Breaking News

Daily Archives: ಅಕ್ಟೋಬರ್ 8, 2021

8 ಜಿಲ್ಲೆಗಳಲ್ಲಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನು PPP ಮಾದರಿಯಲ್ಲಿ ಸ್ಥಾಪಿಸಲು ಕ್ರಮ: ಬೊಮ್ಮಾಯಿ

ಚಾಮರಾಜನಗರ: ರಾಜ್ಯದ ಎಂಟು ಜಿಲ್ಲೆಗಳಿಗೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಒಂದೂವರೆ ವರ್ಷಗಳಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಚಾಮರಾಜನಗರ ಜಿಲ್ಲೆಯು ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ, ಹಿಂದುಳಿದ ಜಿಲ್ಲೆ ಎಂದು ಪರಿಗಣಿಸ್ಪಟ್ಟಿದೆ. ಜಿಲ್ಲೆ ದೇವಸ್ಥಾನಗಳ ತವರೂರು …

Read More »

ಡಿಗ್ರಿ ಕಾಲೇಜಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್

ಬೆಳಗಾವಿ: ಕಳೆದ ಮೂರು ವರ್ಷಗಳ ಹಿಂದೆ ಖಾನಾಪೂರ ತಾಲೂಕಿಗೆ ಮಂಜೂರಾಗಿದ್ದ ಡಿಗ್ರಿ ಕಾಲೇಜು, ಗದಗಿಗೆ ಸ್ಥಳಾಂತರಗೊಂಡಿತ್ತು. ಅದನ್ನು ಮತ್ತೆ ಖಾನಾಪೂರ ತಾಲೂಕಿಗೆ ತಂದು ವಿದ್ಯಾರ್ಥಿಗಳಿಗೆ ಸಮರ್ಪಣೆ ಮಾಡುವುದರಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಯಶಸ್ವಿ ಆಗಿದ್ದಾರೆ. ಈ ಹಿಂದೆ ಖಾನಾಪುರ ತಾಲೂಕಿಗೆ ಮಂಜೂರಾಗಿದ್ದ ಸರ್ಕಾರಿ ಡಿಗ್ರಿ ಕಾಲೇಜು ಗದಗ್‍ಗೆ ಸ್ಥಳಾಂತರಗೊಂಡಿತ್ತು. ಅದನ್ನು ಮಾಜಿ ಸಚಿವ ಎಚ್.ಕೆ ಪಾಟೀಲ್ ಸಹಾಯದಿಂದ ಮತ್ತೆ ಖಾನಾಪುರ ತಾಲೂಕಿಗೆ ತರುವಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಯಶಸ್ವಿಯಾಗಿದ್ದಾರೆ. ಈ …

Read More »

ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಹುಡುಗ ನಾಪತ್ತೆ

ಬೆಳಗಾವಿ: ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಹುಡುಗನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದ ಬಳಿ ನಡೆದಿದೆ. ಕಮಲದಿನ್ನಿ ಗ್ರಾಮದ ಉದಯ ಪರಶುರಾಮ ಹಾದಿಮನಿ(17) ನದಿಯಲ್ಲಿ ನಾಪತ್ತೆಯಾವನು. ಈತ ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಪರಶುರಾಮನಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದರು. ಗುರುವಾರ ರಾತ್ರಿ ಕತ್ತಲು ಇರುವುದರಿಂದ …

Read More »

ಐಟಿ ದಾಳಿಗೂ ಯಡಿಯೂರಪ್ಪರಿಗೂ ಸಂಬಂಧವಿಲ್ಲ : ರೇಣುಕಾಚಾರ್ಯ

ಬೆಂಗಳೂರು : ಐಟಿ ದಾಳಿಗೂ ಯಡಿಯೂರಪ್ಪ ಅವರಿಗೂ ಸಂಬಂಧವಿಲ್ಲ,ಸತ್ಯಾಂಶ ಹೊರಬರುತ್ತದೆ ಅಂತ ಅವರೇ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶುಕ್ರವಾರ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಪ್ತ ಉಮೇಶ್ ನಿವಾಸದ ಮೇಲೆ ಐಟಿ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದರು. ಯಡಿಯೂರಪ್ಪ ಅವರನ್ನು ಹದ್ದುಬಸ್ತಿನಲ್ಲಿ ಇಡುವುದಕ್ಕೆ ಆಗುವುದಿಲ್ಲ. ಯಡಿಯೂರಪ್ಪ ಅವರನ್ನು ಬಿಜೆಪಿ ಸೈಡ್ ಲೈನ್ ಮಾಡಿಲ್ಲ ಎಂದರು. ಆರೆಸೆಸ್ ಕುರಿತು ಸಿದ್ದರಾಮಯ್ಯ, ಎಚ್. …

