Breaking News

Yearly Archives: 2020

ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ…….

ಮುಂಬೈ, ಜೂ. 25- ಅಮೆರಿಕಾ ಹಾಗೂ ಚೀನಾದ ನಡುವಿನ ಸಂಘರ್ಷ, ವ್ಯಾಪಾರ ಬಿಕ್ಕಟ್ಟು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ನಿರಂತರ 19 ದಿನಗಳಿಂದಲೂ ಏರಿಕೆಯಾಗುತ್ತಿದ್ದು ಇದರ ನಡುವೆಯೇ ಚಿನ್ನ ಹಾಗೂ ಬೆಳ್ಳಿ ಬೆಲೆಯು ಗಗನಮುಖಿಯಾಗುತ್ತಿರುವುದು ಜನರ ಜೇಬಿಗೆ ಹೊರೆಯಾಗಿದೆ. ಲಾಕ್‍ಡೌನ್ ವೇಳೆ ಚಿನ್ನ ಹಾಗೂ ಬೆಳ್ಳಿ ಖರೀದಿಸುವವರೇ ಇಲ್ಲದೆ ಅದರ ಬೆಲೆಯಲ್ಲಿ …

Read More »

ಮಳೆ ಬಿದ್ದ ಪ್ರಮಾಣವನ್ನು ತಿಳಿಯಲು ಹವಾಮಾನ ಇಲಾಖೆ ನೀಡುವ ಮಾಹಿತಿಗಾಗಿ ಕಾಯಬೇಕಿಲ್………..

ಬೆಂಗಳೂರು,ಜೂ.25- ಯಾವುದೇ ವೆಚ್ಚವಿಲ್ಲದೆ ನಿರುಪಯುಕ್ತ ವಸ್ತುಗಳನ್ನು ಬಳಸಿ ಸುಲಭವಾಗಿ ಮಳೆಯ ನೀರಿನ ಪ್ರಮಾಣವನ್ನು ಅಳೆಯುವ ಸರಳ ವಿಧಾನವನ್ನು ಪರಿಚಯಿಸಲಾಗಿದೆ. ಮಳೆ ಬಿದ್ದ ಪ್ರಮಾಣವನ್ನು ತಿಳಿಯಲು ಹವಾಮಾನ ಇಲಾಖೆ ನೀಡುವ ಮಾಹಿತಿಗಾಗಿ ಕಾಯಬೇಕಿಲ್ಲ. ಯಾರ ನೆರವೂ ಇಲ್ಲದೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಾಗೂ ಜಮೀನಿನಲ್ಲಿ ಬೀಳುವ ಮಳೆಯ ನೀರಿನ ಪ್ರಮಾಣವನ್ನು ಅಳೆಯುವ ಸರಳ ಹಾಗೂ ಸುಲಭ ವಿಧಾನದ ಪ್ರಾತ್ಯಕ್ಷಿಕೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ಪರಿಚಯಿಸಿದ್ದಾರೆ. …

Read More »

ಕೊರೋನಾ ಜವಾಬ್ದಾರಿ ಆರ್.ಅಶೋಕ್ ಹೆಗಲಿಗೆ

ಬೆಂಗಳೂರು : ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನಿರ್ವಹಿಸುತ್ತಿರುವ ಬೆಂಗಳೂರು ಕೋವಿಡ್ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಕಂದಾಯ ಸಚಿವ ಆರ್. ಅಶೋಕ್​ ಅವರಿಗೆ ವಹಿಸಲಾಗಿದೆ. ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಸಚಿವ ಡಾ. ಸುಧಾಕರ್ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಅವರು ನಿರ್ವಹಿಸುತ್ತಿರುವ ಕೋವಿಡ್ ಜವಾಬ್ದಾರಿಯನ್ನು ಸುಧಾಕರ್ ಕ್ವಾರಂಟೈನ್ ನಿಂದ ವಾಪಸ್ ಬರುವವರೆಗೂ ತಾತ್ಕಾಲಿಕವಾಗಿ ನಿರ್ವಹಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ …

Read More »

ಶಾಸಕರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು

ಬೆಂಗಳೂರು : ಶಾಸಕರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆ ಕೆಲ ‌ನಿರ್ಬಂಧಗಳನ್ನು ಹೇರಲಾಗಿದೆ. ಈ ಸಂಬಂಧ ಇಂದು ವಿಧಾನಪರಿಷತ್ ಸಭಾಪತಿ ಮತ್ತು ವಿಧಾನಸಭೆ ಸಭಾಧ್ಯಕ್ಷರ ಜಂಟಿ ಅಧ್ಯಕ್ಷತೆಯಲ್ಲಿ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರ ಜೊತೆ ನಡೆಸಿದ ಸಭೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ …

Read More »

ಸಿಟಿಯಲ್ಲಿ ಸುರಿದ ಧಾರಾಕಾರ ಮಳೆ ಭಾರೀ ಪ್ರಮಾಣದ ನೀರು ರಸ್ತೆಗೆ……..

