Breaking News

Daily Archives: ಆಗಷ್ಟ್ 13, 2022

ರಾಯರಿಗೆ ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರ: ಮೊದಲ ಬಾರಿ ತಮಿಳುನಾಡು ಸರ್ಕಾರದಿಂದ ಸೇವೆೆ

ರಾಯಚೂರು: ಮಂತ್ರಾಲಯದಲ್ಲಿ ಭಕ್ತರ ಆರಾಧ್ಯದೈವ, ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಶುಕ್ರವಾರ ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ಪ್ರತಿ ವರ್ಷ ಮಧ್ಯಾರಾಧನೆ ದಿನ ರಾಯರಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದಿಂದ ಶೇಷವಸ್ತ್ರ ಬರುವ ಸಂಪ್ರದಾಯವಿದೆ. ಈ ಬಾರಿ ಪೂರ್ವಾರಾಧನೆ ದಿನ ತಮಿಳುನಾಡಿನ ಶ್ರೀರಂಗಂ ದೇವಸ್ಥಾನದಿಂದ ಶ್ರೀ ರಂಗನಾಥ ಸ್ವಾಮಿಯ ಶೇಷವಸ್ತ್ರಗಳನ್ನು ರಾಯರ ಆರಾಧನೆಗೆ ತಂದಿದ್ದು ವಿಶೇಷವಾಗಿತ್ತು. ಪೂರ್ವಾರಾಧನೆ ನಿಮಿತ್ತ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಬೆಳಗಿನ …

Read More »

15ರ ಅನಂತರ ಸಂಪುಟ ವಿಸ್ತರಣೆ? ಕುತೂಹಲ ಹೆಚ್ಚಿಸಿದ ಬಿಎಸ್‌ವೈ-ಸಿಎಂ ಭೇಟಿ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ರಾಜಕೀಯ ವಲಯಗಳಲ್ಲಿ ಕುತೂ ಹಲ ಮೂಡಿಸಿದೆ.   ಇದೇ 28ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಆಯೋ  ಜಿಸಲಾಗಿದ್ದು, ಬಿಎಸ್‌ವೈ ಅವರನ್ನು ಸಿಎಂ ಆಹ್ವಾನಿಸಿದ್ದಾರೆ. ಜತೆಗೆ, ಪ್ರಸಕ್ತ ರಾಜಕೀಯ ಬೆಳವಣಿಗೆ ಗಳು ಹಾಗೂ ಆ.15ರ ಬಳಿಕ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿ …

Read More »

ನಿಮ್ಮ ನಾಯಕರ ರಂಗಬಿರಂಗಿ ರಾತ್ರಿ ಬದುಕಿನ ಸಿಡಿ ಸಾಕಷ್ಟಿದೆ:ಪ್ರಿಯಾಂಕ್ ಗೆ ಬಿಜೆಪಿ ತಿರುಗೇಟು

ಬೆಂಗಳೂರು: ಇದು ಲಂಚ – ಮಂಚದ ಸರಕಾರ ಎಂದು ಆರೋಪಿಸಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರ ರಂಗಬಿರಂಗಿ ಬಗ್ಗೆ ಸಾಕಷ್ಟು ದಂತಕತೆ ಮಾತ್ರವಲ್ಲ, ಸಿಡಿಗಳೂ ಇವೆ ಎಂದು ಎಚ್ಚರಿಸಿದೆ.   ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರೇ, ಸಹಾಯ ಮಾಡುವುದಾಗಿ ನಂಬಿಸಿ ಅಸಹಾಯಕ ಹೆಣ್ಣೊಬ್ಬಳ‌ ಮೇಲೆ ಮೇಟಿ ಲೈಂಗಿಕ ದೌರ್ಜನ್ಯ ಎಸಗಿದ್ದು ನಿಮ್ಮ ಕಾಲದಲ್ಲೇ ಅಲ್ಲವೇ? …

Read More »

