Breaking News

Yearly Archives: 2022

ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ವರಿಷ್ಠರು ಭರವಸೆ ಕೊಟ್ಟಿದ್ದಾರೆ.: ಮಹೇಶ್‌ ಕುಮಟಹಳ್ಳಿ

ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಆ ಭರವಸೆ ಈಡೇರಿಸುತ್ತಾರೆಂದು ಅಥಣಿ ಶಾಸಕ ಮಹೇಶ್‌ ಕುಮಟಹಳ್ಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಅದನ್ನು ಈಡೇರಿಸುತ್ತಾರೆ. ತಾನೂ ಕೂಡ ಸುಮ್ಮನೆ ಕುಳಿತಿಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು. ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ …

Read More »

ಪ್ರಸಕ್ತ ವರ್ಷ 15 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ: ಸಿಎಂ ಬೊಮ್ಮಾಯಿ

 ಪ್ರಸಕ್ತ ವರ್ಷ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಇನ್ನೂ 15,000 ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಪೂರಕ ಅಂದಾಜು ಮೇಲಿನ ಚರ್ಚೆಯ ಸಂದರ್ಭದಲ್ಲಿ ಉತ್ತರಿಸಿದ ಅವರು, ಇನ್ನು 15,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 8000 ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಾಲೇಜು ಉಪನ್ಯಾಸಕರು, ಸಹ ಪ್ರಾಧ್ಯಾಪಕರು ಹಾಗೂ ಪ್ರಾಧ್ಯಾಪಕರ ಬೋಧನಾ ಕಾರ್ಯ ಶೈಲಿ ಬದಲಾವಣೆ ಮಾಡಲಿದ್ದು ಮುಂದಿನ …

Read More »

ಚುನಾವಣೆ ಸಮೀಪದ ಬೆನ್ನಲ್ಲೇ ವಿದ್ಯುತ್ ದರ ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ವಿಧಾನಸಭಾ ಚುನಾವಣೆ ಸಮೀಪದ ಬೆನ್ನಲ್ಲೇ ಮತದಾರರನ್ನು ಸೆಳೆಯಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದ್ದು, ಹಲವಾರು ಜನಪರ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಇದರ ನಡುವೆ ರಾಜ್ಯ ಸರ್ಕಾರ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಬೆಸ್ಕಾಂ, ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ದರ ಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.   ಈ ಕುರಿತು ಟ್ವೀಟ್ ಮಾಡಿರುವ ಇಂಧನ ಸಚಿವ ಸುನಿಲ್ ಕುಮಾರ್ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ …

Read More »

6 ಖಾಸಗಿ ವಿವಿ ಸ್ಥಾಪನೆ ಯತ್ನಕ್ಕೆ ಹಿನ್ನಡೆ

ಸುವರ್ಣ ವಿಧಾನಸೌಧ: ನೂತನವಾಗಿ 6 ಖಾಸಗಿ ವಿಶ್ವವಿದ್ಯಾಲಯ ರಚನೆಗೆ ತರಾತುರಿಯಲ್ಲಿ ಹೊರಟಿದ್ದ ಸರಕಾರಕ್ಕೆ ಕಲಾಪದಲ್ಲಿ ಸ್ವಪಕ್ಷೀಯ ಶಾಸಕರಿಂದಲೇ ಬಲವಾದ ವಿರೋಧ ವ್ಯಕ್ತವಾಯಿತು. ಖಾಸಗಿ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ, ಹಾಗಿರುವಾಗ ವಿಧೇಯಕದಲ್ಲಿರುವ ಅಂಶಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡದೆ, ಆ ಬಗ್ಗೆ ಚರ್ಚೆಯನ್ನೂ ಮಾಡದೆ ಅನುಮೋದಿಸುವುದು ಸದನದ ಗೌರವಕ್ಕೆ ಅಪಚಾರವಾದಂತೆ ಎಂದು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಧೇಯಕಗಳನ್ನು ಹಿಂಪಡೆಯಬೇಕಾಗಿ ಬಂತು.   ವಿಧಾನಸಭೆಯಲ್ಲಿ ಗುರುವಾರ ಮಧ್ಯಾಹ್ನ ಸದಸ್ಯರ …

Read More »

ಮೀಸಲಾತಿ ಕೂಗು; ಸರಕಾರದ ಹೊಸ ತಂತ್ರ: ಲಿಂಗಾಯತ, ಒಕ್ಕಲಿಗರಿಗೆ ಪ್ರತ್ಯೇಕ ಕೆಟಗರಿ

ಬೆಳಗಾವಿ: ಕರ್ನಾಟಕದ ಪ್ರಬಲ ಸಮುದಾಯದಗಳಾಗಿರುವ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಎರಡು ಪ್ರತ್ಯೇಕ ಕೆಟಗರಿಗಳನ್ನು ಗುರುವಾರ (ಡಿ 29) ಅಸ್ತಿತ್ವಕ್ಕೆ ತಂದಿದೆ. 3ಎನಲ್ಲಿದ್ದ ಒಕ್ಕಲಿಗರಿಗೆ ಹೊಸದಾಗಿ 2ಸಿ ವರ್ಗ ಹಾಗೂ 3ಬಿಯಲ್ಲಿದ್ದ ಲಿಂಗಾಯತರಿಗೆ 2ಡಿ ಎಂಬ ಮೀಸಲಾತಿ ವರ್ಗ ರಚಿಸಲು ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.   ಚುನಾವಣೆ ಸಮೀಪದಲ್ಲೇ ಇರುವ ವೇಳೆ ನಿರ್ಣಾಯಕ ಪ್ರಬಲ ಸಮುದಾಯದ 2 …

