ಕಾರವಾರ: ಲಾಕ್‍ಡೌನ್‍ನಿಂದ ಗೋವಾದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ತಮ್ಮ ಊರುಗಳಿಗೆ ತೆರಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದ್ದು, ಇಂದಿನಿಂದ ಗೋವಾದಿಂದ ಕರ್ನಾಟಕಕ್ಕೆ ಬರುವ ಜನರಿಗೆ ಕಾರವಾರ-ಗೋವಾ ಗಡಿಭಾಗದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಪಾಸ್ ನೀಡುವ ಮೂಲಕ ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡಲಾಗುತ್ತಿದೆ. ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ತೆರಳಲು ಹತ್ತು ಸಾವಿರ ಜನ ನೊಂದಣಿ ಮಾಡಿಕೊಂಡಿದ್ದು, ಇವರಿಗೆ ಕಾರವಾರ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಮೂಲಕ ಪ್ರವೇಶ ನೀಡಲಾಗುತ್ತಿದೆ. ಜೊತೆಗೆ …
Read More »Yearly Archives: 2020
ರಾಜ್ಯದಲ್ಲೇ ಅತ್ಯುತ್ತಮ ಕೋವಿಡ್ ಪ್ರಯೋಗಾಲಯ ಚಾಮರಾಜನಗರದಲ್ಲಿ ಸ್ಥಾಪನೆ: ಸುರೇಶ್ ಕುಮಾರ್
ಚಾಮರಾಜನಗರ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 1.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೋವಿಡ್-19 ಪರೀಕ್ಷಾ ಪಿಸಿಆರ್ ಪ್ರಯೋಗಾಲಯ ರಾಜ್ಯದಲ್ಲಿಯೇ ಅತ್ಯುತ್ತಮ ಪ್ರಯೋಗಾಲಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಈ ಕೋವಿಡ್-19 ಪಿಸಿಆರ್ ಪ್ರಯೋಗಾಲಯಕ್ಕೆ 1.79 ಕೋಟಿ ರೂ. ಬಿಡುಗಡೆಯಾಗಿದೆ. ಐಸಿಎಂಆರ್ ನಿಯಮಾವಳಿಯ ಅನುಗುಣವಾಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ …
Read More »ಕಲಬುರಗಿ:ಪೊಲೀಸ್ ಪೇದೆಗೂ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಜನರಲ್ಲಿ ಆತಂಕ
ಕಲಬುರಗಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಕಲಬುರಗಿಯಲ್ಲಿ ಇಂದು ಮತ್ತಿಬ್ಬರು ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಒರ್ವ ಪೊಲೀಸ್ ಪೇದೆಗೂ ಕೊರೊನಾ ವಕ್ಕರಿಸಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಕಲಬುರಗಿಯ ಮಹೆಬೂಬ್ ನಗರದ 50 ವರ್ಷದ ಪುರುಷ (ರೋಗಿ ಸಂಖ್ಯೆ-394) ಹಾಗೂ ಮೋಮಿನಪುರ ಪ್ರದೇಶದ 19 ವರ್ಷದ ಯುವಕ (ರೋಗಿ ಸಂಖ್ಯೆ-395) ಕೊರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಬುಧವಾರ ಇಎಸ್‍ಐ ಆಸ್ಪತ್ರೆಯಿಂದ ಡಿಸ್ಚಾಜ್9 ಮಾಡಲಾಗಿದೆ ಎಂದು …
Read More »ನಮಗೆ ಕೊರೊನ ಬಂದುಬಿಡುತ್ತೆ ಎಂಬ ರೀತಿಯ ಭೀತಿ ಸಚಿವರಲ್ಲಿದೆ:ಗೋಪಾಲಸ್ವಾಮಿ ವ್ಯಂಗ್
ಹಾಸನ: ಗ್ರೀನ್‍ಝೋನ್‍ನಲ್ಲಿರುವ ಹಾಸನ ಜಿಲ್ಲೆಗೆ ಹೊಸ ಸವಾಲು ಎದುರಾಗಿದೆ. ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಮೂರು ಸಾವಿರ ಜನ ಆಗಮಿಸಲು ಕಾಯುತ್ತಿರುವ ಬಗ್ಗೆ ಎಂಎಲ್‍ಸಿ ಗೋಪಾಲಸ್ವಾಮಿ ಮಾಹಿತಿ ನೀಡಿದ್ದು, ಅವರೆಲ್ಲರನ್ನು ಸಮರ್ಪಕವಾಗಿ ಕ್ವಾರಂಟೈನ್ ಮಾಡುವ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಮುಂಬೈನಿಂದ ಆಗಮಿಸಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ಮೂಲದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಆತ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ 5 ಗ್ರಾಮಗಳಿಗೆ ಭೇಟಿ ನೀಡಿ ಸ್ನೇಹಿತರು, ಸಂಬಂಧಿಕರನ್ನು ಭೇಟಿ …
