ರಾಜ್ಯ ರಾಜಕಾರಣದಲ್ಲಿ ಮಹತ್ವದ ಭಾಷ್ಯ ಬರೆಯುವ ಬೆಳಗಾವಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಜೆಪಿಯದ್ದೇ ಪಾರುಪತ್ಯ. ಕಾಂಗ್ರೆಸ್ ನಾಯಕರು ಕಮಲದ ಭದ್ರಕೋಟೆಯನ್ನು ಅದೆಷ್ಟೋ ಬಾರಿ ಭೇದಿಸಲು ಹೊರಟರೂ ಅದು ಸಾಧ್ಯವಾಗಿರಲಿಲ್ಲ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನಿಂದಾಗಿ, ಪಕ್ಷದ ವರಿಷ್ಠರಿಗೆ ರಾಜ್ಯದ ಹಲವು ನಾಯಕರು ಉತ್ತರ ಕೊಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ಜಿಲ್ಲೆಯ ಬಿಜೆಪಿ ಇಬ್ಬಾಗದತ್ತ ಸಾಗುತ್ತಿದ್ದು, ರಮೇಶ್ ಜಾರಕಿಹೊಳಿ ವಿರುದ್ದ ಸ್ವಪಕ್ಷೀಯರು ದೆಹಲಿ ಮಟ್ಟಕ್ಕೆ ದೂರು ಕೊಡಲು …
Read More »Yearly Archives: 2022
ಒಂದ ಲಕ್ಷ ಕೊಟ್ಟರ ಐದು ಲಕ್ಷ ಕೊಡ್ತಿದ್ದ ಡಕಾಯಿತರು ಅಂದರ್
ಬೆಂಗಳೂರು: ಹಣ ಡಬಲ್ ಮಾಡಿಕೊಡುವುದಾಗಿ ವಂಚಿಸುತ್ತಿದ್ದ ಗುಂಪನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು(Karnataka Police) ಬಂಧಿಸಿದ್ದಾರೆ. ನಟರಾಜ್, ಬಾಲಾಜಿ, ವೆಂಕಟೇಶ, ರಾಕೇಶ್ ಬಂಧಿತ ಆರೋಪಿಗಳು. ನಕಲಿ ನೋಟಿನ ಕಂತೆ ಮೊಬೈಲ್‌ನಲ್ಲಿ(Mobile) ವಿಡಿಯೋ ಮಾಡಿ ಹೂಡಿಕೆದಾರರಿಗೆ ತೋರಿಸಿ ಆಫರ್ ನೀಡುತ್ತಿದ್ದ ಆರೋಪಿಗಳು, ಕೆಲವೇ ದಿನಗಳಲ್ಲಿ ಹಣ(Money) ಡಬಲ್ ಮಾಡಿಕೊಡುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಹೂಡಿಕೆದಾರರು ಹಣ ಕೊಡಲು ಹೋದಾಗ ಕಸಿದು ಪರಾರಿಯಾಗುತ್ತಿದ್ದರು. ಸದ್ಯ ಆರೋಪಿಗಳಿಂದ 20 ಕೋಟಿ ಮೊತ್ತದ ನಕಲಿ ನೋಟು, 2 …
Read More »ಹದಗೆಟ್ಟ ಪೊಲೀಸ್ ಆಡಳಿತ ವ್ಯವಸ್ಥೆ: ನ್ಯಾಯಕ್ಕಾಗಿ ಕನ್ನಡಿಗ ಪೊಲೀಸರು ಕೋರ್ಟ್ ಮೊರೆ
ಬೆಂಗಳೂರು, ಜ. 29: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ನಿಯಮ ಬಾಹಿರ ತೀರ್ಮಾನಗಳು, ಕನ್ನಡ ವಿರೋಧಿ ನೀತಿ ಅವರನ್ನೇ ಪೇಚಿಗೆ ಸಿಲುಕಿಸುತ್ತಿವೆ. ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸುತ್ತಿರುವ ಡಿಜಿಪಿ ಪ್ರವೀಣ್ ಸೂದ್ ಅವರ ವಿರುದ್ಧ ಪದೇ ಪದೇ ನ್ಯಾಯಾಂಗ ನಿಂದನೆ ನೋಟಿಸ್‌ಗಳು ಜಾರಿಯಾಗಿ ಡಿಜಿಪಿ ಕಚೇರಿ ಕದ ತಟ್ಟುತ್ತಿವೆ. ವರ್ಗಾವಣೆ, ಬಡ್ತಿ, ಐಪಿಎಸ್ ನಾನ್ ಐಪಿಎಸ್ ಹುದ್ದೆಗಳ ಹಂಚಿಕೆ ಸೇರಿದಂತೆ ಪೊಲೀಸ್ ಆಡಳಿತ ವ್ಯವಸ್ಥೆಗೆ ಸಂಬಂಧಸಿದಂತೆ ಡಿಜಿಪಿ …
Read More »ಯಶ್‌ಗಾಗಿ ಬರ್ತಿದ್ದಾಳೆ ಬಾಲಿವುಡ್ ಬೆಡಗಿ
ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಹೀರೋ. ಅವರ ಸಿನಿಮಾ ಬರ್ತಿದೆ ಅಂದರೆ ಭಾರತದಾದ್ಯಂತ ಪ್ರೇಕ್ಷಕರು ಕಾದು ಸಿನಿಮಾ ನೋಡ್ತಾರೆ. ಭಾರತದಾದ್ಯಂತ ಯಶ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದ ನಂತರ ಯಶ್ ಅವರು ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದು ಸೌತ್ ಇಂಡಿಯಾ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಈಗ ಎಲ್ಲರೂ ಯಶ್ ಅವರನ್ನು ಕೆಜಿಎಫ್2 ಚಿತ್ರದಲ್ಲಿ ಕಣ್ತುಂಬಿಕೊಳ್ಳು ಕಾಯುತ್ತಿದ್ದಾರೆ. ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಈಗ …
Read More »ಬಿಜೆಪಿ-ಜೆಡಿಎಸ್‌ನಿಂದ ಷರತ್ತುಗಳಿಲ್ಲದೇ ಕಾಂಗ್ರೆಸ್‌ಗೆ ಸೇರಲು ಎಲ್ಲರಿಗೂ ಅವಕಾಶ : ಮಾಜಿ ಸಿಎಂ ಸಿದ್ದರಾಮಯ್ಯ
ಬಾಗಲಕೋಟೆ : ಯಾರೇ ಪಕ್ಷ ಸೇರಿದರೂ ಸ್ವಾಗತ. ಆದರೆ, ಯಾವುದೇ ಷರತ್ತುಗಳು ಹಾಕುವಂತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರಬೇಕು. ಇದಕ್ಕೆಲ್ಲಾ ಸಿದ್ಧವಾಗಿದ್ದರೆ ಮಾತ್ರ ಪಕ್ಷಕ್ಕೆ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸೇರಲು ಬಿಜೆಪಿ ಮತ್ತು ಜೆಡಿಎಸ್ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಮಾತ್ರ ಹೇಳಲ್ಲ. ನಾವು ಯಾವಾಗಲೂ ಚುನಾವಣೆಗೆ ಸಿದ್ಧರಿದ್ದೇವೆ. ವಿಧಾನಸಭೆಗೂ ರೆಡಿ ಇದ್ದೇವೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ …
Read More »ಕರ್ನಾಟಕ ರತ್ನ ಅಪ್ಪು ಅಗಲಿ 3 ತಿಂಗಳು..ಸಸಿ ನೆಟ್ಟು ಭಾವುಕರಾದ ರಾಘಣ್ಣ
ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಮೂರು ತಿಂಗಳು ಕಳೆದಿದೆ. ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿದ್ದರು. ಪುನೀತ್ ರಾಜ್ ಕುಮಾರ್ ನಿಧನರಾಗಿ ಮೂರು ತಿಂಗಳು ಕಳೆದ ಹಿನ್ನೆಲೆ, ಪುನೀತ್ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಸಮಾಧಿ ಬಳಿ ಅಶ್ವಿನಿ ಪುನೀತ್ ರಾಜ್ಕುಮಾರ್, ಪುತ್ರಿ ಧೃತಿ , ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಪತ್ನಿ …
Read More »ಗೋಕಾಕ್‌ನಲ್ಲಿ ಅಭಿವೃದ್ಧಿ ಆಗಿಲ್ಲ ಎಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೇನಿ: ರಮೇಶ್ ಜಾರಕಿಹೊಳಿ
ಅಥಣಿ: ಗೋಕಾಕ್ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಅಂದ್ರೆ ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಥಣಿ ತಾಲೂಕಿನ ರಡ್ಡೆರಹಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, ಗೋಕಾಕ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮನ ಬಂದಂತೆ ಮಾತಾಡುತ್ತಾರೆ. ಅವರಿಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ, ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎಂದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಇತ್ತಿಚಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ …
Read More »ರಾಜ್ಯದ ಪ್ರತಿ ಗಾಮದಲ್ಲೂ ಗೋಶಾಲೆ ಆರಂಭಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದೆ.
