ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ‘ಹಾವು’ ಬಿಡುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅದು ಭ್ರಷ್ಟಾಚಾರದ ಹಾವೇ? ಎಂದು ಕುಟುಕಿದೆ. ಯತ್ನಾಳ ಅವರ ಹೇಳಿಕೆಯ ವರದಿಯನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಪಕ್ಷದವರ ಹಾವುಗಳು ಎಲ್ಲೆಲ್ಲಿರುತ್ತವೆ, ಎಲ್ಲೆಲ್ಲಿ ಹೆಡೆ ಎತ್ತುತ್ತವೆ ಎಂಬುದು ಸ್ವತಃ ಅವರಿಗೇ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದೆ. ಯತ್ನಾಳ ಅವರ ಹೇಳಿಕೆಯ ವರದಿಯನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಪಕ್ಷದವರ ಹಾವುಗಳು ಎಲ್ಲೆಲ್ಲಿರುತ್ತವೆ, …
Read More »Yearly Archives: 2022
ಮುರುಘಾಶರಣರ ವಿರುದ್ಧದ ಪೋಕ್ಸೊ ಪ್ರಕರಣ: ದೊರೆಯದ ಬೀಗದ ಕೈ; ನಡೆಯದ ಸ್ಥಳ ಮಹಜರು
ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರ ವಿರುದ್ಧದ ಎರಡನೇ ಪೋಕ್ಸೊ ಪ್ರಕರಣದ ಸಂಬಂಧ ಮಹಜರು ನಡೆಸಲು ಸಂತ್ರಸ್ತ ಬಾಲಕಿಯರ ಜತೆ ಮಂಗಳವಾರ ಮಠಕ್ಕೆ ತೆರಳಿದ್ದ ತನಿಖಾ ತಂಡದವರು, ಕೊಠಡಿಗಳ ಬೀಗದ ಕೀ ಸಿಗದೇ ವಾಪಸಾಗಿದ್ದಾರೆ. ತನಿಖಾಧಿಕಾರಿಗಳು ಮೈಸೂರಿನಿಂದ ಚಿತ್ರದುರ್ಗಕ್ಕೆ ಬಾಲಕಿಯರನ್ನು ಕರೆದುಕೊಂಡು ಬಂದಿದ್ದರು. ಮಠದಲ್ಲಿನ ಮುರುಘಾ ಶರಣರ ಕಚೇರಿ, ವಿಶ್ರಾಂತಿ ಕೊಠಡಿಗಳಿಗೆ ತೆರಳಿ ಮಹಜರು ನಡೆಸಲು ಸಿದ್ಧತೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕೊಠಡಿಗಳಿಗೆ ಹಾಕಲಾಗಿದ್ದ ಬೀಗದ …
Read More »ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ – C.M. ಇಬ್ರಾಹಿಂ
ದಾವಣಗೆರೆ: ಮುಸ್ಲಿಮರನ್ನು ಯಾವ ಪಕ್ಷದಲ್ಲೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ಕಾಂಗ್ರೆಸ್ (Congress) ಪಕ್ಷದಲ್ಲಿ ಮುಸ್ಲಿಮರಿಗೆ ಊಟದ ಕೊನೆಯಲ್ಲಿ ಅಳಿದುಳಿದ ಎಂಜಲು ರೀತಿಯಲ್ಲಿ ಸ್ಥಾನಮಾನ ನೀಡ್ತಿದ್ರು. ಆದರೆ ಜೆಡಿಎಸ್ (JDS) ರಾಜ್ಯಾಧ್ಯಕ್ಷರ ಸ್ಥಾನ ನೀಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಹೇಳಿದ್ದಾರೆ. ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಮಲೆಬೇನ್ನೂರು ಗ್ರಾಮದಲ್ಲಿ ಸಾರ್ವಜನಿಕ ಸಭೆ ಮಾಡಿ ಹಬೀವುಲ್ಲಾ ಷಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ನಾವು ಗುರುವಾರದ …
