ಕಾಂಗ್ರೆಸ್ ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ಜನವರಿ 8 2023 ರಂದು ಹಮ್ಮಿಕೊಳ್ಳಲಾದ ದಲಿತ ಸಮುದಾಯಗಳ ಐಕ್ಯತಾ ಸಮಾವೇಶದ ಬಗ್ಗೆ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮಾಹಿತಿ ನೀಡಿದರು. ಮೀಸಲಾತಿ ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು. ಇದರ ರಾಜಕೀಯ ಲಾಭಪಡೆಯಲು ಬಿಜೆಪಿ ಮುಂದಾಗಿದೆ.ಮೀಸಲಾತಿ ಹೆಸರಿನಲ್ಲಿ ದಲಿತ ಸಮುದಾಯವನ್ನು ಬಿಜೆಪಿ ಒಡೆದಾಳಲು ಹೊರಟಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಮೀಸಲಾತಿಗೆ ಕೇಂದ್ರ ಸರ್ಕಾರ ಕಾನೂನಿನ ಚೌಕಟ್ಟು …
Read More »Yearly Archives: 2022
ಅವಿಶ್ವಾಸ ನಿರ್ಣಯ: ವಿಮಾನದಲ್ಲಿ ಬಂದ ಗ್ರಾ.ಪಂ ಸದಸ್ಯರು
ರಾಣೆಬೆನ್ನೂರು (ಹಾವೇರಿ): ಬೆಂಗಳೂರಿನ ರೆಸಾರ್ಟ್‌ನಲ್ಲಿ 40 ದಿನ ತಂಗಿದ್ದ ತಾಲ್ಲೂಕಿನ ದೇವರಗುಡ್ಡ ಗ್ರಾಮ ಪಂಚಾಯಿತಿಯ 9 ಸದಸ್ಯರು ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿದ್ದು, ಮಂಗಳವಾರ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಪಾಲ್ಗೊಂಡರು. ಗ್ರಾಮ ಪಂಚಾಯಿತಿ ಸದಸ್ಯ ಬಲ 13 ಆಗಿದ್ದು, ಅಧಿಕಾರಕ್ಕಾಗಿ ಎರಡು ಗುಂಪುಗಳ ನಡುವೆ ಜಟಾಪಟಿ ನಡೆದಿತ್ತು. ಗ್ರಾ.ಪಂ. ಅಧ್ಯಕ್ಷ ಮಾಲತೇಶ ನಾಯರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಾಕಿ ಉಳಿದಂತಾಗಿದೆ. ಮಾಲತೇಶ ನಾಯರ್ 15 …
Read More »ಟೀಕೆಗೆ ಮುಸ್ಲಿಮರ ಹೆಸರು ಬಳಕೆ: ಬಿಜೆಪಿ, ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ
ಬೆಂಗಳೂರು: ಮುಸ್ಲಿಮರ ವೇಷಭೂಷಣ ಧರಿಸಿದ ನಾಯಕರ ಫೋಟೋಗೆ ಮುಸ್ಲಿಂ ಹೆಸರನ್ನು ಹಾಕಿ ವ್ಯಂಗ್ಯ ಮಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಪೋಸ್ಟ್‌ಗೆ ಜೆಡಿಎಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ. ‘ಈ ಎರಡೂ ಪಕ್ಷಗಳ ಪಾಲಿಗೆ ಮುಸ್ಲಿಮರು ಅಬ್ಬೇಪಾರಿಗಳಾಗಿದ್ದಾರೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಿಡಿಕಾರಿದ್ದಾರೆ. ‘ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಮುಸಲ್ಮಾನರನ್ನು ಯಾರು ಹೇಗೆ ಬೇಕಾದರೂ ತುಚ್ಛವಾಗಿ ಕಾಣಬಹುದು ಎಂದುಕೊಂಡಿದ್ದಾರೆ, ಇವರಿಬ್ಬರ …
Read More »ಯಶ್ ಶಿವಾಜಿ ಪಾತ್ರ ಮಾಡ್ತಾರಾ? ಆ ಫೋಟೋ ಗುಟ್ಟೇನು?
