ಗೋಕಾಕ್: ಗೋಕಾಕ್ , ಮೂಡಲಗಿ ತಾಲ್ಲೂಕಿನಲ್ಲಿ ಮಂಗಳವಾರ ಒಂದೇ ದಿನ 65 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ. ಇಂದು ಮಾಹಿತಿ ನೀಡಿರುವ ಅವರು , ಮೂಡಲಗಿ ಸಿಡಿಪಿಓ ಸೇರಿ ಎರಡು ತಾಲ್ಲೂಕಿನಲ್ಲಿ 65 ಜನರಿಗೆ ಕೊರೊನಾ ದೃಢಪಟ್ಟಿದೆ. ಗೋಕಾಕಿನ ಸಂಗಮ ನಗರದ 65 ವರ್ಷದ ವೃದ್ದೆ ಸೋಂಕಿಗೆ ಬಲಿಯಾಗಿದ್ದಾರೆ. ಗೋಕಾಕ ನಗರದಲ್ಲಿ-49 , ಕರಗುಪ್ಪಿ -1 , ಮೂಡಲಗಿ -2 , …
Read More »Yearly Archives: 2020
ಚಿಕ್ಕೋಡಿ ಪೊಲೀಸ ಠಾಣೆ ಯನ್ನು ಸೀಲ್‍ಡೌನ್ ಮಾಡಲಾಗಿದೆ.
ಚಿಕ್ಕೋಡಿ : ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಇದೀಗ ಚಿಕ್ಕೋಡಿ ಪೊಲೀಸ ಠಾಣೆಗೂ ವಕ್ಕರಿಸಿಕೊಂಡಿದ್ದು, ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೊಂಕು ಧೃಢಪಟ್ಟಿದ್ದು, ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.
Read More »ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಭಾನ್ವಿತ ನಾಲ್ಕು ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಭಿನಂದನೆ
ಬೆಳಗಾವಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿಭಾನ್ವಿತ ನಾಲ್ಕು ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲೆಯ ಹೆಮ್ಮೆ ಪುತ್ರರಾದ ಅಥಣಿ ತಾಲ್ಲೂಕಿನ ಮೋಳೆ ಗ್ರಾಮದ ಜಗದೀಶ್ ಅಡಹಳ್ಳಿ 440ನೇ ಸ್ಥಾನ, ಹುಕ್ಕೇರಿ ತಾಲ್ಲೂಕಿನ ಯರನಾಳದ ಪ್ರಭುಲ್ ದೇಸಾಯಿ 532ನೇ ಸ್ಥಾನ, ರಾಯಬಾಗ ತಾಲ್ಲೂಕಿನ ಗಜಾನನ ಬಾಲೆಯವರು 663ನೇ ರ್ಯಾಂಕ್, ಚಿಕ್ಕೋಡಿಯ ಪ್ರಿಯಾಂಕ …
Read More »ಬೆಡ್ ಖಾಲಿ ಇದೆ, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” ಎಂದು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಭರ್ಜರಿ ಆಫರ್ ಕೊಟ್ಟಿದೆ.
ಬೆಂಗಳೂರು: “ಬೆಡ್ ಖಾಲಿ ಇದೆ, ಐಸಿಯು ಖಾಲಿ ಇದೆ ಕೊರೊನಾ ರೋಗಿಗಳೇ ಬನ್ನಿ ಬನ್ನಿ” ಎಂದು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದು ಭರ್ಜರಿ ಆಫರ್ ಕೊಟ್ಟಿದೆ. ನಗರದಲ್ಲಿ ಶೇ.50ರಷ್ಟು ಬೆಡ್ ಬಿಟ್ಟು ಕೊಡುವುದಕ್ಕೆ ಕಳ್ಳಾಟ ವಾಡುತ್ತಿರುವ ಖಾಸಗಿ ಆಸ್ಪತ್ರೆಯ ಮಧ್ಯೆ ಲಗ್ಗೆರೆಯ ‘ಬೆಥಲ್ ಮೆಡಿಕಲ್ ಮಿಷನ್’ ಆಸ್ಪತ್ರೆ ಸೇವಾ ಮನೋಭಾವ ಹೊಂದಿದೆ. ಈ ಡಿಸೆಂಬರಿನಲ್ಲಿ ಉದ್ಘಾಟನೆಯಾಗಬೇಕಾಗಿದ್ದ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ರೋಗಿಗಳಿಗೆ ಮೀಸಲಿಟ್ಟಿದೆ. ಬರೋಬ್ಬರಿ 400 ಬೆಡ್, 12 ಐಸಿಯು ವೆಂಟಿಲೇಟರ್ ಬೆಡ್ …
Read More »ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸೋಮವಾರ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ದಾಖಲಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೊವಿಡ್ ತಗುಲಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ಕೇಳಿ ಮನಸ್ಸಿಗೆ ಘಾಸಿಯಾಯಿತು. ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೂ …
Read More »ಐವಾನ್ ಡಿಸೋಜಾ ಜೊತೆ ಸುತ್ತಾಡಿದ ಡಿಕೆಶಿಗೆ ಯಾಕಿಲ್ಲ ಕ್ವಾರಂಟೈನ್?