Read More »ಸೀಲ್‍ಡೌನ್ ಮುಕ್ತ ಹಳ್ಳಿಗಳಲ್ಲಿ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ………
ಮೈಸೂರು: 28 ದಿನಗಳಿಂದ ಸೀಲ್‍ಡೌನ್ ಆಗಿದ್ದ ಮೈಸೂರು ತಾಲೂಕಿನ ಗ್ರಾಮಗಳನ್ನು ಇವತ್ತು ಸೀಲ್‍ಡೌನ್ ನಿಂದ ಮುಕ್ತ ಮಾಡಲಾಯಿತು. ವರುಣಾ ಕ್ಷೇತ್ರದ ಸೋಮೇಶ್ವರಪುರ ಹಾಗೂ ಹೆಬ್ಯಾ ಗ್ರಾಮಗಳು ಸೀಲ್‍ಡೌನ್ ಮುಕ್ತವಾಗಿ ಇಂದಿನಿಂದ ಸಹಜ ಸ್ಥಿತಿಗೆ ಮರಳಿದವು. ಸೀಲ್‍ಡೌನ್ ಆಗಿದ್ದ ಗ್ರಾಮದ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ ಸೋಮೇಶ್ವರಪುರ ಗ್ರಾಮದಲ್ಲಿ ನಡೆಯಿತು. ಸಿಎಂ ಪುತ್ರ ವಿಜಯೇಂದ್ರ ಸೂಚನೆಯಂತೆ ಗ್ರಾಮದ ಜನರು ಹಾಗೂ ಗ್ರಾಮದಲ್ಲಿ ಕೆಲಸ ಮಾಡಿದ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಸೀಲ್‍ಡೌನ್ ಆಗಿದ್ದ …
Read More »ಕೊರೊನಾಗೆ ಆಂಟಿಬಾಡಿ ಸಿದ್ಧ – ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾದ ಇಸ್ರೇಲ್
ಟೆಲ್ ಅವೀವ್: ಕೋವಿಡ್-19 ಇನ್ನೂ ಔಷಧಿ ಪತ್ತೆಯಾಗಿಲ್ಲ. ಹಲವು ದೇಶಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯೋಗ ನಡೆಯುತ್ತಿದೆ. ಈ ನಡುವೆ ಇಸ್ರೇಲ್ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ. ಹೌದು. ಇಸ್ರೇಲ್ ಇನ್‍ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಸಂಸ್ಥೆ ಕೊರೊನಾ ವೈರಸ್‍ಗೆ ಪ್ರತಿಕಾಯಗಳನ್ನು(ಆಂಟಿಬಾಡಿ) ಅಭಿವೃದ್ಧಿಪಡಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹೇಗೆ ಕೆಲಸ ಮಾಡುತ್ತೆ? ಈ ಮೊನೊ ಕ್ಲೋನಲ್ ಆಂಟಿಬಾಡೀಸ್ ಸೋಂಕು ಪೀಡಿತರ ದೇಹದೊಳಗಿರುವ …
Read More »ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್……….
ದಾವಣಗೆರೆ: ಹೆಮ್ಮಾರಿ ಕೊರೊನಾ ವೈರಸ್ ತಡೆಗಟ್ಟಲು ವೈದ್ಯರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದು, ಅವರ ಜೊತೆ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹ ಕೊರೊನಾ ವಾರಿಯರ್ಸ್ ಗಳ ಸರ್ಕಾರ ನಿರ್ಲಕ್ಷ್ಯವಹಿಸಿದೆ. 15 ತಿಂಗಳ ಶಿಷ್ಯವೇತನಕ್ಕೆ ಒತ್ತಾಯಿಸಿ ದಾವಣಗೆರೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಕೋವಿಡ್ ವಾರ್ಡ್‍ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದೆರಡು ದಿನದ ಹಿಂದಷ್ಟೇ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಸ್ಪತ್ರೆಯ ಮುಂಭಾಗ …
Read More »ಇದೀಗ ಇಂದು ಮಧ್ಯಾಹ್ನದ ಹೆಲ್ತ್ ಬುಲಿಟಿನ್ ಬಿಡುಗಡೆ ಬೆಳಗಾವಿ ರಿಲೀಫ್..