ಕನ್ನಡದ ರಾಕಿಂಗ್ ಸ್ಟಾರ್ (Rocking Star Yash) ಯಶ್ ಯಾವ ಪಾತ್ರ ಮಾಡಿದ್ರೆ ಚೆನ್ನಾಗಿರುತ್ತದೆ. ಈ ಒಂದು ಕ್ವಶ್ಚನ್ ಇದ್ದೇ ಇದೆ. ಕೆಜಿಎಫ್ ರಾಕಿ ಭಾಯ್ ಬಿಯರ್ಡ್ (Beard Look) ಲುಕ್ ನಲ್ಲಿ ಕಾಣಿಸಿಕೊಂಡಿದ್ದೇ ತಡ, ಎಲ್ಲರಿಗೂ ಅದು ಕ್ರೇಜ್ (Craze) ರೂಪದಲ್ಲಿಯೇ ಕಾಣಿಸಿಕೊಂಡಿತು. ಈಗಲೂ ಈ ಬೀಯರ್ಡ್ ಲುಕ್ ಟ್ರೆಂಡಿಯಾಗಿಯೇ ಇದೆ. ಬಿಯರ್ಡ್ ಜಾಹೀರಾತಿನಲ್ಲೂ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. 2022 ರಲ್ಲಿ ಬಂದ ಕೆಜಿಎಫ್-2 ಬಂದ್ಮೇಲಂತೂ ಬಿಯರ್ಡ್ …
Read More »ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ದೇಹ ಇಬ್ಭಾಗ: ಹುಟ್ಟುಹಬ್ಬದಂದೇ ಬಾಗಲಕೋಟೆ ಯುವಕ ದುರಂತ ಸಾವು, ಸ್ನೇಹಿತನೂ ಮೃತ್ಯು
ಬಾಗಲಕೋಟೆ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಹುಟ್ಟು ಹಬ್ಬದ ದಿನವೇ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಗದ್ದನಕೇರಿ ತಾಂಡಾ ಸಮೀಪ ನಡೆದಿದೆ. ಅಪಘಾತದಲ್ಲಿ ಸ್ನೇಹಿತನೂ ಮೃತಪಟ್ಟಿದ್ದಾನೆ. ನವನಗರದ ಸಂಗಮೇಶ (21) ಹಾಗೂ ಶಿರಗುಪ್ಪಿ ತಾಂಡಾದ ಕಿರಣ (21) ಮೃತ ದುರ್ದೈವಿಗಳು. ನಿನ್ನೆ (ಡಿ.6) ಸಂಗಮೇಶ್ ಹುಟ್ಟುಹಬ್ಬವಿತ್ತು. ಹೀಗಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸ್ನೇಹಿತ ಕಿರಣ್ ಜೊತೆ ಬೈಕ್ನಲ್ಲಿ ಬರುವಾಗ ಭೀಕರ ಅಪಘಾತ ಸಂಭವಿಸಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಲ್ಲಿ ಒಬ್ಬನ …
Read More »ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಮಿಳುನಾಡಿನಲ್ಲಿ ಡಿಸೆಂಬರ್ 7ರಿಂದ 11 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 9 ರಂದು ರಾಜ್ಯದ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗಲಿದೆ. ಡಿಸೆಂಬರ್ 10 ಮತ್ತು 11ರಂದು ಎಲ್ಲಾ ಜಿಲ್ಲೆಗಳಲ್ಲಿಯೂ ಬಾರಿ ಮಳೆಯಾಗುವ …
Read More »ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಗೆದ್ದು ದಾಖಲೆ ಬರೆದ ಮಂಗಳಮುಖಿ
ತೀವ್ರ ಕುತೂಹಲ ಕೆರಳಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಂಗಳಮುಖಿ ಚುನಾವಣೆ ಗೆದ್ದು ದಾಖಲೆ ಬರೆದಿದ್ದಾರೆ. ನವದೆಹಲಿ: ತೀವ್ರ ಕುತೂಹಲ ಕೆರಳಿರುವ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಂಗಳಮುಖಿ ಚುನಾವಣೆ ಗೆದ್ದು ದಾಖಲೆ ಬರೆದಿದ್ದಾರೆ. ಹೌದು.. ದೆಹಲಿ ಮಹಾನಗರ ಪಾಲಿಕೆಯ ಸುಲ್ತಾನ್ ಪುರಿ ಮಜ್ರಾ ಎ ವಾರ್ಡ್ ನಿಂದ ಆಪ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬೋಬಿ ಜಯಭೇರಿ ಭಾರಿಸಿದ್ದಾರೆ. …
