Breaking News

Yearly Archives: 2022

ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ ಎಂದು ಭಾವಿಸುವುದನ್ನು ನಿಲ್ಲಿಸಬೇಕು”

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರದಂದು ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಾ ದೇಶದಲ್ಲಿ ಎರಡು ಭಾರತಗಳಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ‘ಇಂದಿರಾ ಈಸ್ ಇಂಡಿಯಾ’ ನಂಬಿಕೆಯಿಂದ ಹೊರಬರಬೇಕು ಎಂದು ಹೇಳಿದರು.   ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಬಿಜೆಪಿ ಪರವಾಗಿ ಮಾತನಾಡಿದ ನಖ್ವಿ, ‘ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ ಎನ್ನುವ ಭಾವನೆಯಿಂದ ಹೊರಬರಬೇಕು.ಕಾಂಗ್ರೆಸ್ ಎಂದರೆ ದೇಶ ಮತ್ತು ದೇಶ ಎಂದರೆ ಕಾಂಗ್ರೆಸ್ …

Read More »

ಕ್ಯಾನ್ಸರ್ ತಡೆಗೆ ನೀಡುವ ಹೆಚ್‌ಪಿವಿ ಲಸಿಕೆ ಅಭಿಯಾನ ಕೋವಿಡ್‌ನಿಂದಾಗಿ ಸ್ಥಗಿತ..!

ಹೈದರಾಬಾದ್‌: ಜಗತ್ತಿನಲ್ಲಿ ಹೆಚ್ಚಿನ ಸಾವುಗಳ ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್‌ ಕೂಡ ಒಂದು. ಇಂದು ವಿಶ್ವ ಕ್ಯಾನ್ಸರ್‌ ಜಾಗೃತಿ ದಿನವಾಗಿದ್ದು, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಾದ್ಯಂತ ಕ್ಯಾನ್ಸರ್‌ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಸ್ತನ ಕ್ಯಾನ್ಸರ್‌, ಗರ್ಭ ಕ್ಯಾನ್ಸರ್‌, ಶ್ವಾಸಕೋಶ, ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಿವೆ. ಕ್ಯಾನ್ಸರ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಉಪಕ್ರಮವೇ ವಿಶ್ವ ಕ್ಯಾನ್ಸರ್‌ ದಿನವಾಗಿದ್ದು, ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಮೂಡಿಸುವ …

Read More »

ಲವರ್​ಗಳ ದಿನದಂದು ನನಗೆ ಯಾವ ಪಕ್ಷದ ಮೇಲೆ ಲವ್ ಅಂತ ಹೇಳುತ್ತೇನೆ

ಫೆಬ್ರವರಿ 14 ರಂದು (February) ಎಂಎಲ್‌ಸಿ (MLC) ಸ್ಥಾನಕ್ಕೆ ರಾಜೀನಾಮೆ ನೀಡಿ, ಅದೇ ದಿನ  ಮುಂದಿನ ರಾಜಕೀಯ ನಿರ್ಧಾರವನ್ನು ನಾನು ಪ್ರಕಟಿಸುತ್ತೇನೆ, ಆದರೆ ಯಾವುದೇ ಕಾರಣಕ್ಕೂ ಹೊಸ ಪಕ್ಷ ಕಟ್ಟುವುದಿಲ್ಲ. ಮೊದಲು ಜನರ ಅಭಿಪ್ರಾಯವನ್ನು ಕೇಳಿಕೊಂಡು ನಂತರ ಯಾವ ಪಕ್ಷಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತೇನೆ ಎಂದು ಮಾಜಿ ಕಾಂಗ್ರೆಸ್​ ಮುಖಂಡ, ಎಂಎಲ್​ಸಿ ಸಿ.ಎಂ.ಇಬ್ರಾಹಿಂ (C.M Ibrahim)  ಹೇಳಿದ್ದಾರೆ. ಮೈಸೂರಿನಲ್ಲಿ (Mysuru) ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ, ಕರ್ನಾಟಕ ರಾಜ್ಯದಲ್ಲಿ  ಕಾಂಗ್ರೆಸ್‌ನ  (Congress) ಅಧ್ಯಾಯ ಮುಗಿದು ಹೋಗಿದೆ. ಯಾರಿಗೆ ಏನು ಬೇಕೋ ಅದನ್ನು ತಗೊಂಡು ಹೋಗ್ತಿದ್ದಾರೆ. ಮಂಚ, ಬೆಡ್‌, ದಿಂಬು  ಹೀಗೆ ಅವಶ್ಯಕತೆಗೆ ತಕ್ಕಂತೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ನಿಜಕ್ಕೂ ಕನಸಿನ ಮಾತು ಎಂದು ತಮ್ಮ ಹಳೆಯ ಪಕ್ಷದ ಬಗ್ಗೆ ವ್ಯಂಗ್ಯವಾಡಿದ್ದಾರೆ

