Breaking News

Yearly Archives: 2020

ಉಡುಪಿಯ ಅಭಿಜ್ಞಾ ರಾವ್ ಮತ್ತು ಬೆಂಗಳೂರಿನ ಪ್ರೇರಣಾ 600ಕ್ಕೆ 596 ಅಂಕ ಪಡೆಯುವ ಮೂಲಕ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್

ಬೆಂಗಳೂರು: ಉಡುಪಿಯ ಅಭಿಜ್ಞಾ ರಾವ್ ಮತ್ತು ಬೆಂಗಳೂರಿನ ಪ್ರೇರಣಾ 600ಕ್ಕೆ 596 ಅಂಕ ಪಡೆಯುವ ಮೂಲಕ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಈ ವರ್ಷ ವಿಜ್ಞಾನ ವಿಭಾಗದ ಪರೀಕ್ಷೆಗೆ 2,16,271 ಮಂದಿ ಹಾಜರಾಗಿದ್ದು, 1,64,794 ಮಂದಿ ಪಾಸ್ ಆಗುವ ಮೂಲಕ ಶೇ.76.2 ಫಲಿತಾಂಶ ದಾಖಲಾಗಿದೆ. ಮೂರು ವಿಭಾಗದದಲ್ಲಿ ಹೊಸಬರು ಒಟ್ಟು 5,56,267 ಮಂದಿ ಪರೀಕ್ಷೆ ಬರೆದಿದ್ದು, 3,84,947 ಮಂದಿ ತೇರ್ಗಡೆಯಾಗಿದ್ದಾರೆ. ಶೇ.69.20 ಫಲಿತಾಂಶ …

Read More »

ಬೇರೊಬ್ಬಳೊಂದಿಗೆ ಕಾರಿನಲ್ಲಿದ್ದ ಪತಿಯನ್ನು ಚೇಸ್ ಮಾಡಿ ಹಿಡಿದ ಪತ್ನಿ- ವೈರಲ್ ವಿಡಿಯೋ

ಮುಂಬೈ: ಗೆಳತಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಪತಿಯನ್ನು ಪತ್ನಿ ಚೇಸ್ ಮಾಡಿ ಹಿಡಿದಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಮಹಿಳೆಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮುಂಬೈ ನಗರದಲ್ಲಿ ಪ್ರಮುಖ ರಸ್ತೆಯೊಂದರಲ್ಲಿ ಜುಲೈ 11ರ ಸಂಜೆ ಘಟನೆ ನಡೆದಿದೆ. ಮುಂಬೈ ನಿವಾಸಿಯಾಗಿದ್ದ 30 ವರ್ಷದ ವ್ಯಕ್ತಿ ಕಪ್ಪು ಬಣ್ಣದ ಕಾರಿನಲ್ಲಿ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ. ಈ ಕಾರನ್ನು ಮತ್ತೊಂದು ಕಾರಿನಲ್ಲಿ ಬೆನ್ನತ್ತಿದ್ದ ಆತನ ಪತ್ನಿ ನಡುರಸ್ತೆಯಲ್ಲಿ ಕಾರನ್ನು …

Read More »

ಕಲಾ ವಿಭಾಗ ಟಾಪರ್ಸ್ ಲಿಸ್ಟ್ – ಬಳ್ಳಾರಿಯ ಇಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲ ಮೂರು ಸ್ಥಾನ

ಬೆಂಗಳೂರು: ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಪ್ರತಿ ವರ್ಷದಂತೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಮೊದಲ ಮೂರು ಸ್ಥಾನಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕಾಮೇಗೌಡ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರೆ, 591 ಅಂಕ ಪಡೆದ ಸ್ವಾಮಿ ಎರಡನೇ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ಈ ವರ್ಷ ಕಲಾ ವಿಭಾಗದ ಪರೀಕ್ಷೆಗೆ 1,98,875 ಮಂದಿ ಹಾಜರಾಗಿದ್ದು, 82,077 …

Read More »

