Breaking News

Monthly Archives: ಜೂನ್ 2021

ಆಸ್ಪತ್ರೆ ಕಪಾಟು ಒಳಗಡೆ ಹೆಬ್ಬಾವು…..

ಬೆಳ್ತಂಗಡಿ: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡು ಸ್ಥಳದಲ್ಲಿ ಕೆಲಕಾಲ ಸಾರ್ವಜನಿಕರು ಹಾಗೂ ಆಸ್ಪತ್ರೆ ಮಂದಿಯನ್ನು ಆತಂಕಕ್ಕೀಡು ಮಾಡಿದ ಘಟನೆ ಗುರುವಾರ ನಡೆದಿದೆ. ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ಕಪಾಟಿನಲ್ಲಿ ಹೆಬ್ಬಾವು ಅವಿತುಕೊಂಡಿದ್ದು, ಕಪಾಟು ಬಾಗಿಲು ತೆರೆಯುವ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತವರಣ ನಿರ್ಮಾಣವಾಯಿತು. ಸಿಬ್ಬಂದಿ, ಸಾರ್ವಜನಿಕರು ಆತಂಕಗೊಂಡರು. ಕೂಡಲೇ ಹಾವು ಸೆರೆ ಹಿಡಿಯುವ ಸ್ನೇಕ್ …

Read More »

ನನಗೆ ಸಿಎಂ ಸ್ಥಾನ ಸಿಕ್ಕರೆ ನಿಷ್ಠೆಯಿಂದ ಕೆಲಸ ಮಾಡತ್ತೇನೆ: ಎಸ್.ಆರ್.ಪಾಟೀಲ್

ಕೊಪ್ಪಳ: ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಪ್ರಾಮಾಣಿಕತೆ, ಬದ್ಧತೆ, ನಿಷ್ಠೆಯಿಂದ ಸಿಎಂ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡಬೇಕಾಗುತ್ತದೆ ಎನ್ನುವ ಮೂಲಕ ತಾವೂ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವ ಮಾತನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರು ಪರೋಕ್ಷವಾಗಿ ನುಡಿದರು. ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಎದ್ದಿರುವ ಸಿಎಂ ಸ್ಥಾನದ ಕೂಗಿನ ವಿಚಾರಕ್ಕೆ ನೀವು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೀರಾ ಎನ್ನುವ …

Read More »

ಕೋವಿಡ್‍ ನಿಂದ ತೊಂದರೆಗೊಳಗಾದ 3500 ಕ್ರೀಡಾಪಟುಗಳಿಗೆ ಡ್ರೀಮ್‍ ಸ್ಪೋರ್ಟ್ಸ್ ನೆರವು

ಬೆಂಗಳೂರು: ಡ್ರೀಮ್‍ ಸ್ಪೋರ್ಟ್ಸ್ ಫೌಂಡೇಶನ್‌ ಸಂಸ್ಥೆಯು ‘ಬ್ಯಾಕ್ ಆನ್ ಟ್ರ್ಯಾಕ್’ ಕಾರ್ಯಕ್ರಮದಡಿ ಕೋವಿಡ್ ನಿಂದ ತೊಂದರೆಗೀಡಾದ 3500 ಕ್ಕೂ ಹೆಚ್ಚು ಭಾರತೀಯ ಕ್ರೀಡಾ ವೃತ್ತಿಪರರಿಗೆ ನೆರವು ನೀಡುತ್ತಿದೆ. ಇದರಲ್ಲಿ ಕರ್ನಾಟಕದ ಕ್ರೀಡಾಳುಗಳು ಸಹ ಸೇರಿದ್ದಾರೆ. ಈ ಸಾಂಕ್ರಾಮಿಕ ಸಮಯದಲ್ಲಿ 29 ಕ್ರೀಡೆಗಳ 3,500 ಕ್ಕೂ ಹೆಚ್ಚು ಕ್ರೀಡಾ ವೃತ್ತಿಪರರಿಗೆ ಸಹಾಯ ಮಾಡಿದೆ. ಈ 3,500 ಫಲಾನುಭವಿಗಳಲ್ಲಿ 3,300 ಪ್ರಸ್ತುತ ಮತ್ತು ನಿವೃತ್ತ ಕ್ರೀಡಾಪಟುಗಳು, 100 ಕ್ಕೂ ಹೆಚ್ಚು ತರಬೇತುದಾರರು, ಮತ್ತು …

Read More »

ವಿಶ್ವಕ್ಕೆ ಮಾರಕವಾಗಲಿದೆ ಡೆಲ್ಟಾ ರೂಪಾಂತರಿ ವೈರಸ್..!

