ಬೆಳಗಾವಿ ಲೋಕಸಭೆ ಸೇರಿ ಉಪಚುನಾವಣೆ ಎದುರಿಸಲು ಕಾಂಗ್ರೆಸ್ ಸಂಪೂರ್ಣ ಸಿದ್ಧ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ರಾಜ್ಯದಲ್ಲಿ ಏಪ್ರಿಲ್ 17ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಗಾಗಿ ಹೈಕಮಾಂಡ್‍ಗೆ ಶಿಫಾರಸ್ಸು ಕಳುಹಿಸಲಾಗಿದ್ದು, ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್ ಉಪಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಬೆಳಗಾವಿ …
Read More »Yearly Archives: 2021
ಲೋಕಸಭೆ ಉಪಚುನಾವಣೆ ಸಿದ್ಧತೆ ಪೂರ್ಣ, ನಾಳೆಯಿಂದ ಕಟ್ಟು ನಿಟ್ಟಿನ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಹಿರೇಮಠ
ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮಹತ್ವದ ಮಾಹಿತಿ ನೀಡಿದರು. ಏಪ್ರೀಲ್ 17ರಂದು ಚುನಾವಣೆ ಮತದಾನ ನಿಗದಿಯಾಗಿದ್ದು, ಮಾರ್ಚ್ 23ರಿಂದ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ತಿಳಿಸಿದರು. : ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಹತ್ವದ ಮಾಹಿತಿ ನೀಡಿದರು. ಏಪ್ರಿಲ್ 17ರಂದು ಉಪಚುನಾವಣೆ ಮತದಾನ ನಿಗದಿಯಾಗಿದ್ದು, ಮಾರ್ಚ್ 23ರಿಂದ ಗೆಜೆಟ್ ಪ್ರಕಟಣೆ ಮೂಲಕ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಲಿವೆ. ನಾಮಪತ್ರ ಸಲ್ಲಿಸಲು …
Read More »ಬಾಂಬೆ ತಂಡ’ದ ಕ್ಷೇತ್ರಗಳು ಭೂಲೋಕದ ಸ್ವರ್ಗಗಳಾಗಿವೆಯೇ ಯಡಿಯೂರಪ್ಪನವರೇ? ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು : ಮಸ್ಕಿಯಲ್ಲಿ ಶಾಸಕರಾಗಿರುವ ಮಹಾತ್ಯಾಗದಿಂದ ಬಿಎಸ್‌ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈ ವರೆಗೆ ಯಾಕಾಗಿರಲಿಲ್ಲ ಮಸ್ಕಿಯ ಅಭಿವೃದ್ಧಿ? ಪ್ರಗತಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿರುವುದು ಗಮನಕ್ಕೆ ಬಂತು. ಬಿಎಸ್‌ವೈ …
Read More »ದುಬೈನಿಂದ ಬಂದ ಪ್ರಯಾಣಿಕನ ವಿಗ್‍ನಲ್ಲಿತ್ತು 5.55 ಕೆಜಿ ಚಿನ್ನ..!
