Breaking News

Yearly Archives: 2022

ಕೋರ್ಟ್‌ನಲ್ಲಿ ದಾಂಧಲೆ ನಡೆಸಿದ ವಕೀಲ ಜಗದೀಶ್‌ಗೆ 2 ಲಕ್ಷ ರೂ. ದಂಡ

ಬೆಂಗಳೂರು: ಪ್ರಕರಣವೊಂದರ ವಿಚಾರಣೆ ವೇಳೆ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ವಕೀಲ ಕೆ.ಎನ್‌. ಜಗದೀಶ್‌ ಕುಮಾರ್‌ ಅವರ ವಿರುದ್ಧ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿರುವ ಹೈಕೋರ್ಟ್‌, ವಕೀಲರಿಗೆ 2 ಲಕ್ಷ ರೂ. ದಂಡ ವಿಧಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಕೆ.ಎನ್‌. ಜಗದೀಶ್‌ ಬೇಷರತ್‌ ಕ್ಷಮೆಯಾಚಿಸಿ ಪ್ರಮಾಣಪತ್ರ …

Read More »

ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಸ್ಸಿನ ಬ್ರೇಕ್ ಫೇಲ್

ಸಂಕೇಶ್ವರ : ಸಂಕೇಶ್ವರ ಪಟ್ಟಣದಿಂದ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ಬಸ್ ನ ಬ್ರೇಕ್ ಫೇಲ್ ಆಗಿ ಚಾಲಕನ ಸಮಯ ಪ್ರಜ್ಞೆ ಯಿಂದ 50 ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಮಂಗಳವಾರ ನಡೆದಿದೆ.   ಸಂಕೇಶ್ವರದ ಪ್ರತಿಷ್ಠಿತ ಹೈಸ್ಕೂಲಿನ ಸುಮಾರು 50 ಮಂದಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ವೃಂದ ಸಂಕೇಶ್ವರ ಘಟಕದ ಸಾರಿಗೆ ಸಂಸ್ಥೆಯ ಬಸ್ ಮೂಲಕ ನೆರೆಯ ಮಹಾರಾಷ್ಟ್ರದ ಪೂನಾ ಬಳಿ …

Read More »

ಅಯ್ಯಪ್ಪ ಸ್ವಾಮಿ ಮಾಲಾಧಾರಣೆಗೆ ತೆರಳುತ್ತಿದ್ದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಗಂಗಾವತಿ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಲು ಹಿರಿಯ ಅಯ್ಯಪ್ಪ ಸ್ವಾಮಿಗಳ ಜತೆ ಕಾರಿನಲ್ಲಿ ಹೊರಟಿದ್ದ ವ್ಯಕ್ತಿಯೊರ್ವರ ಕಾರು ಕಬ್ಬಿನ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.   ತಾಲೂಕಿನ ಶ್ರೀರಾಮನಗರ ಮತ್ತು ಪ್ರಗತಿನಗರದ ಮಧ್ಯೆ ಇರುವ ಹಳ್ಳದ ಬಳಿಯ ಮುಖ್ಯ ರಸ್ತೆಯಲ್ಲಿ ಬುಧವಾರ ಬೆಳಗಿನ‌ ಜಾವ 5;30 ಕ್ಕೆ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು ಶ್ರೀ ರಾಮನಗರದ …

Read More »

ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಸಂಸದ ಧೈರ್ಯಶೀಲ ಮಾನೆ ನಿಯುಕ್ತಿ

ಬೆಳಗಾವಿ: ಗಡಿ ವಿವಾದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ಹಂತದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಗಡಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಸಂಸದ ಧೈರ್ಯಶೀಲ ಮಾನೆ ಅವರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಇಚಲಕರಂಜಿ ಸಂಸದ ಧೈರ್ಯಶೀಲ ಮಾನೆ ಅವರನ್ನು ಅಧ್ಯಕ್ಷರಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ. ನಂತರ ಮಾನೆ ಅವರಿಗೆ ಮುಖ್ಯಮಂತ್ರಿಗಳು ಮುಂಬೈನ ತಮ್ಮ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.   …

Read More »

ಕಣಬರ್ಗಿಯ ಶ್ರೀ ಸಿದ್ದೇಶ್ವರ ದೇವಸ್ಥಾನದ ಸದಸ್ಯರೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಭೆ

ಇಂದು ಕಣಬರ್ಗಿಯ ಶ್ರೀ ಸಿದ್ದೇಶ್ವರ ದೇವಸ್ಥಾನದ ಪಂಚ ಕಮಿಟಿ ಸದಸ್ಯರೊಂದಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿನ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಬರುವ ಸೋಮವಾರದಂದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಆಗಬೇಕಾದಂತಹ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್ ದೀಪ, ಶೌಚಾಲಯ ವ್ಯವಸ್ಥೆ, ಫೇವರ್ಸ್ ಅಳವಡಿಕೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಒದಗಿಸುವ ಕುರಿತು ಚರ್ಚೆ ನಡೆಸಿ ಅಗತ್ಯ …