ವಿಶ್ವಸಂಸ್ಥೆ,ಜೂ.24-ಅತಿ ವೇಗವಾಗಿ ಹರಡಬಲ್ಲ ಸಾಮಥ್ರ್ಯ ಹೊಂದಿರುವ ಡೆಲ್ಟಾ ರೂಪಾಂತರಿ ವೈರಸ್ ಈಗಾಗಲೇ 85 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೆಲವೇ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಿಗೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಅಲ್ಫಾ ರೂಪಾಂತರಿ 170, ಬೀಟಾ 118, ಗಾಮಾ 71 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದವು, ಇದೀಗ ಅತ್ಯಂತ ಮಾರಕ ವೈರಾಣು ಆಗಿರುವ ಡೆಲ್ಟಾ 85 ರಾಷ್ಟ್ರಗಳಲ್ಲಿ ತನ್ನ ಕಬಂಧ ಬಾಹು ಚಾಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ …

Read More »

ಕುತೂಹಲ ಕೆರಳಿಸಿದ ಬಿ.ವೈ. ವಿಜಯೇಂದ್ರ ದಿಢೀರ್ ದಿಲ್ಲಿ ಭೇಟಿ

ಬೆಂಗಳೂರು, : `ನಾಯಕತ್ವ ಬದಲಾವಣೆ’ ಬಿಕಟ್ಟಿನ ನಡುವೆಯೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ದಿಢೀರ್ ಹೊಸದಿಲ್ಲಿ ಭೇಟಿ ರಾಜ್ಯ ಬಿಜೆಪಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಖುದ್ದು ಬೆಂಗಳೂರಿಗೆ ಆಗಮಿಸಿ ಜೂ.16ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಸಚಿವರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳೊಂದಿಗೆ …

Read More »

ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಸಹೋದರ ಲಖನ್‌ ಹಾಗೂ ಅಳಿಯ ಅಂಬಿರಾವ್‌ ಪಾಟೀಲ್‌ ಇರಲಿದ್ದಾರೆ ಎನ್ನಲಾಗಿದೆ

ಗೋಕಾಕ್‌: ನಾಲ್ಕು ದಿನಗಳ ಕಾಲ ಮುಂಬಯಿ ಪ್ರವಾಸದಿಂದ ಗೋಕಾಕ್‌ಗೆ ಮರಳಿರುವ ರಮೇಶ್‌ ಜಾರಕಿಹೊಳಿ ಶುಕ್ರವಾರ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಲಿದ್ದು, ಅಲ್ಲಿಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಮೂಲಕ ಸಂಪುಟಕ್ಕೆ ಮರು ಸೇರ್ಪಡೆ ಕುರಿತು ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದ ಇವರು ಈಗ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲ …

Read More »

ಕೋವಿಡ್‌ ವಿರುದ್ದ ಹೋರಾಟದಲ್ಲಿ ಸರ್ಕಾರದ ಜತೆ ಭಾಗಿ ಎಂದ ರಿಲಯನ್ಸ್‌ ಮುಖೇಶ್‌ ಅಂಬಾನಿ

ಮುಂಬೈ: ನಮ್ಮ ವ್ಯವಹಾರದ ಕಾರ್ಯಕ್ಷಮತೆಗಿಂತ ಈ ಕಷ್ಟಕರ ಸಮಯದಲ್ಲಿ ರಿಲಯನ್ಸ್‌ನ ಮಾನವೀಯ ಪ್ರಯತ್ನಗಳು ನನಗೆ ಹೆಚ್ಚಿನ ಸಂತೋಷವನ್ನು ನೀಡಿದೆ. ಕೋವಿಡ್ -19 ಬಿಕ್ಕಟ್ಟಿನ ಉದ್ದಕ್ಕೂ, ನಮ್ಮ ರಿಲಯನ್ಸ್ ಕುಟುಂಬದ ಉದ್ದೇಶ ಮತ್ತು ರಾಷ್ಟ್ರೀಯ ಕರ್ತವ್ಯದ ಪ್ರಜ್ಞೆಯೊಂದಿಗೆ ಸಾಗಿದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ ಮತ್ತು ವಿನಮ್ರತೆ ಇದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ (ಆರ್​ಐಎಲ್​) ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದರು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ (ಆರ್​ಐಎಲ್​) 44ನೇ ವಾರ್ಷಿಕ …

Read More »

