Breaking News

Daily Archives: ಡಿಸೆಂಬರ್ 9, 2021

MLC ಎಲೆಕ್ಷನ್ ಹೊತ್ತಲ್ಲೇ ಬಹಿರಂಗವಾಯ್ತು ಅಭ್ಯರ್ಥಿ ಅಶ್ಲೀಲ ವಿಡಿಯೋ

ವಿಜಯಪುರ: ವಿಜಯಪುರ -ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯಪುರ -ಬಾಗಲಕೋಟೆ ವಿಧಾನಪರಿಷತ್ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಅವರ ವಿಡಿಯೋ ಮತದಾನಕ್ಕೆ ಮೊದಲು ಬಯಲಾಗಿರುವುದು ವಿರೋಧಿಗಳ ಕೃತ್ಯವಿರಬಹುದು ಎಂದು ಹೇಳಲಾಗಿದೆ.   ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅಭ್ಯರ್ಥಿ ತಮ್ಮ ಚಾರಿತ್ರ್ಯವಧೆ ಮಾಡಲು ಅಶ್ಲೀಲ ವಿಡಿಯೋ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

Read More »

ಶಾಲೆಗಳ ಬಂದ್ ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿ ಆಧಾರದ ಮೇಲೆಯೇ ಈ ನಿರ್ಧಾರ

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕಾದ ಗಂಭೀರ ಸ್ಥಿತಿ ಸಧ್ಯಕ್ಕಿಲ್ಲ. ಶಾಲೆಗಳಿಗಾಗಿ ಯಾವುದೇ ಹೊಸ ಮಾರ್ಗಸೂಚಿಯೂ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ನಾಗೇಶ್, ಶಾಲೆಗಳಿಗೆ ಈ ಹಿಂದೆ ಇದ್ದ ಮಾರ್ಗಸೂಚಿಯೇ ಮುಂದುವರೆಯಲಿದೆ. ಸಧ್ಯಕ್ಕೆ ಶಾಲೆಗಳು ಬಂದ್ ಮಾಡುವುದಿಲ್ಲ. ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿ ಆಧಾರದ ಮೇಲೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ರಾಜ್ಯದ ಕೆಲ ಹಾಸ್ಟೇಲ್ ಗಳಲ್ಲಿ …

Read More »

ರೈತರ ಗೆಲುವು;ಡಿಸೆಂಬರ್ 11ರಂದು ದೆಹಲಿಯಿಂದ ವಾಪಸ್

ಕಳೆದ 15 ತಿಂಗಳಿಂದ ನಡೆಯುತ್ತಿದ್ದ ರೈತರ ಸುದೀರ್ಘ ಪ್ರತಿಭಟನೆ ಅಂತ್ಯಗೊಂಡಿದ್ದು, ಡಿಸೆಂಬರ್ 11ರಂದು ರೈತರು ದೆಹಲಿಯಿಂದ ವಾಪಸ್ ಆಗಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ವಿವಾದಿತ ಕೃಷಿ ತಿದ್ದುಪದಿ ಕಾಯ್ದೆ ರದ್ದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಹೋರಾಟ ಸ್ಥಗಿತಗೊಳಿಸುತ್ತಿರುವುದಾಗಿ ಕಿಸಾನ್ ಮೋರ್ಚಾ ತಿಳಿಸಿದೆ. ಕಳೆದ ಒಂದು ವರ್ಷದಿಂದ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ನಮ್ಮ ಹೋರಾಟದ ಫಲವಾಗಿ ಕೇಂದ್ರ …

Read More »

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ವಾರದ ಬಳಿಕ ನಿರ್ಧಾರ, ರಾಜ್ಯದ ಹಾಸ್ಟೇಲ್ ಗಳಿಗೆ ಹೊಸ ಮಾರ್ಗಸೂಚಿ ಜಾರಿ: ಬೊಮ್ಮಾಯಿ

