ಬೆಂಗಳೂರು, ನವೆಂಬರ್ 30: ಪ್ರಯಾಣಿಕರಿಗೆ ಟಿಕೆಟ್ ನೀಡಲು ನಿಲುಗಡೆ ಏಜೆಂಟ್‌ಗಳಿಲ್ಲದ ಕಾರಣ ಬೆಂಗಳೂರು ವಿಭಾಗದ ದೊಡ್ಡಜಾಲ, ಆವತಿಹಳ್ಳಿ ಸೇರಿದಂತೆ ಆರು ನಿಲುಗಡೆ ನಿಲ್ದಾಣಗಳು ಡಿಸೆಂಬರ್ 1 ರಿಂದ ಮುಚ್ಚಲಿವೆ. ಮುಚ್ಚಲಿರುವ ಇತರ ನಿಲ್ದಾಣಗಳೆಂದರೆ ಕೋಲಾರ ಸಮೀಪದ ಹುಡುಕುಲ ಮತ್ತು ಜನ್ನಗಟ್ಟಾ, ಚಿಕ್ಕಬಳ್ಳಾಪುರದ ಗಿಡ್ನಹಳ್ಳಿ ಮತ್ತು ಆಂಧ್ರಪ್ರದೇಶದ ಕೊಟ್ಟಚೆರುವು. ಈ ನಿಲ್ದಾಣಗಳನ್ನು ಮುಚ್ಚಲು ಕಾರಣಗಳ ಬಗ್ಗೆ ಕೇಳಿದಾಗ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ನಿಲ್ದಾಣಗಳಲ್ಲಿ ಪ್ರೋತ್ಸಾಹದ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು. …
Read More »Yearly Archives: 2022
ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ಡಿ. 24ರಿಂದ
ಧಾರವಾಡ: ‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನ ಡಿ. 24ರಿಂದ ಮೂರು ದಿನಗಳ ಕಾಲ ದಾವಣಗೆರೆಯಲ್ಲಿ ನಡೆಯಲಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಹೇಳಿದರು. ‘1904ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಸ್ಥಾಪನೆಗೊಂಡ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಸದ್ಯ 1.75ಲಕ್ಷ ಸದಸ್ಯರಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಮಹಾಸಭಾ ತನ್ನ ಭವನಗಳನ್ನು …
Read More »ಆರ್‌ಎಸ್‌ಎಸ್‌ನವರು ಕಳ್ಳರು, ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ
ಮೈಸೂರು: ‘ಆರ್‌ಎಸ್‌ಎಸ್‌ನವರು ಕಳ್ಳರು, ಸುಳ್ಳು ಹೇಳುತ್ತಾರೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡಸಿದರು. ಕರ್ನಾಟಕ ಪ್ರದೇಶ ಕುರುಬರ ಸಂಘ ನಗರ, ತಾಲ್ಲೂಕು ಹಾಗೂ ಜಿಲ್ಲಾ ಘಟಕದಿಂದ ಇಲ್ಲಿನ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ಬದಲಾವಣೆ ಬಯಸುವುದಿಲ್ಲ. ಆರ್‌ಎಸ್‌ಎಸ್‌ನವರು ಬದಲಾವಣೆ ಬೇಡ ಎನ್ನುತ್ತಾರೆ. ಶೋಷಣೆ, ದೌರ್ಜನ್ಯ ಮಾಡುವುದಕ್ಕಾಗಿ ಅಸಮಾನತೆ ಇರಲೆಂದು ಬಯಸುತ್ತಾರೆ. ಮುಸ್ಲಿಮರನ್ನು ಬೆದರುಬೊಂಬೆಯಾಗಿ …
Read More »ಶಾಹಪುರ ಸಂತ್ರಸ್ತರ ಜೂಗುಳ ಪಂಚಾಯಿತಿ ಮುಂದೆ ಬೃಹತ್ ಪ್ರತಿಭಟನೆ
ಕಾಗವಾಡ ತಾಲೂಕಿನ ಕೃಷ್ಣನದಿ ತೀರದ ಜೂಗುಳ ಗ್ರಾಮ ಪಂಚಾಯಿತಿ ವ್ಯಾಪತ್ತಿಯ ಶಹಾಪೂರ ಗ್ರಾಮ ಸಂಪೂರ್ಣವಾಗಿ 2019 ಹಾಗು 2021 ರಲ್ಲಿಯ ಮಹಾಪೂರ ನೀರಿನಲ್ಲಿ ಮುಳುಗಡೆಯಾಗಿ ಗ್ರಾಮದಲ್ಲಿ ದೋಣಿಯಿಂದ ಸಂಚರಿಸಿದರು. ಮನೆಗಳು ನೀರಿನಲ್ಲಿ ಮುಳುಗಡೆವಾಗಿದವು ಎಂದು ಪರಿಗಣಿಸಿ ಪ್ರತಿಯೊಂದು ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನ ನೀಡಿದರು. ಆದರೆ ಈಗ ರಾಜ್ಯ ಸರ್ಕಾರ ಗ್ರಾಮಗಳಲ್ಲಿ ಮನೆಗಳು ಮುಳುಗಡೆವಾಗೆಯಿಲ ಎಂದು ಹೇಳಿ 92 ಕುಟುಂಬದವರಿಗೆ ಸಿ ವರ್ಗದಲ್ಲಿ ವರ್ಗಾಯಿಸಿ ಸರ್ಕಾರದಿಂದ ಮನೆಗಳು …
Read More »ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿದರು. ಅವರು ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಕಳಸಾ ಬಂಡೂರಿ ಯೋಜನೆ ಹಾಗೂ ಮೇಕೆದಾಟು ಯೋಜನೆಗಳ ಕುರಿತು ಚರ್ಚೆ ನಡೆಸಿದರು. ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ದೊರೆಯ ಬೇಕಾದ ತೀರುವಳಿಗಳನ್ನು ಶೀಘ್ರವೇ ಒದಗಿಸುವಂತೆ ಮುಖ್ಯಮಂತ್ರಿಗಳು …
Read More »ಮ.ಹಾ. ಸಚಿವರು ಬೆಳಗಾವಿಗೆ ಆಗಮಿಸಿದ್ರೆ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವೇ ಹೊಣೆ: ದೀಪಕ ಗುಡಗನಟ್ಟಿ ಎಚ್ಚರಿಕೆ
