Breaking News

Monthly Archives: ಜುಲೈ 2021

ಸೈಕಲ್‌ನಲ್ಲಿ ಓಡಾಡಿದರೆ ವ್ಯಾಯಾಮ ಚೆನ್ನಾಗಿ ಆಗುತ್ತೆ, ರೋಗ ಬರಲ್ಲ : ದಾವಣಗೆರೆ ಸಂಸದ

ದಾವಣಗೆರೆ: ಸೈಕಲ್‌ನಲ್ಲಿ ಓಡಾಡಿದರೆ ವ್ಯಾಯಾಮ ಚೆನ್ನಾಗಿ ಆಗುತ್ತೆ. ರೋಗ ಬರಲ್ಲ! ಇದು ದಾವಣಗೆರೆಯ ಬಿಜೆಪಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ರೀತಿ. ದಿನದಿಂದ ದಿನಕ್ಕೆ ಪೆಟ್ರೋಲ್-ಡಿಸೇಲ್ ದರ ಹೆಚ್ಚಾಗುತ್ತಿದ್ದು ಜನರು ಸೈಕಲ್ ಮೇಲೆ ಓಡಾಡುವ ಸ್ಥಿತಿ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸಂಸದರು, ಸೈಕಲ್‌ನಲ್ಲಿ ಓಡಾಡಿದರೆ ಏನ್ ಆಗುತ್ತೆ, ಒಳ್ಳೆಯ ವ್ಯಾಯಾಮ ಆಗುತ್ತೆ ಎಂದು ಲಘುವಾಗಿ ಉತ್ತರಿಸಿದರು. ಬಳಿಕ ಮಾತನಾಡಿದ ಅವರು …

Read More »

ಕೈ ನಾಯಕತ್ವದಲ್ಲಿ ಭಾರೀ ಬದಲಾವಣೆ? ಮಲ್ಲಿಕಾರ್ಜುನ ಖರ್ಗೆಗೆ ಪ್ರಮುಖ ಸ್ಥಾನ?

ನವದೆಹಲಿ: ಉತ್ತರಪ್ರದೇಶ ಮತ್ತು ಪಂಜಾಬ್‌ನಂತಹ ಪ್ರಮುಖ ರಾಜ್ಯಗಳ ಚುನಾವಣೆ ಹತ್ತಿರದಲ್ಲಿರುವುದರಿಂದ ಕಾಂಗ್ರೆಸ್‌ ತನ್ನ ಸಂಘಟನಾತ್ಮಕ ಸ್ವರೂಪದಲ್ಲಿ ಭಾರೀ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಯುವ ನಾಯಕ ಸಚಿನ್‌ ಪೈಲಟ್‌, ಟಿ.ಎಸ್‌.ಸಿಂಗ್‌ ದೇವ್‌ ಅವರು ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಇಷ್ಟಾದರೂ ಗಾಂಧಿ ಕುಟುಂಬದವರೇ ಪಕ್ಷದ ಅಗ್ರನಾಯಕತ್ವ ಉಳಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ರಾಹುಲ್‌ ಗಾಂಧಿ ಮತ್ತೆ ಅಧ್ಯಕ್ಷ ಸ್ಥಾನ …

Read More »

ಮತ್ತೆ ಏರಿಕೆಯತ್ತ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ದೇಶಾದ್ಯಂತ ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಪೆಟ್ರೋಲ್ ಪ್ರತಿ ಲೀಟರ್‌ಗೆ 100.91ರೂ ಮತ್ತು ಡೀಸೆಲ್ 89.88 ರೂಗೆ ಏರಿಕೆಯಾಗಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್‍ಗೆ 109.24 ರೂ. ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ ಗೆ 92.97 ರೂ ರಷ್ಟಾಗಿದೆ. ಗುರುವಾರ ಪೆಟ್ರೋಲಿಯಂ ಖಾತೆ ಸಚಿವರಾಗಿ ಅಧಿಕಾರಿ ವಹಿಸಿಕೊಂಡ ಹರ್ದೀಪ್ ಸಿಂಗ್ ಪುರಿ ಮಾತನಾಡಿ, …

Read More »

ವಿಶ್ವ ಸಂಸ್ಥೆಯ ಕಾರ್ಮಿಕ ಕಾರ್ಡ್ ನೀಡೋದಾಗಿ ಮಹಿಳೆಯರಿಗೆ ವಂಚನೆ‌: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು

ಗದಗ: ಹಳ್ಳಿಗಾಡಿನ ಮಹಿಳೆಯರನ್ನೇ ಟಾರ್ಗೆಟ್​ ಮಾಡಿಕೊಂಡು ವಂಚಿಸುತ್ತಿದ್ದ ವ್ಯಕ್ತಿಗೆ ಗದಗದ ಮಸಾರಿ ಪ್ರದೇಶದಲ್ಲಿ ಜನ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಾರ್ಮಿಕ ಕಾರ್ಡ್ ಮಾಡಿಸಿದ್ರೆ ವಿಶ್ವ ಸಂಸ್ಥೆಯಿಂದ ಹಣ ಬರುತ್ತೆ. ಅಂತಹ ಕಾರ್ಮಿಕ ಕಾರ್ಡ್ ತಾನು ನೀಡೋದಾಗಿ ಮಹಿಳೆಯರಿಗೆ ಆ ವ್ಯಕ್ತಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಗದಗದ ಮಸಾರಿ ಪ್ರದೇಶದಲ್ಲಿ ಹಳ್ಳಿಯ ಮಹಿಳೆಯರನ್ನೇ ಟಾರ್ಗೆಟ್​ ಮಾಡಿ ವಂಚಿಸುತ್ತಿದ್ದ ಕುಮಾರ್ ಎಂಬ ವ್ಯಕ್ತಿಗೆ ಸ್ಥಳೀಯರು ಸೇರಿಕೊಂಡು ಬಾರಿಸಿದ್ದಾರೆ. ಚಿತ್ರದುರ್ಗ ಮೂಲದ ಡೆವಲೆಪ್ …

Read More »

ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ: ಚಾಕು, ಗಾಂಜಾ ಸೇರಿದಂತೆ ಹಲವು ವಸ್ತು ವಶಕ್ಕೆ

ಬೆಂಗಳೂರು: ಸಿಸಿಬಿ ಪೊಲೀಸರು ಶನಿವಾರ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿ ಕೈದಿಗಳ ಬಳಿ ಇದ್ದ ಗಾಂಜಾ, ಚಾಕು, ಮೊಬೈಲ್ಸ್, ಸಿಮ್ಸ್‌, ಮೆಮೋರಿ ಕಾರ್ಡ್‌ಗಳನ್ನು ವಶಪಡಿಸಿಕೊಂಡರು. ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಕೈದಿಗಳು ಮೊಬೈಲ್ ಬಳಸಿ ಅಕ್ರಮ ಚಟುವಟಿಕೆಗಳ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆಸಲಾಗಿದೆ. ಶನಿವಾರ ನಸುಕಿನ 5 ಗಂಟೆಗೆ ಶ್ವಾನ ದಳದ ಮೂಲಕ ಸಿಸಿಬಿ ತಂಡ ದಾಳಿ ನಡೆಸಿದೆ ಎಂದು ಸಿಸಿಬಿ …

Read More »

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಕಾರವಾರದಲ್ಲಿ ಇಬ್ಬರು ಅರೆಸ್ಟ್

ಕಾರವಾರ: ನಗರದ ಕೋಡಿಭಾಗದ ಸಾಗರ ದರ್ಶನ ಹಾಲ್ ಹಿಂಭಾಗದಲ್ಲಿ ಇಬ್ಬರು ಅಕ್ರಮವಾಗಿ ಗಾಂಜಾ ಸಾಗಾಟ, ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಅಧಿಕಾರಿಗಳು ದಾಖಲಿ ನಡೆಸಿ ಇಬ್ಬರನ್ನು ಬಂಧಿಸಿದ್ದು 3.20 ಲಕ್ಷ ರೂ. ಗಾಂಜಾ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಸಂಕ್ರಿವಾಡಾದ ರಿಜ್ವಾನ್ ಅಕ್ಬರ್ ಶೇಖ್ (30) ಹಾಗೂ ನಗರದ ಗುನಗಿವಾಡಾದ ಸಾಹಿಲ್ ನಾದರ್ ಭಾಷಾ ಶೇಖ್ (20) ಎನ್ನುವ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. …

Read More »

ವ್ಯಕ್ತಿಯ ಬಳಿ ಇದ್ದದ್ದನ್ನೆಲ್ಲಾ ದೋಚಿದ್ದ ಕಳ್ಳರು ಇಂದು ಅಂದರ್..!

