Breaking News

Monthly Archives: ಜುಲೈ 2021

BSY ಜತೆ ಸಮುದಾಯ : ಬದಲಾವಣೆ ಕೆಂಡಕ್ಕೆ “ಆಡಿಯೋ’ ತುಪ್ಪ : ಬಿಎಸ್‌ವೈ ಮೌನ

ಬೆಂಗಳೂರು : ಒಂದು ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಬಿಜೆಪಿ ಮೇಲೆ ಅಡ್ಡ ಪರಿಣಾಮ ಉಂಟಾದೀತು! ಇದು ಲಿಂಗಾಯತ ನಾಯಕರು ಮತ್ತು ಮಠಾಧೀಶರು ನೀಡಿರುವ ನೇರ ಎಚ್ಚರಿಕೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಅವರದು ಎನ್ನಲಾದ ಆಡಿಯೋ ಬಹಿರಂಗವಾದ ಬಳಿಕ ನಾಯಕತ್ವ ಬದಲಾವಣೆಯ ಚರ್ಚೆ ಇನ್ನಷ್ಟು ಬಿಸಿ ಪಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಯಡಿಯೂರಪ್ಪ, ವಲಸಿಗ ಸಚಿವರು ಮತ್ತು ಸಿಎಂ ಬೆಂಬಲಿಗರು ಮೌನಕ್ಕೆ ಶರಣಾಗಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, …

Read More »

ತಗ್ಗಿದ ಮಳೆಯ ಅಬ್ಬರ: ಜಲಾಶಯಗಳಲ್ಲಿ ಹೆಚ್ಚಿದ ನೀರು

ಬೆಂಗಳೂರು: ಕರಾವಳಿ ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಕಡೆ ಸೋಮವಾರ ಸಾಧಾರಣ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಆರ್ಭಟಿಸಿದ್ದ ಮಳೆ ಸೋಮವಾರ ಸ್ವಲ್ಪ ಬಿಡುವು ನೀಡಿದೆ. ಶಿವಮೊಗ್ಗ ಸೇರಿ ಹಲವೆಡೆ ಬಿಸಿಲ ದರ್ಶನವಾದರೆ, ಸೊರಬ, ಹೊಸನಗರ, ತೀರ್ಥಹಳ್ಳಿ, ಸಾಗರದ ಕೆಲವೆಡೆ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗಿದೆ. ಮಳೆ ಕ್ಷೀಣಿಸಿದರೂ ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ. ಹೊಸನಗರ ತಾಲ್ಲೂಕಿನಲ್ಲಿ 17.1 ಸೆಂ.ಮೀ, ಹುಲಿಕಲ್‌ನಲ್ಲಿ 13.6 ಸೆಂ.ಮೀ, ಮಾಣಿಯಲ್ಲಿ 11.5 …

Read More »

‘ರಾಜ್ಯ ಮದ್ಯಪಾನ ಸಂಯಮ ಮಂಡಳಿ’ ಅಧ್ಯಕ್ಷೆಯಾಗಿ ‘ನಟಿ ಶೃತಿ’ ನೇಮಿಸಿ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿದ್ದಂತ ನಟಿ ಶೃತಿಯನ್ನು, ನಿನ್ನೆಯಷ್ಟೇ ಆ ಸ್ಥಾನದಿಂದ ಕೆಳಗಿಳಿಸಿ, ಸಿಎಂ ಆಪ್ತ ಕಾಪು ಸಿದ್ದಲಿಂಗಸ್ವಾಮಿಗೆ ನೀಡಲಾಗಿತ್ತು. ಇದೀಗ ಇಂದು ನಟಿ ಶೃತಿಗೆ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.   ಈ ಕುರಿತಂತೆ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜೆಸಿಂತ ಅಧಿಸೂಚನೆ ಹೊರಡಿಸಿದ್ದು, ಮುಖಅಯಮಂತ್ರಿಯವರ ಗೃಹ ಕಚೇರಿಯ ಟಿಪ್ಪಣಿಯಂತೆ …

Read More »

