ಬೆಂಗಳೂರು: ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಕಳೆದು ಹೋಗಿದ್ದ ಸಂಪುಟ ವಿಸ್ತರಣೆ ಪ್ರಸ್ತಾಪ ಮತ್ತೆ ಜೀವ ಪಡೆದುಕೊಂಡಿದ್ದು, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ರಮೇಶ ಜಾರಕಿಹೊಳಿ ಸೇರಿದಂತೆ ಐವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಈಗ ಸದ್ದಿಲ್ಲದೇ ವೇದಿಕೆ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಗುಜರಾತ್ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಡಿ.14ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಆ ಬಳಿಕ ಸಂಪುಟ …
Read More »Yearly Archives: 2022
ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿ.ಕೆ.ಶಿ.ಅಖಾಡಕ್ಕೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಮೂಡಿಸುವುದಕ್ಕಾಗಿ ಮಹತ್ವದ ಬಸ್ ಯಾತ್ರೆ ಆಯೋಜನೆ ಮಾಡಲಾಗಿದ್ದು, ಜನವರಿ 3 ರಿಂದ ಕೈ ಕಲಿಗಳು ಅಖಾಡಕ್ಕೆ ಇಳಿಯಲಿದ್ದಾರೆ. ಜನವರಿ 3ರಂದು ಬಸವ ಕಲ್ಯಾಣದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಸ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಭಿನ್ನಮತ ಮೂಡಿದೆ ಎಂದು ಹೇಳಲಾಗುತ್ತಿತ್ತು. ಆದರೆ ಉಭಯ ನಾಯಕರೂ ಈ ಮಾತನ್ನು ನಿರಾಕರಿಸಿದ್ದು, ಇಬ್ಬರೂ ಒಟ್ಟಾಗಿ ಬಸ್ ಯಾತ್ರೆ …
Read More »ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ: ಅಧಿಕಾರಿಗಳ ಜತೆ ಕಾಗೇರಿ ಸಭೆ
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ 30 ರವರೆಗೆ ವಿಧಾನ ಮಂಡಲ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆಯು ಪ್ರತಿ ಬಾರಿಯಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಮಂಡಲದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಸತಿ, ಊಟ, …
Read More »ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜಿಸಿ ಅತಿಕ್ರಮಣ ತೆರವುಗೊಳಿಸಿದ ಮಹಾನಗರ ಪಾಲಿಕೆ
ವಿಜಯಪುರ ದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜಿಸಿದೆ. ಅತಿಕ್ರಮಣ ಗೊಂಡಿದ್ದ ರಸ್ತೆ ತೆರವು ಮಾಡಲಾಗಿದೆ.ವಿಜಯಪುರ ನಗರದ ವಲ್ಲಭಭಾಯಿ ವೃತ್ತದಿಂದ ವಿಶ್ವೇಶ್ವರಯ್ಯ ವೃತ್ತದ ವರೆಗೆ ಅತಿ ಕ್ರಮಣ ತೆರವು ಮಾಡಲಾಯಿತು. 100 ಫೂಟ್ ಅಗಲವಿರುವ ರಸ್ತೆಯಲ್ಲಿ ಹಲವು ಕಡೆ ಅತೀಕ್ರಮಣವಾಗಿತ್ತು. ಈ ಕುರಿತು ಮಹಾನಗರ ಪಾಲಿಕೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಸಹಿತ ಅತಿಕ್ರಮಣ ತೆರವುಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮಾಡಲಾಯಿತು. …
Read More »ಹೈಕಮಾಂಡ್ ಚಿತ್ತ ಕರ್ನಾಟಕದತ್ತ’ : ಶೀಘ್ರವೇ ರಾಜ್ಯಕ್ಕೆ ಪ್ರಧಾನಿ ಮೋದಿ , ಅಮಿತ್ ಶಾ ಭೇಟಿ
ಬೆಂಗಳೂರು : ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಚಿತ್ತ ಕರ್ನಾಟಕದತ್ತ ಹರಿದಿದ್ದು, ಬಿಜೆಪಿ ವರಿಷ್ಟರು ಶೀಘ್ರವೇ ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ತಿಂಗಳು ಹಾಗೂ ಮುಂದಿನ ತಿಂಗಳು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ವಿವಿಧ ನಾಯಕರುಗಳು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಅವರು ಜ. 2ನೇ ವಾರ ಕರ್ನಾಟಕಕ್ಕೆ ಆಗಮಿಸಲಿದ್ದು, ಬೆಳಗಾವಿಯಲ್ಲಿ …
