ಬೆಂಗಳೂರು: ಸಿ.ಡಿ ಕೇಸ್ಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ನಿನ್ನೆ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ವಿಚಾರಣೆ ನಡೆದಿದೆ. ಅದರ ಬೆನ್ನಲ್ಲೇ ಆರೋಪಿಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ. ವಿಶೇಷ ಎಂದರೆ ನಿನ್ನೆ ಒಟ್ಟಿಗೆ ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್ ನೀಡಿರುವ ಪೊಲೀಸರು, ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಕರೆದಿದ್ದಾರೆ. ಜೂನ್ 14ರ ಸೋಮವಾರ 11 ಗಂಟೆಗೆ ಆರೋಪಿ ನರೇಶ್ಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇನ್ನು …
Read More »Monthly Archives: ಜೂನ್ 2021
ಅಕ್ಕನ ಮದುವೆ ವೇದಿಕೆ ಮೇಲೆ ಭಾವನಿಗೇ ಕಿಸ್ ಕೊಟ್ಟ ನಾದಿನಿ! ವೈರಲ್ ಆಯ್ತು ವಿಡಿಯೋ
ಬೆಂಗಳೂರು: ಮದುವೆಯೆಂದರೆ ಅಲ್ಲಿ ಖುಷಿ, ಸಂಭ್ರಮವೆಲ್ಲ ಮಾಮೂಲಿ. ಅದೇ ಖುಷಿಯಲ್ಲಿ ಯಾರಾದರೂ ಒಬ್ಬ ಹೆಣ್ಣು ಮಗಳು ಓಡಿ ಬಂದು ಮದುಮಗನಿಗೇ ಮುತ್ತು ಕೊಟ್ಟುಬಿಟ್ಟರೆ? ಹೌದು. ಇಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ. ಅಲ್ಲೊಂದು ಮದುವೆ ನಡೆಯುತ್ತಿತ್ತು. ನದ ದಂಪತಿಯನ್ನು ವೇದಿಕೆಯಲ್ಲಿ ಕೂರಿಸಿ ಕುಟುಂಬಸ್ಥರು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮದಲ್ಲಿದ್ದರು. ಈ ವೇಳೆ ಫೋಟೋಕ್ಕೆಂದು ದಂಪತಿ ಜತೆ ಕುಳಿತಿದ್ದ ವಧುವಿನ ತಂಗಿ ಒಮ್ಮೆಲೆ ಬಗ್ಗಿ ವರನಿಗೆ ಮುತ್ತು ಕೊಟ್ಟಿದ್ದಾಳೆ. ಇದ್ದಕ್ಕಿದ್ದಂತೆ ನಾದಿನಿ ಈ …
Read More »ಸೋದರತ್ತೆ ಮಗಳ ಜೊತೆ ಸಪ್ತಪದಿ ತುಳಿದ ನಿರ್ದೇಶಕ ಚೇತನ್ ಕುಮಾರ್
ಮಾರ್ಚ್ 6ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಿರ್ದೇಶಕ ಬಹದ್ದೂರ್ ಚೇತನ್ ತಮ್ಮ ಬಹುಕಾಲದ ಗೆಳತಿ ಮಾನಸ ಜೊತೆ ರಿಂಗ್ ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಇತ್ತು. ಇದೇ ಬಹುಕಾಲದ ಗೆಳತಿ ಸ್ವತಃ ಚೇತನ್ ಕುಮಾರ್ ಸೋದರತ್ತೆ ಮಗಳು ಅನ್ನೋದು ಅನಂತರ ತಿಳಿದು ಬಂದಿತ್ತು. ಇಂದು ನಿರ್ದೇಶಕ ಚೇತನ್ ಸೋದರತ್ತೆ ಮಗಳು ಮಾನಸ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಹಲವು …
Read More »ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ
ಬಳ್ಳಾರಿ : ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಬಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ಮಾಡಿರುವ ಘಟನೆ ಸಂಡೂರು ತಾಲೂಕಿನ ಹಳೆದರೋಜಿ, ಕುರೇಕುಪ್ಪ ಗ್ರಾಮದಲ್ಲಿ ನಡೆದಿದೆ. ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು, ವ್ಯಾಕ್ಸಿನ್ ಹಾಕಿಸಿಕೊಂಡರೆ ನಮ್ಮ ಪುರುಷತ್ವ ಹೋಗುತ್ತದೆ, ಜ್ವರ ಬರುತ್ತದೆ, ಕೈ ಕಾಲು ಸ್ವಾದೀನ ಕಳೆದುಕೊಳುತ್ತದೆ ಎಂದು ವಾಗ್ವಾದ ಮಾಡಿದ್ದಾರೆ. ನಮಗೆ ಏನಾದರು ಆಗಲಿ ಪರವಾಗಿಲ್ಲ. ನೀವು ನಮ್ಮನ್ನು ಬಂದು ಕರೆಯಬೇಡಿ. ನಾವು ಸತ್ತರು ನಡೆಯುತ್ತೆ …
Read More »ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸಿದ್ದು, ಆ ಬಗ್ಗೆ ಚರ್ಚೆ ಅಪ್ರಸ್ತುತ, ಕೋವಿಡ್ ಸಂಕಷ್ಟದಲ್ಲಿ ಯಾರು ಸಹ ನಾಯಕತ್ವ ಬದಲಾವಣೆ, ಭಿನ್ನ ಅನಿಸಿಕೆ ಕುರಿತು ಹೇಳಿಕೆ ನೀಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಅರವಿಂದ ಬೆಲ್ಲದ ಅವರು, ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾಗಿ ನನಗೆ ತಿಳಿಸಿದ್ದಾರೆ. ಬೇರೆಯವರು ಯಾರು ದೆಹಲಿಗೆ ಹೋಗಿದ್ದಾರೆ, ಯಾಕೆ ಹೋಗಿದ್ದಾರೆ ನನಗೆ …