Read More »

ಖರ್ಗೆಯವರನ್ನೇ ಸಿಎಂ ಮಾಡಲು ಸೂಚಿಸಿದ್ದೆ, ಆದರೆ. : ಕಾಂಗ್ರೆಸ್ ನಾಯಕರಿಗೆ ದೇವೇಗೌಡ ಚಾಟಿ

ಬೆಂಗಳೂರು: ‘ವಿಧಿಯಾಟದಿಂದ ಚುನಾವಣೆ ಬಳಿಕ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ನಾಯಕರು ನಮ್ಮ ಮನೆಗೆ ಬಂದರು. ನಾನು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಹೇಳಿದೆ. ಆದರೆ ಗುಲಾಮ್ ನಬಿ ಅಝಾದ್ ಅವರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಅಂತ ಒತ್ತಾಯ ಮಾಡಿದರು’ ಇದು ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು. ‘ಬಜೆಟ್ ನಲ್ಲಿ ಸಾಲ ಮನ್ನಾ ಮಾಡಲು ಹಣ ಮೀಸಲಿಡುವ ಬಗ್ಗೆ ಸಾಕಷ್ಟು …

Read More »

ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳ: ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು..!

ಬೆಂಗಳೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪ್ರೇಮಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಪ್ರೇಯಸಿಗೆ ಗಿಫ್ಟ್ ಕೊಡಲು ಕಳ್ಳತನಕ್ಕೆ ಇಳಿದಿದ್ದ ಪ್ರಿಯಕರನಿಗೆ ಪ್ರೇಯಸಿಯೇ ಸಾಥ್​ ಕೊಡುತ್ತಿದ್ದಳು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಬಂಧಿತ ಪ್ರೇಮಿಗಳನ್ನು ವಿನಯ್ (32) ಹಾಗೂ ಪ್ರೇಯಸಿ ಕೀರ್ತನಾ(25) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಚಂದ್ರಲೇಔಟ್ ಪೊಲೀಸರಿಂದ ಪ್ರೇಮಿಗಳ ಬಂಧನವಾಗಿದೆ. ಪ್ರೇಮಿ ವಿನಯ್, ರಾಜಾಜಿನಗರದ ರೌಡಿಶೀಟರ್. ಗಿಫ್ಟ್‌ ಕೊಡಿಸುವಂತೆ ವಿನಯ್​ನನ್ನು ಪ್ರೇಯಸಿ ಕೀರ್ತನಾ ಪೀಡಿಸುತ್ತಿದ್ದಳು. ಹೀಗಾಗಿ, ವಿನಯ್​ ಒಂದು …

Read More »

ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದ ಮುಸ್ಲಿಂ ಯುವಕನ ಕೊಲೆ: ಯುವತಿ ಪೋಷಕರು ಸೇರಿ 10 ಮಂದಿ ಬಂಧನ

ಬೆಳಗಾವಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಜಿಲ್ಲೆಯ ಖಾನಾಪುರ ಹೊರವಲಯದಲ್ಲಿ ಸೆ.28ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣದ ಹಂತಕರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯುವತಿಯ ತಂದೆ ಈರಪ್ಪ ಕಂಬಾರ, ತಾಯಿ ಸುಶೀಲಾ ಕಂಬಾರ, ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ್, ಕುತಬುದ್ದೀನ್ ಬೇಪಾರಿ, ಪ್ರಲ್ಹಾದ್ ಸುಗತೆ, ಮಂಜುನಾಥ ಗೋಂದಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 …

Read More »

