ಬೆಂಗಳೂರು: ‘ಫಾದರ್ ಸ್ಟ್ಯಾನ್ ಸ್ವಾಮಿ ಅವರ ಸಾವಿನ ಪ್ರಕರಣವನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ಅವರ ಅಭಿಪ್ರಾಯದಂತೆಯೇ ‘ಲಾಕಪ್ ಡೆತ್’ ಎಂದು ಪರಿಗಣಿಸಿ, ವಿಚಾರಣೆ ನಡೆಸಬೇಕು’ ಎಂದು ಕಡಿದಾಳು ಶಾಮಣ್ಣ, ದೇವನೂರ ಮಹಾದೇವ, ರಾಜೇಶ್ವರಿ ತೇಜಸ್ವಿ, ಸಾರಾ ಅಬೂಬಕ್ಕರ್, ವೈದೇಹಿ, ಡಿ.ಎಸ್. ನಾಗಭೂಷಣ ಸೇರಿದಂತೆ ಚಿಂತಕರು, ಬರಹಗಾರರು, ಹೋರಾಟಗಾರರು ಆಗ್ರಹಿಸಿದ್ದಾರೆ. ಈ ಕುರಿತು ಬುಧವಾರ ಜಂಟಿ ಹೇಳಿಕೆ ನೀಡಿರುವ ಅವರು, ‘ಸ್ಟ್ಯಾನ್ ಸ್ವಾಮಿಯವರ ಸಾವಿನ ಪ್ರಕರಣ ಮಾನವೀತೆಯ …
Read More »Monthly Archives: ಜುಲೈ 2021
ಕರ್ನಾಟಕ ಸರ್ಕಾರದಿಂದ ಮಹತ್ತರ ಹೆಜ್ಜೆ: ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ 1ರಷ್ಟು ಮೀಸಲಾತಿ
ಬೆಂಗಳೂರು: ಕರ್ನಾಟಕ ಸರ್ಕಾರ ಮಂಗಳವಾರ ರಾಜ್ಯದಲ್ಲಿ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಬೇಕಾದ ಯಾವುದೇ ಸೇವೆ ಅಥವಾ ಎಲ್ಲಾ ವರ್ಗದ ಉದ್ಯೋಗಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (transgenders ) ಒಂದು ಶೇಕಡಾ ಮೀಸಲಾತಿ ನೀಡುವಂತೆ ಅಧಿಸೂಚನೆ ಹೊರಡಿಸಿದೆ. ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಇತರ ಹಿಂದುಳಿದ ವರ್ಗಗಳ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಈ ಆಂತರಿಕ ಮೀಸಲಾತಿ ಲಭ್ಯವಿರುತ್ತದೆ. 1977 ರ ಕರ್ನಾಟಕ ನಾಗರಿಕ ಸೇವೆಗಳ …
Read More »ರಾತ್ರಿ ಸುರಿದ ಧಾರಾಕಾರ ಮಳೆಪಪ್ಪಾಯಿ, ದಾಳಿಂಬೆ ಗಿಡ ಬೆಳೆದಿದ್ದ ರೈತ ಕಂಗಾಲು
ವಿಜಯನಗರ: ಜಿಲ್ಲೆಯಾದ್ಯಂತ ನಿನ್ನೆ ಭರ್ಜರಿ ಮಳೆಯಾಗಿದ್ದು ಅಪಾರ ಹಾನಿಯಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಸಂಪೂರ್ಣ ಜಲಾವೃತಗೊಂಡಿದ್ದು ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ. ಅವೈಜ್ಞಾನಿಕ ಕೃಷಿ ಹೊಂಡದಿಂದಲೇ ಬೆಳೆ ನಾಶ ಬಿಟ್ಟು ಬಿಡದೇ ಸುರಿದ ಮಳೆಯಿಂದ ಜಾತಪ್ಪ ಎಂಬ ರೈತನ ಜಮೀನು ಜಲಾವೃತಗೊಂಡಿದ್ದು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ, ದಾಳಿಂಬೆ ಗಿಡಗಳು ನೆಲಕಚ್ಚಿ ರೈತನನ್ನು ಸಂಕಷ್ಟಕ್ಕೆ …
Read More »ನನಗೂ ಓರ್ವ ಆಪ್ತ ಸಹಾಯಕ ಬೇಕು: ಸರ್ಕಾರಕ್ಕೆ ಗ್ರಾಪಂ ಅಧ್ಯಕ್ಷೆ ಮನವಿ
ಕೊಪ್ಪಳ: ಸಚಿವರು ಮತ್ತು ಶಾಸಕರಿಗೆ ಇರುವಂತೆ ನನಗೂ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿಕೊಡಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬಳು ಪತ್ರ ಬರೆದಿರುವ ವಿನೂತನ ಪ್ರಸಂಗ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದರು ನನ್ನಗೆ ಓದಲು, ಬರೆಯಲು ಬರುವುದಿಲ್ಲ. ಸಂಪೂರ್ಣ ಅನಕ್ಷರಸ್ಥೆಯಾಗಿರುವ ಕಾರಣ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ಸರ್ಕಾರದಿಂದ ಓರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿ ಕೊಡಿ ಎಂದು ಯಲಬುರ್ಗಾ ತಾಲೂಕಿನ ಮುರಡಿ …
Read More »ಗೋಲಿಬಾರ್ ವೇಳೆ ಪೊಲೀಸ್ ಮನೆಯವರ ಅತ್ಯಾಚಾರ ಮಾಡುವಂತೆ ಪೋಸ್ಟ್: ಆರೋಪಿ ಬಂಧನ
ಮಂಗಳೂರು: ಪೊಲೀಸರ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಎಎ ಮತ್ತು ಎನ್ಆರ್ಸಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ನಡೆದ ಗೋಲಿಬಾರ್ ಹಿನ್ನೆಲೆಯಲ್ಲಿ ಪೊಲೀಸರ ಮನೆಯ ಮಹಿಳೆಯರನ್ನು ಅತ್ಯಾಚಾರ ಮಾಡಿ ಸುಡಬೇಕು ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಾಲವ್ವನ ಹಳ್ಳಿಯ ಯೋಗಿ ಯಾನೆ ಯೋಗೇಶ್.ಎಸ್ (28) ಬಂಧಿತ ಆರೋಪಿ. 2019ರಲ್ಲಿ ಸಿಎಎ ಮತ್ತು …