Read More »

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆ ಖಾಲಿ

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2020 ಮಾರ್ಚ್‌1ರ ವರೆಗೆ 8.72 ಲಕ್ಷ ಹುದ್ದೆಗಳು ಖಾಲಿ ಇದ್ದವು ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ), ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ಮತ್ತು ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿ) 2018-19 ಮತ್ತು 2020-21ರ ಅವಧಿಯಲ್ಲಿ 2.65 ಲಕ್ಷ ನೇಮಕಾತಿಗಳನ್ನು ನಡೆಸಿವೆ ಎಂದೂ ಲಿಖಿತ ಉತ್ತರದಲ್ಲಿ …

Read More »

ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮತ್ತೊಂದು ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕಾರ್ಮಿಕರಿಗೆ ಸ್ವ ಉದ್ಯೋಗ ಮಾಡುವ ದೃಷ್ಟಿಯಿಂದ ಮುಂಬರುವ ಬಜೆಟ್ ನಲ್ಲಿ ಹೊಲಿಗೆಯಂತ್ರ ನೀಡುವ ಯೋಜನೆ ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.   ಈ ಕುರಿತು ಮಾಹಿತಿ ನೀಡಿರುವ ಸಚಿವ ಶಿವರಾಮ ಹೆಬ್ಬಾರ್, ಕಾರ್ಮಿಕರಿಗೆ ಹೊಲಿಗೆ ಯಂತ್ರ ಯೋಜನೆ ಜಾರಿಗೆ 15 ಕೋಟಿ ರೂ. ಮೀಸಲಿಡಲಾಗಿದೆ. …

Read More »

ಮಳೆ ಬಡಿದು ಸೊಸೆಯಾಗಿ ಬಿಜೆಪಿಗೆ ಬಂದ ನಾವು, ಮನೆ‌ ಮಗಳಾಗಿದ್ದೇವೆ: ಬಿ ಸಿ ಪಾಟೀಲ

ಗದಗ: ನಾವು ಬಿಜೆಪಿ ಬಿಡುವ ಚಾನ್ಸೇ ಇಲ್ಲ. ಮಳೆ ಬಡಿದು ಸೊಸೆಯಾಗಿ ಬಿಜೆಪಿಗೆ ಬಂದ ನಾವು ಮನೆ‌ ಮಗಳಾಗಿದ್ದೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ ಪಾಟೀಲ್ ಹೇಳಿದರು.ಗದಗನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಚೇರಿ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 5 ಬೆರಳು ಒಂದೇ ಸಮನಾಗಿ ಇರುವುದಿಲ್ಲ. ಇನ್ನೂ ಐದು ಸಚಿವ ಸ್ಥಾನಗಳು ಖಾಲಿ ಇರುವುದರಿಂದ ಸಚಿವರಾಗಬೇಕೆಂಬ ಆಸೆ ಎಲ್ಲರಿಗೂ ಇರುವುದು ಸಹಜ. ಹೀಗಾಗಿ, …

Read More »

ಬೆಳಗಾವಿ ಎಪಿಎಂಸಿ ‌ಕಾರ್ಯದರ್ಶಿಗೆ ಮುತ್ತಿಗೆ: ಮಳಿಗೆ ವಾಪಸ್ ಪಡೆದು ಹಣ ಮರಳಿಸುವಂತೆ ವ್ಯಾಪಾರಿಗಳ ಒತ್ತಾಯ

