Breaking News

Yearly Archives: 2022

ಬಳ್ಳಾರಿಗೆ ಭೇಟಿ ನೀಡಲು ಜನಾರ್ದನ ರೆಡ್ಡಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್​

ನವದೆಹಲಿ: ಮಾಜಿ ಸಚಿವ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂಕೋರ್ಟ್​ ಅನುಮತಿ ನೀಡಿದೆ. ಅವರ ಮಗಳನ್ನು ಭೇಟಿ ಮಾಡಲು ಹಾಗೂ ಬಳ್ಳಾರಿಯಲ್ಲಿ ನವೆಂಬರ್ 6 ರವರೆಗೆ ಇರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ವಿಚಾರಣೆ ಮುಗಿಯುವವರೆಗೂ ಬಳ್ಳಾರಿಯಿಂದ ದೂರ ಇರಿ: ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ವಿಶೇಷ ನ್ಯಾಯಾಲಯಕ್ಕೆ ನಿತ್ಯ ವಿಚಾರಣೆ ನಡೆಸುವಂತೆ ಮತ್ತು ನವೆಂಬರ್ 9, …

Read More »

ಬಸ್ ನಿಲ್ದಾಣದಲ್ಲಿ ಶಾಲಾ ಬಾಲಕಿಗೆ ತಾಳಿ ಕಟ್ಟಿದ ಕಾಲೇಜು ವಿದ್ಯಾರ್ಥಿ

ಕಡಲೂರು(ತಮಿಳುನಾಡು): ಚಿದಂಬರಂನ ಬಸ್​ ನಿಲ್ದಾಣವೊಂದರಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬರಿಗೆ ಕಾಲೇಜು ವಿದ್ಯಾರ್ಥಿಯೊಬ್ಬ ತಾಳಿ ಕಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮವಸ್ತ್ರದಲ್ಲಿರುವ ಶಾಲಾ ಬಾಲಕಿಯೊಬ್ಬಳು ಕಾಲೇಜು ವಿದ್ಯಾರ್ಥಿಯೊಂದಿಗೆ ಚಿದಂಬರಂನಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಸ್ ನಿಲ್ದಾಣದಲ್ಲಿ ಕುಳಿತು ತಾಳಿ ಕಟ್ಟಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿದೆ. ಬಸ್ ನಿಲ್ದಾಣದಲ್ಲಿ ಶಾಲಾ ಬಾಲಕಿಗೆ ತಾಳಿ ಕಟ್ಟಿದ ಕಾಲೇಜು ವಿದ್ಯಾರ್ಥಿವಿದ್ಯಾರ್ಥಿ ತನ್ನ ಜೇಬಿನಿಂದ ತಾಳಿ ದಾರವನ್ನು ತೆಗೆದು ಬಾಲಕಿಯ ಕುತ್ತಿಗೆಗೆ ಕಟ್ಟುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್​ ಮೂಲಕ ರೆಕಾರ್ಡ್​ …

Read More »

ಹೂಡಿಕೆದಾರರಿಗೆ ಹಣ ವಾಪಸ್ ನೀಡದೇ ವಂಚನೆ ಆರೋಪ : ಬೆಂಗಳೂರಿನಲ್ಲಿ ಶುಶೃತಿ ಸಹಕಾರ ಬ್ಯಾಂಕ್ ಸೇರಿ 14 ಕಡೆ `CCB’ ದಾಳಿ

ಬೆಂಗಳೂರು : ಹೂಡಿಕೆದಾರರಿಗೆ ಹಣ ವಾಪಸ್ ನೀಡದೇ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶುಶೃತಿ ಸಹಕಾರ ಬ್ಯಾಂಕ್ ನ ಕೇಂದ್ರ ಕಚೇರಿ ಸೇರಿದಂತೆ 14 ಕಡೆ ದಾಳಿ ನಡೆಸಿದೆ.   ಇಂದು ಬೆಂಗಳೂರಿನ ಶುಶೃತಿ ಸಹಕಾರ ಬ್ಯಾಂಕ್ ಕೇಂದ್ರ ಕಚೇರಿ ಸೇರಿದಂತೆ 14 ಕಚೇರಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.ಬೆಂಗಳೂರಿನ ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ ಸೇರಿದಂತೆ ಹಲವಡೆ ಐವರು ಎಸಿಪಿ ಸೇರಿದಂತೆ 60 ಕ್ಕೂ …

Read More »

ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ‌ಬ್ಯಾನರ್‌ ತೆರವು; ಪಾಲಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡರ ಆಕ್ರೋಶ

