Breaking News

Yearly Archives: 2022

ಬಸ್ ಇಲ್ಲ ಪಾಠಕ್ಕಿಂತ ಪ್ರತಿಭಟನೆಯೇ ಅನಿವಾರ್ಯ…!

ಸಂಚಾರ ಮಾಡಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಮಸ್ಯೆ ಹೇಳ ತೀರದಾಗಿದೆ. ತರಗತಿಗೆ ಹಾಜರಾಗುವುದಕ್ಕಿಂತ ವಿದ್ಯಾರ್ಥಿಗಳು ಬಸ್ ಸೌಲಭ್ಯಕ್ಕಾಗಿ ಪರದಾಡುತ್ತಿರುವುದೇ ಹೆಚ್ಚಾಗಿದೆ. ಹೌದು.. ಬಸ್‌ಗಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಬ್ಯಾಪೂರ ಗ್ರಾಮದಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಬಸ್ ಬಿಡದ ಸಾರಿಗೆ ಇಲಾಖೆ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆ ಆಗುತ್ತಿದೆ. ಬಸ್ ಬರದ ಕಾರಣ ತರಗತಿಯಿಂದ ದೂರ ಉಳಿಯುತ್ತಿದ್ದೇವೆ. …

Read More »

ಬೆಳೆಸಾಲದ ಪ್ರಮಾಣ ಶೇ.10 ರಷ್ಟು ಹೆಚ್ಚಳ?; D.C. ನಿತೇಶ್ ಪಾಟೀಲ

ಕಳೆದ ಸಾಲಿನಲ್ಲಿ ಶಿಫಾರಸ್ಸು ಮಾಡಲಾಗಿರುವ ಅಲ್ಪಾವಧಿ ಬೆಳೆಸಾಲದ ಪ್ರಮಾಣವನ್ನು 2023-24 ನೇ ಸಾಲಿಗಾಗಿ ಪ್ರತಿಯೊಂದು ಬೆಳೆಗೆ ಶೇ.10ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. 2023-24 ನೇ ಸಾಲಿಗಾಗಿ ಬೆಳೆ ಬೆಳೆಯಲು ಬೆಳೆಸಾಲ ಪ್ರಮಾಣ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ನ.30) ನಡೆದ ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ಸಭೆಯಲ್ಲಿ …

Read More »

ದೇಶಕ್ಕೆ ಅನ್ನಹಾಕುವ ಅನ್ನದಾತನ ಕಷ್ಟ ಹೇಳ ತೀರದಾಗಿದೆ.

ದೇಶಕ್ಕೆ ಅನ್ನಹಾಕುವ ಅನ್ನದಾತನ ಕಷ್ಟ ಹೇಳ ತೀರದಾಗಿದೆ. ಕೃಷಿ ಕಾಯಕದಲ್ಲಿ ತನಗೆ ಸಾಥ್ ನೀಡುತ್ತಿದ್ದ ಸಾರಥಿಯ ಸಂಕಷ್ಟದಿಂದ ಕಣ್ಣೀರು ಹಾಕುವಂತಾಗಿದೆ. ರೈತ ಸಮುದಾಯದ ಜೀವನಾಡಿ ಜಾನುವಾರುಗಳಿಗೆ ಗಂಟು ಬಿದ್ದಿರುವ ಚರ್ಮ ಗಂಟು ರೋಗ ಧಾರವಾಡ ಜಿಲ್ಲೆಯಲ್ಲಿ ಉಲ್ಬಣಗೊಂಡಿದೆ. ಅಷ್ಟಕ್ಕೂ ಏನಿದು ಸಮಸ್ಯೆ ಅಂತೀರಾ ಈ ಸ್ಟೋರಿ ನೋಡಿ.. ಒಕ್ಕಲಿಗ ಒಕ್ಕಿದರೇ ಉಕ್ಕುವುದು ಜಗವೆಲ್ಲ. ಒಕ್ಕಲಿಗ ಒಕ್ಕದಿದ್ದರೇ ಬಿಕ್ಕುವುದು ಜಗವೆಲ್ಲ ಎಂಬುವಂತ ಮಾತು ಅಕ್ಷರಶಃ ಸತ್ಯ. ಆದರೆ ಈಗ ಒಕ್ಕುವ ರೈತನ …

Read More »

ಗಡಿ ವಿಚಾರಣೆ ಸುಪ್ರೀಂಕೋರ್ಟನಲ್ಲಿ ನಡೆಯಲೇ ಇಲ್ಲ..!

ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಇಂದು ಸುಪ್ರೀಂಕೋರ್ಟ್‍ನಲ್ಲಿ ನಡೆಯಬೇಕಿದ್ದ ವಿಚಾರಣೆ ನಡೆದಿಲ್ಲ ಎನ್ನಲಾಗುತ್ತಿದೆ. ಗಡಿ ವಿವಾದದ ಬಗ್ಗೆ ತೀರ್ಪು ಪ್ರಕಟಿಸಬೇಕಾಗಿದ್ದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಸಾಂವಿಧಾನಿಕ ಪೀಠದಲ್ಲಿ ನಿರತರಾಗಿರುವುದರಿಂದ ವಿಚಾರಣೆ ನಡೆಸಲಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇಂದು ಅಂತಿಮ ವಿಚಾರಣೆ ನಡೆದಿಲ್ಲ.

Read More »

ಇಂದಿನ ಯುವ ಜನತೆ ಹಳ್ಳಿ ಶೈಲಿಯ ಸಂಸ್ಕೃತಿ ಅರಿಯಬೇಕು

ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಚಂದನವನ ಕೃಷಿ ಮತ್ತು ನೂತನ ನೀರಾವರಿ ವ್ಯವಸ್ಥೆ ಉದ್ಘಾಟನಾ ಸಮಾರಂಭ ಜರುಗಿತು. ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ ಅದ್ಯಕ್ಷ ರಮೇಶ ಕತ್ತಿ ಚಂದನವನ ಲೋಕಾರ್ಪಣೆ ಮಾಡಿದರು ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಇಂದಿನ ಯುವ ಪಿಳಿಗೆಗೆ ನಮ್ಮ ಹಳ್ಳಿಯ ಜಿವನ ಶೈಲಿ ಪರಿಚಯಿಸುವ ಮತ್ತು ಕಟ್ಟಿಗೆಯಿಂದ ಮಾಡಿದ …

Read More »

ಆರು‌‌ ದಿನಗಳ ಘರಕುಲ ಪ್ರದರ್ಶನಕ್ಕೆ ಅದ್ಧೂರಿ ತೆರೆ

ಬೆಳಗಾವಿಯಲ್ಲಿ ಆಯೋಜಿಸಿರುವ ಘರಕುಲ ಪ್ರದರ್ಶನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರು‌‌ ದಿನಗಳ ಈ ಪ್ರದರ್ಶನಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಬೆಳಗಾವಿಯ ಸಿಪಿಇಎಡ್ ಮೈದಾನದಲ್ಲಿ ರೋಟರಿ ಕ್ಲಬ್ ಆಪ್ ವೇಣುಗ್ರಾಮ, ರೋಟರಿ ವೇಣುಗ್ರಾಮ ಚಾರಿಟೇಬಲ್ ಫೌಂಡೇಶನ್ ಹಾಗೂ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ ಅಸೊಸಿಯೇಷನ್ ಸಹಯೋಗದಲ್ಲಿ ನವೆಂಬರ್ 25ರಿಂದ ನವೆಂಬರ್ 30ರವರೆಗೆ 6 ದಿನಗಳ ಕಾಲ ಆಯೋಜಿಸಲಾಗಿದ್ದ ಘರಕುಲ ರಿಯಲ್ ಎಸ್ಟೇಟ ಮತ್ತು ಕನ್ಸಟ್ರಕ್ಷನ್ ಮಟಿರಿಯಲ್ ಪ್ರದರ್ಶನ ಬುಧವಾರ ಸಮಾರೋಪಗೊಂಡಿತು. ಕಳೆದ ಆರು …

Read More »

ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್ ಸ್ಪರ್ಧೆ:ಅನಿಲ್ ಪೋತದಾರ

ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಪೋತದಾರ ಮಾಹಿತಿ ನೀಡಿದ್ದಾರೆ. ಬುಧವಾರ ಮಹಾಂತೇಶ ನಗರದಲ್ಲಿರುವ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿಲ್ ಪೋತದಾರ ಬೆಳಗಾವಿಯಲ್ಲಿ ಜಿಲ್ಲಾ ಸೈಕ್ಲಿಂಗ್ ಅಸೊಸಿಯೇಷನ್ ಕಾರ್ಯ ನಿರ್ವಹಿಸುತ್ತಿದ್ದು. ಕೆಂಎಫ್ ಜಿಲ್ಲಾಧ್ಯಕ್ಷ ವಿವೇಕರಾವ್ ಪಾಟೀಲ್ ಅವರ ತಂದೆಯವರಾದ ದಿ.ವಿ.ಎಲ್.ಪಾಟೀಲ್ ಅವರು ಈ ಅಸೊಸಿಯೇಷನ್‍ನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ …

Read More »

