Breaking News

Daily Archives: ಫೆಬ್ರವರಿ 3, 2022

ಯುವಕರ ಅಭ್ಯುದಯಕ್ಕೆ ಸರ್ಕಾರ ದಿಟ್ಟ ಹೆಜ್ಜೆ; ಗ್ರಾಮೀಣ ಮಟ್ಟದಲ್ಲೇ ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನ

ಬೆಂಗಳೂರು: ಯುವ ಸಮುದಾಯದ ಅಭ್ಯುದಯಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಿಂದಲೇ ಯಶಸ್ವಿಗೊಳಿಸಲು ಸರ್ಕಾರ ಮುಂದಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಯರ್åಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಮೂಲಕ ಅನುಷ್ಠಾನ ಮಾಡಲು ಯೋಜನೆ ರೂಪಿಸಿದೆ. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿಯನ್ನು 2019ರಲ್ಲಿ ರಚಿಸಲಾಗಿದೆ. ಆದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿ, ಗ್ರಾಪಂ ಕೆಡಿಪಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, …

Read More »

ನಿರಾಣಿ ಚಮಚಾಗಳು, ಸಹೋದರರಿಂದ ಸ್ವಾಮೀಜಿಗೆ ನೋವು: ವಿಜಯಾನಂದ ಕಾಶಪ್ಪನವರ

ಬೆಳಗಾವಿ: ‘ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ನೀಡಿರುವ ದಾನದ ಬಗ್ಗೆ ಸಚಿವ ಮುರುಗೇಶ ನಿರಾಣಿ ಅವರ ಚಮಚಾಗಳು, ಸಹೋದರ ಲಕ್ಷ್ಮಣ ನಿರಾಣಿ ಮೊದಲಾದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. ಅದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ’ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದರು.   ಇಲ್ಲಿ ನಡೆದ ಸಮಾಜದ ಕಾರ್ಯಕಾರಿಣಿ ನಂತರ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಸಂಘಟನೆಯಲ್ಲಿ ಇಲ್ಲದವರು, ಮೀಸಲಾತಿ ಹೋರಾಟದಲ್ಲಿ ಭಾಗವಹಿಸದವರು ಅಪಪ್ರಚಾರ ಮಾಡುತ್ತಿದ್ದಾರೆ. …

Read More »

ಬಿಎಸ್ ಯಡಿಯೂರಪ್ಪ ಯುಗಾಂತ್ಯ: ವಾಜಪೇಯಿ ನಂತರ ಮೋದಿ ಬಂದ ಹಾಗೆ, ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ಅಗತ್ಯ

ಬೆಳಗಾವಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಯುಗಾಂತ್ಯವಾಗಿದ್ದು, ರಾಜ್ಯದಲ್ಲಿ ಪರ್ಯಾಯ ಅಂದರೆ ಎರಡನೇ ನಾಯಕತ್ವದ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಬುಧವರ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ. ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹವಾ ಮುಗಿದಿದೆ. ಇನ್ನೂ 3-4 ಜನರಿದ್ದಾರೆ ಅವರದ್ದೂ ಮುಗಿಯಲು …

Read More »

ಆದಾಯ ಪ್ರಮಾಣಪತ್ರ: ಅತಿಯಾಯಿತು ಮಿತಿ

ಸರ್ಕಾರವು ಬಡವರಿಗೆಂದು ಜಾರಿಗೆ ತಂದಿರುವ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಆದಾಯದ ಮಿತಿಯನ್ನು₹ 32,000ಕ್ಕೆ ನಿಗದಿಪಡಿಸಲಾಗಿದೆ. ಆದರೆ ಇದು ಇಂದಿನ ದಿನಗಳಲ್ಲಿ ಅವೈಜ್ಞಾನಿಕವಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಇಷ್ಟು ಕಡಿಮೆ ಪ್ರಮಾಣದ ಆದಾಯ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ವಸತಿ ಯೋಜನೆಯಡಿ ನೀಡಬೇಕಾದ ಆದಾಯದ ಮಿತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ಬಡವರಿಗಾಗಿರುವ ತೊಂದರೆಯನ್ನು ಸರಿಪಡಿಸಬೇಕಾಗಿದೆ.  