ಬಳ್ಳಾರಿ: ಜಿಲ್ಲೆಯಲ್ಲಿ ಪಾಲಿಕೆ ವತಿಯಿಂದ ರಾತ್ರೋರಾತ್ರಿ ಜೆಸಿಬಿ ಮೂಲಕ ಬ್ಯಾನರ್‌ ತೆರವುಗೊಳಿಸಿದಕ್ಕೆ ಮಹಾನಗರ ಪಾಲಿಕೆ ವಿರುದ್ಧ ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ನಗರದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಪರವಾನಗಿ ಇಲ್ಲದೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಲಾಗಿತ್ತು. ಪಾಲಿಕೆ ಆಯುಕ್ತ ರುದ್ರೇಶ್ ನೇತೃತ್ವದಲ್ಲಿ ಸಂಗಮ್ಮ ಸರ್ಕಲ್​​, ರಾಯಲ್ ಸರ್ಕಲ್ ಸೇರಿದಂತೆ ಹಲವೆಡೆ ಬ್ಯಾನರ್ ತೆರವುಗೊಳಿಸಲಾಯಿತು. ಸಮಾವೇಶ ಹಿನ್ನೆಲೆ ಅತಿ ಹೆಚ್ಚು ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಬ್ಯಾನರ್ …

Read More »

ಬೆಂಗಳೂರಲ್ಲಿ ಆಪರೇಷನ್‌ ಬುಲ್ಡೋಜರ್‌ಗೆ ದಂಪತಿಗಳ ಹೈಡ್ರಾಮ : ಪೆಟ್ರೋಲ್‌ ಹಿಡಿದು ಆತ್ಮಹತ್ಯೆ ಮಾಡುವ ಬೆದರಿಕೆ

ಬೆಂಗಳೂರು : ರಾಜಕಾಲುವೆ ಒತ್ತುವರಿ ಸಮಯದಲ್ಲಿ ಮನೆಗಳನ್ನು ಒಡೆಯದಂತೆ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ದಂಪತಿಗಳ ಬೆದರಿಕೆಗೆ ಸುಸ್ತುಹೊಡೆದು ಹೋಗಿದ್ದಾರೆ.   ಕೆ.ಆರ್‌ ಪುರಂನ ಗಾಯತ್ರಿ ಲೇಔಟ್‌ನಲ್ಲಿ ಬಿಡಿಎ ಸೈಟ್‌ಗಳನ್ನು ದಂಪತಿಗಳಿಬ್ಬರು ಖರೀದಿಸಿದ್ದರು ಇದೀಗ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದೀರಿ ಎಂದು ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ . ಅದಕ್ಕಾಗಿ ಪೆಟ್ರೋಲ್‌ ಹಿಡಿದುಕೊಂಡು ಆತ್ಮಹತ್ಯೆ ಮಾಡುತ್ತೇವೆಂದು ದಂಪತಿಗಳಿಬ್ಬರು ರಾಜಕಾಲುವೆ ಮೇಲೆ ನಿಂತು ಬೆದರಿಕೆ ಹಾಕುತ್ತಿದ್ದಾರೆ. ಮನೆ …

Read More »

ದಲಿತರ ಮನೆಯಲ್ಲಿ ತಿಂಡಿ ಸವಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ

ಹೊಸಪೇಟೆ : ಕಮಲಾಪುರ ಗ್ರಾಮದ ಅಂಬೇಡ್ಕರ್ ನಗರದ ದಲಿತ ಸಮುದಾಯಕ್ಕೆ ಸೇರಿದ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆತಿಥ್ಯ ಸ್ವೀಕಾರಿಸಿದರು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ್ ಸಿಂಗ್ ಅವರೊಂದಿಗೆ ಆಗಮಿಸಿದ ಮುಖ್ಯಮಂತ್ರಿಗಳು ಕಮಲಾಪುರ ಅಂಬೇಡ್ಕರ್ ನಗರದ ದಲಿತ ಹಿರಾಳ ಕೊಲ್ಲಾರಪ್ಪ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಸವಿದರು. ಇದೇ ವೇಳೆ ದಲಿತರ ಮನೆಯಲ್ಲಿ ಉಪಹಾರ …

Read More »

ಡಿನೋಟಿಫಿಕೇಶನ್ ಅಕ್ರಮ ಆರೋಪ : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು : ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಡಿನೋಟಿಫಿಕೇಶನ್ ಅಕ್ರಮ ಆರೋಪ ಸಂಬಂಧ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.   ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಬೆಂಗಳೂರಿನ ಸಿದ್ದಾಪುರ ಮತ್ತು ಭೂಪಸಂದ್ರದಲ್ಲಿ ಡಿ ನೋಟಿಫಿಕೇಶನ್ ಸಿದ್ದಾಪುರ-200 ಕೋಟಿ ಅಕ್ರಮ ಮತ್ತು ಭೂಪಸಂದ್ರದಲ್ಲಿ 350 ಕೋಟಿ ಅಕ್ರಮದ ಆರೋಪ ಕೇಳಿ ಬಂದಿತ್ತು. ಈಗ ಡಿನೋಟಿಫಿಕೇಶನ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳ ಸಮೇತ ಬಿಜೆಪಿ ನಾಯಕ ಎನ್.ಆರ್.ರಮೇಶ್ …