ಚೆನ್ನೈ,ಮಾ.22- ಚಿನ್ನ ಕಳ್ಳಸಾಗಾಣೆಯ ಒಂದು ದೊಡ್ಡ ಜಾಲ ಭಾರತದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಪದೇ ಪದೇ ಹಲವು ನಿದರ್ಶನಗಳು ಸಿಗುತ್ತವೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಕಳ್ಳ ಮಾರ್ಗದಲ್ಲಿ ತರಲು ಯತ್ನಿಸಿದ್ದ, ಸುಮಾರು 5.55 ಕೆಜಿ ಚಿನ್ನ ಹಾಗೂ ವಿದೇಶಿ ಕರೆನ್ಸಿಗಳನ್ನು ವಾಯುಯಾನ ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.ಈ ಸಂಬಂಧ ಆರು ಮಂದಿಯನ್ನು ಬಂಸಲಾಗಿದ್ದು, ವಿಚಿತ್ರವೆಂದರೆ ತಮ್ಮ ಬೋಳು ತಲೆಯನ್ನು ಮುಚ್ಚಿಕೊಳ್ಳಲು ವಿಗ್‍ನಲ್ಲಿ , ಕಾಲಚೀಲದಲ್ಲಿ, ಒಳಉಡುಪಿನಲ್ಲಿ ಈ ಚಿನ್ನ ಪತ್ತೆಯಾಗಿದ್ದರೆ …
Read More »ರಮೇಶ್ ಜಾರಕಿಹೊಳಿ ಹೋದರೆ ಯಡಿಯೂರಪ್ಪ ಸರ್ಕಾರ ಜಾರಿ ಹೋಗುತ್ತೆ :ವಾಟಾಳ್ ನಾಗರಾಜ್
ಮೈಸೂರು : ರಮೇಶ್ ಜಾರಕಿಹೊಳಿ ಹೋದರೆ ಯಡಿಯೂರಪ್ಪ ಸರ್ಕಾರ ಜಾರಿ ಹೋಗುತ್ತದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬಿಎಸ್ವೈಗೆ ಕುಟುಕಿದ್ದಾರೆ. ನಂಜನಗೂಡಿನಲ್ಲಿ ಮಾ.26ರಂದು ಪಂಚ ಮಹಾರಥೋತ್ಸವ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿಯ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿಯನ್ನು ಪರಮ ಪವಿತ್ರ ಎಂದು ಬಿಂಬಿಸುತ್ತಿದ್ದಾರೆ. ಜಾರಕಿಹೊಳಿ ಪರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ …
Read More »ವಿಧಾನ ಪರಿಷತ್ ನಲ್ಲಿ ಮುಂದುವರಿದ ಗದ್ದಲ: ಸದನದ ಸಮಿತಿ ರಚಿಸಲು ಪ್ರತಿಪಕ್ಷ ಪಟ್ಟು
ವಿಧಾನ ಪರಿಷತ್: ರಾಜ್ಯದ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವುದರಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದ ತನಿಖೆಗೆ ಸದನ ಸಮಿತಿ ರಚಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಧರಣಿ ಮುಂದುವರಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರೂ ಜೆಡಿಎಸ್ ಸದಸ್ಯರು ಒಪ್ಪಲಿಲ್ಲ. ಸದನ ಸಮಿತಿ ರಚಿಸಲೇ ಬೇಕು ಎಂದು ಪಟ್ಟು ಹಿಡಿದರು. ಈ ವೇಳೆ …
Read More »ಭ್ರಷ್ಟ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಬಿಜೆಪಿ ನಾಯಕರಿಗೆ ನೈತಿಕತೆ ಇದೆಯೇ?: ಕಾಂಗ್ರೆಸ್
ಬೆಂಗಳೂರು: ಯಡಿಯೂರಪ್ಪನಂತಹ ಭ್ರಷ್ಟ ವ್ಯಕ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿರುವ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ. ಮಾಜಿ ಸಚಿವ ಕೃಷ್ಣ ಭೈರೇಗೌಡ , ಮಾಜಿ ಸಂಸದ ಉಗ್ರಪ್ಪ ಮತ್ತು ಬ್ರಿಜೇಶ್ ಕಾಳಪ್ಪ ಅವರಿಂದ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿ.ಎಸ್. ಉಗ್ರಪ್ಪ, “ಲೋಕಪಾಲ ಕಾಯ್ದೆ ಜಾರಿಗೆ ಬರಬೇಕು …
Read More »ಮಾರ್ಚ್ 22, 2020 : ಸರಿ ಒಂದು ವರ್ಷದ ಹಿಂದೆ ಈ ದಿನ ಏನಾಯಿತು ನೆನಪಿದೆಯೇ? ಇಲ್ಲಿದೆ ವೈರಲ್ ವಿಡೀಯೋ
ನವದೆಹಲಿ : ಮಾರ್ಚ್ 22, 2020 ರ ದಿನವನ್ನು ಯಾರು ಮರೆಯಲು ಸಾಧ್ಯವಿಲ್ಲ? ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ ಭಾರತದ ಜನತೆ ಮನೆಗಳಲ್ಲಿ ಬಂಧಿಯಾಗಿ, ನಂತರ ಸಂಜೆ ಕೊರೋನಾ ಯೋಧರಿಗೆ ಗೌರವವನ್ನು ವ್ಯಕ್ತಪಡಿಸಲು ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು. 2020ರ ಮಾರ್ಚ್ 22ರ ದಿನವನ್ನು ಜನತಾ ಕರ್ಫ್ಯೂ ಎಂದು ಕರೆಯಲಾಗುತ್ತದೆ. ಇಂದು, ಸಾರ್ವಜನಿಕ ಕರ್ಫ್ಯೂ ಆಗಿ ಒಂದು ವರ್ಷ ಕಳೆದಿದೆ. ಅನೇಕ ಮೋಜಿನ ನೆನಪುಗಳು ಜನರ …
Read More »ದೆಹಲಿ ರೈತ ಸ್ಮಾರಕಕ್ಕೆ ಕರ್ನಾಟಕದ ಮಣ್ಣು!