Read More »ಅಪಾರ್ಟ್ ಮೆಂಟ್ ಒಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 7 ಜನರಲ್ಲಿ ಕೊರೊನಾ,ಸೀಲ್ ಡೌನ್ ಮಾಡಿದ ಅಧಿಕಾರಿಗಳು
ಬೆಳಗಾವಿ: ಇಲ್ಲಿಯ ಟಿಳಕವಾಡಿಯಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 7 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಟಿಳಕವಾಡಿಯ ರಾಯ್ ರೋಡ್ ನ ಶ್ರೀಗಂಧ ಅಪಾರ್ಟ್ ಮೆಂಟ್ ನಲ್ಲಿ 7 ಜನರು ಕೋವಿಡ್ ನಿಂದ ಬಳಲುತ್ತಿದ್ದಾರೆ. ಒಂದೇ ಮನೆಯಲ್ಲಿ ನಾಲ್ವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೆ, ಅಪಾರ್ಟ್ ಮೆಂಟ್ ನ ಮತ್ತೊಂದು ಮನೆಯ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇಡೀ ಅಪಾರ್ಟ್ ಮೆಂಟ್ …
Read More »ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆ
ತುಮಕೂರು/ ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದರು. ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುತ್ತಿರುವ ತೈಲ ಬೆಲೆ ಏರಿಕೆ ವಿರುದ್ದದ 100 ನಾಟೌಟ್ ಪ್ರತಿಭಟನೆ ಬಗ್ಗೆ ಜೂಮ್ ವಿಡಿಯೋ ಸಂವಾದದ ಮೂಲಕ ಪರಿಶೀಲನೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ …
Read More »ಜೂಜಾಟ: 18 ಆರೋಪಿಗಳ ಬಂಧನ
ಬೆಳಗಾವಿ: ಇಲ್ಲಿನ ಖಂಜರ್ ಗಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಗಲ್ಲಿಯ ಜುಬೇರ ಸುಬೇದಾರ, ಆರೀಫ ಖೊತ್ವಾಲ್, ಅಯಾಜ್ ಖತೀಬ, ಅಬ್ದುಲ್ ಸಲಾಮ್ ಬಾಳೇಕುಂದ್ರಿ, ಸೊಹೆಲ್ ಮುಲ್ಲಾ, ಷರೀಪ ಮುಲ್ಲಾ, ಅಬುತಾಲಿಪ್ ಶೇಕ್, ಆಸೀಫ್ ಸೈಯದ್, ಆಯೂಬಖಾನ ಪಠಾಣ, ವಾಸಿಂ ಸೌದಾಗರ, ಇಮ್ರಾನ ಪಟೇಲ, ವಾಸಿಂ ಅಲವಾಡಕರ, ಮುಸ್ತಾಕ ತಹಶೀಲ್ದಾರ, ಇಕ್ಬಾಲ ನರೇಗಲ್, ಫಿರೋಜ ಪಠಾಣ, ರಫೀಕ ತಹಶೀಲ್ದಾರ, ಸಲೀಂ …
Read More »ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸಚಿವರಾದ ಕೆ ಎಸ್ ಈಶ್ವರಪ್ಪ, ಭೈರತಿ ಬಸವರಾಜ್
ಶಿವಮೊಗ್ಗ: ನಂಬರ್ ಪ್ಲೇಟ್ ಇಲ್ಲದಿರುವ ವಾಹನಗಳಲ್ಲಿ ಪ್ರಯಾಣ ಮಾಡಬಾರದು ಎಂದು ಸರ್ಕಾರದ ನಿಯಮವೇ ಇದೆ, ನಂಬರ್ ಪ್ಲೇಟ್ ಇಲ್ಲದಿರುವ ವಾಹನವನ್ನು ಚಲಾಯಿಸಿ ಸಿಕ್ಕಿಬಿದ್ದು ಅನೇಕರು ದಂಡ ಕಟ್ಟಿಸಿಕೊಳ್ಳುವುದೂ ಇದೆ. ಆದರೆ ಜನಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ, ರಾಜಕಾರಣಿಗಳು ಏನು ಮಾಡಿದರೂ ನಡೆಯುತ್ತದೆ ಎಂಬಂತೆ ಹೇಳುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇಂದು ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಪ್ರಯಾಣಿಸಿದ …
Read More »16.80 ಲಕ್ಷದ ಸ್ಟಾಂಪ್ ಡ್ರಗ್ಸ್ ವಶ- ಕಿಂಗ್ ಪಿನ್ ಬಂಧನ
ಮಂಗಳೂರು: ನಗರದ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ವಿರುದ್ಧದ ಸಮರವನ್ನು ಮುಂದುವರಿಸಿದ್ದಾರೆ. ನಿಷೇಧಿತ ಮಾದಕವಸ್ತು ಎಲ್‍ಎಸ್‍ಡಿ ಮಾರಾಟ ಮಾಡುತ್ತಿದ್ದ ಕೇರಳದ ಕ್ಯಾಲಿಕಟ್ ಮೂಲದ ಆರೋಪಿ ಮೊಹಮ್ಮದ್ ಅಜಿನಾಸ್ ನನ್ನು ಖೆಡ್ಡಾಕೆ ಬೀಳಿಸಿದ್ದಾರೆ. ಈತ ವಿದ್ಯಾರ್ಥಿಯಾಗಿದ್ದು, ಪಿ.ಜಿಯಲ್ಲಿ ವಾಸವಾಗಿದ್ದ. ನಗರದ ಕದ್ರಿ ಮೈದಾನದಲ್ಲಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು. 16.80ಲಕ್ಷ …
Read More »