ಹೂಡಿಕೆ ನೆಪದಲ್ಲಿ ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ,ಕೊಲೆ ಬೆದರಿಕೆ

ಬೆಂಗಳೂರು: ಪರಿಚಯಸ್ಥನಿಂದಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು, ಈ ಸಂಬಂಧ 32 ವರ್ಷದ ಸಂತ್ರಸ್ತೆ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ತಮಿಳುನಾಡು ಮೂಲದ ರಮೇಶ್‌ (53) ತಲೆ ಮರೆಸಿಕೊಂಡಿದ್ದಾನೆ.   ಬೆಂಗಳೂರು ಮೂಲದ ಸಂತ್ರಸ್ತೆ ಚಿಕ್ಕವಯಸ್ಸಿನಲ್ಲಿ ತಮಿಳುನಾಡಿನಲ್ಲಿ ಪೋಷಕರ ಜತೆ ವಾಸವಾಗಿದ್ದಾಗ ಆರೋಪಿ ರಮೇಶ್‌ ಪರಿಚಯವಾಗಿದ್ದ. ಮಹಿಳೆಗೆ ತಂದೆ ಸಮಾನನಾಗಿದ್ದ ಆರೋಪಿಯು ತಮಿಳುನಾಡಿನಲ್ಲಿ ನೆಲೆಸಿದ್ದ. ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ನೂತನವಾಗಿ ಓಟಿಟಿ …

Read More »

ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯ ಬೆಳೆಯಬೇಕು: ಸಿಎಂ ಬೊಮ್ಮಾಯಿ

ಪುಣೆ: ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಬಂಧ ಬಹಳ ವರ್ಷಗಳದ್ದು. ನಮ್ಮ ಸಾಮರಸ್ಯ ಬೆಳೆಯಬೇಕು. ಮನಸ್ಸು ಒಂದಾದರೆ ಎಲ್ಲ ಸಾಧನೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಪುಣೆಯಲ್ಲಿ ಬಂಟರ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಭವನದ ನಾಲ್ಕನೇ ವಾರ್ಷಿಕೋತ್ಸವವ ಹಾಗೂ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಬಿ ಶೆಟ್ಟಿ ಅವರ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.   ಇಲ್ಲಿ ಕನ್ನಡಿಗರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. …

Read More »

2022-23 ನೇ ಸಾಲಿನ ಆರಾಧನಾ ಕಾರ್ಯಕ್ರಮಕ್ಕಾಗಿ 49.74 ಕೋಟಿ ರೂಪಾಯಿಗಳ ಅನುದಾನ

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡ, ಲಂಬಾಣಿ ತಾಂಡಾ, ವಡ್ಡರ ಕೇರಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳು ವಾಸವಿರುವ ಸ್ಥಳಗಳಲ್ಲಿನ ದೇವಾಲಯ, ಪೂಜಾ ಮಂದಿರ, ಹಾಗೂ ಪ್ರಾರ್ಥನಾ ಮಂದಿರಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನವ ನಿರ್ಮಾಣಗಳ ಯೋಜನೆಗೆ ಸಂಬಂಧಿಸಿದ ಆರಾಧನಾ ಯೋಜನೆಗೆ ಮುಜರಾಯಿ ಇಲಾಖೆಯಿಂದ ಪ್ರಸ್ತುತ 2022-23 ನೇ ಸಾಲಿನಲ್ಲಿ 49.74 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.   ಈ …

Read More »

