ನಂಜನಗೂಡು : ರಸ್ತೆ ತುಂಬೆಲ್ಲಾ ಹರಡಿದ್ದ ಹುರಳಿ ಸೊಪ್ಪುನಿಂದಾಗಿ ಗರ್ಭಿಣಿಯನ್ನು ಹೊತ್ತ ಅಂಬ್ಯುಲೆನ್ಸ್ ವಾಹನವೊಂದು ಸಿಲುಕಿಕೊಂಡು ಹುರುಳಿ ಸೊಪ್ಪಿನಿಂದ ಬಿಡಿಸಿಕೊಂಡು ಮುಂದೆ ಸಾಗಲು ಚಾಲಕ ಹರಸಾಹಸ ಪಡಬೇಕಾಯಿತು. ಸಾರ್ವಜನಿಕ ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುವುದಕ್ಕೆ ಸರಕಾರ ಈ ಹಿಂದೆ ನಿರ್ಬಂಧ ಹೇರಿದ್ದರೂ ಅದು ಕೇವಲ ಪುಸ್ತಕದ ಬದನೆಕಾಯಿಯಂತಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುವುದಕ್ಕೆ ಸರಕಾರ ಈ ಹಿಂದೆ ನಿರ್ಬಂಧ ಹೇರಿದ್ದರೂ ಅದು ಕೇವಲ ಪುಸ್ತಕದ ಬದನೆಕಾಯಿಯಂತಾಗಿದೆ. ಬುಧವಾರ ಗರ್ಭಿಣಿಯೊಬ್ಬಳನ್ನ …
Read More »Daily Archives: ಜನವರಿ 20, 2022
ಜ. 26 ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್, ಕೆಂಪುಕೋಟೆ ಮೇಲೆ ಭಯೋತ್ಪಾದಕ ದಾಳಿ ಸಾಧ್ಯತೆ:
ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವದಂದು (ಜನವರಿ 26), ಭಯೋತ್ಪಾದಕರು ದೆಹಲಿಯಲ್ಲಿ ದಾಳಿ ಮಾಡಬಹುದು. ಗಣರಾಜ್ಯೋತ್ಸವದಂದು ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಬ್ಯೂರೋ(ಐಬಿ) ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ಪ್ರಕಾರ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಯೋತ್ಪಾದಕರು ದೇಶದ ನಾಯಕರು ಸೇರಿದಂತೆ ಕೆಲವು ವಿಐಪಿಗಳನ್ನು ಟಾರ್ಗೆಟ್ ಮಾಡುವ ಸೂಚನೆಗಳಿವೆ. IB ಯ ಇನ್ಪುಟ್ ಪ್ರಕಾರ, ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ ಫಾರ್ ಜಸ್ಟಿಸ್ ಗಣರಾಜ್ಯೋತ್ಸವದಂದು ಭಯೋತ್ಪಾದಕ ದಾಳಿಯನ್ನು ನಡೆಸುವ ಪ್ರಕ್ರಿಯೆಯಲ್ಲಿದೆ. …
Read More »ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳ ನಿಯಮಿತ ಮಾರುಕಟ್ಟೆ ಅನುಮೋದನೆಗಾಗಿ ಸಿಡಿಎಸ್ಸಿಒ ವಿಷಯ ತಜ್ಞರ ಸಮಿತಿಯಿಂದ ಶಿಫಾರಸ್ಸು
ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಅನುಮತಿ ಪಡೆದಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಸಂಪೂರ್ಣವಾಗಿ ನಿಯಮಿತ ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡುವಂತೆ ಭಾರತದ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ಲಸಿಕೆಗಳಿಗೆ ಮಾರುಕಟ್ಟೆ ದೃಢೀಕರಣ ಸಿಕ್ಕರೆ, ಅವು ಔಷಧ ಮಾರುಕಟ್ಟೆಯಲ್ಲಿ ಸಿಗಲಿವೆ. ಸೀರಂ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳ ಸ್ಥಿತಿಯನ್ನು ಅಪ್ಗ್ರೇಡ್ ಮಾಡಬೇಕು ಅಂದರೆ, ಸದ್ಯ ಅವುಗಳನ್ನು ತುರ್ತುಸಂದರ್ಭದಲ್ಲಿ ವಯಸ್ಕರಿಗೆ ಷರತ್ತುಬದ್ಧವಾಗಿ, ನಿಯಂತ್ರಿತವಾಗಿ ನೀಡಲಾಗುತ್ತಿದೆ. …
Read More »ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆ, ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ
ಬೆಂಗಳೂರು, ಜನವರಿ 19: ಕರ್ನಾಟಕದಲ್ಲಿ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ರಾಜಧಾನಿ ಬೆಂಗಳೂರು ನಗರಕ್ಕೆ 25 ಲಕ್ಷ ರೂ, ಉಳಿದಂತೆ ಪ್ರತಿ ಜಿಲ್ಲೆಗೆ ತಲಾ 1 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಿಗೆ ತಲಾ 20 ಸಾವಿರ ರೂ. ಬಿಡುಗಡೆ ಮಾಡಲು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಗಣರಾಜ್ಯೋತ್ಸವ ಟ್ಯಾಬ್ಲೋ; ಇಳಕಲ್ ಸೀರೆ, ಗುಳೇದಗುಡ್ಡದ ಖಣ ಆಯ್ಕೆ …
Read More »ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಬೆಂಕಿ.. ಅಪಾರ ವನಸಂಪತ್ತು ನಾಶ
ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ವನಸಂಪತ್ತು ನಾಶವಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು ಸುಮಾರು 2 ಕಿ.ಮೀ ವಾಪ್ತಿವರೆಗೂ ಬೆಂಕಿ ಆವರಿಸಿದೆ. ಇನ್ನು, ನವಿಲು, ಚಿರತೆ, ಜಿಂಕೆಗಳು ಸೇರಿದಂತೆ ಅನೇಕ ಪ್ರಾಣಿಗಳು ಅಗ್ನಿಗೆ ಆಹುತಿಯಾಗಿವೆ ಅಂತಾ ಹೇಳಲಾಗ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ ತೆರಳಲು ಸಾಧ್ಯವಾಗದ ಸ್ಥಳದಲ್ಲಿ ಬೆಂಕಿ ಆವರಿಸಿಕೊಂಡಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
Read More »