತೆ

ಬೆಳಗಾವಿ: ನಿರ್ಜನ ಪ್ರದೇಶದ ಪಾಳುಮನೆಯೊಂದರಲ್ಲಿ ತಲೆ ಛಿದ್ರಗೊಂಡಿದ್ದ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಪ್ರಕರಣ ಇದಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಇರುವ ಪಾಳು ಬಿದ್ದಿರುವ ಮನೆಯಲ್ಲಿ ಶವವೊಂದು ಪತ್ತೆಯಾಗಿದ್ದು, ತಲೆ ಬಹುತೇಕ ಛಿದ್ರಗೊಂಡಿದೆ. ಆಟೋ ಚಾಲಕ ನೂಹಾನ್​ ಧಾರವಾಡಕರ್​ (23) ಎಂಬಾತ ಕೊಲೆಗೀಡಾದವ ಎಂಬುದು ಪತ್ತೆಯಾಗಿದೆ. ಈತ ಕಳೆದ …

Read More »

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಅಂತ್ಯ : ಸಹಜ ಸ್ಥಿತಿಗೆ ಜನಜೀವನ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ ವೀಕೆಂಡ್ ಕರ್ಪ್ಯೂ ಗೆ ಇಂದು ಬೆಳಗ್ಗೆ 5 ಗಂಟೆಗೆ ಅಂತ್ಯವಾಗಿದ್ದು, ಜನಜೀವನ, ವ್ಯಾಪಾರ, ವಹಿವಾಟು ಸಹಜಸ್ಥಿತಿಗೆ ಬರಲಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ ವೀಕೆಂಡ್ ಕರ್ಪ್ಯೂ ಇಂದು ಮುಂಜಾನೆ 5 ಗಂಟೆಗೆ ಅಂತ್ಯವಾಗಿದ್ದು, ಇಂದಿನಿಂದ ಶುಕ್ರವಾರ ರಾತ್ರಿಯವರೆಗೆ ಜನಜೀವನ ಸಹಜ ಸ್ಥಿತಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ನೈಟ್ ಕರ್ಪ್ಯೂ …

Read More »

ಕೊರೊನಾ ಸ್ಪೋಟ: ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್​ಡೌನ್​ ಘೋಷಣೆ..!

ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳು ಈಗ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿವೆ. ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ನಿಯಮಗಳನ್ನು ರೂಪಿಸಿವೆ ಮತ್ತು ಜಿಲ್ಲಾವಾರು ನಿರ್ಬಂಧಗಳನ್ನು ಹೇರಿವೆ. ತಮಿಳುನಾಡಿನಲ್ಲಿ, ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಡುವೆ ಚೆನ್ನೈನಲ್ಲಿ ಇಂದು ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ರಾತ್ರಿ ಕರ್ಫ್ಯೂ, ಶಾಲಾ ಕಾಲೇಜುಗಳನ್ನು ಮುಚ್ಚುವುದು, ಕೆಲಸದ ಸ್ಥಳವನ್ನು ಅರ್ಧದಷ್ಟು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆಯಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಂತಹ ಹಲವಾರು ಕ್ರಮಗಳನ್ನು …

Read More »