ಆಲ್ಫಬೆಟ್ ಒಡೆತನದ ಗೂಗಲ್, ಇಂಟರ್‌ನೆಟ್ ಸರ್ಚ್‌ನಿಂದ ಬಳಕೆದಾರರ ಫೋನ್ ನಂಬರ್, ಮನೆಯ ವಿಳಾಸ ಮತ್ತು ಇ-ಮೇಲ್ ವಿವರ ಸಹಿತ ಪ್ರಮುಖ ಮಾಹಿತಿಗಳನ್ನು ತೆಗೆದುಹಾಕುವಂತೆ ಕೋರಿಕೆ ಸಲ್ಲಿಸಿದರೆ, ಅದಕ್ಕೆ ಪ್ರತಿಯಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಬಳಕೆದಾರರ ಖಾಸಗಿತನ ಮತ್ತು ಮಾಹಿತಿ ಹಂಚುವಿಕೆ ಕುರಿತಂತೆ ಗೂಗಲ್, ಹೊಸ ಆಯ್ಕೆಗಳನ್ನು ಒದಗಿಸುತ್ತಿದೆ. ಈ ಮೊದಲು ಗೂಗಲ್, ವೆಬ್‌ಪೇಜ್‌ಗಳು ಮತ್ತು ಅದರಲ್ಲಿ ಹಂಚಿಕೊಳ್ಳಲಾದ ಕೆಲವೊಂದು ಫೋಟೊ, ವಿಡಿಯೊಗಳನ್ನು ತೆಗೆದುಹಾಕುವಂತೆ ಕೋರಿಕೊಂಡರೆ ಅದಕ್ಕೆ ಮಾತ್ರ ಸಮ್ಮತಿಸುತ್ತಿತ್ತು. …
Read More »Yearly Archives: 2022
ಸರಿಯಾದ ಸಮಯಕ್ಕೆ ವರ ಬರಲಿಲ್ಲ ಅಂತಾ ಅದೇ ಮದುವೆ ಮಂಟಪದಲ್ಲಿ ಬೇರೊಬ್ಬನನ್ನು ವರಿಸಿದ ವಧು!
ಮುಂಬೈ: ಸರಿಯಾದ ಸಮಯಕ್ಕೆ ವರ ಬರಲಿಲ್ಲ ಅಂತಾ ವಧು ಬೇರೊಬ್ಬನ ಜತೆ ವಿವಾಹವಾಗಿರುವ ವಿರಳಾತಿವಿರಳ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ. ಮದುವೆ ಸಮಾರಂಭವು ಏಪ್ರಿಲ್ 22ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಂಗ್ರಾ ಗ್ರಾಮದಲ್ಲಿ ನಿಗದಿಯಾಗಿತ್ತು. ಮದುವೆಗಾಗಿ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು. ಸಂಜೆ 4 ಗಂಟೆಗೆ ಮದುವೆ ನಡೆಯಬೇಕಿತ್ತು. ಆದರೆ, ಸಮಯವಾದರೂ ವರ ಮಾತ್ರ ಬರಲೇ ಇಲ್ಲ. ವಧು ಮತ್ತು ಆಕೆಯ ಕುಟುಂಬ ಸಾಕಷ್ಟು ಕಾದರೂ ಮದುಮಗನ ಸುಳಿವೇ ಸಿಗಲಿಲ್ಲ. …
Read More »ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಭರ್ಜರಿ ಗುಡ್ ನ್ಯೂಸ್: ನಿಮಗೆ ಕಂದಾಯ ಇಲಾಖೆಯಿಂದ ಗುತ್ತಿಗೆ ನೀಡಲು ನಿರ್ಧಾರ
ಬೆಂಗಳೂರು: ರಾಜ್ಯದ ಅನೇಕ ಕಡೆಯಲ್ಲಿ ಸರ್ಕಾರಿ ಭೂಮಿಯನ್ನು ( Government Land ) ಕಬಳಿಕೆ ಮಾಡಿದಂತ ಆರೋಪ, ಪ್ರಕರಣ ಕೇಳಿ ಬಂದಿದೆ. ಇದೀಗ ಹೀಗೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವಂತ ರೈತರಿಗೇ, ಕಂದಾಯ ಇಲಾಖೆಯಿಂದ ( Revenue Department ) ಆ ಭೂಮಿಯನ್ನು ಗುತ್ತಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಗುಡ್ ನ್ಯೂಸ್ ನೀಡಲಿದೆ. ಈ ಬಗ್ಗೆ ಮಾಹಿತಿ ನೀಡಿದಂತ ಕಂದಾಯ ಸಚಿವ …
Read More »ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುತ್ತಿದ್ದರೆ ಬಂದ್ ಮಾಡಿಸಿ – ಅಧಿಕಾರಿಗಳಿಗೆ ಕಾರಜೋಳ ವಾರ್ನಿಂಗ್