Read More »ಮಹಾರಾಷ್ಟ್ರದ ಪ್ರತಿಭಾವಂತ ಬಡ ವಿದ್ಯಾರ್ಥಿಗೆ ಎಂ.ಬಿ.ಪಾಟೀಲ್ ನೆರವು
ವಿಜಯಪುರ : ಆರ್ಥಿಕ ಸಂಕಷ್ಟದಿಂದ ವೈದ್ಯಕೀಯ ಪ್ರವೇಶ ಸಿಕ್ಕರೂ ಪ್ರವೇಶ ಪಡೆಯಲಾಗದ ಮತ್ತೋರ್ವ ವಿದ್ಯಾರ್ಥಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರ್ಥಿಕ ನೆರವು ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಗೆ ಭಾಷಾ ಸಂಕುಚಿತತೆ ಎಲ್ಲೆ ಮೀರಿ ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನೆಲೆಸಿರುವ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ಮೂಲತ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಮುಚ್ಚಂಡಿ ಗ್ರಾಮದವರು. …
Read More »2 ಎ ಮೀಸಲಾತಿ ಹೋರಾಟ ತಾರ್ಕಿಕ ಹಂತಕ್ಕೆ; ಬೆಳಗಾವಿಯಲ್ಲಿ ಡಿ.12 ರಂದು ವಿರಾಟ್ ಪಂಚಶಕ್ತಿ ಸಮಾವೇಶ
ದಾವಣಗೆರೆ: ಬೆಳಗಾವಿಯ ಗಾಂಧಿಭವನದಲ್ಲಿ ಡಿ.12 ರಂದು ವಿರಾಟ್ ಪಂಚಶಕ್ತಿ ಸಮಾವೇಶ ನಡೆಯಲಿದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2 ಎ ಮೀಸಲಾತಿ ನೀಡಬೇಕು ಎಂಬ 2 ವರ್ಷ 2 ತಿಂಗಳ ಹೋರಾಟ ತಾರ್ಕಿಕ ಹಂತಕ್ಕೆ ತಲುಪಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಡಿ. 22 ರ ಒಳಗೆ …
Read More »ಕಾರ್ಮಿಕರಿಗೆ ಕಿಟ್ಟ್ ಹಸ್ತಾಂತರಿಸಿದ ಶಾಸಕ ಅನಿಲ ಬೆನಕೆ
ಬೆಳಗಾವಿ: ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವ ಕಾರ್ಮಿಕರ ಕಿಟ್ಟಗಳನ್ನು ಶಾಸಕ ಅನಿಲ ಬೆನಕ ಅವರು ವಿತರಣೆ ಮಾಡಿದರು, ಇಂದು ಮಾಹಾಂತೇಶ ನಗರದ ಮಹಾಂತ ಭವನ ಬಳಿ ವಿವಿಧ ಕಟ್ಟಡ ಕಾರ್ಮಿಕರಾದ ಪೆಂಟರ್, ಪ್ಲಂಬರ್, ಗೌಂಡಿ, ಹೀಗೆ ವಿವಿಧ ರೀತಿಯ ಕಾರ್ಮಿಕರಿಗೆ ಕಿಟ್ಟ್ ಗಳನ್ನು ಹಂಚಿಕೆ ಮಾಡಿದರು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, ಲೇಬರ್ ಕಾರ್ಡ್ …
Read More »ಕಾಂಗ್ರೆಸ್ ನ ಹತ್ತಕ್ಕೂ ಅಧಿಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ:ಆರ್ ಅಶೋಕ್
ಬೆಂಗಳೂರು : ಕಾಂಗ್ರೆಸ್ ನ ಹತ್ತಕ್ಕೂ ಅಧಿಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಆರ್ ಅಶೋಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅಶೋಕ್ ಕಾಂಗ್ರೆಸ್ ನ ಶಾಸಕರು ಮತ್ತು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಸದ್ಯದಲ್ಲೇ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇಡೆ ಮಾಡಿಕೊಳ್ಳುತ್ತೇವೆ ಎಂದು ಅಶೋಕ್ ಹೇಳಿದರು. ಕಾಂಗ್ರೆಸ್ ನಾಯಕರಿಗೆ ಈಗ ಭಯ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಆ ಪಕ್ಷಕ್ಕೆ ಯಾರೂ ವಲಸೆ …
Read More »ಡಿ.18 ರಂದು ಧಾರವಾಡದಲ್ಲಿ ಉದ್ಯೋಗ ಮೇಳ
ಧಾರವಾಡ : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಧಾರವಾಡದ ಜೆಎಸ್‌ಎಸ್ ಆವರಣದಲ್ಲಿ ಡಿಸೆಂಬರ್ 18 ರಂದು ಉದ್ಯೋಗ ಮೇಳ ಆಯೋಜನೆ ಮಾಡಿದೆ. ಉದ್ಯೋಗ ಮೇಳದಲ್ಲಿ ಅಂದಾಜು 70 ಕ್ಕೂ ಹೆಚ್ಚು ಪ್ರಸಿದ್ಧ ಕಂಪನಿಗಳು ಭಾಗವಹಿಸಲಿದ್ದು, 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಎಸ್. ಎಸ್. ಎಲ್. ಸಿ ಅನುತ್ತೀರ್ಣ ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿಎ, ಬಿಕಾಂ ಇನ್ನಿತರ ಪದವಿ ಮತ್ತು ಸ್ನಾತಕೋತರ ಪದವಿ ಪಾಸಾದ ಅಭ್ಯರ್ಥಿಗಳು …
Read More »