ದಾವಣಗೆರೆ: ಬಡವರಿಗಾಗಿ ಮೀಸಲಿಟ್ಟ ಸೈಟ್ಗಳನ್ನು ಬೇರೆಯವರಿಗೆ ನೀಡಲು ಮುಂದಾದ ಮಹಾನಗರ ಪಾಲಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಲಿ ಜಾಗದಲ್ಲಿ ತಮ್ಮ ಗುಡಿಸಲು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರ ಹಳ್ಳದ ಬಳಿ ಇರುವ ಜಾಗದಲ್ಲಿ ಬಡವರಿಗೆ ಉಚಿತ ಸೈಟ್ ನೀಡುವುದಾಗಿ ಹಲವು ವರ್ಷಗಳ ಹಿಂದೆಯೇ ತಿಳಿಸಲಾಗಿತ್ತು. ಹೀಗಾಗಿ ಈ ಭಾಗದ ಜನರು ಮಹಾನಗರ ಪಾಲಿಕೆಗೆ ಅರ್ಜಿ ಸಹ ಸಲ್ಲಿಸಿದ್ದರು. ಆದರೆ ಇವರೆಗೂ ಯಾವುದೇ ಸೈಟ್ …
Read More »Monthly Archives: ಜುಲೈ 2021
ಶಾಲೆಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ, ಇಲ್ಲವಾದಲ್ಲಿ ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ: ಸಚಿವ ಸುರೇಶ್ ಕುಮಾರ್ ಎಚ್ಚರಿಕೆ
ಬೆಂಗಳೂರು: ಹೊರನಾಡು ಕನ್ನಡಿಗರ ಒಂದು ವರ್ಗ ರಾಜ್ಯದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಭಾಷೆಯಾಗಿ ಕನ್ನಡ ಕಲಿಸುವ ವಿಷಯದಲ್ಲಿ ಯಾವುದೇ ರಾಜಿಗೂ ಅವಕಾಶವಿಲ್ಲ. ಕನ್ನಡ ನೆಲದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಸಂಬಂಧ ಕನ್ನಡ ಕಲಿಕಾ ಅಧಿನಿಯಮ-2015ರ ಕಾಯ್ದೆ ಅನುಷ್ಠಾನದಲ್ಲಿ ಯಾವುದೇ ರಾಜಿ …
Read More »ನೆಗೆಟಿವ್ ರಿಪೋರ್ಟ್ ಇಲ್ಲದಿದ್ದಲ್ಲಿ ಬಸ್ ವಾಪಸ್
ಮಹಾರಾಷ್ಟ್ರದಲ್ಲಿ ಕೊರೋನಾ, ಡೆಲ್ಟಾ ಪ್ಲಸ್ ವೈರಸ್ ಆತಂಕ ಹೆಚ್ಚುತ್ತಿದ್ದಂತೆ ಬೆಳಗಾವಿ ಗಡಿಯಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನವನ್ನೂ ತಪಾಸಿಸಲಾಗುತ್ತಿದೆ. ವಾಹನದಲ್ಲಿದ್ದವರು ನೆಗೆಟಿವ್ ರಿಪೋರ್ಟ್ ಹೊಂದಿದ್ದಾರಾ ಎನ್ನುವುದನ್ನು ಚೆಕ್ ಮಾಡಲಾಗುತ್ತಿದೆ. ನೆಗೆಟಿವ್ ರಿಪೋರ್ಟ್ ಇಲ್ಲದಿದ್ದಲ್ಲಿ ಅವರನ್ನು ಕೆಳಗಿಳಿಸಲಾಗುತ್ತಿದೆ. ಮಿರಜ್ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಬಸ್ ನಲ್ಲಿ ಸಾಮಾಜಿಕ ಅಂತರ ಪಾಲಿಸದಿರುವ ಮತ್ತು ಕೆಲವರಲ್ಲಿ ನೆಗೆಟಿವ್ ರಿಪೋರ್ಟ್ ಇಲ್ಲದ ಹಾಗೂ ವ್ಯಾಕ್ಸಿನೇಶನ್ ಮಾಡಿಸದ ಕಾರಣಕ್ಕಾಗಿ ಬಸ್ ವಾಪಸ್ …
Read More »ಲಸಿಕೆ ದೊರೆಯದೆ ವಾಪಸಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ
ಸಾಗರ: ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲು ಇಲ್ಲಿನ ದೇವರಾಜ ಅರಸು ಸಭಾಭವನಕ್ಕೆ ಮಂಗಳವಾರ ಬಂದಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಲಸಿಕಾ ಕೇಂದ್ರದಲ್ಲಿ ಲಸಿಕೆ ಸಂಗ್ರಹವಿಲ್ಲದ ಕಾರಣ ಮನೆಗೆ ಮರಳಬೇಕಾಯಿತು. ಕಾಗೋಡು ತಿಮ್ಮಪ್ಪ ಅವರಿಗೆ ಎರಡನೇ ಡೋಸ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಮಂಗಳವಾರ ಬರುವಂತೆ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗಿತ್ತು. ಆ ಪ್ರಕಾರ ಅವರು ಲಸಿಕಾ ಕೇಂದ್ರಕ್ಕೆ ಬಂದರೆ ‘ಲಸಿಕೆ ಸಂಗ್ರಹವಿಲ್ಲ’ ಎಂಬ ಫಲಕ ನೋಡಿ …
Read More »3 ತಿಂಗಳ ಲಸಿಕೆ ಬದಲಾಗಿ ಕೊರೊನಾ ವ್ಯಾಕ್ಸಿನ್ ಕೊಟ್ಟ ಆರೋಪ; ಕೋಲಾರದಲ್ಲಿ ಮಗು ಸಾವು
ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಆರೋಗ್ಯದಿಂದ ಇದ್ದ ಮೂರು ತಿಂಗಳ ಮಗು ಸಾವನ್ನಪ್ಪಿದ್ದು, ಆರೋಗ್ಯ ಇಲಾಖೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಅಂಜಲಿ ಹಾಗೂ ನಾಗರಾಜ್ ಎಂಬುವರ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಗ್ರಾಮಸ್ಥರು ಹಾಗೂ ಮಗುವಿನ ಪೋಷಕರು ಮಾಡಿರುವ ಆರೋಪದ ಪ್ರಕಾರ.. ಆರೋಗ್ಯ ಸಿಬ್ಬಂದಿ ಮಕ್ಕಳಿಗೆ ನೀಡುವ ಮೂರು ತಿಂಗಳದ ಲಸಿಕೆ ಬದಲಾಗಿ, ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ ಎಂದಿದ್ದಾರೆ. ನಿನ್ನೆ ಗ್ರಾಮದಲ್ಲಿ ಕೊರೊನಾ ವ್ಯಾಕ್ಸಿನ್ ಜೊತೆಗೆ …
Read More »ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು.
ಕೊಪ್ಪಳ: ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು. ನಿಜ! ಸಾಧಿಸುವ ಛಲ ಇದ್ರೆ ಪಡೆಯುವ ಹುಚ್ಚು ಇರಬೇಕು ಅಂತಾರೆ. ಅದರಂತೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ತಾನು ಕಲಿತ ಚಿತ್ರಕಲೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೌದು! ಕಲೆಯೆನ್ನುವುದೇ ಹಾಗೆ ಒಂದು ಸಲ ಅದರ ಹುಚ್ಚು ಹಿಡಿದ್ರೆ, ಬರಿ ಬಣ್ಣ ಹಾಗೂ ಪೆನ್ಸಿಲ್, ಪೇಂಟಿಂಗ್ ಬ್ರಷ್ಗಳ ಮಧ್ಯೆ ಕಲಾವಿದರು ತಮ್ಮ ಕಾಲವನ್ನು ಕಳೆಯುತ್ತಾರೆ. ಕೊಪ್ಪಳದ …
Read More »‘ಒಂದಾಗಿದ್ವಿ, ಒಂದಾಗಿರೋಣ’: ಒಟ್ಟಿಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ತೆರೆಬೀಳುವ ಸಾಧ್ಯತೆ ಇದೆ. ನಿನ್ನೆಯಿಂದ ಭಾರಿ ಸದ್ದು ಮಾಡಿದ್ದ ವಂಚನೆ ಪ್ರಕರಣಕ್ಕೆ ದರ್ಶನ್ ಮತ್ತು ಉಮಾಪತಿ ಇಬ್ಬರು ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈ ಪ್ರಕರಣದಿಂದ ದರ್ಶನ್ ಮತ್ತು ಉಮಾಪತಿ ನಡುವಿನ ಸ್ನೇಹ ಸಂಬಂಧ ಮುರಿದು ಬಿತ್ತು ಎನ್ನುವ ಅನುಮಾನ ಎಲ್ಲರಲ್ಲೂ ಕಾಡಿತ್ತು. ಆದರೀಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಒಂದಾಗಿದ್ವಿ, ಒಂದಾಗಿರೋಣ ಎಂಡಿದ್ದಾರೆ. ಮೈಸೂರಿನಿಂದ …