Read More »

ಪ್ರೌಢಶಿಕ್ಷಣಕ್ಕಾಗಿ ರಾಜ್ಯದತ್ತ ಮುಖ ಮಾಡುವ ಹೊರನಾಡ ಕನ್ನಡಿಗ ವಿದ್ಯಾರ್ಥಿಗಳು

ಬೆಳಗಾವಿ: ಕರ್ನಾಟಕದಲ್ಲಿ ಕನ್ನಡದೊಂದಿಗೆ ಮರಾಠಿ ಮಾಧ್ಯಮ ಶಾಲೆಗಳಿಗೂ ಸರ್ಕಾರ ಸಮಾನ ಸೌಲಭ್ಯ ಕಲ್ಪಿಸುತ್ತಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಈ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ. ರಾಜ್ಯದ ಗಡಿಯಿಂದ ಐದೇ ಕಿ.ಮೀ. ಅಂತರದಲ್ಲಿ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣವಿದೆ. ಉದ್ಯೋಗ ಅರಸಿ ಹೋಗಿ, ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ನೆಲೆಸಿದ್ದಾರೆ. ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ತೆರೆಯಲಾಗಿದೆ. ಆದರೆ, ಪ್ರೌಢಶಿಕ್ಷಣಕ್ಕಾಗಿ ಹೊರನಾಡ ಕನ್ನಡಿಗರ ಮಕ್ಕಳು ಕರ್ನಾಟಕದತ್ತಲೇ …

Read More »

ಚಿತ್ರಕಲಾ ಶಿಲ್ಪಿ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಧಾರವಾಡ: ನಗರದ ಆಲೂರು ಭವನದಲ್ಲಿ ಮಂಗಳವಾರ ಸಂಜೆ ಚಿತ್ರಕಲಾ ಶಿಲ್ಪಿ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ)ಟ್ರಸ್ಟ್‌ ವತಿಯಿಂದ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. 2022ನೇ ಸಾಲಿಗೆ ಕಲಾ ಪ್ರಪಂಚದಲ್ಲಿ ಜೀವಮಾನ ಸಾಧನೆಗಾಗಿ 1ಲಕ್ಷ ನಗದು ಒಳಗೊಂಡ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಹಿರಿಯ ಕಲಾವಿದ ಪಿ.ಸಂಪತ್‌ಕುಮಾರ, 50 ಸಾವಿರ ನಗದು ಒಳಗೊಂಡ ಕುಂಚ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡದ ಎಫ್‌.ವಿ.ಚಿಕ್ಕಮಠ ಅವರಿಗೆ ಪ್ರದಾನ …

Read More »

ಉತ್ತಮ ಬ್ರ್ಯಾಂಡ್‌ ಹೆಸರನ್ನು ಸೂಚಿಸುವ ವಿಜೇತರಿಗೆ ಆಕರ್ಷಕ ಬಹುಮಾನ:KSRTC

ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನೂತನವಾಗಿ ಆರಂಭಿಸಲಿರುವ ಮಲ್ಟಿ ಆಯಕ್ಸೆಲ್‌ ಸ್ಲೀಪರ್ ಮತ್ತು ವಿದ್ಯುತ್‌ ಚಾಲಿತ ಬಸ್‌ಗಳನ್ನು ಪರಿಚಯಿಸುತ್ತಿದ್ದು, ಈ ವಾಹನಗಳಿಗೆ ಪ್ರಯಾಣಿಕರಿಂದ ಬ್ರ್ಯಾಂಡ್‌ ಹೆಸರು ಆಹ್ವಾನಿಸಿದೆ.   ಹೊಸದಾಗಿ ಪರಿಚಯಿಸಲಾಗುತ್ತಿರುವ ಈ ಬಸ್‌ಗಳಿಗೆ ಪ್ರಯಾಣಿಕರು ಬ್ರ್ಯಾಂಡ್‌ ಹೆಸರು, ಟ್ಯಾಗ್‌ಲೈನ್‌ ಹಾಗೂ ಗ್ರಾಫಿಕ್ಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಕಳುಹಿಸಬೇಕು. ಪ್ರತೀ ಮಾದರಿಯ ವಾಹನಗಳಿಗೆ ಉತ್ತಮ ಬ್ರ್ಯಾಂಡ್‌ ಹೆಸರನ್ನು ಸೂಚಿಸುವ ವಿಜೇತರಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವುದು. ಉತ್ತಮ ಬ್ರ್ಯಾಂಡ್‌ ಹೆಸರು ಸೂಚಿಸಿದವರಿಗೆ …