ಬೆಂಗಳೂರು: ರಾಜ್ಯದ ಹಾಸ್ಟೇಲ್ ಗಳಿಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹಾಸ್ಟೇಲ್ ಗಳಿಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಹಾಸ್ಟೇಲ್ ನಲ್ಲಿ ಮಕ್ಕಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ. ಅಂತರ ಪಾಲಿಸಿಕೊಂಡು ಹೋಗಬೇಕು. ಹಾಸ್ಟೇಲ್ ಸಿಬ್ಬಂದಿ ಗಳಿಗೆ 2 ಡೋಸ್ ಲಸಿಕೆ ಕಡ್ಡಾಯ ಎಂದು ತಿಳಿಸಿದರು. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರವಾಗಿಲ್ಲ, ಇನ್ನೂ ಒಂದು ವಾರದ ಬೆಳವಣಿಗೆ ಅವಲೋಕಿಸಿ ಕರ್ಫ್ಯೂ …

Read More »

:ವಿದೇಶಗಳಿಂದ ಬಂದಿರುವ 66 ಮಂದಿ ವಿದೇಶಿಯರಿಗೆ ಕ್ವಾರಂಟೈನ್

ದಾವಣಗೆರೆ:ದೇಶ-ವಿದೇಶಗಳಿಂದ ಜಿಲ್ಲಾಗೆ ಬಂದಿರುವ 66 ಮಂದಿ ಪೈಕಿ ಕೊರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಂಡ ದೇಶಗಳಿಂದ 21 ಜನ ಬಂದಿದ್ದಾರೆ. ಅವರರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.ಜನ ಭಯಪಡುವ ಅಗತ್ಯ ಇಲ್ಲವೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬೆಣ್ಣೆ ನಗರಿ ಮಂದಿಗೆ ಹೇಳಿದ್ದಾರೆ.   ನಗರದಲ್ಲಿ ಮನೆ ಮನೆಗೆ ಲಸಿಕೆ ಅಭಿಯಾನ ಆರಂಭಿಸಿ ಮಾತನಾಡಿದ ಅವರು, 66 ಜನರು ಕೂಡ ಕೊರೊನಾ ನೆಗೆಟಿವ್ ವರದಿ ತಂದಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇರಿಸಿದ್ದೇವೆ. 7 ದಿನಗಳ ಹೋಂ …

Read More »

ಲಸಿಕೆ ಪಡೆದುಕೊಳ್ಳದಿದ್ದರೂ ಸುಳ್ಳು ಸರ್ಟಿಫಿಕೇಟ್ ಕೊಡುತ್ತಿರುವ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು:

ದೇಶದ ಜನರ ಸುರಕ್ಷೆ, ಕೋವಿಡ್ ತಡೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ದೇಶದ ಜನರಿಗೆ ಉಚಿತವಾಗಿ ಕೈಬಿಟ್ಟು ಲಸಿಕೆಯನ್ನು ಕೊಡುತ್ತಿದೆ.ಆದ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೊರೊನಾ ಲಸಿಕೆಗಳನ್ನು ಕೊಡದೇ ಇದ್ದರೂ ಕೋವಿಡ್ ಪ್ರಮಾಣ ಪತ್ರಗಳನ್ನು ಕೊಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕಳೆದ ಎರಡು ತಿಂಗಳಿನಿಂದ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡದ್ದಿದ್ದರೂ‌‌ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಚೆನ್ನಮ್ಮ ಕೊಳಚಿ ಎಂಬುವವರು ಮೊದಲ ಮತ್ತು ಎರಡನೇ ಡೋಸ್ …

Read More »

ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೂ ವಿಧಾನಮಂಡಲದ ಚಳಿಗಾಲ ಅಧಿವೇಶನ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.

