ಕುಮಿಲಿ: ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಹೈಸ್ಕೂಲ್ ಶಿಕ್ಷಕಿಯಾದ ಕೇರಳದ ಛೋಟ್ಟುಪರಾ ನಿವಾಸಿ ಸೆಲ್ವಮರಿಯನ್ನು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅಭಿನಂದಿಸಿದ್ದು, ರಾಜಭವನಕ್ಕೆ ಆಹ್ವಾನಿಸಿದ್ದಾರೆ. ಬಾಲ್ಯದ ದಿನಗಳಿಂದಲೂ ಸೆಲ್ವಮರಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ರಜಾದಿನಗಳಲ್ಲಿ ತಮ್ಮ ತಾಯಿಯ ಜತೆ ಏಲಕ್ಕಿ ತೋಟದಲ್ಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿ ನಿಲ್ಲುತ್ತಿದ್ದ ಸೆಲ್ವಮರಿ, ಕೆಲಸದ ನಡುವೆಯೂ ಓದಿನಲ್ಲೂ ಶ್ರಮವಹಿಸಿ ಇಂದು ಹೈಸ್ಕೂಲ್ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕುಟುಂಬದ ಸಂಕಷ್ಟಗಳನ್ನು ಇನ್ನಷ್ಟು ದೂರ …
Read More »Monthly Archives: ಜುಲೈ 2021
ಕಾಲು ಜಾರಿ ನೀರಿಗೆ ಬಿದ್ದು ನಾಲ್ವರು ಮಕ್ಕಳು ಸಾವು
ವಿಶಾಖಪಟ್ಟಣ: ಮಳೆಗೆ ತುಂಬಿ ಹರಿಯುತಿದ್ದ ಹೊಳೆಯೊಳಗೆ ಜಾರಿ ಬಿದ್ದು ನಾಲ್ವರು ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ವಿಶಾಖಪಟ್ಟಣ ಜಿಲ್ಲೆಯ ವಿ. ಮಡುಗುಲಾ ಮಂಡಲ್ ಜಮ್ಮದೇವಿಪೇಟಾ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತ ಮಕ್ಕಳನ್ನು ಜಾಹ್ನವಿ (11) ಝಾನ್ಸಿ (8), ಶರ್ಮಿಳಾ (7) ಮತ್ತು ಮಹೀಂದರ್ (7) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಪಾಲಕರು ಬಟ್ಟೆ ಹೊಗೆಯಲು ಹೋಗಿದ್ದರು. ಮಕ್ಕಳು ಸಹ ಜತೆಯಲ್ಲಿ ತೆರಳಿದ್ದರು. ಈ ವೇಳೆ ನೀರಿನ …
Read More »1000ಕ್ಕೆ ಏರಿಕೆಯಾಗುತ್ತಾ ಲೋಕಸಭೆ ಕ್ಷೇತ್ರಗಳ ಸಂಖ್ಯೆ..?
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೊಸ ಬಾಂಬ್ ಸಿಡಿಸಿದ್ದಾರೆ. ಸೆಂಟ್ರಲ್ ವಿಸ್ತಾದ ಹೊಸ ಸಂಸತ್ನಲ್ಲಿ ಲೋಕಸಭೆಯಲ್ಲಿ 1000 ಸೀಟುಗಳು ಇರಲಿವೆ ಅಂತ ನನಗೆ ಬಿಜೆಪಿ ಮೂಲಗಳಿಂದಲೇ ಮಾಹಿತಿ ಬಂದಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಲೋಕಸಭೆ ಸೀಟುಗಳ ಸಂಖ್ಯೆಯನ್ನು 1000ಕ್ಕೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕಳ್ಳುವ ಸಾಧ್ಯತೆ ಇದೆ ಅಂತ ತಿಳಿಸಿದ್ದಾರೆ. ಜೊತೆಗೆ ಸಂಸತ್ನಲ್ಲಿ ಹೊಸ ಸಂಸತ್ನ ಕಟ್ಟಡ ವಿನ್ಯಾಸದ ಯೋಜನೆಯನ್ನು ಸಂಸತ್ನಲ್ಲಿ ಮಂಡಿಸಬೇಕು.. ಒಂದು ವೇಳೆ …
Read More »ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿದೆಯೇ ಒಲಾ ಸ್ಕೂಟರ್ ?
