Breaking News

Yearly Archives: 2021

ಶಾಲಾ ಮಕ್ಕಳಿಗೆ ಪತ್ರ ಬರೆದು ಕುಶಲೋಪರಿ ವಿಚಾರಿಸಿದ ಶಿಕ್ಷಕಿ

ಚಿಕ್ಕಮಗಳೂರು, ; ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಬಾಗಿಲು ಹಾಕಿ ವರ್ಷಗಳೇ ಕಳೆಯುತ್ತಿದೆ. ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳು ತೆರೆಯದೇ ಎರಡು ವರ್ಷಗಳು ತುಂಬುತ್ತಾ ಬರುತ್ತಿದೆ. ಮಕ್ಕಳು ಶಾಲೆ ಕಡೆ ಮುಖ ಮಾಡಿಲ್ಲ ಇದು ಮಕ್ಕಳ ಮತ್ತು ಶಿಕ್ಷಕರ ಬಾಂಧವ್ಯದ ಬೆಸುಗೆ ಕಳಚುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶಿಕ್ಷಕಿಯೊಬ್ಬರು ಮಕ್ಕಳಿಗೆಲ್ಲ ಪತ್ರ ಬರೆಯುವ ಮೂಲಕ ತಮ್ಮ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.   ಚಿಕ್ಕಮಗಳೂರು ತಾಲೂಕಿನ …

Read More »

ಸಿಎಂ ಬದಲಾವಣೆ : ದೆಹಲಿಯಲ್ಲಾದ ಚರ್ಚೆ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು?

ನವದೆಹಲಿ : ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆದಿಲ್ಲ, ಕರೊನಾ ಮತ್ತು ಐದು ರಾಜ್ಯಗಳ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಯಡಿಯೂರಪ್ಪ ಅವರನ್ನು ಸರ್ವಾನುಮತದಿಂದ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ಆದರೆ ಆಗಾಗ ಸಿಎಂ ಬದಲಾವಣೆ ರೀತಿಯ ಹೇಳಿಕೆಗಳು ಬರುತ್ತಿವೆ. ಹೇಳಿಕೆ ನೀಡಿದವರ …

Read More »

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಬಗ್ಗೆ ಡಿವಿಎಸ್ ಸ್ಪಷ್ಟನೆ

ಬೆಂಗಳೂರು : ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಒಂದು ಹಂತದಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಅನ್ನೋದು ಸಹಜ. ಇದಕ್ಕೆ ಇತಿಶ್ರೀ ಹಾಕಲು ಯತ್ನ ಮಾಡಲಾಗ್ತಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವರಿಂದ ಕೆಲವು ಕಡೆ ಹೇಳಿಕೆ ಕೊಡಲಾಗ್ತಿದೆ. …

Read More »

ಬಿಜೆಪಿಯಲ್ಲಿ ನಿಲ್ಲದ ಚಟುವಟಿಕೆ: ವಿಜಯೇಂದ್ರ ಬಳಿಕ ದೆಹಲಿಗೆ ಸಿ.ಟಿ.ರವಿ, ಮುರುಗೇಶ್ ನಿರಾಣಿ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಸದ್ಯಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ನಾಯಕರ ದೆಹಲಿ ಭೇಟಿ ನಿಂತಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ನಡ್ಡಾ ಅವರ ಭೇಟಿಯ ನಂತರ ತಮ್ಮ ಹುಮ್ಮಸ್ಸು ಹೆಚ್ಚಾಗಿದೆ ಎಂದು ಟ್ವೀಟ್‌ ಮಾಡಿದ್ದರು. ಅಲ್ಲದೇ ತಮ್ಮ ದೆಹಲಿ ಭೇಟಿ ಯಶಸ್ವಿಯಾಗಿದೆ ಎಂದು ಆಪ್ತರ ಬಳಿ …

Read More »