ಹೆತ್ತ ಮಕ್ಕಳನ್ನೇ ಮಾರಾಟ ಮಾಡುತ್ತಿದ್ದ ತಾಯಿ ಸೇರಿ ಖತರ್ನಾಕ್​ ಗ್ಯಾಂಗ್​ ಅಂದರ್​​​

ಬೆಂಗಳೂರು: ಮಕ್ಕಳಿಲ್ಲ ಅನ್ನೋ ವೀಕ್​ನೆಸ್ಸೇ ಇವರ ಬಂಡವಾಳ. ಸಂತಾನ ಭಾಗ್ಯ ಇಲ್ಲ ಎಂದು ಬಾಡಿಗೆ ಮಕ್ಕಳನ್ನ ಪಡೆಯೋ ನಿರ್ಧಾರಕ್ಕೆ ಬರೋ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ ಬಿಡಿ. ಯಾಕಂದ್ರೆ ಮಕ್ಕಳಾಗದೇ ಬೇಸತ್ತಿರುವ ಮುಗ್ಧ ಜನರೇ ಇವರ ಟಾರ್ಗೆಟ್. ಜಿಲ್ಲೆಯಲ್ಲಿ ಬಾಡಿಗೆ ತಾಯಿ ಮೂಲಕ ಮಕ್ಕಳು ಕೊಡ್ತೀವಿ ಅಂತ ಹೇಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಡಿಸಿಪಿ ಹರೀಶ್​ ಪಾಂಡೆ ನೇತೃತ್ವದ ತಂಡ …

Read More »

ಅಜಾಗೃತೆಯಿಂದ ಬಂದ ಟ್ಯಾಂಕರ್ ಢಿಕ್ಕಿ : ಬೈಕ್ ಸವಾರ ದಾರುಣ ಸಾವು.

ಚಿಂತಾಮಣಿ : ಅತಿ ವೇಗ ಮತ್ತು ಅಜಾಗೃತೆಯಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ದಾರುಣವಾಗಿ ಸಾವನ್ನಪ್ಪಿರುವ ಅವಘಡ ನಗರದ ಕೋಲಾರ ವೃತ್ತದಲ್ಲಿ ಶುಕ್ರವಾರ ಸಂಭವಿಸಿದೆ. ಮದನಪಲ್ಲಿ ಕಡೆಯಿಂದ ಶುಕ್ರವಾರ ಬೆಳ್ಳಗ್ಗೆ 9.30ರ ವೇಳೆಗೆ ಅವಘಡ ಸಂಭವಿಸಿದ್ದು, ಚಿಂತಾಮಣಿ ಕಡೆಗೆ ತೆರಳುತ್ತಿದ್ದ ಆಯಿಲ್ ಟ್ಯಾಂಕರ್ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ವಿಷಯ ತಿಳಿದ ಕೂಡಲೆ …

Read More »

RSS ಇಲ್ಲದಿದ್ದರೆ ಭಾರತ ನಾಲ್ಕೈದು ಪಾಕಿಸ್ತಾನಗಳ ನಿರ್ಮಾಣವಾಗುತ್ತಿದ್ದವು’

ಹುಬ್ಬಳ್ಳಿ: ದೇಶ ರಕ್ಷಣೆಗೆ ಬದ್ಧವಾಗಿರುವ ಸಂಘ ಇಲ್ಲದೇ ಹೋಗಿದ್ದರೆ ಭಾರತದಲ್ಲಿ ಈ ವೇಳೆಗಾಗಲೇ ನಾಲ್ಕೈದು ಪಾಕಿಸ್ತಾನಗಳು ನಿರ್ಮಾಣವಾಗುತ್ತಿದ್ದವು ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಆರ್‌ ಎಸ್‌ಎಸ್‌ ಅನ್ನು ಜಿದ್ದಿಗೆ ಬಿದ್ದಂತೆ ಟೀಕಿಸುತ್ತಿವೆ. ಆದರೆ ದೊಡ್ಡ ಇತಿಹಾಸ ಹೊಂದಿರುವ ಆರ್‌ ಎಸ್‌ಎಸ್‌ನಿಂದಾಗಿ ದೇಶ ಸುರಕ್ಷಿತವಾಗಿ ಹಾಗೂ ಶಾಂತಿರೀತಿಯಿಂದ ಉಳಿದುಕೊಂಡಿದೆ. ದೇಶದ ಒಗ್ಗಟ್ಟು …

Read More »