Breaking News

Monthly Archives: ಜುಲೈ 2021

ಹೋರಾಟ ಮಾಡೋಹಾಗಿದ್ರೆ ಗಂಡಸ್ತನದಿಂದ ಹೋರಾಡೋಣ: ರಾಕ್​ಲೈನ್ ವೆಂಕಟೇಶ್

ಬೆಂಗಳೂರು: ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ರಾಕ್​ಲೈನ್​ ವೆಂಕಟೇಶ್ ಹೇಳಿಕೆ ಕೊಟ್ಟಿದ್ದಾರೆ. ಇಂತಹ ಟೈಮ್​ನಲ್ಲಿ ನನ್ನ ಎದುರಿಸಬೇಕು ಅಂದ್ಕೊಂಡ್ರೆ ಅದು ಆಗಲ್ಲ, ಯಾರೋ ದುಷ್ಕರ್ಮಿಗಳು ಬಂದು ನಮ್ಮನೆಗೆ ಕಲ್ಲು ಎಸೆದಿದ್ದಾರೆ. ಏನೇ ಆದ್ರೂ ನಾನು ಅಂಬರೀಶ್ ಕುಟುಂಬಕ್ಕೆ ಸಪೋರ್ಟ್ ಮಾಡ್ತೀನಿ. ಈ ರೀತಿ ಗಲಾಟೆಗಳನ್ನ ಮಾಡಿಸಿ ನನ್ನ ಎದುರಿಸ್ತೀನಿ ಅಂದ್ಕೊಂಡ್ರೆ ಅದು ಆಗಲ್ಲ. ಅಂಬರೀಶ್ ಕುಟುಂಬದ ಹಿಂದೆ ನಾನು ಯಾವಾಗ್ಲೂ‌ ಇರ್ತೇನೆ. ಅಂಬರೀಶ್ …

Read More »

ಪ್ರಭಾವಿ ಜೆಡಿಎಸ್​ನ ನಾಯಕ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ, ಆರ್​ಎಸ್​ಎಸ್​ ನಾಯಕರ ಜೊತೆ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಭಾವಿ ಜೆಡಿಎಸ್​ನ ನಾಯಕ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿನ್ನೆ ಸಂಜೆ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದಾರೆ.. ಕೇವಲ ಕಾಣಿಸಿಕೊಂಡಿದ್ದು ಮಾತ್ರವಲ್ಲ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಆರ್​ಎಸ್​ಎಸ್ ನ ಕೇಂದ್ರ ಕಚೇರಿ ಕೇಶವ ಕುಂಜಕ್ಕೆ ಭೇಟಿ ನೀಡುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ. ಕೇವಲ ಬಿಜೆಪಿ ನಾಯಕರಲ್ಲದೆ ಆರ್​ಎಸ್​ಎಸ್​ನ ಕೆಲ ಮುಖಂಡರು ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವ ಪರಿಷತ್ ಸಭಾಪತಿಗಳ …

Read More »

ಪ್ರವಾಹ, ಕೋವಿಡ್‌ ಮೂರನೇ ಅಲೆ ತಡೆಗೆ ಸಜ್ಜು: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌.

ಯಾದಗಿರಿ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌. ಅವರೊಂದಿಗೆ ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿತು. ಕೋವಿಡ್‌ ಮೂರನೇ ಅಲೆಗೆ ಸಿದ್ಧತೆ, ಸಂಭವನೀಯ ಪ್ರವಾಹ ಎದುರಿಸಲು ಕೈಗೊಂಡ ಕ್ರಮಗಳು, ಕೋವಿಡ್‌ ಲಸಿಕೆಯ ಮಾಹಿತಿ ಸೇರಿದಂತೆ ಜಮೀನು ಸರ್ವೆ, ಗ್ರಾಮ ಪಂಚಾಯಿತಿ ಸ್ವಚ್ಛತೆ, ಪಿಎಂ ಕಿಸಾನ್‌ ಸಮ್ಮಾನ್ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಓದುಗರು ಪ್ರಶ್ನೆಗಳನ್ನು ಕೇಳಿದರು. ಓದುಗರ ಎಲ್ಲ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ಅವರು …

Read More »