ಕಡಹೆಮ್ಮಿಗೆ: ಶಿಥಿಲಗೊಂಡ ನೀರಿನ ಟ್ಯಾಂಕ್‌; ಆತಂಕದಲ್ಲಿ ಜನರು

ಕಿಕ್ಕೇರಿ: ಹೋಬಳಿಯ ಕಡಹೆಮ್ಮಿಗೆ ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಕುಸಿಯುವ ಹಂತ ತಲುಪಿದೆ. ಹೋಬಳಿಯ ಗಡಿಯಂಚಿನ ಗ್ರಾಮವಾದ ಆನೆಗೊಳ ಗ್ರಾ.ಪಂ ವ್ಯಾಪ್ತಿಗೆ ಈ ಗ್ರಾಮ ಸೇರಿದೆ. ಗ್ರಾಮದ ಜೊತೆಗೆ ಕಡಹೆಮ್ಮಿಗೆ ಕೊಪ್ಪಲು ಗ್ರಾಮ ಹೊಂದಿಕೊಂಡಿದೆ. ಸುಮಾರು 1,480 ಜನಸಂಖ್ಯೆ ಇದೆ. ಎರಡು ಗ್ರಾಮಗಳಿಗೆ ಈ ಟ್ಯಾಂಕಿನಿಂದ ನೀರು ಸರಬರಾಜು ಆಗುತ್ತಿದೆ. ಆದರೆ, ಶುಚಿತ್ವವೂ ಇಲ್ಲ. ಟ್ಯಾಂಕ್‌ನ ಪ್ಲಾಸ್ಟರಿಂಗ್‌ ಕಳಚಿ ಬೀಳುತ್ತಿದೆ. ಕಬ್ಬಿಣಗಳು ಹೊರಗೆ ಕಾಣಿಸುತ್ತಿದ್ದು, ತುಕ್ಕು ಹಿಡಿಯುತ್ತಿವೆ. ಕೆಲವೆಡೆ …

Read More »

ಸರ್ಕಾರದ ಹಣ ನುಂಗಬೇಡಿ ಎಂದು ಸ್ಟೇಟಸ್​ ಹಾಕಿದ್ದಕ್ಕೆ ಕೊಂದೇ ಬಿಟ್ರಾ?; ಗ್ರಾಮ ಪಂಚಾಯತ್​ ಅಧ್ಯಕ್ಷನ ವಿರುದ್ಧ ಕೊಲೆ ಶಂಕೆ

ಉಡುಪಿ: ಸರ್ಕಾರದ ಹಣ ನುಂಗಬೇಡಿ ಎಂದು ಗ್ರಾಮಪಂಚಾಯತ್ ಅಧ್ಯಕ್ಷರೊಬ್ಬರ ವಿರುದ್ಧ ಸ್ಟೇಟಸ್​ ಹಾಕಿದ್ದಕ್ಕೆ ಗ್ರಾಮಸ್ಥನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರೊಬ್ಬರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದು, ಗ್ರಾಮಪಂಚಾಯತ್ ಅಧ್ಯಕ್ಷರು ಕೊಲೆ ಮಾಡಿರಬಹುದು ಎಂಬ ಅನುಮಾನವೂ ಮೂಡಿದೆ. ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ವಿರುದ್ಧ ಕೊಲೆ ಶಂಕೆ ವ್ಯಕ್ತವಾಗಿದೆ. ಇವರು ಯಡಮೊಗೆ ಗ್ರಾಮದ ಉದಯ ಗಾಣಿಗ ಅವರನ್ನು ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಗ್ರಾಮ ಪಂಚಾಯತ್ ಲಾಕ್​ಡೌನ್​ …

Read More »

ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನೂ ಎತ್ತಂಗಡಿ ಮಾಡಿದ ರಾಜ್ಯ ಸರಕಾರ

