ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಸಾರಿಗೆ ಘಟಕದ ಚಾಲಕ ಕಂ ನಿರ್ವಾಹಕ ಸಿ.ಆರ್.ಪತ್ತೇಪೂರ ಅವರು ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಸಾಮಗ್ರಿ ಇರುವ ಬ್ಯಾಗ್ ಅನ್ನು ವಾರಸುದಾರರಿಗೆ ಮರಳಿಗೆ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ. ಮುದ್ದೇಬಿಹಾಳ- ನಾಲತವಾಡ-ನಾರಾಯಣಪುರ ತಡೆ ರಹಿತ ಬಸ್‍ಗೆ ಪತ್ತೇಪೂರ ಅವರು ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯದಲ್ಲಿದ್ದರು. ಸಂಜೆ 6 ಗಂಟೆ ಸುಮಾರಿಗೆ ಮುದ್ದೇಬಿಹಾಳದಿಂದ ನಾಲತವಾಡಕ್ಕೆ ಪ್ರಯಾಣಿಸಿದ್ದ …
Read More »Yearly Archives: 2022
ಬಿಸಿಯೂಟ ಅಡುಗೆ ಸಿಬಂದಿಗೂ ವಿಶೇಷ ತರಬೇತಿಗೆ ಇಲಾಖೆ ಸಿದ್ಧತೆ
ದಾವಣಗೆರೆ: ರಾಜ್ಯ ಸರಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಗೂ ಸಾಮಾಜಿಕ ಪರಿಶೋಧನ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಗೆ ಸಂಬಂಧಿಸಿ ಶುಚಿತ್ವ-ವ್ಯವಸ್ಥಿತ ನಿರ್ವಹಣೆ ಕುರಿತು ನೀಡಿದ ಮಹತ್ವದ ಶಿಫಾರಸುಗಳಿಗೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲ ಶಾಲೆಗಳ ಬಿಸಿಯೂಟ ಯೋಜನೆಯ ಅಡುಗೆ ಸಿಬಂದಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದೆ. ಶಾಲಾ ಅಡುಗೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗೆ ಪ್ರಸಕ್ತ ತಿಂಗಳಲ್ಲೇ ಒಂದು ದಿನದ ತರಬೇತಿ ನೀಡಲು ರಾಜ್ಯದ ಎಲ್ಲ ಶೈಕ್ಷಣಿಕ …
Read More »ಗೋವಾದಲ್ಲಿ ಕ್ರಿಸ್‍ಮಸ್ ಸಿದ್ಧತೆ ; ಭಾರಿ ಸಂಖ್ಯೆಯ ಪ್ರವಾಸಿಗರ ನಿರೀಕ್ಷೆ
ಪಣಜಿ: ಗೋವಾದಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು ಚರ್ಚ್ ಗಳಿಗೆ ಬಣ್ಣ ಬಡಿದು ಸಿಂಗರಿಸಲಾಗುತ್ತಿದ್ದು, ಕ್ರೈಸ್ತ ಬಾಂಧವರ ಮನೆಗಳಲ್ಲಿಯೂ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಕ್ರಿಸ್‍ಮಸ್ ಹಬ್ಬದೊಂದಿಗೆ ಹೊಸ ವರ್ಷ ಸಂಭ್ರಮಾಚರಣೆ ಕೂಡ ಆರಂಭಗೊಳ್ಳಲಿರುವುದರಿಂದ ಲಕ್ಷಾಂತರ ಸಮಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯನ್ನು ಗೋವಾದ ಪ್ರವಾಸೋದ್ಯಮ ಇಲಾಖೆ ಹೊಂದಿದೆ. ಮಾರುಕಟ್ಟೆಗಳಲ್ಲಿ ಕ್ರಿಸ್‍ಮಸ್ ಟ್ರಿ, ಸ್ಟಾರ್ ಗಳು, ಜಿಂಗಲ್‍ಬೆಲ್, ಸಾಂತಾಕ್ಲಾಸ್‍ಗಳು ಪ್ರಮುಖ ಆಕರ್ಷಣೆಯಾಗಿದೆ. ಮನೆ ಮನೆಯ ಮುಂದೆ …
Read More »ಕೌಜಲಗಿ: ಸಾಯಿ ಮಂದಿರ ವಾರ್ಷಿಕೋತ್ಸವ
ಕೌಜಲಗಿ: ಪಟ್ಟಣದ ಕಳ್ಳಿಗುದ್ದಿ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರದ ಪ್ರಥಮ ವಾರ್ಷಿಕೋತ್ಸವ ಗುರುವಾರ ಅತ್ಯಂತ ಶ್ರದ್ಧೆ-ಭಕ್ತಿಯಿಂದ ಜರುಗಿತು. ಕೌಜಲಗಿ ಸಾಯಿ ಸೇವಾ ಸಮಿತಿ ಹಾಗೂ ಸಮಸ್ತ ಭಕ್ತರ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಾತಃಕಾಲದಲ್ಲಿ ಸಾಯಿಬಾಬಾಗೆ ಮಹಾರುದ್ರಾಭಿಷೇಕ ಜರುಗಿತು. ಕೌಜಲಗಿ ಪ್ರದೇಶ ಅಭಿವೃದ್ಧಿ ಹಾಗೂ ಪ್ರಾಣಿಗಳ ಸಾಂಕ್ರಾಮಿಕ ಕಾಯಿಲೆ ನಿವಾರಣೆಗಾಗಿ ಪ್ರಾರ್ಥಿಸಿ ಈರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಹೋಮ- ಹವನಗಳು ಜರುಗಿದವು. ಅನಂತರ ಸಾಯಿಬಾಬಾ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕ್ಕಿಯು ಭಕ್ತ ಕನಕದಾಸ …
Read More »ಗೋಕಾಕ: ಬಿಜೆಪಿ ಯುವ ಮೋರ್ಚಾ ನಗರ ಹಾಗೂ ಗ್ರಾಮೀಣ ಮಂಡಲಗಳ ಕಾರ್ಯಕಾರಿಣಿ ಸಭೆಯನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿದರು.
ಗೋಕಾಕ: ಬಿಜೆಪಿ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾರ್ಯಕರ್ತರು ತಮ್ಮಲ್ಲಿರುವ ವೈಮನಸ್ಸುಗಳನ್ನು ಬದಿಗಿಟ್ಟು ಸರಕಾರದ ಸಾಧನೆಗಳನ್ನು ಮನೆ ಮನಗಳಿಗೆ ತಲುಪಿಸುವ ಕಾರ್ಯ ಯುವ ಮೋರ್ಚಾ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ಬಿಜೆಪಿ ಯುವ ಮೋರ್ಚಾ ನಗರ ಹಾಗೂ ಗ್ರಾಮೀಣ ಮಂಡಲಗಳ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರಕಾರ ಬಡವರ ದೀನ ದಲಿತರ …
Read More »ಬೆಳಗಾವಿ | ಕುಂದು ಕೊರತೆ: ಎರಡು ವರ್ಷದಿಂದ ನೀರು ಪೋಲು!