Read More »

ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ನಿಧನ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಶುಕ್ರವಾರ ಡಿ.30 ರಂದು ನಿಧನರಾದರು. 2 ದಿನಗಳ ಹಿಂದೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾಋಎ ಎಂದು ವರದಿಯಾಗಿದೆ. ಹೀರಾಬೆನ್ ಮೋದಿ ಅವರು 2022ರ ಜೂನ್ 18ರಂದು ತಮ್ಮ 100ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನೆಗೆ ಭೇಟಿ ನೀಡಿ ಶುಭಾಶಯ ತಿಳಿಸಿ, ಆಶೀರ್ವಾದ …

Read More »

ರಾಮ ಮಂದಿರವಾದರೂ ಕಟ್ಟಲಿ, ಅಶ್ವತ್ಥನಾರಾಯಣ ಮಂದಿರವಾದರೂ ಕಟ್ಟಲಿ: ಡಿಕೆ ಶಿ

ಬೆಳಗಾವಿ: ‘ರಾಮನಗರದಲ್ಲಿರುವ ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ’ ಎಂಬ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.   ‘ರಾಮಮಂದಿರ ಜೀರ್ಣೋದ್ಧಾರಕ್ಕೆ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಆಹ್ವಾನಿಸುತ್ತೇವೆ. ಹಿಂದೂ ಧಾರ್ಮಿಕ ಕೇಂದ್ರವಾನ್ನಾಗಿ ಮಾಡುತ್ತೇವೆ’ ಎಂದು ಅಶ್ವತ್ಥನಾರಾಯಣ ಹೇಳಿದ್ದರು.   ಇದಕ್ಕೆ …

Read More »

ರಾಜ್ಯದಲ್ಲಿ ಶುರುವಾಯ್ತು ಚುನಾವಣಾ ಜ್ವರ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಚುನಾವಣೆಗೆ ಈಗಲೇ ಭರ್ಜರಿ ತಯಾರಿ ನಡೆಸಿರುವ ರಾಜ್ಯ ಸರ್ಕಾರವು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಚುನಾವಣೆಗೆ ಈಗಲೇ ಭರ್ಜರಿ ತಯಾರಿ ನಡೆಸಿರುವ ರಾಜ್ಯ ಸರ್ಕಾರವು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು …

Read More »

ನನ್ನ ಪತ್ನಿಯಾಗುವವಳು ಆ ಇಬ್ಬರಂತೆ ಇರಬೇಕು:ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸುದೀರ್ಘ ಪಾದಯಾತ್ರೆ ಮುಂದುವರೆದಿದೆ. ಯಾತ್ರೆ ದೆಹಲಿ ತಲುಪಿದ್ದು, ಯಾತ್ರೆಗೆ ತಾತ್ಕಾಲಿಕ ಬ್ರೇಕ್ ಬಿದ್ದ ಕಾರಣ ರಾಹುಲ್ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಎದುರಾಳಿಗಳ ಆರೋಪ, ಪಪ್ಪು ಎನ್ನುವ ಟೀಕೆಗಳಿಗೆ ಉತ್ತರಿಸಿದರು. ಮೇಲಾಗಿ.. ಎಂತಹ ಸಂಗಾತಿ ಬೇಕು ಎಂಬುದಕ್ಕೂ ರಾಹುಲ್ ಕ್ಲಾರಿಟಿ ನೀಡಿದ್ದಾರೆ. ವಿಪಕ್ಷಗಳು ನಿಮ್ಮನ್ನು ‘ಪಪ್ಪು’ ಎಂದು ಸಂಬೋಧಿಸುತ್ತಿದ್ದಾರೆ.. ಈ ಬಗ್ಗೆ ನಿಮ್ಮ …

Read More »

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಆಟೋ ಚಾಲಕರು; ಇ- ಬೈಕ್ ಟ್ಯಾಕ್ಸಿ ನಿಲ್ಲಿಸಲು ಆಗ್ರಹ.

ಬೆಂಗಳೂರು: ಆಟೋ ಚಾಲಕರ ಪ್ರತಿಭಟನೆ ಶುರುಮಾಡಿದ್ದು ರಾಜ್ಯಸರ್ಕಾರಕ್ಕೆ ಆಟೋ ಚಾಲಕರ ಸಂಘ ಇ- ಬೈಕ್ ಟ್ಯಾಕ್ಸಿ ಈ ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಎರಡು ಸಾವಿರ ಆಟೋ ಡ್ರೈವರ್​ಗಳು ಪೋಸ್ಟಲ್ ಮೂಲಕ ಪ್ರಧಾನಮಂತ್ರಿಗೆ ಮನವಿ ಕಳುಹಿಸಲಿದ್ದು ಈ ಕೂಡಲೇ ಇ- ಬೈಕ್ ಟ್ಯಾಕ್ಸಿ ಹಾಗೂ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.   ಆಟೋ ಚಾಲಕರು ತಮ್ಮ ಮನವಿಯನ್ನು ಪರಿಗಣಿಸಲಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ …

Read More »