ಈ ಬಾರಿ ಕೋವಿಡ್ ಸೋಂಕು ಹರಡುವಿಕೆ ಭೀತಿ ಹಾಗೂ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೂ ವಿಧಾನಮಂಡಲದ ಚಳಿಗಾಲ ಅಧಿವೇಶನ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಸಮರ್ಪಕ ವಸತಿ, ಸಾರಿಗೆ ಹಾಗೂ ಊಟೋಪಾಹಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಜರುಗಿದ ಗಣ್ಯರು, ಉನ್ನತ ಅಧಿಕಾರಿಗಳು ಮತ್ತು ಹೋಟೆಲ್ ಗಳ ಸಂಪರ್ಕಾಧಿಕಾರಿಗಳ (ಲೈಸನ್ ಅಧಿಕಾರಿಗಳ) ಸಭೆಯ ಅಧ್ಯಕ್ಷತೆ ವಹಿಸಿ …

Read More »

ಬೆಳಗಾವಿಯಲ್ಲಿ ಎಬಿವಿಪಿಯಿಂದ ಜನರಲ್ ಬಿಪಿನ್ ರಾವತ್‍ಗೆ ಶ್ರದ್ಧಾಂಜಲಿ

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಬೆಳಗಾವಿಯಲ್ಲಿ ಎಬಿವಿಪಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಮಿಳುನಾಡಿನ ಕುನೂರ್ ಅರಣ್ಯಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಜನರು ನಿಧನ ಹೊಂದಿದ್ದಾರೆ. ಹೀಗಾಗಿ ಇಡೀ ದೇಶಾಧ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಬೆಳಗಾವಿ ಮಹಾನಗರ ಘಟಕದ ವತಿಯಿಂದ ನಗರದ ರಾಜ್ ಲಖಮಗೌಡ ಕಾಲೇಜು ಎದುರಿಗೆ ಶ್ರದ್ಧಾಂಜಲಿ …

Read More »

ಲೇಡೀಸ್ ಕ್ಲಬ್ ವತಿಯಿಂದ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ

ಬೆಳಗಾವಿಯ ಮೈತ್ರಿ ಆಫೀಸರ್ ಲೇಡೀಸ್ ಕ್ಲಬ್ ವತಿಯಿಂದ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ ಮಾಡಿದರು. ಬುಧವಾರ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ಆಗಮಿಸಿದ ಬೆಳಗಾವಿಯ ಮೈತ್ರಿ ಆಫೀಸರ್ ಲೇಡೀಸ್ ಕ್ಲಬ್ ಅಧ್ಯಕ್ಷರಾದ ಮೈತ್ರಾಯೀ ಬಿಸ್ವಾಸ್ ಅವರು 30 ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ ಮಾಡಿದರು. ಇದೇ ವೇಳೆ ಮುಂಬೈನಿಂದ ಬಂದಿದ್ದ ರಮನ್ ದೇವದಾರ್ ಅವರ ಹೇರ್ ಡ್ರೆಸಸ್‍ನಿಂದ ಸುಮಾರು 90 ವಿದ್ಯಾರ್ಥಿಗಳಿಗೆ ಉಚಿತವಾಗಿ …

Read More »

ಮತ ಸೆಳೆಯಲು ತಿರುಪತಿ ಲಡ್ಡು ಜೊತೆಗೆ 7500 ರೂ. ಹಣ.! ಖಾತ್ರಿಗಾಗಿ ದೇವರ ಫೋಟೋ ಮುಟ್ಟಿ ಆಣೆ ಪ್ರಮಾಣ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಯ ಕಣ ರಂಗೇರಿದೆ. ಅಭ್ಯರ್ಥಿಗಳು ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಚಿಂತಕರ ಚಾವಡಿ ಎಂದೇ ಕರೆಯಿಸಿಕೊಳ್ಳುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸದ್ಯ ಹಣದ ಹೊಳೆಯೇ ಹರಿಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.‌ ಅಭ್ಯರ್ಥಿಗಳು ಹಣ ನೀಡಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಪಡೆದ ಹಣಕ್ಕೆ ಮೋಸ ಮಾಡಬಾರದು ಎಂದು ದೇವರ ಮೇಲೆ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಘಟನೆ …

Read More »