Read More »ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರಲ್ಲಿ ಓರ್ವ ನಾಪತ್ತೆ,ಮುಂದುವರಿದ ಶೋಧ ಕಾರ್ಯ
ಬೆಳಗಾವಿ ತಾಲೂಕಿನ ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರಲ್ಲಿ ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮಂಗಳವಾರ ಸಾಯಂಕಾಲ ಮೂವರು ಸ್ನೇಹಿತರು ದೀಪಾವಳಿ ಹಬ್ಬದ ಮೋಜು ಮಸ್ತಿ ಮಾಡುತ್ತಾ, ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಓರ್ವ ಬಹಳ ಸಮಯದವರೆಗೆ ಮೇಲೆ ಬಂದಿಲ್ಲ. ಹೀಗೆ ನೀರಿನಲ್ಲಿ ನಾಪತ್ತೆಯಾಗಿರುವ ಯುವಕನ ಹೆಸರು 22 ವರ್ಷದ ಸತೀಶ ಎನ್ನಲಾಗುತ್ತಿದೆ. ಈತ …
Read More »ಮಂಡ್ಯ ಬಾಲಕಿಯ ಅತ್ಯಾಚಾರ, ಕೊಲೆ ಕೇಸ್: ಚಾರ್ಜ್ಶೀಟ್ನಲ್ಲಿ ಕೀಚಕ ಕಾಂತರಾಜ್ನ ಕರಾಳ ಇತಿಹಾಸ ಬಯಲು
ಮಂಡ್ಯ ಬಾಲಕಿಯ ಅತ್ಯಾಚಾರ, ಕೊಲೆ ಕೇಸ್: ಚಾರ್ಜ್ಶೀಟ್ನಲ್ಲಿ ಕೀಚಕ ಕಾಂತರಾಜ್ನ ಕರಾಳ ಇತಿಹಾಸ ಬಯಲು ಮಂಡ್ಯ: ಅ.11 ರಂದು ಮಳವಳ್ಳಿಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಎರಡೇ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 638 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಪೊಲೀಸರು, ಟ್ಯೂಷನ್ ಮೇಲ್ವಿಚಾರಕ ಎಸಗಿದ ಭಯಾನಕ ಕೃತ್ಯವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಅ. 11ರಂದು ಟ್ಯೂಷನ್ ಮೇಲ್ವಿಚಾರಕ ಕಾಂತರಾಜು …
Read More »ವೇಷದೊಳಗೊಬ್ಬ ಆಪದ್ಬಾಂಧವ; ನೊಂದ ಮಕ್ಕಳ ಆಶಾಕಿರಣ ಈ ರವಿ..
ವರ್ಷಕ್ಕೆ ಎರಡೇ ದಿನ ವೇಷ.. ಹೀಗೆ 8 ವರ್ಷಗಳಿಂದ ವೇಷ ಹಾಕಿ ತಿರುಗಿ ಹಣ ಸಂಗ್ರಹಿಸಿ ಅನಾರೋಗ್ಯದಲ್ಲಿದ್ದ ಮಕ್ಕಳ ಚಿಕಿತ್ಸೆಗೆ ಪೂರ್ತಿಯಾಗಿ ಕೊಟ್ಟಿರುವ ಇವರು ಆ ಮಕ್ಕಳ ಪಾಲಿಗೆ ಆಪದ್ಬಾಂಧವ. ಇನ್ನೂ ಇರುವ ಅಂಥ ಇತರ ಮಕ್ಕಳ ಪಾಲಿಗೆ ಆಶಾಕಿರಣ. ರವಿಕಾಂತ ಕುಂದಾಪುರ ‘ಉದರನಿಮಿತ್ತಂ ಬಹುಕೃತ ವೇಷಂ..’ ಹೌದು.. ಹೊಟ್ಟೆಪಾಡಿಗಾಗಿ ಹಲವರು ನಾನಾ ವೇಷ ಹಾಕುತ್ತಾರೆ. ಆದರೆ ಇಲ್ಲೊಬ್ಬರು ನಾನಾ ವೇಷ ಹಾಕುತ್ತಾರಾದರೂ ಅದು ಹೊಟ್ಟೆಪಾಡಿಗಲ್ಲ. ಅವರ ವೇಷ …
Read More »ರಾಜ್ಯದಲ್ಲಿ ತಾಪಮಾನ ಭಾರಿ ಕುಸಿತ : ಮೈನಡುಗುವ ಚಳಿಗೆ ಹೊರಬಾರದ ಜನ!