ಪಶುಸಂಗೋಪನೆ ಇಲಾಖೆಯಿಂದ ಅನ್ಯ ಇಲಾಖೆಗಳಿಗೆ ನಿಯೋಜನೆಗೆ ನಿರ್ಬಂಧ: ಪ್ರಭು ಚವ್ಹಾಣ

ಬೆಂಗಳೂರು: ಅನ್ಯ ಇಲಾಖೆಗಳಿಗೆ ನಿಯೋಜನೆಗೊಂಡಿರುವ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಇದೇ 31 ರೊಳಗೆ ವಾಪಸ್‌ ಪಡೆಯಲು ನಿರ್ಧರಿಸಲಾಗಿದೆ ಎಂದು ಇಲಾಖಾ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ. ಇನ್ನು ಮುಂದೆ ಪಶುಸಂಗೋಪನೆ ಇಲಾಖೆಯಿಂದ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಅನ್ಯ ಇಲಾಖೆಗಳಿಗೆ ನಿಯೋಜನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅನ್ಯ ಇಲಾಖೆಗಳಿಗೆ ನಿಯೋಜನೆ ಮೇಲೆ ಹೋಗಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುತ್ತಿರುವ ರೈತರ ಕರೆಗಳನ್ನು …

Read More »

ಗ್ರಾ.ಪಂ. ಲೈಬ್ರರಿಯಲ್ಲಿ ವಿದ್ಯಾರ್ಥಿಗಳ ಕಲಿಕೆ : ಆನ್‌ಲೈನ್‌ ಶಿಕ್ಷಣ ವಂಚಿತರಿಗೆ ವ್ಯವಸ್ಥೆ

ಆನ್‌ಲೈನ್‌ ಬೋಧನೆಯಿಂದ ವಂಚಿತರಾಗುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್‌ ಗ್ರಂಥಾಲಯಗಳಲ್ಲಿ ಕಲಿಕೆಗೆ ವ್ಯವಸ್ಥೆ ಕಲ್ಪಿಸಲು ಸರಕಾರ ಚಿಂತನೆ ನಡೆಸುತ್ತಿದೆ. ಮೊಬೈಲ್‌, ಟಿ.ವಿ. ಮೂಲಕ ಕಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಎಷ್ಟೋ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ವಿಲ್ಲ. ಇದನ್ನು ಸರಿದೂಗಿಸಲು ಗ್ರಾ.ಪಂ. ಗ್ರಂಥಾಲಯಗಳನ್ನು ಬಳಸಿಕೊಳ್ಳಲು ಸರಕಾರ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ 5,766 ಗ್ರಂಥಾಲಯಗಳಿವೆ. ಅವುಗಳನ್ನು ಬಳಸಿಕೊಂಡು, ಗ್ರಾಮೀಣ …

Read More »

ಪೊಲೀಸ್ ಇನಸ್ಪೆಕ್ಟರ್ ಗಳ ವರ್ಗಾವಣೆ ವರ್ಗಾವಣೆ ಪರ್ವ ಆರಂಭ

ಬೆಂಗಳೂರು – ರಾಜ್ಯದಲ್ಲಿ ವರ್ಗಾವಣೆ ಪರ್ವ ಆರಂಭವಾಗಿದೆ. ಸಂಬಂಧಿಸಿದ ಸಚಿವರಿಗೆ ವರ್ಗಾವಣೆಯ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಈಗಾಗಲೆ ವ್ಯವಹಾರ ಆರಂಭವಾಗಿದೆ. ರಾಜ್ಯದ 25 ಪೊಲೀಸ್ ಇನಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

Read More »

ನೀರಾವರಿ ಯೋಜನೆಯಿಂದ ರೈತರ ಅಭಿವೃದ್ಧಿ-ಸಚಿವೆ ಶಶಿಕಲಾ ಜೊಲ್ಲೆ

ಚಿಕ್ಕೋಡಿ – ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿ ಜೊತೆಗೆ ರೈತರ ಅಭಿವೃದ್ಧಿಗೆ ಕೂಡ ಆದ್ಯತೆ ನೀಡಲಾಗಿದೆ. ಕಳೆದ ೩೦-೩೫ ವರ್ಷಗಳಿಂದ ನೀರಿಲ್ಲದೆ ಒಣಗುತ್ತಿರುವ ಬರಡು ಭೂಮಿ ನೀರಾವರಿ ಯೋಜನೆಯಿಂದ ಹಸಿರಿಕರಣವಾಗಲಿದೆ. ಗಂಗಾಕಲ್ಯಾಣ ಯೋಜನೆಯಿಂದ ರೈತರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.           ಸಮೀಪದ ಸೌಂದಲಗಾ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ೧.೫ ಕೋಟಿ ವೆಚ್ಚದಲ್ಲಿ ಗಂಗಾಕಲ್ಯಾಣ ನೀರಾವರಿ ಯೋಜನೆಯನ್ನು …