Read More »

ಜೇಮ್ಸ್​ ಸಿನಿಮಾಗೆ ಶಿವಣ್ಣ ವಾಯ್ಸ್​;

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ನಟನೆಯ ಕೊನೇ ಚಿತ್ರ ಜೇಮ್ಸ್​ ಮಾರ್ಚ್​ 17 ಅಪ್ಪು ಬರ್ತಡೆ ಪ್ರಯುಕ್ತ ಬಿಡುಗಡೆಗೆ ಸಿದ್ದವಾಗಿದೆ. ಈ ಸಿನಿಮಾಗೆ ಡಬ್ಬಿಂಗ್​ ಮಾಡುವ ಮುನ್ನವೇ ಪುನೀತ್​ ರಾಜ್​ಕುಮಾರ್​ ನಮ್ಮನ್ನ ಅಗಲಿದ್ರು. ಹಾಗಾಗಿ ಸಿನಿಮಾಗೆ ಡಬ್ಬಿಂಗ್​ ಮಾಡೋದು ಹೇಗೆ ಅನ್ನೋದು ದೊಡ್ಡ ಸಮಸ್ಯೆ ಆಗಿ ಪರಿಣಮಿಸಿತ್ತು. ಆರಂಭದಲ್ಲಿ ಶಿವರಾಜ್​ಕುಮಾರ್​ ಸಿನಿಮಾಗೆ ಡಬ್ ಮಾಡ್ತಾರೆ ಅನ್ನೋ ಸುದ್ದಿಗಳು ಕೇಳಿಬಂದಿತ್ತಾದರೂ ಪುನೀತ್​ ಅವರ ವಾಯ್ಸೇ ಇದ್ರೆ ಉತ್ತಮ ಅಂತಾ ಜೇಮ್ಸ್​ ಚಿತ್ರ ತಂಡ ಸಾಕಷ್ಟು …

Read More »

ಆರ್​ಟಿಸಿ ಎಂಟ್ರಿಯಲ್ಲಿ ತಪ್ಪುಗಳಾದರೆ ಅಧಿಕಾರಿಗಳೇ ಹೊಣೆ!

ಇನ್ಮುಂದೆ ತಾಲೂಕು ಕಚೇರಿಗಳ ‘ಭೂಮಿ’ ಕೇಂದ್ರಗಳಲ್ಲಿ ಪಹಣಿ(ಆರ್​ಟಿಸಿ) ಎಂಟ್ರಿಯಲ್ಲಿ ತಪುಪಗಳಾದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ! ಜ.14ರಂದು ರಾಜ್ಯ ಭೂಮಾಪನ ಇಲಾಖೆ ಮತ್ತು ಭೂಮಿ ಉಸ್ತುವಾರಿ ಕೋಶದಿಂದ ಜಿಲ್ಲಾಧಿಕಾರಿಗಳಿಗೆ ಹೊರಡಿಸಲಾಗಿರುವ ಮಹತ್ವದ ಸುತ್ತೋಲೆಯಲ್ಲಿ ಇಂಥದ್ದೊಂದು ಆದೇಶ ಪ್ರಕಟವಾಗಿದೆ. ಅಧಿಕಾರಿಗಳ ಕಣ್ತಪ್ಪು ಹಾಗೂ ಬೇಜವಾಬ್ದಾರಿಯಿಂದ ಪಹಣಿಯಲ್ಲಿ ಸಾಗುವಳಿದಾರರ ಹೆಸರು ಇನ್ನಿತರ ಅಂಶಗಳ ತಪ್ಪು ದಾಖಲಾತಿ ಅಥವಾ ರದ್ದು ಸಾಮಾನ್ಯ. ಈ ತಪ್ಪನ್ನು ಸರಿಪಡಿಸಲು ಸಾರ್ವಜನಿಕರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಕಾಲಹರಣ ಮಾಡುತ್ತಿರುವ ಪ್ರಕರಣಗಳೇ …

Read More »

ಪಾಕಿಸ್ತಾನ-ಚೀನಾ ಒಟ್ಟಿಗೆ ತಂದಿದ್ದು ಮೋದಿ ಸರ್ಕಾರ: ರಾಹುಲ್ ಗಾಂಧಿ

ನವದೆಹಲಿ, ಫೆಬ್ರವರಿ 3: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಬಜೆಟ್ ಅಧಿವೇಶನದಲ್ಲಿ ಮಾತನಾಡಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತರುವ ಅಪರಾಧವನ್ನು ಕೇಂದ್ರ ಮಾಡಿದೆ. “ದೊಡ್ಡ ವ್ಯೂಹಾತ್ಮಕ ತಪ್ಪು” ಮಾಡಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಧ್ಯಕ್ಷರ ಭಾಷಣದ …

Read More »