Read More »ಯಾರಿಗೆ, ಯಾವ ಖಾತೆ? ಎಲ್ಲ 77 ಸಚಿವರ ಖಾತೆಗಳ ವಿವರ
ನವದೆಹಲಿ – ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಕರ್ನಾಟಕದ ರಾಜೀವ ಚಂದ್ರಶೇಖರ್ ಗೆ ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ, ಶೋಭಾ ಕರಂದ್ಲಾಚೆಗೆ ಕೃಷಿ ಹಾಗೂ ರೈತರ ಕಲ್ಯಣ, ನಾರಾಯಣ ಸ್ವಾಮಿಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮತ್ತು ಭಗವಂತ ಖೂಬಾಗೆ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ. Narendra Modi Prime Minister and also in-charge of:Ministry of Personnel, …
Read More »ಕೋವಿಡ್ ನಿಯಮ ಪಾಲಿಸಿಲ್ಲ ಅಂದ್ರೆ ಈಗಿರುವ ವಿನಾಯ್ತಿ ರದ್ದು – ಮತ್ತೆ ಲಾಕ್‍ಡೌನ್ ಬಗ್ಗೆ ಸಿಎಂ ಮಾತು
ಬೆಂಗಳೂರು: ಅನ್‍ಲಾಕ್ ಬಳಿಕ ಸೋಂಕಿನ ಪ್ರಮಾಣ ಏರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಬಿಗಿಕ್ರಮದ ಬಗ್ಗೆ ಮಾತು ಆಡಿದ್ದಾರೆ. ಒಂದು ವೇಳೆ ಕೋವಿಡ್ ನಿಯಮಗಳನ್ನು ಪಾಲಿಸದೇ ಹೋದರೆ ಈಗ ನೀಡಲಾಗಿರುವ 15 ದಿನಗಳ ವಿನಾಯ್ತಿಯನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಜುಲೈ 3ರಂದು 15 ದಿನಗಳವರೆಗೆ ಅಂದರೆ ಜುಲೈ 19ರವರೆಗೆ ಅನ್‍ಲಾಕ್ ಘೋಷಣೆ ಮಾಡಿದ್ದಾಗಲೂ ಕೋವಿಡ್ ನಿಯಮ ಪಾಲಿಸಿಲ್ಲ ಎಂದರೆ ಮತ್ತೆ ಬಿಗಿಕ್ರಮದ ಎಚ್ಚರಿಕೆ ನೀಡಿದ್ದರು. ಈಗ ರಾಜ್ಯದಲ್ಲಿ ಮತ್ತೆ …
Read More »ಮೆಳವಂಕಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಸಮಗ್ರ ಅಭಿವೃದ್ಧಿಗಾಗಿ ಕಳೆದ ೧೫ ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಕಲ್ಯಾಣಪರ ಹಾಗೂ ಪ್ರಗತಿಪರ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿರುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಮಂಗಳವಾರ ಸಂಜೆ ಆರ್‌ಡಿಪಿಆರ್ ಇಲಾಖೆಯ ೨೫ ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ …
Read More »IMA: ಐಎಂಎ ಪ್ರಕರಣ- ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಜಪ್ತಿ ಮಾಡಿದ ಸರ್ಕಾರ
ಬೆಂಗಳೂರು: ಐಎಂಎ ಪ್ರಕರಣದಲ್ಲಿ ಕೇಳಿಬಂದಿದ್ದ ಪ್ರಮುಖ ಹೆಸರುಗಳಲ್ಲಿ ಮಾಜಿ ಸಚಿವ ರೋಷನ್ ಬೇಗ್ ಕೂಡ ಒಬ್ಬರು. ಐಎಂಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪದಡಿ 2020ರ ನವೆಂಬರ್ 22 ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಆ ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು. ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ನಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ …
Read More »ಮೋದಿ ಕ್ಯಾಬಿನೆಟ್ನಲ್ಲಿ ರಾಜ್ಯದಿಂದ 6 ಮಂದಿಗೆ ಸಚಿವ ಸ್ಥಾನ
ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆ ರಾಜ್ಯದಿಂದ ಒಟ್ಟು 6 ಮಂದಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ಹೊರತಾಗಿಯೂ ರಾಜ್ಯದಿಂದ 6 ಮಂದಿ ಕೇಂದ್ರ ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಜ್ಯದಿಂದ ಒಟ್ಟು 6 ಮಂದಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನಮಾನ ಸಾಧ್ಯತೆ 1. ನಿರ್ಮಲಾ ಸೀತಾರಾಮನ್- ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ …
Read More »