ಬೆಳಗಾವಿ: ಎಪಿಎಂಸಿ ಇದ್ದರೂ ಜೈ ಕಿಸಾನ್ ಹೋಲ್​ಸೆಲ್​ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಲೈಸೆನ್ಸ್ ನೀಡಿದ್ದಕ್ಕೆ ಇಲ್ಲಿನ‌ ಎಪಿಎಂಸಿ ‌ಕಾರ್ಯದರ್ಶಿಗೆ ವ್ಯಾಪಾರಸ್ಥರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಎಪಿಎಂಸಿ ಹೋಲ್​ ಸೇಲ್​​ ತರಕಾರಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ತರಕಾರಿ ಮಾರುಕಟ್ಟೆ ಕಾರ್ಯಾರಂಭ‌ ಮಾಡಿದೆ. ಇದರಿಂದ ಇಲ್ಲಿನ‌ ಎಪಿಎಂಸಿ ‌ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ‌ಚರ್ಚಿಸಲು ಬೆಳಗಾವಿ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ ನೇತೃತ್ವದಲ್ಲಿ ‌ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ವಿರುದ್ಧ ಆಕ್ರೋಶ …

Read More »

ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದ್ದಷ್ಟೇ ಇವರ ಸಾಧನೆ’ :ಕಾಂಗ್ರೆಸ್

ಬೆಂಗಳೂರು: ‘ಬಡವರು ‘ಇಂತಿಷ್ಟೇ ತಿನ್ನಬೇಕು’ ಎಂದು ಹಸಿವನ್ನು ನಿಯಂತ್ರಿಸಲು ಹೊರಟ ಜಗತ್ತಿನ ಮೊಟ್ಟ ಮೊದಲ ಸಚಿವರು ಎಂಬ ಹೆಗ್ಗಳಿಕೆ ಉಮೇಶ್‌ ಕತ್ತಿ ಅವರದ್ದು!’ ಎಂದು ಕಾಂಗ್ರೆಸ್ ಆರೋಪಿಸಿದೆ. ‘ಒಬ್ಬರಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಸಾಕು’ ಎಂಬ ಆಹಾರ ಮತ್ತು‌ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಸಮಾಜದ ಹಾಗೂ ಬಡವರ ಕಷ್ಟನಷ್ಟಗಳ ಬಗ್ಗೆ ಕಿಂಚಿತ್ತೂ ಅರಿವಿರದ ಆಹಾರ ಸಚಿವರಿಗೆ ತಿಳಿದಿರುವುದು ಉಡಾಫೆ …

Read More »

ಮಾನವೀಯತೆ ಮೆರೆದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ

ಭದ್ರಾವತಿ: ಕಾರಿನಲ್ಲಿ ಬರುತ್ತಿದ್ದ ಶಾಸಕರು ದ್ವಿಚಕ್ರ ವಾಹನದಿಂದ ಕೆಳಬಿದ್ದಿದ್ದ ದಂಪತಿಯನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ವರ ಅರಳಿಹಳ್ಳಿ ಗ್ರಾಮದಿಂದ ಹಿಂತಿರುಗುತ್ತಿದ್ದ ವೇಳೆ ರೆಡ್ಡಿ ಕ್ಯಾಂಪ್ ವಾಸಿಗಳಾದ ಯತಿರಾಜಲುನಾಯ್ಡು ಮತ್ತು ವಿಜಯಮ್ಮ ದಂಪತಿ ದ್ವಿಚಕ್ರ ವಾಹನದಿಂದ ಬಿದ್ದರು. ಕೂಡಲೇ ಕಾರು ನಿಲ್ಲಿಸಿ ಅವರನ್ನು ಉಪಚರಿಸಿದ ಶಾಸಕರು, ಕೂರಿಸಿ ಮಾತನಾಡಿಸಿದರು. ತಲೆ ಸುತ್ತು ಬಂದು ಬಿದ್ದಿರುವುದಾಗಿ ತಿಳಿಸಿದರು.

Read More »

ಮುಂದಿನ ವಾರ ನೆಲ, ಜಲ, ಭಾಷೆ ಸಮಸ್ಯೆಗಳ ನಿವಾರಣೆಗೆ ಕನ್ನಡ ಸಂಘಟನೆಗಳ ಸಭೆ ಕರೆದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ರಾಜ್ಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಮಹತ್ವದ ಸಭೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Ex CM HD Kumaraswamy ) ಅವರು ತಿಳಿಸಿದರು.   ಬಿಡದಿಯ ತಮ್ಮ ತೋಟದಲ್ಲಿ ತಮ್ಮನ್ನು ಭೇಟಿಯಾದ ಕನ್ನಡ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ‘ರಾಜ್ಯವು …

Read More »