ಬೆಳಗಾವಿ: ಕಳಂಕಿತರಾಗಿಯೇ ಮುಂದಿನ ಚುನಾವಣೆ ಎದುರಿಸಲು ಸಿದ್ಧರಿಲ್ಲದವರ ಧ್ವನಿಗೆ ಬಿಜೆಪಿ ವರಿಷ್ಠರು ಓಗೊಟ್ಟಿದ್ದು, ಜನವರಿ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಜ್ಜಾಗಿದ್ದಾರೆ. ಈ ಕುರಿತು ಸ್ಪಷ್ಟ ಸುಳಿವು ಲಭಿಸಿದ ಕಾರಣಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ದನಿಯಲ್ಲಿ ದಿಢೀರ್ ಬದಲಾವಣೆಯಾಗಿದ್ದು, ರಮೇಶ ಜಾರಕಿಹೊಳಿಗೂ ಭರವಸೆ ಸಿಕ್ಕಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆರೋಪಮುಕ್ತರಾಗಿರುವ ಕಾರಣ ಸಂಪುಟಕ್ಕೆ ಮತ್ತೆ ಸೇರಿಸಿಕೊಂಡು ಕಳಂಕದಿಂದ ಪಾರುಮಾಡಿ ಎನ್ನುವುದು ಈಶ್ವರಪ್ಪ ಹಾಗೂ ಜಾರಕಿಹೊಳಿ ವಾದವಾಗಿದೆ. ಎದುರಾಳಿಗಳ …
Read More »Yearly Archives: 2022
ಮೂಡಲಗಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆ: ಸಚಿವ ಆರ್.ಅಶೋಕ್
ಮೂಡಲಗಿ: ಮೂಡಲಗಿ ತಾಲೂಕಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ನೂತನ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಹೊಸ ತಾಲೂಕುಗಳ ಪೈಕಿ ಮೂಡಲಗಿ ತಾಲೂಕಿಗೆ ಮಾತ್ರ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಆರಂಭಿಸಲಾಗಿದ್ದು, ಇದಕ್ಕೆ ಇಲ್ಲಿನ ಜನಪ್ರೀಯ ಶಾಸಕ …
Read More »ದೇಗುಲಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಶಿಫಾರಸು
ಸುವರ್ಣ ವಿಧಾನಸೌಧ: ರಾಜ್ಯ ಮುಜರಾಯಿ ದೇವಸ್ಥಾನಗಳ ಪ್ರವೇಶ ದ್ವಾರದಲ್ಲಿ ದೇವಸ್ಥಾನದ ಒಳಗೆ ಎಲ್ಲ ಜಾತಿಯವರಿಗೂ ಮುಕ್ತ ಅವಕಾಶ ಇರುತ್ತದೆ ಎಂಬ ಬೋರ್ಡ್ ಅಳವಡಿಸುವ ಮೂಲಕ ಎಲ್ಲರಿಗೂ ದೇವಸ್ಥಾನದ ಒಳಗೆ ಪ್ರವೇಶಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ವಿಧಾನ ಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 6ನೇ ವರದಿಯಲ್ಲಿ ಸರ್ಕಾರಕ್ಕೆ ಈ ಶಿಫಾರಸು ಮಾಡಿದೆ. ಮಂಗಳವಾರ ವಿಧಾನಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ವರದಿಯನ್ನು ಮಂಡಿಸಿದರು. ರಾಜ್ಯದಲ್ಲಿ ಪರಿಶಿಷ್ಟ ಹಾಗೂ …
Read More »ಕೇಂದ್ರ ಸರ್ಕಾರದ “ಸಹಕಾರ ಸಚಿವಾಲಯದ”ಬಹುರಾಜ್ಯ ಸಹಕಾರಿ ಸಂಘಗಳ ಜಂಟಿ ಸಮಿತಿಯ ಸದಸ್ಯರಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಯ್ಕೆ