ರಾಜ್ಯದ ಪ್ರತಿ ಗಾಮದಲ್ಲೂ ಗೋಶಾಲೆ ಆರಂಭಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದೆ. ವಿಚಾರಣೆ ವೇಳೆ ಸರ್ಕಾರಿ ವಕೀಲರು, ‘ಪ್ರತಿ ತಾಲ್ಲೂಕು ಮಟ್ಟದಲ್ಲೂ ಗೋಶಾಲೆಗಳನ್ನು ತೆರೆಯಲಾಗಿದ್ದು, ಒಟ್ಟು 197 ಗೋಶಾಲೆಗಳಿಗೆ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಿದರೆ ಸಾಕಾಗುವುದಿಲ್ಲ. ಜಿಲ್ಲೆ ಹಾಗೂ ತಾಲ್ಲೂಕು ಮಾತ್ರವಲ್ಲದೆ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ಗೋ ಶಾಲೆ ತೆರೆಯಬೇಕು’ ಎಂಬ ಮೌಖಿಕ ಅಭಿಪ್ರಾಯ …
Read More »ಹೈಕೋರ್ಟ್ ರಿಜಿಸ್ಟ್ರಾರ್ ವಿರುದ್ಧ ದಾವೆ; ಅರ್ಜಿದಾರರಿಗೆ ₹ 11 ಲಕ್ಷ ದಂಡ
ಬೆಂಗಳೂರು : ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ. ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ದಂಡದ ಮೊತ್ತವನ್ನು 8 ವಾರಗಳಲ್ಲಿ ವಕೀಲರ ಪರಿಷತ್ತಿಗೆ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ದಂಡದ ಮೊತ್ತ ಪಾವತಿಸದೇ ಹೋದಲ್ಲಿ ಜಿಲ್ಲಾಧಿಕಾರಿಗಳು ದಂಡ ವಸೂಲಿಗೆ ಕ್ರಮ ಕೈಗೊಳ್ಳಬೇಕು. ದಂಡದ ಮೊತ್ತ ಪಾವತಿಯಾಗದಿದ್ದರೆ ವಕೀಲರ ಪರಿಷತ್ತು ಅರ್ಜಿದಾರರ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಬಹುದು’ ಎಂದು ಆದೇಶಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು 2021ರ ಮೇ 19ರಂದು ಏಕಸದಸ್ಯ …
Read More »ತಜ್ಞರ ಜೊತೆ ಇಂದು ಸಿಎಂ ಸಭೆ: ಕೋವಿಡ್ ನಿರ್ಬಂಧ ಸಡಿಲಿಕೆ?
ಬೆಂಗಳೂರು: ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿಗಳ ಕುರಿತು ಅವಲೋಕನ ನಡೆಸಲು ತಾಂತ್ರಿಕ ಸಮಿತಿಯ ಸದಸ್ಯರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಶನಿವಾರ) ಸಭೆ ನಡೆಸಲಿದ್ದಾರೆ. ರಾತ್ರಿ ಕರ್ಫ್ಯೂ ಸಡಿಲಿಕೆ, ಬೆಂಗಳೂರಲ್ಲಿ ಶಾಲೆ ಮತ್ತೆ ಆರಂಭಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಸುದ್ದಿಗಾರರ ಜೊತೆ ಶನಿವಾರ ಬೆಳಿಗ್ಗೆ ಮಾತನಾಡಿದ ಮುಖ್ಯಮಂತ್ರಿ, ‘ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಕೋವಿಡ್ ಸ್ಥಿತಿಗತಿಗಳ ವಿವರ ತೆಗೆದುಕೊಂಡು ಕೆಲವು ತೀರ್ಮಾನ ತೆಗೆದುಕೊಳ್ಳಲಾಗುವುದು’ …
Read More »