ರಮೇಶ ಬಂದಿದ್ರು-ನಾನೂ ಹೋಗಿದ್ದೆ, ಯುಗಾದಿ ಹೊತ್ತಿಗೆ ಬದಲಾವಣೆ ನಿಶ್ಚಿತ: ಯತ್ನಾಳ್‌

ಬೆಳಗಾವಿ ಸದ್ಯ ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಆವಶ್ಯಕತೆ ಇದೆ. ಯುಗಾದಿ ಅನಂತರ ಹೊಸ ವರ್ಷಕ್ಕೆ ಬದಲಾವಣೆ ಆಗುವುದು ನಿಶ್ಚಿತ. ರಾಜ್ಯದಲ್ಲಿ ಒಳ್ಳೆಯ ಬದಲಾವಣೆ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಯಾಶೀಲ ಇದ್ದವರು ಮಂತ್ರಿ ಆಗುತ್ತಾರೆ. ಕೆಲವರು ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಕೆಲವರನ್ನು ಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ ಪಕ್ಷದ ಜವಾಬ್ದಾರಿ ಕೊಡಲಾಗುತ್ತದೆ. ನಾನಂತೂ ಮಂತ್ರಿ ಮಾಡುವಂತೆ ಮನವಿ ಮಾಡಿಲ್ಲ ಎಂದು ಹೇಳಿದರು. …

Read More »

ಸೋಮಾರಿ ಮಂತ್ರಿಗಳನ್ನ ಕೈಬಿಡಿ -ತಮ್ಮದೇ ಸರ್ಕಾರಕ್ಕೆ ವಿಶ್ವನಾಥ್ ಆಗ್ರಹ

ಬೆಂಗಳೂರು: ಸೋಮಾರಿ ಮಂತ್ರಿಗಳನ್ನ ಕೈಬಿಡಬೇಕು ಎಂದು ಪರಿಷತ್ ಸದಸ್ಯರಾದ ಹೆಚ್​​​.ವಿಶ್ವನಾಥ್ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಿಶ್ವನಾಥ್​​.. ಕೇವಲ ವಿಧಾನಸಭಾ ಕ್ಷೇತ್ರವನ್ನೇ ರಾಜ್ಯ ಅಂದುಕೊಂಡಿರುವ, ರಾಜ್ಯ ಪರ್ಯಟನೆ ಮಾಡದ ಸಚಿವರನ್ನ ಕೈಬಿಡಬೇಕು. ರಾಜ್ಯದ ಅಭಿವೃದ್ಧಿಗೆ ಬದಲಾವಣೆ ಅಗತ್ಯ ಇದೆ. ಸರಿಯಾದ ರೀತಿಯಲ್ಲಿ ಸಂಪುಟ ಪುನಾರಚಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಹಿರಿಯ ಸಚಿವರು ಪಕ್ಷದ ಕೆಲಸ ಮಾಡ್ಲಿ, ಯುವ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಲಿ ಎಂದು ಸಲಹೆ ನೀಡಿದ್ದಾರೆ.

Read More »

ಕಾಂಗ್ರೆಸ್‌ಗೆ ನೋಟಿಸ್‌ ಬಿಕ್ಕಟ್ಟು; ಅಶೋಕ್‌ ಪಟ್ಟಣ್‌ಗೆ ನೋಟಿಸ್‌ ನೀಡಿದ್ದಕ್ಕೆ ಗುದ್ದಾಟ

ಬೆಂಗಳೂರು: ಮಾಜಿ ಶಾಸಕ ಅಶೋಕ್‌ ಪಟ್ಟಣ್‌ ಅವರಿಗೆ ನೋಟಿಸ್‌ ನೀಡಿದ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಆ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕೀಯ ಸದ್ದು ಮಾಡುತ್ತಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಪ್ರದರ್ಶಿಸಿದ್ದ ಒಗ್ಗಟ್ಟು ಈಗ ನೋಟಿಸ್‌ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಗುದ್ದಾಟಕ್ಕೆ ಕಾರಣವಾದಂತಿದೆ. ಅಶೋಕ್‌ ಪಟ್ಟಣ್‌ ವಿರುದ್ಧ ಪರಾಮರ್ಶಿಸಿ ಕ್ರಮ ಕೈಗೊಳ್ಳಬಹುದಾಗಿತ್ತು. ದಿಢೀರ್‌ ನೋಟಿಸ್‌ ನೀಡಿರುವುದು ಸಿದ್ದರಾಮಯ್ಯನವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ …

Read More »