ಬೆಂಗಳೂರು : ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಾಮಾನ ಭಾರೀ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿ ಹೆಚ್ಚಳವಾಗಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ರಾಜ್ಯದ ಶೇ. 73 ರಷ್ಟು ಭೂ ಭಾಗದಲ್ಲಿ 12 ರಿಂ ದ16 ಡಿಗ್ರಿ ಸೆಲ್ಸಿಯಸ್ …
Read More »ದೀಪಾವಳಿ ವಿಶೇಷ; ಬಲಿಪಾಡ್ಯದ ಮಹತ್ವ
ಐದು ದಿನಗಳ ಕಾಲ ಶ್ರದ್ಧಾಭಕ್ತಿ-ಸಡಗರದಿಂದ ಆಚರಿಸುವ ಹಬ್ಬ ದೀಪಾವಳಿ. ಇದರಲ್ಲಿ ಬಲಿಪಾಡ್ಯವನ್ನು ಈ ಬಾರಿ ಅ. 26ರಂದು ಆಚರಿಸಲಾಗುತ್ತದೆ. ವಾಮನನು ತ್ರಿವಿಕ್ರಮರೂಪಿಯಾಗಿ ಬಲಿಚಕ್ರವರ್ತಿಯನ್ನು ಸುತಲಲೋಕಕ್ಕೆ ಕಳುಹಿಸಿದ ದಿನವೇ ಬಲಿಪ್ರತಿಪತ್. ಮಹಾಧಾರ್ವಿುಕನಾದ ಬಲಿಮಹಾರಾಜನಿಗೂ ತಾನು ಎಲ್ಲವನ್ನು ಗೆದ್ದ ಮಹಾಚಕ್ರವರ್ತಿ ಎಂಬ ಅಹಂಕಾರ ಬಂದಿತು. ಆ ಅಹಂಕಾರವನ್ನು ನಾಶಗೊಳಿಸಬೇಕೆಂದೇ ನಾರಾಯಣನು ವಾಮನರೂಪಿಯಾಗಿ ಬಂದು ಮೂರು ಪಾದ ಭೂಮಿಯನ್ನು ದಾನವಾಗಿ ಕೇಳಿದನು. ಸರ್ವಸ್ವವೂ ನನ್ನಾಧೀನದಲ್ಲಿರುವಾಗ ಬೇಕಾದ್ದನ್ನು ಕೊಡುವೆ ಎಂಬ ಅಹಂಕಾರದಿಂದ ಬಲಿಯು ಹೇಳುತ್ತಾನೆ. ಅದಕ್ಕೆ …
Read More »ಮನೆ ಕಳ್ಳತನ: ಆರೋಪಿಗಳ ಬಂಧನ;15.64 ಲಕ್ಷ ರೂ. ಮೌಲ್ಯದ ಆಭರಣ ವಶ
ಚಿಕ್ಕೋಡಿ: ಹಗಲು ವೇಳೆಯಲ್ಲಿ ಮನೆ ಕೀಲಿ ಮುರಿದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಸುಮಾರು 15.64 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ದಿ.12 10 2022 ರಂದು ಚಿಕ್ಕೋಡಿ ನಗರದ ವಿಷ್ಣು ಪ್ರಕಾಶ ನೇತಲಕರ ಅವರ ಮನೆ ಕೀಲಿ ಮುರಿದು 370 ಗ್ರಾಂ ಬಂಗಾರ ಆಭರಣ. 1.50 ಲಕ್ಣ ರೂ. ನಗದು ಹಣ ಹೀಗೆ 12.61 ಲಕ್ಷ ರೂ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರು …
Read More »ದೀಪಗಳ ಬೆಳಕಿನಲ್ಲಿ ತೇಲಾಡಿದ.ಕಿತ್ತೂರು ಸಾಮ್ರಾಜ್ಯ
ಸರಿಯಾಗಿ 198 ವರ್ಷಗಳ ಹಿಂದಿನ ನೆನಪು. ಸಂಜೆ ಸೂರ್ಯಾಸ್ತದ ಸಮಯ. ದಿನವಿಡೀ ಬೆಳಕು ನೀಡಿದ್ದ ಸೂರ್ಯದೇವ ವಿಶ್ರಾಂತಿಗೆ ಜಾರುತ್ತಿದ್ದ. ಆದರೆ ಕಿತ್ತೂರು ಸಂಸ್ಥಾನದ ರಾಜಧಾನಿ ಕಿತ್ತೂರಿನಲ್ಲಿ ವಾತಾವರಣ ಉಳಿದೆಲ್ಲ ದಿನಕ್ಕಿಂತ ಭಿನ್ನವಾಗಿತ್ತು. ಸೂರ್ಯ ಇಳೆಗೆ ಜಾರುತ್ತಿದ್ದಂತೆ. ಕೋಟೆಯ ತುಂಬೆಲ್ಲ ದೀಪಗಳು ಬೆಳಗಿದವು. ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಇಡೀ ಕಿತ್ತೂರು ದೀಪಾವಳಿ ಬೆಳಕಿನಲ್ಲಿ ಮುಳುಗಿತ್ತು. ಇದಕ್ಕೆ ಕಾರಣವಾಗಿದ್ದು ವೀರರಾಣಿ ಕಿತ್ತೂರ ಚನ್ನಮ್ಮನ ಸೈನ್ಯ ಕಂಪನಿ(ಬ್ರಿಟಿಷ್)ಸರಕಾರ ವಿರುದ್ಧ ವಿರೋಚಿತ ಜಯ ಸಾಧಿಸಿದ್ದು. …
Read More »