ಚಿಕ್ಕೋಡಿ: ಕೇಂದ್ರ ಸರ್ಕಾರದ “ಸಹಕಾರ ಸಚಿವಾಲಯದ”ಬಹು-ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ, 2022ರ ಜಂಟಿ ಸಮಿತಿಯ ಸದಸ್ಯರಾಗಿ ಚಿಕ್ಕೋಡಿ ಅಣ್ಣಾಸಾಹೇಬ ಜೊಲ್ಲೆ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಯಲ್ಲಿ ಬಹುರಾಜ್ಯ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆ,-2022 ಕಾಯ್ದೆಯಲ್ಲಿ ಲೋಕಸಭಾ ಸದಸ್ಯರನ್ನುಳಗೊಂಡಿರುವ ಹಾಗೂ ರಾಜ್ಯ ಸಭಾ ಸದಸ್ಯರ ಜಂಟಿ ಸಮಿತಿಯ ರಚನೆಯಲ್ಲಿ ಚಿಕ್ಕೋಡಿಯ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಆಯ್ಕೆಯಾಗಿದ್ದಾರೆ. …
Read More »ಹಲಾಲ್ ವಿಚಾರ ಸರ್ಕಾರಕ್ಕೆ ಸಂಬಂಧವಿಲ್ಲ: ಸಿಎಂ ಬೊಮ್ಮಾಯಿ
ಬೆಳಗಾವಿ: ಹಲಾಲ್ ವಿಚಾರಕ್ಕೂ, ಸರಕಾರಕ್ಕೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಹಲಾಲ್ ಕುರಿತ ಯಾವುದೇ ವಿಚಾರ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಜಗತ್ತು ಬಹಳಷ್ಟು ಮುಂದುವರಿದಿದೆ. ಹಾಗೆಯೇ ಸರಕಾರವು ಅಭಿವೃದ್ಧಿ ಕುರಿತು ಯೋಚಿಸುತ್ತಿದೆ ಎಂದರು. ರಮೇಶ ಜಾರಕಿಹೊಳಿ ಮತ್ತು ಈಶ್ವರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಬಹಿಷ್ಕಾರವಲ್ಲ. ತಮ್ಮ ಮೇಲಿದ್ದ ಪ್ರಕರಣಗಳಲ್ಲಿ ಮುಕ್ತರಾದ ಮೇಲೆ ಮತ್ತೂಮ್ಮೆ ಸಂಪುಟಕ್ಕೆ ಸೇರಬೇಕೆನ್ನುವ ಅವರ ಚಿಂತನೆ ಸರಿಯಿದೆ. ಅವರ ವಿಚಾರವನ್ನು …
Read More »7 ದಿನಗಳಲ್ಲಿ ಭೂ ಪರಿವರ್ತನೆ ಕಡ್ಡಾಯ: ರಾಜ್ಯದ ಇತರ ಜಿಲ್ಲೆಗಳಲ್ಲಿ ಹೂಡಿಕೆ ಉತ್ತೇಜನ
ಬೆಳಗಾವಿ: ಕೃಷಿ ಭೂಮಿ ಕೃಷಿಯೇತರ ಬಳಕೆಗೆ ಪರಿವರ್ತನೆ 7 ದಿನಗಳಲ್ಲಿ ಕಡ್ಡಾಯವಾಗಿ ಮಾಡಿಕೊಡುವ ಉದ್ದೇಶದ ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ಮಸೂದೆ ಹಾಗೂ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೈಗಾರಿಕೆ ಉತ್ತೇಜಿಸಿ ಹೆಚ್ಚಿನ ಹೂಡಿಕೆ ತರುವ ಉದ್ದೇಶದ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. ಸಚಿವ ಮುರುಗೇಶ್ ನಿರಾಣಿ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಕರ್ನಾಟಕ …
Read More »ಸೇಂದಿವನ ಜಾಗದಲ್ಲಿ ರೈತರಿಗೆ ಸಾಗುವಳಿ ಚೀಟಿ: ಅಶೋಕ್
ಸುವರ್ಣವಿಧಾನಸೌಧ: ಸೇಂದಿವನ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ತೀರ್ಮಾನಿಸಿದೆ. ಕಾಫಿ ತೋಟ ಒತ್ತುವರಿ ಸಕ್ರಮಕ್ಕಾಗಿ ನಿಯಮಾವಳಿ ರೂಪಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರ ಬಂದ ನಂತರ ಪ್ರಮುಖವಾಗಿ ಮಲೆನಾಡು, ಕರಾವಳಿ ಭಾಗದ ರೈತರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದೆ. ಕಾಫಿ ತೋಟ ಒತ್ತುವರಿ ಸಕ್ರಮ ಮಾಡಿ ಗುತ್ತಿಗೆಗೆ ನೀಡಲು ತೀರ್ಮಾನಿಸಿ ನಿಯಮಾವಳಿ …