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದಾಗಿ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಎಚ್ಚೆತ್ತುಕೊಂಡಿದ್ದು ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಯಾರಾದರೂ ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡುತ್ತಿದ್ದರೆ ಬಂದ್ ಮಾಡಿಸಬೇಕು. ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡಲು ಬಿಡಬಾರದು. ಸರ್ಕಾರದ ಯೋಜನೆ ಮಂಜೂರಾಗದೇ ಯಾರಾದರೂ ಕಾಮಗಾರಿ ಮಾಡುವುದು ಗಮನಕ್ಕೆ ಬಂದರೆ ಪಿಡಿಒಗಳು, ಇಒಗಳು, ಇಂಜಿನಿಯರ್‌ಗಳೇ ಹೊಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ನಿಮ್ಮ …
Read More »ಒಳಗೆ ಅಕ್ರಮ, ಹೊರಗೆ ದಿವ್ಯಾ; ಪಿಎಸ್‌ಐ ಪರೀಕ್ಷೆ ನಡೆದ ದಿನ ಶಾಲೆಯ ಹೊರಗೆ ಕಾವಲಿದ್ದ ದಿವ್ಯಾ ಹಾಗರಗಿ
ದಿವ್ಯಾಗಾಗಿ ಕಲಬುರಗಿಯಿಂದ ಕಾಶ್ಮೀರದವರೆಗೂ ಸಿಐಡಿ ತಂಡವು ಹುಡುಕಾಟ ನಡೆಸಿತ್ತು. ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗಿದ್ದ ದಿವ್ಯಾ ಹಾಗರಗಿ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ಹೇಳಿ ಅಕ್ರಮದ ಸಾಕ್ಷ್ಯ ಸಿಐಡಿಗೆ ಸಿಕ್ಕ ನಂತರ ನಾಪತ್ತೆಯಾಗಿದ್ದರು. ಹೇಗೆ ನಡೆಯಿತು ಅಕ್ರಮ? ಪೋಲಿಸರ ತನಿಖೆ ವೇಳೆ ಪಿಎಸ್‌ಐ ನೇಮಕಾತಿ ಅಕ್ರಮ ಹೇಗೆ ನಡೆಯಿತು ಎಂಬ ಮಾಹಿತಿ ಬಹಿರಂಗವಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೇ ಪಿಎಸ್‌ಐ ಅಕ್ರಮ ಪರೀಕ್ಷೆಯಲ್ಲಿ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪರೀಕ್ಷಾರ್ಥಿಗಳಿಗೆ ಪರೀಕ್ಷೆ …
Read More »ಬೆಂಕಿ ಅವಘಡ: ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮುಂದೂಡಲು ಕೇಂದ್ರದ ಸೂಚನೆ
ನವದೆಹಲಿ: ಇತ್ತೀಚಿನ ಎಲೆಕ್ಟ್ರಿಕ್ ವಾಹನಗಳ ಅಗ್ನಿ ಅವಘಡ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ತಮ್ಮ ಹೊಸ ದ್ವಿಚಕ್ರ ವಾಹನಗಳ ಬಿಡುಗಡೆ ಯೋಜನೆಗಳನ್ನು ಮುಂದೂಡುವಂತೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳ ಸಭೆಯಲ್ಲಿ ಮೌಖಿಕವಾಗಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಒಂದು ವಾಹನಕ್ಕೆ ಬೆಂಕಿ ತಗುಲಿದ ವರದಿ ಬಂದರೆ ಸಂಪೂರ್ಣ ಬ್ಯಾಚ್‌ನ ವಾಹನಗಳನ್ನು ಹಿಂಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ‘ತನಿಖಾ ವರದಿಗಳ ಆಧಾರದ ಮೇಲೆ ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ಮಾರ್ಗಸೂಚಿಗಳನ್ನು …
Read More »ಯಾರ ಮೇಲೂ ಹಿಂದಿ ಹೇರುವುದಿಲ್ಲ
