ರಾಜ್ಯದ 31 ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲೇ ಹೊಸ ಕಾರು ಸಿಗಲಿದೆ. 9 ಲಕ್ಷ ರೂ. (Ex showroom) ಬೆಲೆಯೊಳಗೆ ಕಾರು ಖರೀದಿಸಲು ಸರ್ಕಾರ ಸಮ್ಮತಿ ನೀಡಿದೆ. ಜಿಲ್ಲೆಗಳಲ್ಲಿ ಓಡಾಟ, ಪ್ರಗತಿ ಪರಿಶೀಲನೆ ನಡೆಸಲು ವಾಹನದ ಅವಶ್ಯಕತೆ ಇರುವುದರಿಂದ ಹೊಸ ಕಾರುಗಳ ಖರೀದಿಗೆ ಸರ್ಕಾರ ಓಕೆ ಎಂದಿದೆ. ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಠೇವಣಿ ಇಟ್ಟಿರುವ ಮೊತ್ತದ ಮೇಲೆ ಆಕರಣೆಯಾಗಿರುವ ಬಡ್ಡಿ ಮೊತ್ತದಿಂದ 279 ಲಕ್ಷ …
Read More »Yearly Archives: 2022
ಕುಡಿತದ ಚಟ.. ಸ್ವಂತ ಮಗಳ ಮೇಲಿನ ಅತ್ಯಾಚಾರಕ್ಕೆ ಸಾಥ್ ನೀಡಿದ ತಾಯಿ: ಕೊನೆಗೆ ಆಗಿದ್ದೇನು..?
ಆನೇಕಲ್ : ಕಟ್ಟಿಕೊಂಡ ಸಂಸಾರವನ್ನು ತ್ಯಜಿಸಿ ಗಂಡನಿಲ್ಲದ ಮಹಿಳೆಯ ಸಹವಾಸ ಮಾಡಿ, ಕುಡಿದ ಮತ್ತಿನಲ್ಲಿ ಆಕೆಯ ಮಗಳನ್ನು ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು, ಮತ್ತು ಅವನಿಗೆ ಸಹಕಾರ ನೀಡಿದ್ದ ಬಾಲಕಿಯ ತಾಯಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೆಹೆಂದಿಪುರ ಮೂಲದ ಮೋಹನ್ ಆಸ್ದಾ ಚೋಟಾ (47), ಹಾಗೂ ತಿಮಲ್ಲಿ ಮೂಲದ ಸೊಂಬರಿ ಮುರುಮು ( 46 ) ಬಂಧಿತ ಆರೋಪಿಗಳು. ಇವರು ಎರಡು ವರ್ಷಗಳ ನಂತರ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಕಳೆದ …
Read More »ಆಂಕರ್ ಅನುಶ್ರೀ ಕಡೆಯಿಂದ ಹೊಸ ಸುದ್ದಿ
ಬೆಂಗಳೂರು: ಕಿರುತೆರೆಯಲ್ಲಿ ಆಂಕರ್ ಆಗಿ ಜನಮನ ಗೆದ್ದಿರುವ ಅನುಶ್ರೀ ಈಗ ಮತ್ತೆ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಈಗಾಗಲೇ ಅವರು ಹೇಳಿಕೊಂಡಿದ್ದರು. ಆಂಕರ್ ಅನುಶ್ರೀ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಕೆಲವು ಸಮಯದ ಬ್ರೇಕ್ ನಂತರ ಮತ್ತೆ ಸಿನಿಮಾ ಲೋಕಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಎಸ್‌ಎಂ ಪಾರ್ತಿಬನ್, ಪುನೀತ್ ಎಚ್. ನಿರ್ಮಾಣದ ಪ್ರಭಾಕರ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಲಾಂಚ್ ಇಂದು ಕಲಾವಿದರ ಸಂಘದಲ್ಲಿ …
Read More »ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ 2 ಮೀನುಗಳು ಬಿದ್ದಿವೆ.