ಬೆಂಗಳೂರು – ಇದೀಗ ಇಂದು ಮಧ್ಯಾಹ್ನದ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿದ್ದು 19 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಬಾಗಲಕೋಟೆಯ ಬಾದಾಮಿಯಲ್ಲಿ 13, ದಕ್ಷಿಣ ಕನ್ನಡದಲ್ಲಿ 3 ಜನರಿಗೆ ಹಾಗೂ ಬೆಂಗಳೂರಿನಲ್ಲಿ ಇಬ್ಬರಿಗೆ, ಕಲಬುರಗಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಮಂಗಳೂರಿನಲ್ಲಿ 16 ವರ್ಷದ ಯುವತಿ ಹಾಗೂ ಆಕೆಯ ತಾಯಿಗೆ ಸೋಂಕು ಪತ್ತೆಯಾಗಿದೆ. ಬಾದಾಮಿಯಲ್ಲಿ ಒಬ್ಬರಿಂದಲೇ 12 ಜನರಿಗೆ ಸೋಂಕು ಹರಡಿದೆ
Read More »ಜಿಲ್ಲಾಧಿಕಾರಿ ನಿವಾಸದ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಜಿಲ್ಲಾಧಿಕಾರಿ ನಿವಾಸದ ಗಾರ್ಡ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದ ಮುಖ್ಯದ್ವಾರದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೋಲೀಸ್ ಪೇದೆಯೊಬ್ಬ ಸಕ್ಯುರಿಟಿಗೆ ನೀಡಲಾಗಿದ್ದ ಆಯುಧದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪ್ರಕಾಶ ಗುರುವಣ್ಣವರ (35) ಆತ್ಮತ್ಯೆ ಮಾಡಿಕೊಂಡ ಪೇದೆಯಾಗಿದ್ದು. ಕಿತ್ತೂರು ಸಮೀಪದ ಅಂಬಡಗಟ್ಟಿ ಗ್ರಾಮದವರಾಗಿದ್ದಾರೆ. ಇವರು ಮನೋವ್ಯಾದಿಯಿಂದ ಬಳಲುತ್ತಿದ್ದರು,ಅದರ ಉಪಚಾರವನ್ನು ಪಡೆಯುತ್ತಿದ್ದರು. ನಿನ್ನೆ ರಾತ್ರಿ ಇವರ ಮನೆಯವರು ಸ್ಮಾರ್ಟ್ ಫೋನ್ ಕಸಿದುಕೊಂಡು ಸಾದಾ ಫೋನ್ ನೀಡಿದ್ದಕ್ಕಾಗಿ …
Read More »ಮೆಗಾ ಏರ್‌ಲಿಫ್ಟ್ – ಬೆಂಗಳೂರಿಗೆ 3 ವಿಮಾನಗಳಲ್ಲಿ ಬರಲಿದ್ದಾರೆ 800 ಮಂದಿ…………
ನವದೆಹಲಿ: ದೇಶದಲ್ಲಿ ಕೊರೋನಾ ವಿಜೃಂಭಿಸುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಹಂತ ಹಂತವಾಗಿ ದೇಶಕ್ಕೆ ಕರೆತರಲು ಕರೆತರಲು ಯೋಜನೆ ರೂಪಿಸಿದೆ. ವಿದೇಶಗಳಲ್ಲಿ 1.95 ಕೋಟಿ ಭಾರತೀಯರು ನೆಲೆಸಿದ್ದು, 15 ಲಕ್ಷ ಮಂದಿ ದೇಶಕ್ಕೆ ವಾಪಸ್ ಆಗಲು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 2.5 ಲಕ್ಷ ಭಾರತೀಯರನ್ನು ಹಂತ ಹಂತವಾಗಿ ದೇಶಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮೇ 7ರಿಂದ ಮೇ 13ರವರೆಗೂ …
Read More »