ಬೆಂಗಳೂರು – ಕಳೆದ ಕೆಲವು ದಿನಗಳಿಂದ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳನ್ನೂ ರಾಜ್ಯ ಸರಕಾರ ಎತ್ತಂಗಡಿ ಮಾಡಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಇಬ್ಬರನ್ನು ಶನಿವಾರ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ರೋಹಿಣಿ ಸಿಂಧೂರಿ ಅವರನ್ನು ಧರ್ಮದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದ್ದು ಅವರ ಜಾಗಕ್ಕೆ ಗೌತಮ್ ಬಗಾದಿ ಅವರನ್ನು ಹಾಕಲಾಗಿದೆ. ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು …

Read More »

ಜಪಾನ್‌ ವಿದ್ಯಾರ್ಥಿ ವೇತನಕ್ಕೆ ಗೌರಿ ಬಗಲಿ ಆಯ್ಕೆ

ಇಂಡಿ(ವಿಜಯಪುರ): ಜಪಾನ್‌ ಪ್ರಧಾನಮಂತ್ರಿ ಅವರು ಏಷ್ಯಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಾಯೋಜಿಸಿರುವ (The Asia kakehashi project) ಒಂದು ವರ್ಷದ ಶಿಷ್ಯವೇತನ ಸಹಿತ ಉಚಿತ ಶಿಕ್ಷಣ ಪಡೆಯಲು ಇಂಡಿ ಪಟ್ಟಣದ ಗೌರಿ ಸಂಕೇತ ಬಗಲಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗೌರಿ ಬಗಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳ ಒಟ್ಟು 21 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಜಪಾನ್‌ನಲ್ಲಿ ಒಂದು ವರ್ಷ ಉಚಿತ …

Read More »

ತೇಲಿ ಹೋಯ್ತು ಸೋಯಾಬೀನ್ ಬೆಳೆ; ಧಾರವಾಡದಲ್ಲಿ ಸುರಿದ ಮಳೆಗೆ ರೈತರು ಕಂಗಾಲು

ಧಾರವಾಡ: ಕಳೆದ ವರ್ಷದಿಂದ ರೈತರು ಕೊರೊನಾ ಸೋಂಕು, ಲಾಕ್​ಡೌನ್ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಈ ಬಾರಿಯ ಕೊರೊನಾ ಎರಡನೇ ಅಲೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದೆಲ್ಲದರ ಮಧ್ಯೆಯೇ ಈ ಬಾರಿ ಉತ್ತಮ ಮುಂಗಾರು ಇದ್ದಿದ್ದರಿಂದ ರೈತರು ಕೊಂಚ ಉತ್ಸಾಹದಿಂದ ಕೃಷಿ ಚಟುವಟಿಕೆ ಆರಂಭಿಸಿದ್ದರು. ಆದರೆ ನಿನ್ನೆ ಸುರಿದ ಮಳೆಗೆ ರೈತರ ಕನಸುಗಳೇ ಕೊಚ್ಚಿಕೊಂಡು ಹೋಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು …

Read More »

ಬೀಜ, ಗೊಬ್ಬರ ಉಚಿತವಾಗಿ ವಿತರಿಸಿ: ಸಿಎಂ ಬಿಎಸ್‌ವೈಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು: ‘ಸರ್ಕಾರದ ನೀತಿಗಳು ಮತ್ತು ಕೋವಿಡ್ ಮತ್ತಿತರ ಕಾರಣಗಳಿಂದ ರೈತರ ಬಳಿ ಬಿತ್ತನೆ ಚಟುವಟಿಕೆಗೆ ಹಣ ಇಲ್ಲದಂತಾಗಿದೆ. ಹೀಗಾಗಿ ರೈತರಿಗೆ ಬೀಜ, ಗೊಬ್ಬರ ಉಚಿತವಾಗಿ ನೀಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ‘ಸಾಲ ವಿತರಣೆ ತಕ್ಷಣ ಆರಂಭಿಸಬೇಕು. ಹೆಸರು, ಉದ್ದು, ಅಲಸಂಡೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಸೋಯಾ, ಶೇಂಗಾ ಮುಂತಾದ ಎಣ್ಣೆ ಬೀಜಗಳನ್ನು ಸಂಗ್ರಹಿಸಿ, …

Read More »