ಬೆಂಗಳೂರು ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿರುವ ಈ ಸಮಯದಲ್ಲಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ದೃಷ್ಟಿ ಹಾಯಿಸುತಿದ್ದಾರೆ. ಇದೀಗ ದೇಶದ ಪ್ರಮುಖ ಆನ್ ಲೈನ್ ಕಾರು ಬುಕಿಂಗ್ ಸಂಸ್ಥೆ ಓಲಾ ಬೆಂಗಳೂರು ಸಮೀಪದ ಹೊಸೂರಿನಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಣಾ ಘಟಕವನ್ನು ಆರಂಬಿಸಿದ್ದು ಇನ್ನೆರಡು ತಿಂಗಳಿನಲ್ಲಿ ಸ್ಕೂಟರ್ ಗಳು ರಸ್ತೆಗಿಳಿಯಲಿವೆ. ಈ ಸ್ಕೂಟರ್ ಒಂದು ಛಾರ್ಜಿಗೆ 240 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ಎಂದು ತಿಳಿದು ಬಂದಿದ್ದು …
Read More »ರಾಜಕೀಯ ಜಂಜಾಟಕ್ಕೆ ಬ್ರೇಕ್: ಹಸುಗಳನ್ನು ಮುದ್ದಾಡಿದ ಬಿಎಸ್ವೈ
ಬೆಂಗಳೂರು: ಬಿಜೆಪಿ ಕಟ್ಟಾಳು ಬಿಎಸ್ ಯಡಿಯೂರಪ್ಪ ನಿನ್ನೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ತಾವು ರಾಜೀನಾಮೆ ನಿರ್ಧರಿಸಿರುವುದನ್ನು ಹೇಳುವಾಗ ಯಡಿಯೂರಪ್ಪ ಗದ್ಗದಿತರಾದರು ಆ ಕ್ಷಣ ಅವರ ಅಭಿಮಾನಿಗಳಷ್ಟೇ ಅಲ್ಲದೇ ರಾಜ್ಯದ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ಇದೀಗ ಬಿಎಸ್ವೈ ಅವರು ತಮ್ಮ ನಿವಾಸದಲ್ಲಿ ಕಾಲಕಳೆಯುತ್ತಿದ್ದು, ಬೆಳ್ಳಂಬೆಳಿಗ್ಗೆ ನಿವಾಸದಲ್ಲಿರುವ ಹಸುಗಳನ್ನು ಮುದ್ದಾಡಿದ್ದಾರೆ. ಸದ್ಯ ರಾಜಕೀಯ ಜಂಜಾಟಗಳನ್ನು ಬದಿಗೊತ್ತಿ, ಎಸ್.ಆರ್.ವಿಶ್ವನಾಥ್ ತಂದು ಕೊಟ್ಟಿದ್ದ ಹಸುಗಳ ಜೊತೆ ಸಮಯ ಕಳೆದಿದ್ದಾರೆ. ಇನ್ನು ಈ ಹಸುಗಳ ಮೇಲೆ ಯಡಿಯೂರಪ್ಪ …
Read More »ಯಡಿಯೂರಪ್ಪಗೆ ವಯಸ್ಸು 75 ವರ್ಷ, ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ – ಕಾಂಗ್ರೆಸ್ ಎಂಎಲ್ಸಿ ಸಿ.ಎಂ. ಇಬ್ರಾಹಿಂ
ಬೆಂಗಳೂರು: ಕೇರಳದಲ್ಲಿ ಶ್ರೀಧರನ್ 80 ವರ್ಷದ ಮುದಿಯಾ, ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದರೆ ಇಲ್ಲಿ ಯಡಿಯೂರಪ್ಪಗೆ 75 ವರ್ಷ ವಯಸ್ಸು. ಇಲ್ಲಿ ವಯಸ್ಸಾಯ್ತು ಅಂತ ಕಿತ್ತು ಹಾಕಿದ್ದಾರೆ. ಯಡಿಯೂರಪ್ಪ ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ ಅಂತ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಆರೂವರೆ ಕೋಟಿ ಜನರಿರುವ ರಾಜ್ಯದಲ್ಲಿ ಬದಲಾವಣೆ ಸಹಿಸಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಪಡೆಯೋದು ಸರಿಯಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಅಕ್ಟೋಬರ್ನಲ್ಲಿ ಅಲ್ಪಸಂಖ್ಯಾತರ …
Read More »ಸಚಿವ ಸ್ಥಾನ ಸಿಗದಿದ್ರೆ ಎಲ್ಲಾ ಅಳಲನ್ನು ಮುಂದಿನ ದಿನಗಳಲ್ಲಿ ತೋಡಿಕೊಳ್ತೇನೆ -ಬಿಜೆಪಿ ಶಾಸಕ ದುರ್ಯೋಧನ ಐಹೊಳೆ
ಬೆಳಗಾವಿ: ನಾನು 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ. ಈ ಬಾರಿ ನನಗೂ ಸಚಿವ ಸ್ಥಾನವನ್ನು ನೀಡಬೇಕು ಅಂತ ಹೇಳಿಕೆ ನೀಡಿದ ಜಿಲ್ಲೆಯ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ, ಕಳೆದ 25 ವರ್ಷಗಳಿಂದ ರಾಯಬಾಗ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಕಳೆದ ಬಾರಿಯೂ ನನ್ನನ್ನ ಕಡೆಗಣನೆ ಮಾಡಲಾಗಿದೆ. ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕು ಅಂತ ಒತ್ತಾಯಿಸಿದ್ದಾರೆ. ಇವತ್ತು ಬೆಂಗಳೂರಿಗೆ ಹೋಗುತ್ತಿದ್ದೇನೆ. ಹೈಕಮಾಂಡ್ ಭೇಟಿಯಾಗಿ ಸಚಿವ …
Read More »ನೂತನ ಸಂಪುಟದಲ್ಲಿ ಹೊಸಬರಿಗೆ ಚಾನ್ಸ್, ಹಿರಿಯರಿಗೆ ಕೊಕ್, ವಲಸಿಗರಿಗೆ ಶಾಕ್..!