ಬಕ್ರೀದ್ ಸ್ಪೆಷಲ್: 1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರು ಮಾರಾಟ

ಮಂಡ್ಯ: ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಟಗರು, ಕುರಿಗಳ ವ್ಯಾಪಾರ ಜೋರಾಗಿದೆ. ಇದರಲ್ಲಿ ವಿಶೇಷ ಎಂಬಂತೆ ಈ ಬಾರಿ ಬರೋಬರಿ 1.25 ಲಕ್ಷ ರೂ.ಗೆ ಎರಡು ಬಂಡೂರು ತಳಿಯ ಟಗರು ಮಾರಾಟವಾಗಿದೆ. ಮಂಡ್ಯ ತಾಲೂಕು ಸೂನಗನಹಳ್ಳಿಯಲ್ಲಿ ಟಗರುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು ಇಲ್ಲಿ ದೊಡ್ಡ ಮೊತ್ತಕ್ಕೆ ಟಗರು ಸೇಲ್ ಆಗಿದೆ. ಸುಮಾರು ಒಂದು ವರ್ಷದಿಂದ ರೈತ ಶಂಭು ಎನ್ನುವವರು ಸಾಕಿದ್ದ ಜೋಡಿ ಟಗರುಗಳನ್ನು ಭಾರಿ ಮೊತ್ತಕ್ಕೆ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್ …

Read More »

ಮಹಿಳೆ ಸುಪಾರಿ ಕೊಲೆ ಶಂಕೆ ; ಗಂಡನ ತೀವ್ರ ವಿಚಾರಣೆ

ಉಡುಪಿ: ಇಲ್ಲಿಗೆ ಸಮೀಪದ ಬ್ರಹ್ಮಾವರದ ಉಪ್ಪಿನಕೋಟೆ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಜುಲೈ.12 ರಂದು ಸಂಭವಿಸಿದ ವಿಶಾಲಾ ಗಾಣಿಗ ಎಂಬ ಮಹಿಳೆಯ ಕೊಲೆಗೆ ಸಂಬಂದಿಸಿದಂತೆ ಮಹಿಳೆಯ ಪತಿ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ತನಿಖೆಗೆ ಪೊಲೀಸರು ನಾಲ್ಕು ತಂಡ ರಚಿಸಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹೊರ ರಾಜ್ಯದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳಿಂದ …

Read More »

ರಾಜ್ಯ ಶಿಕ್ಷಣ ಇಲಾಖೆಯಿಂದ ಬೆಳಗಾವಿ ಡಿಡಿಪಿಐ ತಂಡಕ್ಕೆ ಅಭಿನಂದನಾ ಸಂದೇಶ

ಬೆಳಗಾವಿ–   ಎಸ್ಎಸ್ಎಲ್ ಸಿ ಪರೀಕ್ಷೆಯ ಮೊದಲ ಹಂತದ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಬೆಳಗಾವಿ ಡಿಡಿಪಿಐ ಮತ್ತು ಅವರ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ. ಈ ಕುರಿತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಕೆ. ಎಸ್. ಕರಿಚಣ್ಣವರ ಸಂದೇಶ ಕಳಿಸಿದ್ದಾರೆ. ಅವರ ಸಂದೇಶ ಹೀಗಿದೆ – “ಬೆಳಗಾವಿ ಜಿಲ್ಲೆಯಾದ್ಯಂತ ಇಂದು ದಿ: ೧೯-೦೭-೨೦೨೧ ರಂದು ನಡೆದ SSLC ಪರೀಕ್ಷೆಯ ಯಶಸ್ಸಿಗೆ ಕಾರಣರಾದ ಉಪ ನಿರ್ದೇಶಕರು(ಆಡಳಿತ) ಹಾಗೂ ತಂಡ,  (ಅಭಿವೃದ್ಧಿ) …

Read More »

6 ಬ್ಯಾಗ್‌ ಕೊಂಡೊಯ್ದರು ಎಂದೆ, ಪ್ರಧಾನಿಗೆ ಹಣ ಕೊಂಡೊಯ್ದರು ಎಂದೆನೇ? ಎಚ್‌ಡಿಕೆ

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದೆಹಲಿಗೆ ಹೋಗುವಾಗ ವಿಶೇಷ ವಿಮಾನದಲ್ಲಿ ಆರು ಬ್ಯಾಗ್‌ಗಳಲ್ಲಿ ತೆಗೆದುಕೊಂಡು ಹೋಗಿದ್ದು ಏನು ಎಂದು ನಾನು ಕೇಳಿದ್ದೆ. ಪ್ರಧಾನಿಗೆ ಹಣ ಕೊಂಡೊಯ್ದಿದ್ದಾರೆ ಎಂದು ನಾನು ಹೇಳಿದ್ದೇನೆಯೇ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ಸೋಮವಾರ ವಿವಿಧ ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ನಡೆಸುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತಮ್ಮ ಹೇಳಿಕೆ ಕುರಿತು …