Read More »ಮಜೂರು ಗ್ರಾಪಂ ವ್ಯಾಪ್ತಿಯ ಐಎಸ್‌ಆರ್‌ಎಲ್‌ನಿಂದ ತೆರಿಗೆ ವಸೂಲಿಗೆ ಕ್ರಮ
ಸುವರ್ಣ ವಿಧಾನಸೌಧ: ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿನ ಐಎಸ್‌ಆರ್‌ಎಲ್ ಸಂಸ್ಥೆಯಿಂದ ಗ್ರಾಪಂಗೆ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಂಸ್ಥೆಯವರೊಂದಿಗೆ ಚರ್ಚಿಸಿ ತೆರಿಗೆ ಮೊತ್ತ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಸಚಿವ ಮುರುಗೇಶ ನಿರಾಣಿ ಹೇಳಿದರು. ವಿಧಾನಪರಿಷತ್‌ನಲ್ಲಿ ಬಿಜೆಪಿಯ ಕೆ. ಪ್ರತಾಪಸಿಂಹ ನಾಯಕ್ ವಿಷಯ ಪ್ರಸ್ತಾಪಿಸಿ, ಐಎಸ್‌ಪಿಆರ್‌ಎಲ್ ಸಂಸ್ಥೆ ಪಾದೂರು ಗ್ರಾಮದಲ್ಲಿ ಮೊದಲ ಹಂತದಲ್ಲಿ 180 ಎಕರೆಯಲ್ಲಿ ಕೈಗಾರಿಕೆ …
Read More »ಚರ್ಮಗಂಟು ರೋಗದ ಹಾವಳಿ 21 ಸಾವಿರ ಹಸು ಬಲಿ
ಬೆಂಗಳೂರು: ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದ್ದರೂ ಸುಮಾರು 21,305 ಜಾನುವಾರುಗಳು ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ. ರಾಜ್ಯದ ಸುಮಾರು 230 ತಾಲೂಕುಗಳ 15,977 ಗ್ರಾಮಗಳಲ್ಲಿ ಈವರೆಗೆ 2,37,194 ರಾಸುಗಳಿಗೆ ಚರ್ಮಗಂಟು ರೋಗ ಬಾಧಿಸಿದ್ದು, ಈ ಪೈಕಿ 1.64 ಲಕ್ಷ ರಾಸುಗಳು ಚೇತರಿಕೆಯಾಗಿವೆ. ಇನ್ನುಳಿದ ರಾಸುಗಳಿಗೆ ಸರಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಸಿಬಂದಿ ಇಲ್ಲದೆ ಲಸಿಕೆ ತಲುಪುತ್ತಿಲ್ಲ ಎಂಬ ಸಂಗತಿ “ಉದಯವಾಣಿ’ ನಡೆಸಿದ ಜಿಲ್ಲಾವಾರು ಮಾಹಿತಿ ಸಂಗ್ರಹದಿಂದ ಬೆಳಕಿಗೆ ಬಂದಿದೆ. …
Read More »ಹಳೆ ಪಿಂಚಣಿ ಪದ್ಧತಿಗೆ ಆಗ್ರಹ; ಹೊಸ ಪಿಂಚಣಿ ವ್ಯವಸ್ಥೆಗೆ ಕಾಂಗ್ರೆಸ್, ಜೆಡಿಎಸ್ ವಿರೋಧ
ಬೆಳಗಾವಿ: ನೂತನ ಪಿಂಚಣಿ ಯೋಜನೆ ರದ್ದತಿಗಾಗಿ ನಡೆಯುತ್ತಿರುವ ಹೋರಾಟ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿ ಕೆಲಕಾಲ ವಾತಾವರಣವನ್ನು ಕಾವೇರಿಸಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಚರ್ಚೆಗೆ ಅವಕಾಶ ಕಲ್ಪಿಸಬೇಕು ಹಾಗೂ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು. ಸಾವಿರಾರು ಮಂದಿ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಆಡಳಿತ ವ್ಯವಸ್ಥೆಯೂ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಯವರು ಧರಣಿ ನಿರತರ ಜತೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು. ಈ ವೇಳೆ …
Read More »