ಬೆಳಗಾವಿ: ಇಲ್ಲಿನ ಆದರ್ಶ ನಗರದ ಮುಖ್ಯರಸ್ತೆಯಲ್ಲಿ, ಕರ್ನಾಟಕ ಬ್ಯಾಂಕ್ ಇರುವ ಸ್ಥಳದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದು ಇಂದು ನಿನ್ನೆಯದಲ್ಲ; ಬರೋಬ್ಬರಿ ಎರಡು ವರ್ಷಗಳಿಂದ ಪೋಲಾಗುತ್ತಲೇ ಇದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ, ನೀರು ಪೂರೈಸುವ ಎಲ್ ಆಯಂಡ್ ಟಿ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಕೊಳವೆ ಮಾರ್ಗದಿಂದ ನಗರದ ಬಹುಪಾಲು ಕಡೆ ನೀರು ಹರಿಯುತ್ತದೆ. ಹಾಗಾಗಿ, …
Read More »ಹಿಂಡಲಗಾದಲ್ಲಿರುವ 215 ಕೈದಿಗಳ ನೇತ್ರ ತಪಾಸಣೆ
ಬೆಳಗಾವಿ: ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಈಚೆಗೆ ಜಿಲ್ಲಾ ಅಂಧತ್ವ ನಿವಾರಣಾಧಿಕಾರಿಗಳ ಕಾರ್ಯಾಲಯದ ಸಹಕಾರದೊಂದಿಗೆ ಕಾರಾಗೃಹದ 215 ಬಂದಿಗಳಿಗೆ ನೇತ್ರ ತಪಾಸನಾ ಶಿಬಿರ ನಡೆಯಿತು. ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ, ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಕೃಷ್ಣಕುಮಾರ ಮಾತನಾಡಿ, ‘ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ಅತೀ ಸೂಕ್ಷ್ಮವಾದ ಅಂಗ. ಇದರ ಬಗ್ಗೆ ತಿಳಿವಳಿಕೆ ಹಾಗೂ ಕಾಳಜಿ ಅತೀ ಅವಶ್ಯಕ. ಕಾರಾಗೃಹದಲ್ಲಿ ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. …
Read More »‘ನೆಮ್ಮದಿ ಜೀವನಕ್ಕಾಗಿ ಕಾನೂನು ಅವಶ್ಯ’
ಗೋಕಾಕ: ‘ನೆಮ್ಮದಿ ಜೀವನಕ್ಕಾಗಿ ರೂಪಿಸಿದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅವಶ್ಯಕ’ ಎಂದು ಇಲ್ಲಿನ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜೀವ ಗೋಳಸಾರ ಹೇಳಿದರು. ಇಲ್ಲಿನ ಸರ್ಕಾರ ಪ್ರೌಢಶಾಲೆಯಲ್ಲಿ ಈಚೆಗೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸಾಮಾಜಿಕ ನ್ಯಾಯ ತಾಲ್ಲೂಕು ಘಟಕ ಮತ್ತು ಶಿಕ್ಷಣ ಇಲಾಖೆ, ಪಂಚಾಯತ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ …
Read More »ಬೆಳಗಾವಿ: ಅಧಿವೇಶನಕ್ಕೆ ತರಾತುರಿಯಲ್ಲೇ ಕಾಮಗಾರಿ!
ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನ ಸಮೀಪಿಸುತ್ತಿದ್ದಂತೆ, ನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ತರಾತುರಿಯಲ್ಲಿ ನಡೆಯುತ್ತಿವೆ. ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ಶಾಸಕರು ವಾಸ್ತವ್ಯ ಹೂಡಲಿರುವ ಹೋಟೆಲ್‌ಗಳು ಹಾಗೂ ಪ್ರವಾಸಿ ಮಂದಿರಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಹಾನಗರ ಪಾಲಿಕೆ ಆದ್ಯತೆ ಮೇರೆಗೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿದೆ. ಆದರೆ, ಉಳಿದ ಮಾರ್ಗದ ರಸ್ತೆಗಳತ್ತ ಅಧಿಕಾರಿಗಳು ಗಮನ ಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗುಂಡಿಗಳನ್ನು ಮುಚ್ಚಲಾಗುತ್ತಿದೆ: ಈ ಬಾರಿ ಮಳೆಗಾಲದಲ್ಲಿ ನಗರದ ಹಲವು ಮಾರ್ಗಗಳ …
Read More »ಶರಣಮೇಳ: ಪ್ರಚಾರಕ್ಕೆ ಚಾಲನೆ
ಗೋಕಾಕ: ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ 2023ರ ಜನವರಿ 12, 13 ಮತ್ತು 14ರಂದು ನಡೆಯಲಿದೆ. ಈ 36ನೇ ಶರಣಮೇಳನದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ಮಾತೆ ಡಾ.ಗಂಗಾದೇವಿ ಕೋರಿದರು. ನಗರದಲ್ಲಿ ಈಚೆಗೆ ನಡೆದ ಶರಣ ಮೇಳದ ಪ್ರಚಾರ ಸಭೆಯಲ್ಲಿ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥ, ಭೇದವಿಲ್ಲದೆ ಶರಣ ಮೇಳದಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಬಸವಣ್ಣನವರ …
Read More »