Read More »

3 ದಿನಗಳಲ್ಲಿ ದೇವಸ್ಥಾನಗಳಲ್ಲಿ ಎಲ್ಲ ಸೇವೆಗೆ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ದೇವಸ್ಥಾನಗಳಲ್ಲಿ ಎಲ್ಲ ಸೇವೆಗಳು ಮತ್ತು ಅನ್ನಪ್ರಸಾದ ವಿತರಣೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಅನುಮತಿ ನೀಡಲಾಗು ವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೋಮವಾರ ಕೊರ್ಗಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಅವರು ಉದಯವಾಣಿ ಜತೆ ಮಾತನಾಡಿದರು. ಧ್ವನಿ ಸುರುಳಿ ಬಗ್ಗೆ ಶಂಕೆೆ ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಾಮಾನ್ಯ ಕಾರ್ಯ ಕರ್ತನಾಗಿ ಬಂದು ರಾಜ್ಯದ …

Read More »

ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ 7 ಹಾಲು ಶಿಥಿಲೀಕರಣ ಘಟಕಗಳು ಇಷ್ಟರಲ್ಲಿಯೇ ಆರಂಭ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಪೂರೈಸುತ್ತಿರುವ ರೈತ ಕಲ್ಯಾಣ ಸಂಘದ ಸದಸ್ಯರುಗಳ 16 ವಾರಸುದಾರರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚೆಗೆ ತಲಾ 10 ಸಾವಿರ ರೂ.ಗಳ ಸಹಾಯಧನದ ಚೆಕ್‍ಗಳನ್ನು ವಿತರಿಸಿದರು. ಹಾಲು ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವ 16 ಜನರು ಮೃತಪಟ್ಟಿದ್ದರಿಂದ ಅವರ ಕುಟುಂಬಗಳ ವಾರಸುದಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಚೆಕ್‍ಗಳನ್ನು ವಿತರಿಸಿದರು. ಜೊತೆಗೆ ಗುರ್ಲಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಸಿಬ್ಬಂದಿಯೋರ್ವ …

Read More »

ಯಡಿಯೂರಪ್ಪ ಅವರೇ ನಿಮಗೆ ವಯಸ್ಸಾಗಿದೆ. ಯಾರಿಗಾದರು ಸಿಎಂ ಪಟ್ಟ ಕಟ್ಟಿ ನೀವು ಹಿಂದಕ್ಕೆ ಸರಿಯಿರಿ.: ನಾಗನ ಗೌಡ

ಯಾದಗಿರಿ: ಬಿಎಸ್ ಯಡಿಯೂರಪ್ಪ ಅವರೇ ನಿಮಗೆ ವಯಸ್ಸಾಗಿದೆ. ಯಾರಿಗಾದರು ಸಿಎಂ ಪಟ್ಟ ಕಟ್ಟಿ ನೀವು ಹಿಂದಕ್ಕೆ ಸರಿಯಿರಿ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ಸೂಕ್ತವಾಗಿ ಅಧಿಕಾರ ಬಿಟ್ಟರೆ ಚೆನ್ನಾಗಿರುತ್ತದೆ. ನೀವು ರಾಜೀನಾಮೆ ನೀಡದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ ಅಂತ ಜೆಡಿಎಸ್ ಶಾಸಕ ನಾಗನಗೌಡ ಹೇಳಿದ್ದಾರೆ. ಈ ಬಗ್ಗೆ ಯಾದಗಿರಿಯಲ್ಲಿನ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾರಿಗಾದರೂ ಸಲಹೆಗಾರರಾಗಿ, ಬಿಎಸ್ ವೈ ಸಿಎಂ ಸ್ಥಾನ …

Read More »