Breaking News

Daily Archives: ಜನವರಿ 20, 2022

ಕಳ್ಳ ಸಹೋದರರ ಸೆರೆ: ಐದು ಬೈಕ್‌ ಜಪ್ತಿ

ಕಲಬುರಗಿ: ನಗರದಲ್ಲಿ ಹಾಡು ಹಗಲೇ ಬೈಕ್‌ಗಳ ಕಳ್ಳತನದಲ್ಲಿ ತೊಡಗಿಸಿ ಕೊಂಡಿದ್ದ ಇಬ್ಬರು ಸಹೋದರರನ್ನು ಉತ್ತರ ಉಪವಿಭಾಗದ ಚೌಕ್‌ ಠಾಣೆ ಪೊಲೀಸರು ಬಂಧಿಸಿ, 3.5 ಲಕ್ಷ ರೂ. ಮೌಲ್ಯದ ಐದು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಕಾಳಗಿ ತಾಲೂಕಿನ ಕೊರವಾರ ಗ್ರಾಮದ ವಿಕಾಸ ಹೊಸಮನಿ, ರಾಮಚಂದ್ರ ಹೊಸಮನಿ ಬಂಧಿತ ಸಹೋದರರು.   ಬುಧವಾರ ಬೆಳಗ್ಗೆ ತಾಜ್‌ಸುಲ್ತಾಪುರ ರಸ್ತೆಯಲ್ಲಿ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಈ ಕಳ್ಳರು …

Read More »

ಕಳ್ಳರು ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆ

ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಇಂದು ಗುರುವಾರ ಬೆಳಗಿನ ಜಾವ ಕಳ್ಳರು ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿಂಚೋಳಿ ಮತ್ತು ತಾಂತ್ರಿಕ ಮುಖ್ಯರಸ್ತೆಯಲ್ಲಿರುವ ಎಂಆರ್ ಎಫ್ ಟೈರ್ಸ್ ಮತ್ತು ಮಾನಸ ಸಿಮೆಂಟ್ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ಅನ್ನು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಕಂಪನಿಯ ಅಂಗಡಿಗೆ ನುಗ್ಗಿದ ಕಳ್ಳರು ಶೆಟರ್ ಕೀಲಿ ಮುರಿದು ಒಳಗೆ ನುಗ್ಗಿದ ಕಳ್ಳರು ಟೈರ್ ಮತ್ತು ಟ್ಯೂಬುಗಳನ್ನು …

Read More »

ಬಾಗಲಕೋಟೆ :ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಭಾರಿ ಸ್ಪೋಟಕ ವಶ

ಬಾಗಲಕೋಟೆ : ಜಿಲ್ಲೆಯ ವಿವಿಧೆಡೆ ಕಲ್ಲು ಗಣಿಗಾರಿಕೆಗೆ ಪೂರೈಸಲು ಬಳಸುವ ಭಾರಿ ಸ್ಪೋಟಕ ವಸ್ತುಗಳನ್ನು ತಾಲೂಕಿನ ಹೊನ್ನಾಕಟ್ಟಿಯ ತೋಟದ ಮನೆಯ ಶೆಡ್ ವೊಂದರಲ್ಲಿ ಸಂಗ್ರಹಿಸಿಟ್ಟಿದ್ದು, ಗುರುವಾರ ಪೊಲೀಸರು ಹಠಾತ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.   ತಾಲೂಕಿನ ಸಂಗಮ ಕ್ರಾಸ್ ಬಳಿಯ ಹೊನ್ನಾಕಟ್ಟಿ ಗ್ರಾಮದ ಗುರುನಾಥ ಹಾದಿಮನಿ ಎಂಬುವವರ ತೋಟದ ಮನೆಯ ಶೆಡ್‌ನಲ್ಲಿ ಈ ಭಾರಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಮಂಜುನಾಥ ಕಂಕಣಮೇಲಿ, ವಿಜಯ ನಾರಾ ಎಂಬುವವರು ಈ ಅಕ್ರಮ ಸ್ಟೋಟಕ ವಸ್ತುಗಳನ್ನು …