Read More »

ಇಂಗ್ಲೆಂಡ್‌, ಫ್ರಾನ್ಸ್‌ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳೊಂದಿಗೆ ವ್ಯಾಪಾರ-ವಹಿವಾಟು ಸಂಪರ್ಕ ಹೊಂದಿರುವ ಬೆಳಗಾವಿಯ ಫೌಂಡ್ರಿ ಉದ್ಯಮಿಗಳಲ್ಲಿ ಹೊಸ ಭರವಸೆ

ಬೆಳಗಾವಿ: ಇಂಗ್ಲೆಂಡ್‌, ಫ್ರಾನ್ಸ್‌ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳೊಂದಿಗೆ ವ್ಯಾಪಾರ-ವಹಿವಾಟು ಸಂಪರ್ಕ ಹೊಂದಿರುವ ಬೆಳಗಾವಿಯ ಫೌಂಡ್ರಿ ಉದ್ಯಮಿಗಳಲ್ಲಿ ಹೊಸ ಭರವಸೆಯ ಬೆಳಕು ಕಾಣಿಸಿಕೊಂಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಬೆಂಗಳೂರು ನಂತರ ರಾಜ್ಯ ಸರಕಾರಕ್ಕೆ ತೆರಿಗೆ ರೂಪದಲ್ಲಿ ಅತೀ ಹೆಚ್ಚಿನ ಆದಾಯ ನೀಡುತ್ತಿರುವ ಗಡಿ ಜಿಲ್ಲೆ ಬೆಳಗಾವಿ ಮಾಹಿತಿ ತಂತ್ರಜ್ಞಾನ ಮತ್ತು ಫೌಂಡ್ರಿ ಕ್ಷೇತ್ರದಲ್ಲಿ ಹೊಸ ಆಶಾದಾಯಕ ಬೆಳವಣಿಗೆ ನೋಡುತ್ತಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳ ಜೊತೆಗಿನ ಸಭೆ ಈ ಆಶಾದಾಯಕ ಹೆಜ್ಜೆಗೆ ಮುನ್ನುಡಿ ಬರೆದಿದೆ. …

Read More »

ಅಶ್ಲೀಲ ದೃಶ್ಯ ತೋರಿಸಿ ಮರ್ಯಾದೆ ತೆಗೆಯುತ್ತೆನೆ ಎಂದು ಬ್ಲ್ಯಾಕ್​​ಮೇಲ್ ,​ನಿವೃತ್ತ ಅಧಿಕಾರಿಗಳೇ ಟಾರ್ಗೆಟ್​!

ಬೆಂಗಳೂರು: ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ. ಸೈಬರ್​ ಕಳ್ಳರು ಹೊಸ ಮೋಸದ ಅಸ್ತ್ರ ವಾಟ್ಸ್​ಆಯಪ್​ ವಿಡಿಯೋ ಕಾಲ್​ ಬಲೆ ಬೀಸುತ್ತಿದ್ದಾರೆ. ಚಪಲಕ್ಕೆ ಅಶ್ಲೀಲ ವಿಡಿಯೋ ನೋಡಿದರೆ ಸಾಕು ಅದನ್ನೇ ಅಸ್ತ್ರವಾಗಿಟ್ಟುಕೊಂಡು ಬ್ಲ್ಯಾಕ್​​​ಮೇಲ್​ ಮಾಡಿ ಹಣ ಪೀಕುತ್ತಿದ್ದಾರೆ ಹುಷಾರ್​.   ಅದರಲ್ಲಿಯೂ ಇತ್ತೀಚೆಗೆ ನಿವೃತ್ತ ನೌಕರರು ಮತ್ತು ವೃದ್ಧರನ್ನೇ ಟಾರ್ಗೆಟ್​ ಮಾಡುತ್ತಿದ್ದಾರೆ. ೇಸ್​ಬುಕ್​, ಟ್ವಿಟರ್​, ಇನ್​ಸ್ಟ್ರಾಗ್ರಾಂನಲ್ಲಿ ಫ್ರೆಂಡ್​​ ರಿಕ್ವೆಸ್ಟ್​ ಕಳುಹಿಸಿ ಅಥವಾ ನೇರವಾಗಿ ವಾಟ್ಸ್​ಆಯಪ್​ನಲ್ಲಿ ವಿಡಿಯೋ ಕಾಲ್​ ಮಾಡಿ ಯುವತಿಯರು ಸ್ನೇಹ ಬಯಸುತ್ತಾರೆ. ವಿಡಿಯೋ …

Read More »