ಬೆಳಗಾವಿ: ಜುಲೈ 8 ರಂದು ಮುಂಜಾನೆ ವ್ಯಕ್ತಿಯನ್ನು ದರೋಡೆ ಮಾಡಿದ 2 ಆರೋಪಿಗಳನ್ನು ಗಾಂಧಿ ನಗರ ಬಳಿ ಮಾಳ ಮಾರುತಿ ಪೊಲೀಸರು ಇಂದು ಬಂಧಿಸಿದ್ದಾರೆ. ಪರ್ವೇಜ್ ಪರಿಷ್ಟಾಡಿ ಮತ್ತು ಹೊಸ ಗಾಂಧಿ ನಗರದ ಜುಬರ್ ದಲಾಯತ್ ಬಂಧಿತ ಆರೋಪಿಗಳು. ಚಿಕ್ಕೋಡಿ ಮೂಲದ ತಮನ್ನಾ ಎಂಬಾತನ ಮೇಲೆ ಈ ಇಬ್ಬರು ಆರೋಪಿಗಳು ಹಲ್ಲೆ ನಡೆಸಿ ನಗದು, ಎಟಿಎಂ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡಿದ್ದರು.

Read More »

ಭರ್ಜರಿ ಬೇಟೆ: 2,500 ಕೋಟಿ ಮೌಲ್ಯದ 350 ಕೆಜಿ ಹೆರಾಯಿನ್ ಜಪ್ತಿ: ನಾಲ್ವರ ಬಂಧನ

ದೆಹಲಿ: ದೆಹಲಿ ಪೊಲೀಸರ ವಿಶೇಷ ತಂಡ ಅಂತರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಪತ್ತೆಹಚ್ಚಿದ್ದು, ಬರೋಬ್ಬರಿ 2,500 ಕೋಟಿ ರೂಪಾಯಿ ಮೌಲ್ಯದ 354 ಕಿಲೋ ಗ್ರಾಮ್ ಉತ್ತಮ ಗುಣಮಟ್ಟದ ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಹರ್ಯಾಣದ ಮೂವರು ಹಾಗೂ ದೆಹಲಿ ಓರ್ವ ವ್ಯಕ್ತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ತಂಡ ಈವರೆಗೆ ಪತ್ತೆ ಹಚ್ಚಿದ ಅತೀ ದೊಡ್ಡ ಡ್ರಗ್ಸ್ ಜಾಲ ಇದಾಗಿದೆ. ಈ ಮೂಲಕ …

Read More »

ಕೇಂದ್ರ ಸಂಪುಟ: 33 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್, 70 ಸಚಿವರು ಕೋಟ್ಯಧೀಶ್ವರರು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟವನ್ನು ವಿಸ್ತರಿಸಿ 36 ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಒಟ್ಟು ಕೇಂದ್ರ ಸಂಪುಟದ ಸಚಿವರ ಸಂಖ್ಯೆ 78ಕ್ಕೆ ಏರಿಕೆಯಾಗಿತ್ತು. ಇದರಲ್ಲಿ 33 ಸಚಿವರ ವಿರುದ್ಧ (ಶೇ.42) ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ಎಡಿಆರ್ ತಿಳಿಸಿದೆ.   24 ಸಚಿವರು ಕ್ರಿಮಿನಲ್ ಪ್ರಕರಣಗಳಲ್ಲಿ ಕೊಲೆ, ಕೊಲೆ ಯತ್ನ ಮತ್ತು ದರೋಡೆಯಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ವಿವರಿಸಿದೆ. ಸಚಿವರು ಚುನಾವಣಾ ಆಯೋಗಕ್ಕೆ …

Read More »

ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ಅಪಾಯವಿಲ್ಲ: ಡಾ.ಕೆ ಸುಧಾಕರ್

ದಾವಣಗೆರೆ: ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರ ವರದಿಗಳಿವೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಜಿಲ್ಲಾಸ್ಪತ್ರೆಯ ಭೇಟಿಗಿಂತ ಮೊದಲು ಜಿಎಂಐಟಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರ ವರದಿ ಹೇಳುತ್ತಿದ್ದು, ಹಾಗಂತ ಯಾವ ಪೋಷಕರು ಮೈಮರೆಯುವಂತಿಲ್ಲ. ಲಾಕ್‍ಡೌನ್ ಸಡಿಲಿಕೆ ಆಗಿದೆ ಎಂದು ಜನರು ಕೂಡ ಮೈಮೆರಯುವಂತಿಲ್ಲ. ಪ್ರತಿಯೊಬ್ಬರು ಎರಡನೇ ಡೋಸ್ ಪಡೆಯುವವರೆಗೂ ಎಲ್ಲರೂ …

Read More »