ಮಂಗಳೂರು: ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ 2 ಮೀನುಗಳು ಬಿದ್ದಿವೆ. ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿವೆ ಎಂದು ಮೀನುಗಾರ ಲೋಕೇಶ್ ಬೆಂಗ್ರೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಆಂಗ್ಲ ಭಾಷೆಯಲ್ಲಿ ಫ್ಲೆಯಿಂಗ್ ಫಿಶ್ ಹಾಗೂ ತುಳುವಲ್ಲಿ ಪಕ್ಕಿಮೀನ್ ಎಂದು ಇವನ್ನು ಕರೆಯುತ್ತಾರೆ. ಹಾರುವ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿರುವಂಥ ಮತ್ಸ್ಯ ಪ್ರಭೇದ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ …
Read More »ಬಚ್ಚಲು ಬಾಯಿ ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ರಾಜ್ಯಪಾಲರು, ಸಿಎಂ ವಜಾ ಮಾಡಬೇಕು: ಡಿ ಕೆ ಶಿವಕುಮಾರ್
ಬೆಂಗಳೂರು: ನಮಗೆ ಸಚಿವ ಈಶ್ವರಪ್ಪನವರ ರಾಜೀನಾಮೆ ಬೇಕಾಗಿಲ್ಲ, ರಾಜೀನಾಮೆ ಎನ್ನುವುದು ಬಹಳ ಗೌರವಯುತ ಪದ. ಲಾಲ್ ಬಹದ್ದೂರ್ ಶಾಸ್ತ್ರಿಯಂತವರು ಗೌರವಯುತವಾಗಿ ತಮ್ಮ ಹುದ್ದೆ ತ್ಯಾಗ ಮಾಡಿದವರು. ಬಚ್ಚಲು ಬಾಯಿ ಈಶ್ವರಪ್ಪನವರನ್ನು ರಾಜ್ಯಪಾಲರು, ಸಿಎಂ ಬೊಮ್ಮಾಯಿ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸುತ್ತಿದ್ದಾರೆ. ರಾಷ್ಟ್ರಧ್ವಜ ಕುರಿತು ಹೇಳಿಕೆ ನೀಡಿ ದೇಶಕ್ಕೆ, ದೇಶದ ಘನತೆ-ಗೌರವದ ಸಂಕೇತವಾದ ರಾಷ್ಟ್ರಧ್ವಜಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರು …
Read More »ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ
ಬೆಂಗಳೂರು: ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಐಎಂಎ ಪ್ರಕರಣದ ಕುರಿತು ಪ್ರಶ್ನೆ ಮಾಡಿದರು. ಐಎಂಎ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು ಅಂತ …
Read More »ಯುವಕನ ಮೇಲೆ ಐವರ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನ್ಯೂಗಾಂಧಿ ನಗರದಲ್ಲಿ ನಡೆದಿದೆ.
ಬೆಳಗಾವಿ: ಓರ್ವ ಯುವಕನ ಮೇಲೆ ಐವರ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನ್ಯೂಗಾಂಧಿ ನಗರದಲ್ಲಿ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ನಿನ್ನೆ ನಿನ್ನೆ ರಾತ್ರಿ ಐವರು ಕೈಫ್ ತನ್ವೀರ್ ಬಾಗವಾನ( 20) ಎಂಬಾತನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯಗಳನ್ನು ಕಂಡ ಸ್ಥಳೀಯರು ಕಿರುಚಾಡಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮುಸ್ತಾಕ ಎಂಬಾತನ ನೇತೃತ್ವದಲ್ಲಿ ಕೈಫ್ ತನ್ವೀರ್ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಸದ್ಯ ಗಂಭೀರ ಗಾಯಗೊಂಡಿರುವ …
Read More »ಜನಾರ್ಧನ ರೆಡ್ಡಿ ಹೇಳಿದ್ರೆ ಕಾಂಗ್ರೆಸ್ ಸೇರ್ಪಡೆ; ಸೋಮಶೇಖರ ರೆಡ್ಡಿ
ಬೆಂಗಳೂರು: ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಕಾಂಗ್ರೆಸ್ ಸೇರುವಂತೆ ಪಕ್ಷದ ಸದಸ್ಯರು ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜೊತೆಗೆ ಮಾತನಾಡುವಾಗ ಸೋಮಶೇಖರ ರೆಡ್ಡಿ ಅವರಿಗೆ ಕಾಂಗ್ರೆಸ್ ಸೇರಲು ಆಹ್ವಾನ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನಾರ್ಧನರೆಡ್ಡಿ ಹೇಳಿದರೆ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ತಿಳಿಸಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದರೆ ಸೋದರ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಸೇರ್ತಾರಾ? ಇಲ್ಲವೇ ಕಾಂಗ್ರೆಸ್ ಸ್ನೇಹಿತರು …
Read More »ಅಲ್ಲಾಹು ಅಕ್ಬರ್ ಘೋಷಣೆ ಬಗ್ಗೆ ಪರಿಶೀಲನೆ ನಡೆಸಲಾಗುವುದು: ಡಾ.ಬೋರಲಿಂಗಯ್ಯ
ಬೆಳಗಾವಿ: ವಿಜಯ ಇನ್ಸ್ ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜು ಬಳಿ ಉದ್ವಿಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿಗೆ ಸಂಬಂಧವಿಲ್ಲದ ಯುವಕರು ಬಂದಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಬಿ ಬೋರಲಿಂಗಯ್ಯ ಹೇಳಿದರು. ನಗರದ ವಿಜಯ ಇನ್ಸ್ ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ …
Read More »ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!
ತುಮಕೂರು: ಹಿಜಬ್ ತೆಗೆದು ತರಗತಿಯೊಳಗೆ ಬರಬೇಕು ಎಂಬ ನಿಯಮ ಜಾರಿಯಾಗಿದ್ದರಿಂದ ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ ಕೊಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ನಗರದ ಪುಟ್ಟಸ್ವಾಮಯ್ಯನ ಪಾಳ್ಯದ ಜೈನ್ ಪಿಯು ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಚಾಂದಿನಿ ನಯಾಜ್ ರಾಜೀನಾಮೆ ಕೊಟ್ಟವರು. ಕಳೆದ ಮೂರು ವರ್ಷಗಳಿಂದ ಜೈನ್ ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ಹಲವು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಹಿಜಬ್ ವಿವಾದದಿಂದಾಗಿ ತಮ್ಮ ಧರ್ಮಕ್ಕೆ ಹೆಚ್ಚು ಅಧ್ಯತೆ ಕೊಟ್ಟು, …
Read More »