61 ಲಕ್ಷ ರೂ. ಮೌಲ್ಯದ ಡ್ರಗ್ಸ್ ನಾಶಕ್ಕೆ ನಿರ್ಧಾರ :

ಬೆಳಗಾವಿ – ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಗಾಂಜಾವನ್ನು ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮೀಟಿ ವತಿಯಿಂದ ನಾಶಗೊಳಸಲುನಿರ್ಧರಿಸಲಾಗಿದೆ. ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆಯುತ್ತಿದ್ದ/ಸಾಗಾಣಿಕೆ/ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ 61 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.   ವಶಪಡಿಸಿಕೊಂಡಿದ್ದ ಗಾಂಜಾವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿಯ ಅನುಮತಿ ಪಡೆದುಕೊಂಡು …

Read More »

ಮೇದಾರ ಸಮಾಜದ ಮಗಳ ವಾಕ್ಚಾತುರ್ಯ ಮೆಚ್ಚಿ ಶಹಬಾಶ್.. ತಂಗಿ ಎಂದ ಕರುನಾಡು..!!

ಮಾತುಗಳಲ್ಲಿ ತೊದಲಿಕೆ ಇರಲಿಲ್ಲ,ಮಾಧ್ಯಮ ಮುಂದೆ ತನ್ನ ಕಷ್ಟ ಹೇಳಿಕೊಳ್ಳಲು ಹಿಂಜರಿಕೆ ತೊರಲಿಲ್ಲ, ಬಡತನ ಕಲಿಸಿದ್ದ ಪಾಠದ ಪದಗಳು ಜಲಪಾತದಲ್ಲಿ ಹರಿಯುವ ನೀರಿನಂತೆ ಮಾತಿನ ಮೂಲಕ ಹರಿಯ ತೊಡಗಿದ್ದವು,ಮನದಲ್ಲಿ ತುಂಬಿದ್ದ ನೋವುಗಳು ಸಾಲು ಸಾಲಾಗಿ ಪದಗಳ ಮೂಲಕ ಹೊರಹೊಮ್ಮುತ್ತಿದ್ದವು,ಸಂಕಷ್ಟದ ಸಮಯದಲ್ಲಿ ಎದುರಿಸಿದ ಸವಾಲುಗಳು ಆ ದಿಟ್ಟ ನೊಟದ ಮೂಲಕ ಎದ್ದು ಕಾಣುತ್ತಿದ್ದವು.ನಾಲ್ಕೇ… ನಾಲ್ಕು… ಸಾಲಿನಲ್ಲಿ ಉದುರಿದ ಆ ಪದಗಳು ಕರುನಾಡಿನಲ್ಲಿ ಮನೆ ಮಾತಾಯಿತು.ಲಕ್ಷಾಂತರ ಜನರು ಭಲೇ… ಸಹೋದರಿ ನಿನ್ನ ಈ ದಿಟ್ಟ …

Read More »

ಶೂನ್ಯಸಂಪಾದನ ಮಠದ ಪೀಠಾಧಿಪತಿಗಳ ಹುಟ್ಟುಹಬ್ಬದ ನಿಮಿತ್ಯ ಅನಾಥ ಮಕ್ಕಳಿಗೆ ಅನ್ನ ದಾಸೋಹ

ಗೋಕಾಕ ನಗರದ ಶೂನ್ಯಸಂಪಾದನ ಮಠದ ಪಿಠಾಧಿಪತಿಗಳಾದ ನಮ್ಮ ಪರಮಪೂಜ್ಯ ಮ.ನಿ.ಪ್ರ ಸ್ವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಗುರುಗಳಿಗೆ ಜನ್ಮ ದಿನದ ಪ್ರಯುಕ್ತ ಕರವೇ ಕಾರ್ಯಾಕರ್ತರು ತಾಲೂಕಾಧ್ಯಕ್ಷರಾದ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ನಗರದ ಶಿವಾ ಫೌಂಡೇಶನ್ ಅನಾಥ ಮಕ್ಕಳಿಗೆ ಒಂದು ದಿನದ ಅನ್ನ ದಾಸೋಹ ಮಾಡಿ ಶ್ರೀಗಳ ಹುಟ್ಟು ಹಬ್ಬವನ್ನು ಆಚರಿಸಿದರು.. ಈ ಸಂರ್ಧಭದಲ್ಲಿ ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಬಸವರಾಜ ಹತ್ತರಕ್ಕಿ , ರಾಜೇಂದ್ರ ಕೆಂಚನಗುಡ್ಡ , …

Read More »