Read More »ಬರಹಗಾರ ಟಿಕೆ ದಯಾನಂದ್‌ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದ ಟಾಲಿವುಡ್
ಕನ್ನಡ ಚಿತ್ರರಂಗವನ್ನು ಪರಭಾಷಿಕರು ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಕನ್ನಡದ ಸಿನಿಮಾಗಳು, ಕತೆಗಳ ಆಯ್ಕೆ ಕುರಿತು ಹೆಚ್ಚು ಗಮನ ಕೊಡುತ್ತಿದ್ದಾರೆ. ಕರ್ನಾಟಕದಾಚೆ ಕನ್ನಡ ತಂತ್ರಜ್ಞರು ಮಿಂಚುತ್ತಿರುವ ಸಮಯ ಇದು. ಇದೀಗ, ಕನ್ನಡದ ಖ್ಯಾತ ಬರಹಗಾರ ಟಿಕೆ ದಯಾನಂದ್ ಅವರಿಗೆ ಟಾಲಿವುಡ್‌ನಿಂದ ಅವಕಾಶ ಹುಡುಕಿಕೊಂಡು ಬಂದಿದೆ. ಬೆಲ್ ಬಾಟಮ್, ಆಕ್ಟ್ 1978 ಅಂತಹ ಚಿತ್ರಗಳಿಗೆ ಕಥೆ-ಸಂಭಾಷಣೆ ರಚಿಸಿರುವ ಟಿಕೆ ದಯಾನಂದ್ ಕೆಲಸ ಮೆಚ್ಚಿಕೊಂಡ ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ ರೆಡ್ ಕಾರ್ಪೆಟ್ ಹಾಕಿ …
Read More »‘ಲವ್ 360’ಗಾಗಿ ಮೇಘಾ ಶೆಟ್ಟಿಯನ್ನು ಸಂಪರ್ಕಿಸಿದ ನಿರ್ದೇಶಕ ಶಶಾಂಕ್
ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ “ಲವ್ 360” ನಲ್ಲಿ ನವ ನಾಯಕ ಪ್ರವೀಣ್ ಅವರನ್ನು ತೆರೆಗೆ ತರಲಿದ್ದಾರೆ. ಈ ಚಿತ್ರಕ್ಕಾಗಿ ನಾಯಕಿಯ ಆಯ್ಕೆ ಅಂತಿಮಗೊಳಿಸಲು ನಿರ್ದೇಶಕರು ಹುಡುಕಾಟದಲ್ಲಿದ್ದಾರೆ. ಮತ್ತು, ಇತ್ತೀಚಿನ ಮಾಹಿತಿಯಂತೆ ಈ ಪಾತ್ರಕ್ಕಾಗಿ ಜನಪ್ರಿಯ ಕಿರುತೆರೆ ನಟಿ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ. ಮೇಘಾ ತನ್ನ ಚೊಚ್ಚಲ ಟಿವಿ ಧಾರಾವಾಹಿ “ಜೊತೆ ಜೊತೆಯಲಿ”ಮೂಲಕ ಖ್ಯಾತರಾಗಿದ್ದಾರೆ. ಇದೀಗ ಅವರು ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. …
Read More »ತೆರೆಮೇಲೆ ಸೌರವ್ ಗಂಗೂಲಿ ಜೀವನಚರಿತ್ರೆ: ದಾದಾ ಪಾತ್ರದಲ್ಲಿ ಸ್ಟಾರ್ ನಟ
ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ, ದಾದಾ ಎಂದೇ ಖ್ಯಾತಿಗಳಿಸಿರುವ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ. ಈಗಾಗಲೇ ಸಾಕಷ್ಟು ಕ್ರಿಕೆಟ್ ಆಟಗಾರರ ಜೀವನ ತೆರೆಮೇಲೆ ಬಂದಿದೆ ಮತ್ತು ಬರಲು ಸಿದ್ಧವಾಗುತ್ತಿದೆ. ಇದೀಗ ಗಂಗೂಲಿ ಬಯೋಪಿಕ್ ಕೂಡ ಸೇರಿಕೊಂಡಿದ್ದಾರೆ. ಇತ್ತೀಚಿಗೆ ಮತ್ತೋರ್ವ ಖ್ಯಾತ ಆಟಗಾರ ಸುರೇಶ್ ರೈನಾ ಬಯೋಪಿಕ್ ಸುದ್ದಿಯಲ್ಲಿತ್ತು. ಅಲ್ಲದೆ ತನ್ನ ಬಯೋಪಿಕ್ ಸೌತ್ …
Read More »