ಮಹಾರಾಷ್ಟ್ರದತ್ತ ಮುಖ ಮಾಡಿದ ರಾಜ್ಯದ ಕಬ್ಬು ಬೆಳೆಗಾರರು

ಕರ್ನಾಟಕದಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಯೋಗ್ಯಬೆಲೆ ನೀಡದೆ ಇರುವುದರಿಂದ ರಾಜ್ಯದ ಗಡಿ ಭಾಗದ ಕಬ್ಬನ್ನು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ಕಳುಹಿಸುತ್ತಾರೆ. ಕರ್ನಾಟಕ ಬೆಲೆಗೂ ಅಧಿಕ ಬೆಲೆ ನೀಡುತ್ತಿರುವ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಹೀಗಾಗಿ ಕರ್ನಾಟಕದ ಸರ್ಕಾರಕ್ಕೆ ಬರಬೇಕಾದ ಟ್ಯಾಕ್ಸ್ ಮಹಾರಾಷ್ಟ್ರದ ಪಾಲಾಗುತ್ತಿದೆ. ಮಂಡ್ಯ ಜಿಲ್ಲೆಯನ್ನ ಹೊರತು ಪಡಿಸಿದರೆ ಅತಿ ಹೆಚ್ಚಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕಬ್ಬನ್ನು ಬೆಳೆಯುತ್ತಾರೆ. ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಒಂದು ಟನ್ ಕಬ್ಬಿಗೆ ಮೂರು ಸಾವಿರಕ್ಕೂ …

Read More »

ಹೊಸ ಪಡಿತರ ಚೀಟಿ ನೀಡಲು ಸರಕಾರ ಅಸ್ತು

: ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಈಗಾಗಲೇ ಸಲ್ಲಿಸಿ ಬಾಕಿಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸರಕಾರ ಮಂಗಳವಾರ ಆದೇಶಿಸಿದೆ. ರಾಜ್ಯದಲ್ಲಿ ಒಟ್ಟು 1.55 ಲಕ್ಷ ಅರ್ಜಿಗಳು ಅರ್ಹವೆಂದು ಕಂಡುಬಂದಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯ 3,356 ಅರ್ಜಿ ಹಾಗೂ ಉಡುಪಿ ಜಿಲ್ಲೆಯ 4,367 ಅರ್ಜಿಗಳನ್ನು ಅರ್ಹರು ಎಂದು ಸರಕಾರ ಗುರುತಿಸಿದೆ. ಶೀಘ್ರ ಇವರಿಗೆ ಕಾರ್ಡ್‌ ದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಲ್ಲಿಕೆಯಾದ 3,851 ಅರ್ಜಿಗಳ ಪೈಕಿ 3,597 ಅರ್ಜಿಗಳ ಸ್ಥಳ …

Read More »

ಧಾರಾವಿ ಪುನರ್‌ನಿರ್ಮಾಣಕ್ಕೆ ಗೌತಮ್‌ ಅದಾನಿ: 5,069 ಕೋಟಿ ರೂ. ಹೂಡಿಕೆ

ಉದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಪ್ರಾಪರ್ಟೀಸ್‌ಗೆ ಭಾರತದ ದೊಡ್ಡ ಪುನರ್‌ನಿರ್ಮಾಣ ಯೋಜನೆಗಳಲ್ಲಿ ಒಂದಾಗಿರುವ ಧಾರಾವಿ ಪುನರ್‌ನಿರ್ಮಾಣ ಯೋಜನೆಯ ಟೆಂಡರ್‌ ಸಿಕ್ಕಿದೆ. ಮುಂಬಯಿಯಲ್ಲಿರುವ ಧಾರಾವಿ ಕೊಳೆಗೇರಿಯು ಏಷ್ಯಾದಲ್ಲೇ ಎರಡನೇ ಅತೀ ದೊಡ್ಡ ಕೊಳೆಗೇರಿ ಆಗಿದೆ. ಕೊಳೆಗೇರಿಯ ಪುನರ್‌ನಿರ್ಮಾಣಕ್ಕೆ ಅದಾನಿ ಪ್ರಾಪರ್ಟೀಸ್‌ 5,069 ಕೋಟಿ ರೂ. ಹೂಡಿಕೆ ಮಾಡಲಿದೆ. ಡಿಎಲ್‌ಎಫ್ ಸೇರಿದಂತೆ ಜಗತ್ತಿನ ಎಂಟು ನಿರ್ಮಾಣ ಕಂಪೆನಿ ಗಳು ಬಿಡ್‌ನ‌ಲ್ಲಿ ಭಾಗವಹಿಸಿದ್ದವು. ಯೋಜನೆಗಾಗಿ ಸರಕಾರ 1,600 ಕೋಟಿ ರೂ.ಗಳನ್ನು ಬಿಡ್‌ ಮೊತ್ತವಾಗಿ …

Read More »