Read More »

ಬ್ರೇಕ್ ಫೇಲ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್

ಬೆಳಗಾವಿ : ಜಿಲ್ಲೆಯ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್​ನ ಬ್ರೇಕ್ ಫೇಲ್ ಆದ ಹಿನ್ನೆಲೆ ಕಬ್ಬಿನ ಗದ್ದೆಗೆ ನುಗ್ಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಜಿಲ್ಲೆಯ ‌ಯರಗಟ್ಟಿ ತಾಲೂಕಿನ ಸೋಮಾಪುರ ಗ್ರಾಮದಿಂದ ತಲ್ಲೂರು ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬಳಿಕ ನಿಯಂತ್ರಣ ತಪ್ಪಿ ತಲ್ಲೂರ ಗ್ರಾಮದ ಬಾಬು ಪಕಾಲಿ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಗೆ …

Read More »

ಭೋರ್ಗರೆವ ಹಳ್ಳದಲ್ಲೇ ಹಾಲಸಿದ್ಧನಾಥನ ಪಲ್ಲಕ್ಕಿ ಹೊತ್ತು ಸಾಗಿದ ಭಕ್ತರು

ಬೆಳಗಾವಿ: ಭೋರ್ಗರೆಯುತ್ತಿರುವ ಹಳ್ಳದಲ್ಲೇ ಸಾವಿರಾರು ಭಕ್ತರು ಹಾಲಸಿದ್ಧನಾಥನ ಪಲ್ಲಕ್ಕಿ ಹೊತ್ತು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದಿಂದ ಅಪ್ಪಾಚಿವಾಡಿ ಗ್ರಾಮಕ್ಕೆ ಸಾಗಿದರು. ಪ್ರತಿ ವರ್ಷ ಹಾಲಸಿದ್ಧನಾಥ ಜಾತ್ರೆ ವೇಳೆ ಅಪ್ಪಾಚಿವಾಡಿಗೆ ಕುರ್ಲಿ ಗ್ರಾಮದಿಂದ ಪಲ್ಲಕ್ಕಿ ಸಾಗಿಸಲಾಗುತ್ತದೆ. ಬಳಿಕ ಎರಡೂ ಗ್ರಾಮದ ಜನರು ಸೇರಿ ಐದು ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೆ ಮಾಡುತ್ತಾರೆ. ಈ ಎರಡು ಗ್ರಾಮದ ಮಧ್ಯೆ ಗುಮ್ಮಟ ಹಳ್ಳ ಹರಿಯುತ್ತದೆ. ಈ ಹಳ್ಳ ವೇದಗಂಗಾ ನದಿಯ ಸಮೀಪವಿದೆ. …

Read More »

ಕರ್ನಾಟಕ ಇತಿಹಾಸದಲ್ಲಿ 12ನೇ ಶತಮಾನ ಸುವರ್ಣ ಯುಗ

ಮುದ್ದೇಬಿಹಾಳ: ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಸುವರ್ಣ ಯುಗ ಎನ್ನಿಸಿಕೊಂಡಿದೆ. ಅದು ಶರಣರ ಯುಗವಾಗಿತ್ತು. ವಚನ ಸಾಹಿತ್ಯ ಎನ್ನುವ ವಿಶಿಷ್ಟ ಸಾಹಿತ್ಯದ ಪ್ರಾಕಾರ ಕಣ್ಣು ತೆರೆದುಕೊಂಡ ಕಾಲ ಅದಾಗಿತ್ತು. ವಚನ ಸಾಹಿತ್ಯವು ವಿಶ್ವ ಸಾಹಿತ್ಯ ಪ್ರಪಂಚಕ್ಕೆ ಕನ್ನಡ ಸಾಹಿತ್ಯ ಪರಂಪರೆ ನೀಡಿದ ಅಮೂಲ್ಯ ರತ್ನ ಎನ್ನಿಸಿಕೊಂಡಿದೆ ಎಂದು ವಿಜಯಪುರದ ಅಂಕಣಕಾರ, ಸಾಹಿತಿ ಮಂಜುನಾಥ ಜುನಗೊಂಡ ಹೇಳಿದರು.   ಇಲ್ಲಿನ ಎಂಜಿವಿಸಿ ಡಿಇಡಿ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌, ಎಸ್‌ಜಿವಿಸಿ ವಿದ್ಯಾಪ್ರಸಾರಕ …

Read More »