ಮಗನೊಂದಿಗೆ ಬೋಟಿನಲ್ಲಿ ತೆರಳಿದ್ದ ನಟಿ- 6 ದಿನಗಳ ನಂತ್ರ ಶವವಾಗಿ ಪತ್ತೆ

ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಕಣಿವೆಯಲ್ಲಿ ಮಗನೊಂದಿಗೆ ಬೋಟಿನಲ್ಲಿ ಹೋಗಿದ್ದಾಗ ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆಯಾಗಿದ್ದಾರೆ. ಹಾಲಿವುಡ್‍ನ ನಟಿ ನಯಾ ರಿವೇರಾ ಮೃತದೇಹ ಪತ್ತೆಯಾಗಿದೆ. ಕ್ಯಾಲಿಫೋರ್ನಿಯಾದ ಕಣಿವೆಯಲ್ಲಿ ನಾಪತ್ತೆಯಾಗಿದ್ದರು. ಆದರೆ ಆರು ದಿನಗಳ ನಂತರ ಸೋಮವಾರ ರಿವೇರಾ ಶವವಾಗಿ ಪತ್ತೆಯಾಗಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ. ನಟಿ ನಯಾ ರಿವೇರಾ ಕಳೆದ ವಾರ ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಬೋಟಿನಲ್ಲಿ ಹೋಗಿದ್ದ ವೇಳೆ ಬೋಟ್‍ ಮಗುಚಿ ಮುಳುಗಿದ್ದರು. ಸದ್ಯಕ್ಕೆ ರಿವೇರಾ ಅವರ …

Read More »

ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತರು ಪ್ರತಿಭಟನೆ

ಮೂಡಲಗಿ : ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದು ಅದೇ ಪ್ರಕಾರ ಸ್ಥಳೀಯ ಆಶಾ ಕಾರ್ಯಕರ್ತೆಯರು ತಮ್ಮ  ಬೇಡಿಕೆಗಳ ಈಡೇರಿಕೆಗಾಗಿ ತಹಸಿಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.  ಸೋಮವಾರದಂದು ಸಲ್ಲಿಸಿದ ಮನವಿ ಪತ್ರದಲ್ಲಿ ಈಗಾಗಲೇ ತಿಳಿಸಿದಂತೆ ಇದೇ ಜುಲೈ 10 ರಿಂದ ಆರೋಗ್ಯಸೇವೆಯನ್ನು ಸ್ಥಗಿತಗೊಳಿಸಲಾಗಿದೆ.  ಬೇಡಿಕೆಗಳು ಮಾಸಿಕ 12 ಸಾವಿರ ರೂಗಳ ಗೌರವ ಖಾತರಿಪಡಿಸಬೇಕು.ಕೋವಿಡ 19  ವಿರುದ್ಧ ಹೋರಾಟದಲ್ಲಿ ಅಗತ್ಯ …

Read More »

ಕೊರೋನಾದ ಲಕ್ಷಣಗಳು ಕಾಣಿಸಿದ್ದರಿಂದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೋಂ ಕ್ವಾರಂಟೈನ್ ನಲ್ಲಿ

ಬೆಳಗಾವಿ – ಕೊರೋನಾದ ಲಕ್ಷಣಗಳು ಕಾಣಿಸಿದ್ದರಿಂದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಕಳೆದ ಶನಿವಾರ ಅವರಿಗೆ ಸ್ವಲ್ಪಮಟ್ಟಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಗಂಟಲು ದ್ರವ ತಪಾಸಣೆಗೆ ಕಳುಹಿಸಿದರು. ಅಂದಿನಿಂದಲೇ ಅವರು ಮನೆಯ ಒಂದು ಕೊಠಡಿಯಲ್ಲೇ ವಾಸ್ತವ್ಯ ಮಾಡಿದರು. ಸೋಮವಾರ ಅವರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಕೊರೋನಾ ಲಕ್ಷಣಗಳು ಕಾಣಿಸಿವೆ. ಹಾಗಾಗಿ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಒಂದು ವಾರ ಕ್ವಾರಂಟೈನ್ ನಲ್ಲಿರುವುದಾಗಿ …

Read More »

ಯುವತಿಯ ಜೊತೆ ವಾಟ್ಸಪ್‍ನಲ್ಲಿ ನಗ್ನ ವಿಡಿಯೋ ಕಾಲ್……………..