ಬೆಂಗಳೂರು: ಸಿನಿಕಾನ್ ಸಿಟಿಯಲ್ಲಿ  ಸುರಿದ ಧಾರಾಕಾರ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ವೃಷಭಾವತಿ ನದಿಯ ರೌದ್ರ ನರ್ತನಕ್ಕೆ ಕೆಂಗೇರಿ ಬಳಿ ತಡೆಗೋಡೆ ಸೇರಿ ಅರ್ಧ ರಸ್ತೆ ಕೊಚ್ಚಿ ಹೋಗಿದೆ. ಭಾರೀ ಪ್ರಮಾಣದ ನೀರು ರಸ್ತೆಗೆ ನುಗ್ಗಿದ್ದು, ಅರ್ಧ ಬಸ್ ಮುಳುಗಿದರೆ, ಕಾರುಗಳು ತೇಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಂಗೇರಿಯಲ್ಲಿ ಬರೋಬ್ಬರಿ 65.5 ಮಿಲಿ ಮೀಟರ್ ಮಳೆ ಬಿದ್ದಿದ್ದು, ಹೀಗಾಗಿ ವೃಷಭಾವತಿ ನದಿಯ ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಮೈಸೂರು ರಸ್ತೆ ತಡೆಗೋಡೆ …

Read More »

ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್

ಬೆಂಗಳೂರು: ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್ ಹೊಕ್ಕಿದೆ. ಸಿದ್ದಾಪುರ ವಾರ್ಡ್ ಕಾರ್ಪೊರೇಟರ್ ಮುಜಾಯಿದ್ ಪಾಷಾಗೆ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ 39 ವರ್ಷದ ಕಾರ್ಪೊರೇಟರ್ ಮುಜಾಯಿದ್ ಪಾಷಾ ಕಂಟೈನ್ಮೆಂಟ್ ಝೋನ್‍ನಲ್ಲಿ ಓಡಾಡಿದ್ದರು. 4 ದಿನಗಳಿಂದ ಪುಲಕೇಶಿನಗರದ ತಂಗಿ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ವಾರದಿಂದ ಜ್ವರ-ಶೀತದಿಂದ ಬಳಲುತ್ತಿದ್ದ ಕಾರ್ಪೊರೇಟರ್‍ಗೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ದೃಢಪಟ್ಟಿದೆ. ಸದ್ಯಕ್ಕೆ ಕಾರ್ಪೊರೇಟರ್ ಮನೆಯವರನ್ನ ಮತ್ತು ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ …

Read More »

ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭಮೋಡ ಕವಿದ ವಾತಾವರಣ………

ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ …

Read More »

2ನೇ ವರ್ಷವೂ ಸ್ವಿಸ್ ಬ್ಯಾಂಕಿನಲ್ಲಿ ಜಮಾ ಆಗ್ತಿದ್ದ ಭಾರತೀಯ ಹಣ ಇಳಿಕೆ……..

ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಜಮೆ ಭಾರತದ ಹಣದ ಮೊತ್ತವು ಎರಡನೇ ವರ್ಷವೂ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಸ್ವಿಟ್ಜರ್ ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಭಾರತೀಯರು ಜಮೆ ಮಾಡುತ್ತಿದ್ದ ಮೊತ್ತ 2019ರಲ್ಲಿ ಕಡಿಮೆಯಾಗಿದೆ ಎಂದು ಹೇಳಿದೆ. 2019ರಲ್ಲಿ ಭಾರತೀಯರು 6625 ಕೋಟಿ ರೂ (899 ಮಿಲಿಯನ್ ಸ್ವಿಸ್ ಫ್ರ್ಯಾಂಕ್) ಜಮಾ ಮಾಡಿದ್ದಾರೆ. ಇದು 2018ರಲ್ಲಿ ಜಮೆಯಾದ ಶೇ.8ರಷ್ಟು ಕಡಿಮೆ. ಸತತ ಎರಡು ವರ್ಷಗಳಿಂದ ಭಾರತೀಯರು ಜಮೆ ಮಾಡುತ್ತಿದ್ದ ಮೊತ್ತದಲ್ಲಿ …

Read More »

ಕೊರೊನಾ ರೂಲ್ಸ್ ಬ್ರೇಕ್, ಐವರ ವಿರುದ್ಧ ಕೇಸ್………….

ಚಿಕ್ಕಮಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ ಜನ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ನೀಡದೆ, ಸಂಬಂಧವೇ ಇಲ್ಲ ಎಂಬಂತೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಹೀಗೆ ಮನಸೋ ಇಚ್ಛೆ ಓಡಾಡುತ್ತಿದ್ದ ಐವರ ವಿರುದ್ಧ ಜಿಲ್ಲೆಯ ಎರಡು ಪ್ರತ್ಯೇಕ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಹೊರ ಜಿಲ್ಲೆಯಿಂದ ಬಂದವರಿಗೆ ಜಿಲ್ಲಾಡಳಿತ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿತ್ತು. ಆದರೆ ಸರ್ಕಾರದ ಆದೇಶವನ್ನು ಮೀರಿ ನಾಲ್ವರು …

Read More »

ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ……

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವ್ಯಾಪಕವಾಗಿ ಬೇರೂರಿದೆ. ಅದರಲ್ಲೂ ಅನ್‍ಲಾಕ್ ಬಳಿಕ ಸೋಂಕು ದಿನದಿನಕ್ಕೆ ಹೆಚ್ಚಳವಾಗುತ್ತಿದೆ. ಅನ್‍ಲಾಕ್ ಮಾಡಿದ ಸರ್ಕಾರ ಸೋಂಕಿಗೆ ಕಡಿವಾಣ ಹಾಕುವಲ್ಲಿ ವಿಫಲವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ರಕ್ಷಣೆ ಮಾಡಿಕೊಳ್ಳಲು ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲಿ 3 ದಿನ ಸೆಲ್ಫ್ ಲಾಕ್‍ಡೌನ್ ಮೈಸೂರು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಜಿಲ್ಲಾಡಳಿತ ತೀರ್ಮಾನಿಸಿದೆ. ಇಂದು ಮೊದಲ ಆಷಾಡ …

Read More »