ಅರಣ್ಯ ಇಲಾಖೆ ಕಾರ್ಯಾಚರಣೆ : ಉಡಗಳನ್ನು ಬೇಟೆಯಾಡಿದ ಆರೋಪಿ ಸೆರೆ

ಖಾನಾಪುರ ತಾಲೂಕಿನ ಗೋಲಿಹಳ್ಳಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ ತಾವರಗಟ್ಟಿ ಗ್ರಾಮದ ಸಮೀಪ ಉಡಗಳನ್ನು ಬೇಟೆಯಾಡುತ್ತಿದ್ದ ಆರೋಪಿಯನ್ನು ಉಡದ ಸಮೇತ ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗೋಲಿಹಳ್ಳಿ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗೋದೊಳ್ಳಿ ಉಪವಲಯ ಅರಣ್ಯ ಅಧಿಕಾರಿಯ ಕಾರ್ಯ ಕ್ಷೇತ್ರದ ತಾವರಗಟ್ಟಿ ಗ್ರಾಮದ ಸಮೀಪದಲ್ಲಿ ಅಕ್ರಮವಾಗಿ ಉಡಾ ಬೇಟೆಯಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ತಾವರಗಟ್ಟಿ ಗ್ರಾಮದ ಆರೋಪಿ ಮೈಕಲ್ ಮರೆಪ್ಪ ಅಂಬೇವಾಡ್ಕರ್(34) …

Read More »

ದರ್ಶನ್ ಸಿನಿ ಜರ್ನಿಗೆ 25 ವರ್ಷ: ಪಾರ್ಟಿಯಲ್ಲಿ ಮಿಂಚಿದ ತಾರೆಯರು!

ಆಗಸ್ಟ್ 11 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಬದುಕಿನಲ್ಲಿ ಮರೆಯಲಾರದ ದಿನ. ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ ‘ಮಹಾಭಾರತ’ ರಿಲೀಸ್ ಆಗಿದ್ದ ದಿನ. 1997 ಆಗಸ್ಟ್ 11ರಂದು ಎಸ್‌. ನಾರಾಯಣ್ ನಿರ್ದೇಶನದ ‘ಮಹಾಭಾರತ’ ಚಿತ್ರ ರಿಲೀಸ್ ಆಗಿತ್ತು. ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ.   ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ ಚಿತ್ರರಂಗದಲ್ಲಿ ದರ್ಶನ್ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಮೊದಲಿಗೆ …

Read More »

ಅಂಗಾಂಗ ದಾನಕ್ಕೆ ನಾನು ಹೆಸರು ನೋಂದಾಯಿಸಿದ್ದೇನೆ, ನೀವು ಕೂಡ ನೋಂದಾಯಿಸಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ವಿಶ್ವ ಅಂಗಾಂಗ ದಾನ ದಿನಾಚರಣೆ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ ಕುಟುಂಬಸ್ಥರನ್ನು ಮುಖ್ಯಮಂತ್ರಿಯವರು ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸತ್ತ ಮೇಲೆ ನಮ್ಮ ದೇಹದಾನದಿಂದ …

Read More »

ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್

ಆಧಾರ್​ ಕಾರ್ಡ್​ ಇಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶಗಳನ್ನು ಪಡೆಯುವುದು, ಬ್ಯಾಂಕ್​ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅವಶ್ಯಕ. ಆಧಾರ್​ ಕಾರ್ಡ್​ ಬಯೋಮೆಟ್ರಿಕ್ಸ್​ನ ದೃಢೀಕೃತ ಮಾಹಿತಿ ಒಳಗೊಂಡಿರುವ ಜೊತೆಗೆ ಪ್ರಮುಖ ವೈಯಕ್ತಿಕ ಮಾಹಿತಿಯನ್ನು ದಾಖಲಿಸಲಾಗಿದೆ.   ಯುಐಡಿಎಐ ತನ್ನ ಆನ್​ಲೈನ್​ ಪೋರ್ಟಲ್​ ಮೂಲಕ ಈಗಾಗಲೇ ನಮೂದಿಸಿರುವ ತಮ್ಮ ವೈಯಕ್ತಿಕ ಮಾಹಿತಿಯನ್ನು ಆನ್​ಲೈನ್​ನಲ್ಲಿ ನವೀಕರಿಸಲು ಸಹಾಯ ಮಾಡುತ್ತದೆ. ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು …

Read More »