ಬೆಂಗಳೂರು: ಯುವತಿಯ ಜೊತೆ ವಾಟ್ಸಪ್‍ನಲ್ಲಿ ನಗ್ನ ವಿಡಿಯೋ ಕಾಲ್ ಮಾಡಿ ಯುವಕನೊಬ್ಬ ಪೇಚಿಗೆ ಸಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೊಡ್ಡನೆಕ್ಕುಂದಿ ನಿವಾಸಿ 26 ವರ್ಷದ ಯುವಕ ಅಪರಿಚಿತ ಯುವತಿಯಿಂದ ಮೋಸ ಹೋಗಿದ್ದಾನೆ. ಯುವಕ 22 ಸಾವಿರ ಹಣ ಕಳೆದುಕೊಂಡಿದ್ದಲ್ಲದೇ ಆತನಿಗೆ ಎಟಿಎಂ ಕಾರ್ಡ್ ಫೋಟೋ ಕೂಡ ಕಳುಹಿಸಿದ್ದಾನೆ. ಇದೀಗ ಯುವಕ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ. ಮೋಸ ಹೋದ ಯುವಕ ಸೋಶಿಯಲ್ ಮೀಡಿಯಾದ ಮೂಲಕ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದನು. …

Read More »

ಪಿಯು ಫಲಿತಾಂಶ, ಎಂದಿನಂತೆ ಬಾಲಕಿಯರೇ ಮೇಲುಗೈ – ಉಡುಪಿ, ದಕ್ಷಿಣ ಕನ್ನಡ ಫಸ್ಟ್‌

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಗಿತ ಕಂಡಿದೆ. ಕಳೆದ ವರ್ಷ ಶೇ.68.68 ಫಲಿತಾಂಶ ಬಂದಿತ್ತು. 5,56,267 ಹೊಸದಾಗಿ ಬರೆದ ವಿದ್ಯಾರ್ಥಿಗಳ ಪೈಕಿ 3,84,947 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೊದಲ ಸ್ಥಾನ ಸಿಕ್ಕಿದೆ. ಕೊಡಗು, ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ಎರಡು, ಮೂರನೇ …

Read More »

ಬೆಳಗಾವಿಯಲ್ಲಿ ಫೋಟೋಗ್ರಾಫರ್ ಒಬ್ಬರು ವಿಭಿನ್ನವಾಗಿ ಕನಸು ಕಂಡಿದ್ದು, ಇದೀಗ ತನ್ನ ಕನಸಿನಂತೆ

ಬೆಳಗಾವಿ: ಸಾಮಾನ್ಯವಾಗಿ ಎಲ್ಲರಲ್ಲೂ ತಾನೊಂದು ದೊಡ್ಡ ಮನೆ ಕಟ್ಟಬೇಕೆಂಬ ಕನಸು ಇದ್ದೇ ಇರುತ್ತದೆ. ಆದರೆ ಬೆಳಗಾವಿಯಲ್ಲಿ ಫೋಟೋಗ್ರಾಫರ್ ಒಬ್ಬರು ವಿಭಿನ್ನವಾಗಿ ಕನಸು ಕಂಡಿದ್ದು, ಇದೀಗ ತನ್ನ ಕನಸಿನಂತೆ ಕ್ಯಾಮರಾ ಶೈಲಿಯ ಮನೆ ನಿರ್ಮಾಣ ಮಾಡುವ ಮೂಲಕ ಜನರ ಗಮನಸೆಳೆದಿದ್ದಾರೆ. ಹೌದು. ರವಿ ಹೊಂಗಲ್ ಅವರಿಗೆ ಬಾಲ್ಯದಿಂದಲೇ ಫೋಟೋಗ್ರಫಿ ಅಂದ್ರೆ ಪಂಚಪ್ರಾಣ. ಹೀಗಾಗಿ ಅವರು ಚಿಕ್ಕಂದಿನಿಂದಲೇ ಹತ್ತಿರದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೆಲವೊಂದು ಫೋಟೋಗಳನ್ನು ತೆಗೆಯುವ ಹವ್ಯಾಸ ಬೆಳೆಸಿಕೊಂಡಿದ್ದರು. ರವಿ ಅವರಿಗಿದ್ದ …

Read More »

ಸರ್ಕಾರ ಕಡಿಮೆ ಬೆಲೆಯಲ್ಲಿ ಉತ್ತಮ ಔಷದಿ ನೀಡಬೇಕು : ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ : ಸರ್ಕಾರ ಬಡಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಔಷದಿ ನೀಡುವ ಕೆಲಸ ಮಾಡಬೇಕಾಗಿದ್ದು. ಆ ನಿಟ್ಟಿನಲ್ಲಿ ಜನೌಷಧಿ ಕೇಂದ್ರಗಳು ಬಹುಮುಖ್ಯವಾಗಲಿವೆ ಎಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಾಎಖೇಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಬಳಿ ನೂತನವಾಗಿ ನಿರ್ಮಾಣವಾದ ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದ …

Read More »