Read More »

ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೋಂಕು ಪತ್ತೆ, ಶಾಲೆ ಸೀಲ್‍ಡೌನ್

ಕೊರೊನಾ ಮಹಾಮಾರಿ ಸೋಂಕು ಶಾಲೆಗೆ ಲಗ್ಗೆ ಇಟ್ಟಿದ್ದು, ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲಾಯಿತು. ಹೈಸ್ಕೂಲ್‍ನ ಕೆಲವು ವಿದ್ಯಾರ್ಥಿಗಳಿಗೆ, ಸೋಂಕು ಒಕ್ಕರಿಸಿದ್ದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಮುಂದಿನ ಆದೇಶ ಬರುವವರೆಗೂ ಸೀಲ್‍ಡೌನ್ ಮಾಡಲಾಗಿದೆ. ಸ್ಥಳಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಶಾಲೆಯನ್ನು ಸೀಲ್‍ಡೌನ್ ಮಾಡಿದರು.

Read More »

ಬಿಜೆಪಿ ಶಾಸಕನ ಮೇಲೆ ಬಿತ್ತು ಕೇಸ್​..

ಬೆಳಗಾವಿ: ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ವಿರುದ್ಧ ಕೊನೆಗೂ ಕೇಸ್ ದಾಖಲಾಗಿದೆ. ಜನವರಿ 16ರಂದು ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ನಡೆದ ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ದಿನಾಚರಣೆಯಲ್ಲಿ ಭಾಗವಹಿಸಿದ್ದ ಶಾಸಕರು ಕೋವಿಡ್​ ನಿಯಮಗಳಿಗೆ ಗೋಲಿ ಹೊಡೆದಿದ್ದರು. ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರು ಶಾಸಕರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಸಾಕಷ್ಟು ಜನ ಜಮಾವಣೆಗೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಎಮ್ಮೆ ಓಡಿಸುವ …

Read More »

ನಾಳೆ ಮಧ್ಯಾಹ್ನ 1ಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವ ಕೋವಿಡ್ ನಿಯಂತ್ರಣ ಸಭೆ:

ಬೆಂಗಳೂರು: ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ನೈಟ್ ಕರ್ಪ್ಯೂ ( Night Curfew ) ಹಾಗೂ ವೀಕೆಂಡ್ ಕರ್ಪ್ಯೂ ( Weekend Curfew ) ಜಾರಿಗೊಳಿಸಿದೆ. ಈ ಆದೇಶಕ್ಕೆ ಬಿಜೆಪಿಯ ಅನೇಕ ಶಾಸಕರು, ಸಚಿವರು, ಕೇಂದ್ರ ಸಚಿವರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಹಿನ್ನಲೆಯಲ್ಲಿ ನಾಳೆ ಮಧ್ಯಾಹ್ನ 1 ಗಂಟೆಗೆ ಮಹತ್ವದ ಕೋವಿಡ್ ನಿಯಂತ್ರಣ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ವೀಕೆಂಡ್ ಕರ್ಪ್ಯೂ ಆದೇಶ ವಾಪಾಸ್ ನಿರ್ಧರವನ್ನು ಸಿಎಂ ಬೊಮ್ಮಾಯಿ …

Read More »

ಯತ್ನಾಳ್ ಭೇಟಿಯಾದ ರೇಣುಕಾಚಾರ್ಯ: ಕಾಲ ಬಂದರೆ ವರಿಷ್ಠರ ಭೇಟಿ

ಬೆಂಗಳೂರು : ಸಚಿವ ಸಂಪುಟ ಕುರಿತಾದ ಕೂಗು ಜೋರಾಗಿರುವ ವೇಳೆಯಲ್ಲಿ ಬಿಜೆಪಿ ಶಾಸಕರಾದ ಬಸವನ ಗೌಡ ಪಾಟೀಲ್ ಯತ್ನಾಳ್ ಮತ್ತು ಎಂ.ಪಿ. ರೇಣುಕಾಚಾರ್ಯ ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿರುವುದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಭೇಟಿಯ ಬಳಿಕ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು, ಕೇಂದ್ರ ಸಚಿವರಾಗಿದ್ದರು, ಹಿರಿಯರು.   ಭೇಟಿಯ ಬಳಿಕ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು, ಕೇಂದ್ರ ಸಚಿವರಾಗಿದ್ದರು, ಹಿರಿಯರು. ನಮ್ಮದು …