ಬೆಂಗಳೂರು,ಜು.27- ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಹಲವರಿಗೆ ನೂತನ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ವಲಸಿಗರಿಗೂ ಇದೇ ಭೀತಿ ಎದುರಾಗಿದ್ದು, ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಹೊಸ ಮುಖ್ಯಮಂತ್ರಿ ನೇಮಕ ಮಾಡುವುದರ ಜೊತೆಗೆ ಹೊಸ ಸಂಪುಟ ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಭವಿಷ್ಯದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಯಾಬಿನೆಟ್ ರಚನೆಗೆ ಮುಂದಾಗಿರುವ ಹೈಕಮಾಂಡ್ ಈಗಾಗಲೇ ಆಯ್ಕೆಗೆ ಕೆಲ ಮಾನದಂಡಗಳನ್ನು ಹಾಕಿದೆ. ಸಂಪುಟ ಸೇರಲು ಕ್ಲೀನ್ ಇಮೇಜ್ ಹೊಂದಿರಬೇಕು. ಜಾತಿವಾರು, …
Read More »ಬಿ.ಎಲ್.ಸಂತೋಷ್ ರಾಜ್ಯದ ಮುಂದಿನ ಮುಖ್ಯಮಂತ್ರಿ: ಬಿಜೆಪಿ ಮೂಲಗಳು.?
ಬೆಂಗಳೂರು; ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ತೀವ್ರಗೊಂಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಯಾರನ್ನ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಇದ್ದು, ಇದಕ್ಕಾಗಿ ಧರ್ಮೇಂದ್ರ ಪ್ರಧಾನ್, ಕರ್ನಾಟಕ ಸಿಎಂ ಆಯ್ಕೆಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಆದರೆ, ವೀಕ್ಷಕರ ತಂಡ ರಾಜ್ಯಕ್ಕೆ ಆಗಮಿಸುವ ಮೊದಲೇ ಬಿಎಲ್ ಸಂತೋಷ್ …
Read More »ಇಂದು ಯಾವುದೇ ಕಾರ್ಯಕ್ರಮ ನಿಗದಿ ಮಾಡಿಕೊಳ್ಳದ ಹಂಗಾಮಿ ಸಿಎಂ ಯಡಿಯೂರಪ್ಪ; ಗುಪ್ತಚರ ಇಲಾಖೆ ಮುಖ್ಯಸ್ಥರ ಭೇಟಿ
ಬೆಂಗಳೂರು: ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹಂಗಾಮಿ ಸಿಎಂ ಆಗಿ ಮುಂದುವರೆದಿರುವ ಬಿ.ಎಸ್.ಯಡಿಯೂರಪ್ಪ (BS Yediyurappa) ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲೇ ಉಳಿದುಕೊಂಡಿದ್ದಾರೆ. ಯಾವುದೇ ಸಭೆ, ಸಮಾರಂಭ, ಆಡಳಿತ ಸಂಬಂಧ ಕಾರ್ಯಕ್ರಮಗಳನ್ನು ನಿಗದಿಪಡಿಸಿಕೊಳ್ಳದ ಯಡಿಯೂರಪ್ಪ ರಾಜೀನಾಮೆ (Resign) ಬೆನ್ನಲ್ಲೇ ಮೌನವಾಗಿ ನಿವಾಸದಲ್ಲೇ ಉಳಿದಿದ್ದಾರೆ. ಏತನ್ಮಧ್ಯೆ, ಸಿಎಂ ಅಧಿಕೃತ ನಿವಾಸ ಕಾವೇರಿಗೆ ಗುಪ್ತಚರ ಇಲಾಖೆಯ ಮುಖ್ಯಸ್ಥ ದಯಾನಂದ್ ಭೇಟಿ ನೀಡಿ ಕೆಲಕಾಲ ಇದ್ದು ವಾಪಾಸ್ಸಾಗಿದ್ದಾರೆ. ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ …
Read More »