ಮಂಗಳೂರು: ಮಾಜಿ ಎಂಎಲ್‍ಸಿ ಐವಾನ್ ಡಿಸೋಜಾಗೆ ಕೊರೊನಾ ಪಾಸಿಟಿವ್ ಆಗಿದ್ರೂ ಅವರ ಜೊತೆ ದಿನವಿಡೀ ಸುತ್ತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಇಂದು ಕೂಡಾ ಜನರ ಮಧ್ಯೆ ಸುತ್ತಾಡುತ್ತಿದ್ದಾರೆ. ಕಾನೂನು, ನಿಯಮಗಳು ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಜುಲೈ 31 ರಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ಸ್ವಾಗತಿಸಲು ಐವಾನ್ ಡಿಸೋಜಾ ಅವರು ಹೋಗಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೆ ಜೊತೆಯಲ್ಲಿದ್ದು ಬಳಿಕ ಕಾಂಗ್ರೇಸ್ …
Read More »ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ – ಬುಧವಾರ ರಾತ್ರಿವರೆಗೂ ರೆಡ್ ಅಲರ್ಟ್
ಮಂಗಳೂರು: ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಇಂದು ಸಂಜೆಯಿಂದ ನಾಳೆ ರಾತ್ರಿಯವರೆಗೂ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ ಈ ಸಂದರ್ಭ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ನಾಳೆಯಿಂದ ಆಗಸ್ಟ್ 9ರವರೆಗೂ ಆರೆಂಜ್ ಅಲರ್ಟ್ ಘೋಷಿಸಿದ್ದು ಈ ಎಲ್ಲಾ ದಿನದಲ್ಲಿ ಕರಾವಳಿಯಾದ್ಯಂತ ಮೀನುಗಾರಿಕೆ ಸಂಪೂರ್ಣವಾಗಿ ನಿಷೇಧಿಸಲು ಸೂಚಿಸಿದೆ. ಸಮುದ್ರ ಹಾಗೂ ನದಿ ತೀರದ …
Read More »ಸೋಂಕಿತರ ಸಂಖ್ಯೆ ಇಳಿಮುಖ – ಗುಣಮುಖರ ಸಂಖ್ಯೆ ಹೆಚ್ಚಳ
ಬಳ್ಳಾರಿ: ಜಿಲ್ಲೆಯಲ್ಲಿಂದು ಹೊಸದಾಗಿ 268 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 7,530ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ 268 ಮಂದಿಗೆ ಮಹಾಮಾರಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,530ಕ್ಕೇರಿಕೆಯಾಗಿದೆ. ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ ಎರಡು ದಿನಗಳಿಂದ ಸೋಂಕಿನ ಪ್ರಮಾಣದಲ್ಲಿ ಕಡಿಮೆ ಆಗಿದೆ.ಅಲ್ಲದೇ 4,022 ಮಂದಿ ಈವರೆಗೂ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೂ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ …
Read More »ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಒಂದೇ ಆಸ್ಪತ್ರೆಯಲ್ಲಿ ದಾಖಲು
ಬೆಂಗಳೂರು: ಮಣಿಪಾಲ್ ಆಸ್ಪತ್ರೆ ರಾಜ್ಯ ರಾಜಕಾರಣದ ಕೇಂದ್ರ ಬಿಂದು ಆಗಿದೆ. 24 ಗಂಟೆಯ ಅಂತರದಲ್ಲಿ ಇಡೀ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ. ಯಾಕಂದ್ರೆ ಇದೇ 24 ಗಂಟೆಯ ಅಂತರದಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಪ್ರಭಾವಿ ರಾಜಕೀಯ ನಾಯಕರು ಇದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಒಂದೇ ಆಸ್ಪತ್ರೆಯಷ್ಟೇ ಅಲ್ಲ ಒಂದೇ ಫ್ಲೋರ್ನಲ್ಲಿದ್ದಾರೆ. ಅದ್ರಲ್ಲೂ ಒಂದೇ ಸಾಲಿನಲ್ಲಿರೋ ರೂಮ್ …
Read More »ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಒಂದೇ ಆಸ್ಪತ್ರೆಯಲ್ಲಿ ದಾಖಲು
ಬೆಂಗಳೂರು: ಮಣಿಪಾಲ್ ಆಸ್ಪತ್ರೆ ರಾಜ್ಯ ರಾಜಕಾರಣದ ಕೇಂದ್ರ ಬಿಂದು ಆಗಿದೆ. 24 ಗಂಟೆಯ ಅಂತರದಲ್ಲಿ ಇಡೀ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ. ಯಾಕಂದ್ರೆ ಇದೇ 24 ಗಂಟೆಯ ಅಂತರದಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಪ್ರಭಾವಿ ರಾಜಕೀಯ ನಾಯಕರು ಇದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸದ್ಯ ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಒಂದೇ ಆಸ್ಪತ್ರೆಯಷ್ಟೇ ಅಲ್ಲ ಒಂದೇ ಫ್ಲೋರ್ನಲ್ಲಿದ್ದಾರೆ. ಅದ್ರಲ್ಲೂ ಒಂದೇ ಸಾಲಿನಲ್ಲಿರೋ ರೂಮ್ …
Read More »