ಬೆಂಗಳೂರು: ಹಿಂದಿ ವಿಚಾರವಾಗಿ ಕನ್ನಡ ನಟ ಸುದೀಪ್ ಹೇಳಿಕೆಗೆ ಟ್ವೀಟ್ ಮಾಡಿ ಅತಿರೇಕ ತೋರಿದ್ದ ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ರಾಜಕಾರಣಿಗಳು, ಚಿತ್ರರಂಗ ಸೇರಿ ಕನ್ನಡಿಗರು ಸಿಡಿದೆದ್ದಿರುವ ಬೆನ್ನಲ್ಲೇ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕಡ್ಡಾಯ ಮಾಡಿಲ್ಲ, ಹಿಂದೆ ಹೇರಿಕೆಗೆ ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಜಾರಿ ಸಂಬಂಧ ಗುರುವಾರ ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನೆ …
Read More »2011 ಸಾಲಿನಲ್ಲಿ ಆಯ್ಕೆಯಾದ 30 ಅಭ್ಯರ್ಥಿಗಳಿಗೆ ತಹಶೀಲ್ದಾರ್ ಗ್ರೇಡ್ -2 ವೃಂದದ ಗ್ರೂಪ್ ಬಿ ಹುದ್ದೆಗೆ ನೇಮಕ ಮಾಡಿ ಆದೇಶ
ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಆಯ್ಕೆ ಪಟ್ಟಿಯಲ್ಲಿನ 30 ಅಭ್ಯರ್ಥಿಗಳಿಗೆ ತಹಶೀಲ್ದಾರ್ ಗ್ರೇಡ್ 2 ವೃಂದದ ಗ್ರೂಪ್ ಬಿ ಹುದ್ದೆಗೆ ನೇಮಕ ಮಾಡಿ ಆದೇಶಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ 2011ನೇ ಸಾಲಿನಲ್ಲಿ ಕಂದಾಯ ಇಲಾಖೆಯ ಕರ್ನಾಟಕ ಆಡಳಿತ ಸೇವೆಗೆ ಸೇರಿದ ಗ್ರೂಪ್ ಬಿ ವೃಂದದ ತಹಶೀಲ್ದಾರ್ ಗ್ರೂಪ್-2 ವೃಂದದ ಹುದ್ದೆಗೆ 57 ಮಂದಿ ಆಯ್ಕೆಯಾಗಿದ್ದರು. ಅಕ್ರಮದ ಹಿನ್ನೆಲೆ 2011 ಸಾಲಿನ ನೇಮಕಾತಿಯನ್ನು ಅಸಿಂಧುಗೊಳಿಸಲಾಗಿತ್ತು. ಆದರೆ 2011ನೇ ಸಾಲಿನ ಗೆಜೆಟೆಡ್ …
Read More »ಗ್ರಾ.ಪಂ. ಚುನಾವಣೆ: ವೇಳಾಪಟ್ಟಿ ಪ್ರಕಟ
ಬೆಂಗಳೂರು: ಅವಧಿ ಮುಕ್ತಾಯವಾದ ಒಂದು ಗ್ರಾಮ ಪಂಚಾಯಿತಿ ಹಾಗೂ ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಯಾಗದ ಕಾರಣಕ್ಕೆ ಚುನಾವಣೆ ನಡೆಯದ 2 ಗ್ರಾಮ ಪಂಚಾಯಿತಿಗಳು ಸೇರಿದಂತೆ ವಿವಿಧ ಕಾರಣಗಳಿಗೆ ತೆರವಾಗಿದ್ದ 201 ಗ್ರಾ.ಪಂ. ಸದಸ್ಯ ಸ್ಥಾನಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಅವಧಿ ಮುಕ್ತಾಯವಾಗಿರುವ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಹಾಗೂ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರ ಬಾರದೇ ಇರುವ ಕಾರಣಕ್ಕೆ ಚುನಾವಣೆ ನಡೆಯದ …
Read More »ಸಿನಿಮೀಯ ಶೈಲಿಯಲ್ಲಿ1200 ಕಿ.ಮೀ ಚೇಸ್ ಮಾಡಿ ಆರೋಪಿಗಳನ್ನು ಕರೆತಂದ ಬೆಂಗಳೂರು ಪೊಲೀಸ್!
ಬೆಂಗಳೂರು, ಏಪ್ರಿಲ್ 28: ಬೆಂಗಳೂರಿಗೆ ಬರುವ ಕೆಲವು ದರೋಡೆಕೋರರು ಸಿಕ್ಕ ಸಿಕ್ಕವರ ಹತ್ತಿರ ಸುಲಿಗೆ ಮಾಡಿ ಟ್ರೈನ್ ಹತ್ತಿ ಎಸ್ಕೇಪ್ ಆಗಿ ಬಿಡುತ್ತಾರೆ. ಮಡಿವಾಳದ ಬಳಿ ಓಲಾ ಕ್ಯಾಬ್ ಚಾಲಕನ ಹಣ ಕಿತ್ತುಕೊಂಡು ಚಾಲಕನಿಗೆ 32 ಕಡೆ ಚಾಕುವಿಂದ ಕುಯ್ದು ಪರಾರಿಯಾಗಿದ್ದರು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೆ ನೆಡೆದಿದ್ದು ಇದನ್ನು ಸವಾಲಾಗಿ ತೆಗೆದುಕೊಂಡ ಮಡಿವಾಳ ಪೊಲೀಸರು ಆರೋಪಿಗಳನ್ನು 1200 ಕೀಮೀ ಚೇಜ್ ಮಾಡಿ 48 ಗಂಟೆಯಲ್ಲಿ ದರೋಡೆಕೋರ ಬಂಧಿಸಿದ್ದಾರೆ. ಓಲಾ …
Read More »