Read More »

ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ

ಕಿತ್ತೂರು – ಕ್ಷುಲ್ಲಕ ಕಾರಣಕ್ಕೆ ದಾಬಾ ಮಾಲಿಕನನ್ನು ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ. ಕೊಲೆಯಾಗಿರುವ ಪ್ರಕಾಶ ತನ್ನ ಮುದ್ದಾದ ಮಕ್ಕಳೊಂದಿಗೆ ಇದ್ದ ಚಿತ್ರ                   ಖರೀದಿಸಿದ್ದ ಹೂವಿನ ಹಣ 1500 ರೂಗಳನ್ನು ಹೂವಿನ ವ್ಯಾಪಾರಿಗೆ ಕೊಡು ಎಂದು ಹೇಳಿದ್ದಕ್ಕೆ ಐವರು ಸೇರಿ ದಾಬಾ ಮಾಲಿಕ ಪ್ರಕಾಶ ಬಸವರಾಜ ನಾಗನೂರು (35) ಅವರನ್ನು ಕೊಲೆ ಮಾಡಿದ್ದರು. ಮಹಮ್ಮದಶಫೀ …

Read More »

ಕಪ್ಪತ್ತಗುಡ್ಡದಲ್ಲಿ ಖಾಕಿಯ ಟ್ರೆಕ್ಕಿಂಗ್‌ ಮಜಾ

ಗದಗ/ಶಿರಹಟ್ಟಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದಲ್ಲಿ ರವಿವಾರ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣವಿತ್ತು. ಕೈಗೆ ತಾಗುವಷ್ಟು ಮೋಡಗಳ ಮಧ್ಯೆ ಖಾಕಿ ಪಡೆಯ ಹೆಜ್ಜೆಗಳ ಸಪ್ಪಳ ಜೋರಾಗಿತ್ತು. ಹೌದು. ರವಿವಾರ ಬೆಳಗ್ಗೆ ಎಸ್ಪಿ ಎನ್‌.ಯತೀಶ್‌ ಅವರ ನೇತೃತ್ವದಲ್ಲಿ ಪೊಲೀಸ್‌ ಅಧಿ ಕಾರಿಗಳು ಹಾಗೂ ಆಯ್ದ ಸಿಬ್ಬಂದಿ ಟ್ರೆಕ್ಕಿಂಗ್‌ನಲ್ಲಿ ಒಬ್ಬರಿಗಿಂತ ಒಬ್ಬರು ಮೇಲೆಂಬಂತೆ ಗಿರಿ ಶಿಖರವನ್ನೇರಿ ಕಪ್ಪತ್ತಗಿರಿ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿಗರ ಮನ ಸೆಳೆದರು. ಸದಾ ಕೆಲಸದ ಒತ್ತಡ ಹಾಗೂ ಇತ್ತೀಚೆಗೆ ಕೋವಿಡ್‌ …

Read More »

ರೈತರಿಗೆ ಗುಡ್ ನ್ಯೂಸ್: ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಧಾರವಾಡ: ತೋಟಗಾರಿಕೆ ಇಲಾಖೆಯಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‍ಹೆಚ್‍ಎಂ) ಯೋಜನೆಯಡಿಯಲ್ಲಿ ರೈತರಿಗೆ ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 27 ಕೊನೆಯ ದಿನವಾಗಿದೆ. ಸಣ್ಣ ನರ್ಸರಿ ಸ್ಥಾಪನೆ, ಹಣ್ಣು(ಬಾಳೆ), ಹೂ(ಗುಲಾಬಿ, ಬಿಡಿ ಸೇವಂತಿಗೆ, ಚೆಂಡು ಹೂ), ತರಕಾರಿಗಳ ಹೊಸ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣಾ ಘಟಕಗಳು, ಸಂರಕ್ಷಿತ ಬೇಸಾಯದಡಿ (ಹಸಿರುಮನೆ, ನೆರಳುಪರದೆ, ಪ್ಲಾಸ್ಟಿಕ್ ಮಲ್ಚಿಂಗ್), ಯಾಂತ್ರೀಕರಣ ಘಟಕದಡಿ 20 (ಪಿಟಿಓಹೆಚ್‍ಪಿ) ಸಾಮರ್ಥ್ಯಕ್ಕಿಂತ ಕಡಿಮೆಯ ಟ್ರ್ಯಾಕ್ಟರ್, …

Read More »