Breaking News

Daily Archives: ಆಗಷ್ಟ್ 14, 2022

ನ್ಯಾಯಾಂಗ ನಿಂದನೆ: ಎಂ.ಡಿ ಸೇರಿ ಐವರು ಜೈಲಿಗೆ

ಬೆಂಗಳೂರು : ಬಹುಕೋಟಿ ಬ್ಯಾಂಕ್‌ ಸಾಲಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಹೈಕೋರ್ಟ್‌ ಆದೇಶದ ಅನುಸಾರ ಸಾಲದ ಮೊತ್ತದಲ್ಲಿನ ಭಾಗಶಃ ಮೊತ್ತ ₹ 25 ಕೋಟಿ ಭರ್ತಿ ಮಾಡದೆ ಕೋರ್ಟ್‌ ಆದೇಶ ಉಲ್ಲಂಘಿಸಿದ ಆರೋಪದಡಿ ಬಾಗಲಕೋಟೆ ಜಿಲ್ಲೆ ತೇರದಾಳದ ಸಾವರಿನ್‌ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಾಲ್ವರು ನಿರ್ದೇಶಕರನ್ನು ಹೈಕೋರ್ಟ್‌ ಜೈಲಿಗಟ್ಟಿದೆ.   ಕರ್ನಾಟಕ ರಾಜ್ಯ ಕೋ ಆಪರೇಟಿವ್‌ ಅಪೆಕ್ಸ್‌ ಬ್ಯಾಂಕ್ ದಾಖಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರೋಪಿಗಳಾದ ಮೆಸರ್ಸ್‌ ಸಾವರಿನ್‌ …

Read More »

ಸ್ವಾತಂತ್ರ್ಯದ ಅಮೃತ ಮಹೋತ್ಸವ : ಗಂಗಾವತಿ ಕೇಂದ್ರೀಯ ಮಹಾವಿದ್ಯಾಲಯದಲ್ಲಿ ಧ್ವಜಾರೋಹಣವೇ ಇಲ್ಲ!

ಗಂಗಾವತಿ : ಈ ದೇಶದೆಲ್ಲೆದೆ 75 ಸ್ವಾತಂತ್ರದವರೆಗೆ ಎಲ್ಲಾ ಸರ್ಕಾರಿ ಅರೆಸರ್ಕಾರಿ ಮತ್ತು ರಾಷ್ಟ್ರ ಧ್ವಜ ಕಟ್ಟೆ ಇರುವ ಸ್ಥಳಗಳಲ್ಲಿ ಅಮೃತ ಮಹೋತ್ಸವದ ಸಡಗರದಲ್ಲಿ ಆ.13 ರಿಂದ 15 ರವರೆಗೆ ಪ್ರತಿದಿನ ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣವನ್ನು ಬೆಳಿಗ್ಗೆ 6 ರಿಂದ 5.35 ಹೊರಗೆ ರಾಷ್ಟ್ರಧ್ವಜವನ್ನು ಆರೋಹಣ ಮಾಡಿ ನಂತರ ಅವರೋಹಣ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಗಂಗಾವತಿ ನಗರದ ಎಂಎನ್ ಎಂ ಬಾಲಕಿಯರ ಕಾಲೇಜು ಆವರಣದಲ್ಲಿರುವ ಕೇಂದ್ರೀಯ ಮಹಾವಿದ್ಯಾಲಯಕ್ಕೆ …

Read More »

ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ಮೆಂಟ್ ಮಾಡುತ್ತಿದ್ದೇವೆ? ಮಾಧುಸ್ವಾಮಿ

ಬೆಂಗಳೂರು: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಚನ್ನಪಟ್ಡಣದ ಸಮಾಜ ಸೇವಕರೊಬ್ಬರ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ದೂರವಾಣಿ ಸಂಭಾಷಣೆಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಸಚಿವರು ಅಸಮಾಧಾನ ಹೊರಹಾಕಿದ್ದಾರೆ ಎನ್ನುವ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಸಚಿವ ಮಾಧುಸ್ವಾಮಿಯವರದ್ದು ಎನ್ನಲಾದ ಈ ದೂರವಾಣಿ ಸಂಭಾಷಣೆಯನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್​, ಬಿಜೆಪಿ ಸರ್ಕಾರದ ನಿಷ್ಕ್ರೀಯತೆ, ಸಚಿವರುಗಳ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರಿಂದ ಬಯಲಾಗಿದೆ. ಬಿಜೆಪಿ ಸರ್ಕಾರದಲ್ಲಿ …

Read More »

ಸರ್ಕಾರ ಸ್ವಾತಂತ್ರ್ಯ ದಿನ ಆಚರಿಸಬಾರದೆಂದು ಹೇಳುವಷ್ಟು ಮೂರ್ಖರಲ್ಲ ಎಂದ ಡಿಕೆಶಿ

ಬೆಂಗಳೂರು: ಸರ್ಕಾರ ಸ್ವಾತಂತ್ರ್ಯ ದಿನ ಆಚರಿಸಬಾರದು ಎಂದು ಹೇಳುವಷ್ಟು ಮೂರ್ಖರು ನಾವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಹೇಳಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವಾತಂತ್ರ್ಯ ಕೇವಲ ಒಂದು ಪಕ್ಷಕ್ಕೆ ಸೇರಿದ್ದೆಂದು ನಾವು ಎಲ್ಲೂ ಹೇಳಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಇತಿಹಾಸ ನಮ್ಮ ಪಕ್ಷಕ್ಕಿದೆ. ಇದನ್ನು ದೇಶದುದ್ದಗಲಕ್ಕೂ ಯುವ ಜನತೆಗೆ ತಿಳಿಸುವ ಕೆಲಸ ಮಾಡಿ ಎಂದು ನಾವು ಸೂಚನೆ ನೀಡಿದ್ದೇವೆ ಎಂದರು. ಕೇಂದ್ರ ಸಚಿವರು ಬಂದು …

Read More »