ಡಿ.3ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಆಗಮಿಸಿದ್ರೆ ಆ ಸಂದರ್ಭದಲ್ಲಿ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವೇ ಹೊಣೆ ಆಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಬುಧವಾರ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪದಾಧಿಕಾರಿಗಳು ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು. …
Read More »ರಸ್ತೆಯಲ್ಲಿ ಹೋಗೋ ನಾಯಿ ಕೂಡ ಜೆಡಿಎಸ್ ಗೆ ಹೋಗಲ್ಲ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ, ನ.30: ‘ರಸ್ತೆಯಲ್ಲಿ ಹೋಗೋ ನಾಯಿ ಕೂಡ ಜೆಡಿಎಸ್ ಗೆ ಹೋಗಲ್ಲ’ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಶಾಸಕ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ರಮೇಶ್ ಜಾರಕಿಹೊಳಿಯವರು ಈ ಸರ್ಕಾರ ತಂದವರು. ಅವರು ಯಾಕೆ ಬಿಜೆಪಿ ಬಿಟ್ಟು ಹೋಗ್ತಾರೆ? ಬಿಜೆಪಿ ಬಿಟ್ಟು ಏನು ಇಲ್ಲದಿರುವ ಜೆಡಿಎಸ್ ಗೆ ಯಾಕೆ ಹೋಗುತ್ತಾರೆ? ಇಬ್ರಾಹಿಂಗೆ …
Read More »ಬಿಜೆಪಿ ಕ್ರಿಮಿನಲ್ ಅಪರಾಧಗಳನ್ನು ತೊಳೆಯುವ ವಾಷಿಂಗ್ ಮಷಿನ್-ಪ್ರಿಯಾಂಕ್ ಖರ್ಗೆ
ಬೆಂಗಳೂರು, ನವೆಂಬರ್ 30: ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವುನ್ನು ಕಾಂಗ್ರೆಸ್ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಗಡಿಪಾರು ಆಗಿದ್ದ ವ್ಯಕ್ತಿಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ಪುಡಿ ರೌಡಿಗಳೆಲ್ಲ ದೇವರುಗಳಂತೆ ಕಾಣುವುದು ಸಹಜ ವಿಚಾರವೇ. ದೋ ನಂಬರ್ ದಂಧೆ ಮಾಡುವವರೇ ಬಿಜೆಪಿಗೆ ಅದರ್ಶಪುರುಷರು. ಕ್ರಿಮಿನಲ್‌ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ ಲಜ್ಜೆಗೇಡಿತನದ ಪರಮಾವಧಿಯನ್ನು ತಲುಪಿದೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಕಿಡಿಕಾರಿದೆ. …
Read More »ತಾನೇ ತೋಡಿದ ಗುಂಡಿಗೆ ಬಿದ್ದ ಮ.ಹಾ.ಸರ್ಕಾರ..!
ವಿಜಯಪುರ: ಮಹಾರಾಷ್ಟ್ರ ಗಡಿ ಅಧ್ಯಾಯ ಅಂತಿಮಗೊಂಡಿದ್ದರೂ ಅನವಶ್ಯಕವಾಗಿ, ತಮ್ಮ ರಾಜಕೀಯ ವಿಷಯಗಳನ್ನು ಮರೆಮಾಚಲು ಕ್ಯಾತೆ ತೆಗೆಯಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರಕ್ಕೆ ತನ್ನ ಅಸ್ತ್ರವೇ ತಿರುಗುಬಾಣವಾಗಿದೆ. ಸೋಲಾಪುರದಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಅಕ್ಕಲಕೋಟೆ ಹಾಗೂ ಜತ್ತ ತಾಲೂಕಿನಲ್ಲಿ ಕನ್ನಡಿಗರಿದ್ದಾರೆ. ಈ ಎಲ್ಲ ಕನ್ನಡಿಗರು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕೆಂದು ಹೋರಾಟ ಆರಂಭಿಸಿದ್ದು, ಇದೀಗ ಮಹಾರಾಷ್ಟ್ರಕ್ಕೆ ತನ್ನ ಅಸ್ತ್ರವೇ ಮುಳ್ಳಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು …
Read More »ಕರ್ನಾಟಕ ವಿಧಾನಸಭಾ ಚುನಾವಣೆಗೆ’ ಭರ್ಜರಿ ತಯಾರಿ : 224 ‘ನೋಂದಣಿ ಅಧಿಕಾರಿ’ಗಳ ನೇಮಕ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ( Karnataka Assembly Election 2023 ) ಹಿನ್ನಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗವು ( Central Election Commission – CEC ) ಭರ್ಜರಿ ತಯಾರಿಯನ್ನು ನಡೆಸಿದೆ. ಮುಂಬರುವಂತ ಚುನಾವಣೆಗೂ ಮುನ್ನವೇ 224 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ( Assistant Electoral Registration Officer – AERO ) ನೇಮಿಸಿ ಆದೇಶಿಸಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗದಿಂದ ಅಧಿಸೂಚನೆ …
Read More »