Read More »ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ವಿದ್ಯಾರ್ಥಿಗಳ ಸಾಧನೆ
ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ವಿದ್ಯಾರ್ಥಿಗಳಾದ ಸಾನಿಯಾ ಜಹಗೀರದಾರ, ಆಫಿಯಾ ಶೇಖ ರಾಜ್ಯಕ್ಕೆ 2ನೇ ಸ್ಥಾನ ಹೌದು ಧಾರವಾಡದ ಬಾಲ ವಿಕಾಸ ಅಕಾಡೆಮಿ ಮತ್ತು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಗದಗನಲ್ಲಿ ಇತ್ತಿಚೆಗೆ ಏರ್ಪಡಿಸಿದ್ದ “ಚಿನ್ನದ ಚಿತ್ರ ಚಿತ್ತಾರ” ಎಂಬ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಧಾರವಾಡದ ಸೇಂಟ್ ಜೋಸೆಫ್ ಹೈಸ್ಕೂಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.ಈ ಸ್ಪರ್ಧೆಯಲ್ಲಿ …
Read More »ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಪಶುವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪಶು ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರಿಯಾಗಿ ಕೆಲಸ ಮಾಡದೆ ಇರುವ ಕಾರಣ ರೈತರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಮರ‍್ನಾಲ್ಕು ತಿಂಗಳಿನಿಂದ ದನಗಳ ಸಂತೆಯನ್ನು ಕೂಡ ಬಂದ ಮಾಡಲಾಗಿದ್ದು, ರೈತರಲ್ಲಿ ಸಂಕಟ ಉಂಟು ಮಾಡಿದೆ. ಆದರೇ ಸಕ್ಕರೆ ಕಾರ್ಖಾನೆಗಳಿಗೆ ಅಂತರ್ ರಾಜ್ಯಗಳಿಂದ ಬರುತ್ತಿರುವ ಎತ್ತುಗಳಿಂದ ಲಂಪಿ ರೋಗವು ಹೆಚ್ಚಾಗುತ್ತಿದೆ. ದನಗಳ ಸಂತೆಯನ್ನು ರೋಗದ ಕಾರಣ ಬಂದ ಮಾಡಿದ್ದಿರಿ. ಸಕ್ಕರೆ …
Read More »ಕರ್ನಾಟಕ ಮಹಾರಾಷ್ಟ್ರಗಳ ನಡುವೆ ಮತ್ತೆ ಆಶಾಂತಿ ಗಲಭೆ
ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟ ಹಿಡಿದು ಕುಣಿದಿದ್ದೇ ನೆಪವಾಗಿ ಕರ್ನಾಟಕ ಮಹಾರಾಷ್ಟ್ರಗಳ ನಡುವೆ ಮತ್ತೆ ಆಶಾಂತಿ ಗಲಭೆ ತಾರಕಕ್ಕೇರಿದೆ. ಕನ್ನಡ ವಿದ್ಯಾರ್ಥಿಯ ಮೇಲೆ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ಪುಂಡರ ದಾಳಿ ಆರಂಭವಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗಳನ್ನು ತಢದು ಮಸಿ ಬಳಿಯಲಾಗುತ್ತಿದೆ. ಭಾರಾಮತಿ ಬಸ್ ನಿಲ್ದಾಣದಲ್ಲಿ ಹಳಿಯಾಳ ಡಿಪೋಗೆ ಸೇರಿದ ಬಸ್ ಗೆ ಕಪ್ಪು …
Read More »