Read More »

ಗೋವಾ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಪರ್ರಿಕರ್ ಪುತ್ರನಿಗಿಲ್ಲ ಟಿಕೆಟ್

ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಪಣಜಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಮುನ್ನ ಗೋವಾ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಪ್ರತಿಪಕ್ಷಗಳನ್ನು ಕಠುವಾಗಿ ಟೀಕಿಸಿದರು. . ಫಡ್ನವೀಸ್ ನೇರವಾಗಿ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಯೋಜನೆಗಳಿಂದ ದೆಹಲಿಯಲ್ಲಿ ಪ್ರತಿ ಮನೆಗೂ ನೀರು ಪೂರೈಕೆಯಾಗುವಂತಾಗಿದೆ. ಇದರಿಲ್ಲಿ ಆಮ್ ಆದ್ಮಿ ಪಕ್ಷದ ಯಾವುದೇ ಪಾತ್ರವಿಲ್ಲ. ಇದರಿಂದಾಗಿ ಆಮ್ …

Read More »

ಸಂಕೇಶ್ವರ ಮಹಿಳೆ ಶೂಟೌಟ್ ಕೇಸ್: ಪುರಸಭೆ ಬಿಜೆಪಿ ಸದಸ್ಯನ ಬಂಧನ

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದ ಮಹಿಳೆಯ ಶೂಟೌಟ್ ಕೇಸ್‍ನಲ್ಲಿ ಪುರಸಭೆ ಸದಸ್ಯನೊರ್ವನಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೌದು ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಉಮೇಶ ಕಾಂಬಳೆ ಬಂಧಿತ ಆರೋಪಿಯಾಗಿದ್ದು. ಜ.16ರಂದು ನಾಡ ಪಿಸ್ತೂಲ್‍ನಿಂದ ಶೈಲಾ ನಿರಂಜನ್ ಸುಭೇದಾರ್(56) ಎಂಬ ಮಹಿಳೆಯ ಎದೆಗೆ ಹಾಗೂ ಕೈಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದ ಸಂಕೇಶ್ವರ ಪಿಎಸ್‍ಐ ಗಣಪತಿ ಕೊಗನೊಳ್ಳಿ ಹಾಗೂ ಸಿಪಿಐ ರಮೇಶ್ ಛಾಯಾಗೋಳ, ಹವಾಲ್ದಾರ್ …

Read More »

ಕೊರೊನಾ ಮಹಾಸ್ಫೋಟ: ವಿಜಯಪುರದಲ್ಲಿ 121 ಜನ್ರಿಗೆ ಕೊರೊನಾ ಸೋಂಕು

ವಿಜಯಪುರ ಜಿಲ್ಲೆಯಲ್ಲಿಂದು 121 ಜನರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪೀಡಿತರ ಸಂಖ್ಯೆ 730 ಕ್ಕೇರಿಕೆಯಾಗಿದೆ. ಆಸ್ಪತ್ರೆಯಲ್ಲಿ 37 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಷನ್ ನಲ್ಲಿ 730 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ 43 ರೋಗಿಗಳು ಬಿಡುಗಡೆಯಾಗಿದ್ದಾರೆ. ಇಂದು 2,534 ಜನರ ಗಂಟಲು ದ್ರವ ಸಂಗ್ರಹಿಲಾಗಿದ್ದು 2,225 ಜನರ ಗಂಟಲು ದ್ರವ ವರದಿಗೆ ಕಾಯಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ …

Read More »