ಬಳ್ಳಾರಿ: ದೆಹಲಿಯ ಮೂರು ಗಡಿಗಳಲ್ಲಿ ಏಪ್ರಿಲ್‌ನಲ್ಲಿ ನಿರ್ಮಾಣವಾಗಲಿರುವ ರೈತ ಸ್ಮಾರಕಗಳಿಗೆ ಕರ್ನಾಟಕದ ರೈತ ಹೋರಾಟಗಳ ನೆನಪಿನ ಮಣ್ಣು ಕೂಡ ಸೇರ್ಪಡೆಯಾಗಲಿದೆ. ರೈತರ ಮುಷ್ಕರವನ್ನು ಬೆಂಬಲಿಸಿ ಮಾ.5ರಿಂದ ಬಸವ ಕಲ್ಯಾಣದಿಂದ ಆರಂಭವಾಗಿರುವ ರೈತರ ಪಾದಯಾತ್ರೆಯು ಬಳ್ಳಾರಿಯಲ್ಲಿ 23ರಂದು ಸಮಾರೋಪಗೊಳ್ಳಲಿದ್ದು, ಮಾರ್ಗ ಮಧ್ಯದ 26 ಗ್ರಾಮಗಳ ಹೊಲಗಳಲ್ಲಿ ಮಣ್ಣನ್ನು ಸಂಗ್ರಹಿಸಲಾಗಿದೆ. ರೈತ ಸಂಘ, ಚಾಗನೂರು-ಸಿರಿವಾರ ಭೂ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಲೇಖಕ ಸ.ರಘುನಾಥ ಪ್ರತಿ ಗ್ರಾಮದಿಂದಲೂ ಒಂದು ಹಿಡಿ …
Read More »ವಿಜಯಪುರ : ಚಿಂದಿ ಆಯುವ ವಿವಾಹಿತೆ ಮೇಲೆ ಮೂವರಿಂದ ಅತ್ಯಾಚಾರಕ್ಕೆ ಯತ್ನ
ವಿಜಯಪುರ : ಚಿಂದಿ ಹಾಗೂ ಹಂದಿ ಗೊಬ್ಬರ ಸಂಗ್ರಹಿಸಿ ಜೀವನ ನಡರಸುತ್ತಿದ್ದ 23 ವರ್ಷದ ಗೃಹಿಣಿ ಮೇಲೆ ಮೂವರು ಕಾಮಾಂಧರು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ವರದಿಯಾಗಿದೆ. ಮುದ್ದೇಬಿಹಾಳ ಪಟ್ಟಣದಲ್ಲಿ ಚಿಂದಿ, ಹಂದಿ ಗೊಬ್ಬರ ಆಯ್ದು ಜೀವನನಡೆಸುತ್ತಿರುವ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರನ್ನು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರಕ್ಕೆ ಯತ್ನಿಸಿದವರನ್ನು ಅಕ್ಬರ್ ಮಕಾನದಾರ, ಸಲೀಮ ನದಾಫ, ಸೋಯೆಲ್ ಹಡಗಲಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. …
Read More »